ರಶ್ಮಿಕಾ ಮಂದಣ್ಣ ಕಾಂತಾರ ಚಿತ್ರವನ್ನು ನೋಡಿ ಅದರ ಬಗ್ಗೆ ಏನೂ ಮಾತಾಡದೆ ಮುಗುಮ್ಮಾಗಿದ್ದಾಳಾ? ನೋಡಲು ಪುರಸೊತ್ತು ಸಿಗದೆ ಸುಮ್ಮನಾಗಿದ್ದಾಳಾ ಅಂತೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಗಳಾಗುತ್ತಿದ್ದಾವೆ. ಬಹುತೇಕರು ಇದು ಗೆಲುವೆಂಬುದು ರಶ್ಮಿಕಾಳ ನೆತ್ತಿಗೇರಿರೋದರ ಪರಿಣಾಮ ಅಂತೆಲ್ಲ ಮೂದಲಿಸುತ್ತಿದ್ದಾರೆ. ಆದರೂ ಆ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ಕೊಡದಿದ್ದ ರಶ್ಮಿಕಾ, ಕಡೆಗೂ ದೂರದ ಮುಂಬೈನಲ್ಲಿ ನಿಂತು ಆ ಬಗ್ಗೆ ಮಾತಾಡಿದ್ದಾಳೆ. ಈ ಮೂಲಕ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಬೇರೊಂದು ದಿಕ್ಕಿನ ಮೂದಲಿಕೆಗೆ, ಕಟು ಟೀಕೆಗೆ ಗುರಿಯಾಗಿದ್ದಾಳೆ. ಮುಂಬೈನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ರಶ್ಮಿಕಾ ಫೋಟೋಗಳಿಗೆ ಪೋಸು ಕೊಡುತ್ತಿದ್ದಳು. ಈ ಸಂದರ್ಭದಲ್ಲಿ ಆಕೆ ಮೂಲ ಅರಿತಿದ್ದ ಪತ್ರಕರ್ತನೋರ್ವ ‘ನೀವು ಕಾಂತಾರ ಚಿತ್ರ ನೋಡಿದ್ದೀರಾ’ ಅಂತೊಂದು ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ಗಂಭೀರವಾಗಿ ಉತ್ತರಿಸಿದ್ದರೆ ರಶ್ಮಿಕಾಳ ಘನತೆ ತುಸುವಾದರೂ ಉಳಿಯುತ್ತಿತ್ತೇನೋ. ಆದರೆ ಆಕೆ ವಿಚಿತ್ರವಾದ ಆಂಗಿಕ ಅಭಿನಯ ಮಾಡುತ್ತಾ, ಉಡಾಫೆಯ ಶೈಲಿಯಲ್ಲಿ ನೋಡಿಲ್ಲ ಅಂತ ಉತ್ತರಿಸಿದ್ದಾಳೆ. ಬಳಿಕ ಬೆಂಗಳೂರಿಗೆ ಹೋದ ನಂತರ ನೋಡುವುದಾಗಿ ಅದೇ ಧಾಟಿಯಲ್ಲಿ ಉಸುರಿದ್ದಾಳೆ. ಹೀಗೊಂದು…
Author: Santhosh Bagilagadde
ಮನುಷ್ಯರಿರಲಿ, ಪ್ರಾಣಿಗಳೇ ಆಗಿರಲಿ… ತಲೆಗೇನಾದರೂ ಸಣ್ಣ ಪೆಟ್ಟಾದರೂ ಇಡೀ ದೇಹದ ವಾತಾರವಣವೇ ಬದಲಾಗಿ ಬಿಡುತ್ತವೆ. ತಲೆಗೇನಾದರೂ ಬಲವಾಗಿ ಪೆಟ್ಟು ಬಿದ್ದರೆ ಸ್ವಾಧೀನವನ್ನೇ ಕಳೆದುಕೊಳ್ಳಬೇಕಾಗುತ್ತೆ. ಹೀಗಿರುವಾಗ ತಲೆಯನ್ನೇ ಕತ್ತರಿಸಿ ತೆಗೆದು ಬಿಟ್ಟರೆ ಜಗತ್ತಿನ ಯಾವ ಜೀವಿಯೇ ಆದರೂ ಬದುಕಲು ಸಾಧ್ಯವೇ? ಇಂಥಾ ಪ್ರಶ್ನೆ ಎದುರಾದರೆ ಇಲ್ಲವೇ ಇಲ್ಲ ಎಂಬ ಉತ್ತರ ಅಷ್ಟ ದಿಕ್ಕುಗಳಿಂದಲೂ ಮೊರೆಯುತ್ತೆ. ಆದರೆ ಒಂದು ವಿಚಿತ್ರವಾದ ಘಟನೆ ನಮ್ಮ ನಂಬಿಕೆಯನ್ನೇ ಸುಳ್ಳು ಮಾಡಿದೆ! ಇಂಥಾದದ್ದೊಂದು ವಿಶೇಷವಾದ ವಿದ್ಯಮಾನ ನಡೆದಿರೋದು ಕೊಲ್ಯಾರಾಡೋದಲ್ಲಿ. ಈಗ್ಗೆ ಹಲವಾರು ವರ್ಷಗಳ ಹಿಂದೆ ನಡೆದಿರೋ ಈಘಟನಾವಳಿಗಳ ಹಿಂಚುಮುಂಚಿನ ವಿದ್ಯಮಾನ ನಿಜಕ್ಕೂ ರೋಚಕವಾಗಿದೆ. ಕೊಲ್ಯಾರಾಡೋದಲ್ಲಿನ ರೈತ ದಂಪತಿಗಳ ಸಮ್ಮುಖದಲ್ಲಿಯೇ ಈ ಅಚ್ಚರಿ ನಡೆದಿದೆ. ಅಲ್ಲಿನ ರೈತನೊಬ್ಬ ಕೃಷಿಯ ಜೊತೆಗೆ ಪೂರಕವಾಗಿ ಅನೇಕ ಪ್ರಾಣಿ ಪಕ್ಷಿಗಳನ್ನ ಸಾಕಿದ್ದ. ಅದರಲ್ಲಿ ಕೋಳಿಗಳೂ ಸೇರಿಕೊಂಡಿದ್ದವು. ಆಗಾಗ ಒಂದೊಂದು ಕೋಳಿಗಳನ್ನ ಕತ್ತರಿಸಿ ತಿನ್ನೋದು ಅವರೆಲ್ಲರ ರೂಢಿಯಾಗಿತ್ತು. ಅದೊಂದು ದಿನ ಬಿಳಿ ಮೈಬಣ್ಣದ ಕೋಳಿಯೊಂದನ್ನು ಆ ರೈತ ತಿನ್ನುವ ಸಲುವಾಗಿ ಕತ್ತು ಕತ್ತರಿಸಿ ಕೊಂದಿದ್ದ. ಮಾಮೂಲಿಯಾದರೆ…
ಈ ಪ್ರಾಣಿ ಪಕ್ಷಿಗಳ ಜೀವನ ಕ್ರಮವೇ ಭೂಮಿ ಮೇಲಿನ ಅದ್ಭುತ. ಈಗ ಇಂಥಾ ಜೀವಿಗಳ ಬಗ್ಗೆ ನಾನಾ ಥರದ ಸಂಶೋಧನೆಗಳು ನಡೆದಿವೆ. ಈಗಲೂ ನಡೆಯುತ್ತಲೇ ಇದ್ದಾವೆ. ಬಹುಶಃ ಇನ್ನೆಷ್ಟು ವರ್ಷ ಅದು ಮುಂದುವರೆಯದರೂ ಕೂಡಾ ನಮಗೆಲ್ಲ ಗೊತ್ತಾಗಿದೆ ಸಂತ ಎದೆಯುಬ್ಬಿಸಿ ನಿರಾಳವಾಗೋ ಅವಕಾಶವೇ ಕೂಡಿ ಬರಲಿಕ್ಕಿಲ್ಲವೇನೋ… ಯಾಕಂದ್ರೆ ಪ್ರಾಣಿ, ಪಕ್ಷಿ, ಜೀವ ಜಂತುಗಳ ಲೋಕ ಅಷ್ಟೊಂದು ವಿಸ್ತಾರವಾಗಿದೆ. ಅದರಲ್ಲಿಯೇ ನಾವೆಲ್ಲ ಕಣ್ಣರಳಿಸಿ ನೋಡುವಂಥ ವಿಸ್ಮಯದ ವಿಚಾರಗಳೂ ಇದ್ದಾವೆ. ಕಣ್ಣಿಗೆ ಕಾಣದ ಜೀವಿಗಳ ಮಾತು ಹಾಗಿರಲಿ. ನಮಗೆ ತೀರಾ ಪರಿಚಿತ ಎಂಬಂಥಾ ಪ್ರಾಣಿಗಳ ಬಗ್ಗೆಗೂ ನಮಗೆ ಗೊತ್ತಿಲ್ಲದಿರುವ ಅದೆಷ್ಟೋ ಅಂಶಗಳಿದ್ದಾವೆ. ನೋಡಿದರೆ ಬರಸೆಳೆದು ಮುದ್ದು ಮಾಡಬೇಕೆನ್ನಿಸುವಷ್ಟು ಮುದ್ದುಮುದ್ದಾಗಿರೋ ಮೊಲಗಳ ಬಗ್ಗೆಯೂ ನಮಗೆ ಗೊತ್ತಿಲ್ಲದಿರೋ ಅನೇಕ ಸಂಗತಿಗಳಿದ್ದಾವೆ. ಮೊಲಗಳು ಸಸ್ಯಾಹಾರಿಗಳು. ತರಕಾರಿ ಸೊಪ್ಪು ಸೆದೆಗಳನ್ನವು ಚಪ್ಪರಿಸಿ ತಿಂದು ತೃಪ್ತವಾಗುತ್ತವೆ. ಆದರೆ ಅವುಗಳಿಗೆ ಏನಾದರೂ ಒತ್ತಡವಾದ್ರೆ ಮಾತ್ರ ತಮ್ಮ ಬಳಗದಲ್ಲಿರೋ ಚಿಕ್ಕ ಮೊಲಗಳಿಗೆ ಗ್ರಹಚಾರ ಕಾಡಿತೆಂದೇ ಅರ್ಥ. ಯಾಕಂದ್ರೆ ಇಂಥಾ ಒತ್ತಡದ ಸಂದರ್ಭದಲ್ಲಿ ಮೊಲಗಳು ಪುಟ್ಟ…
ಸದಾ ಕಾಲವೂ ಹಿಮದ ಚಾದರ ಹೊದ್ದ ಹಿಮಾಲಯ ಯಾವತ್ತಿದ್ದರೂ ಸಾಹಸಿಗಳ ಪಾಲಿಗೆ ಫೇವರಿಟ್ ಸ್ಥಳ. ಕೇವಲ ಸಾಹಸಿಗರಿಗೆ, ಚಾರಣಿಗರಿಗೆ ಮಾತ್ರವಲ್ಲದೆ ದೈವೀಕ ನಂಬಿಕೆಯಲ್ಲಿ ತೊಡಗಿಸಿಕೊಂಡಿರುವವರಿಗೂ ಕೂಡಾ ಆಕರ್ಷಣೆಯ ಕೇಂದ್ರ. ಅಲ್ಲಿ ನಡೆಯೋ ಅಧ್ಯಾತ್ಮಿಕ ಸಾಧನೆಗಳು ಜಗತ್ತಿನ ಬೇರೆಲ್ಲಿಯೂ ಕಾಣಲು ಸಾಧ್ಯವೇ ಇಲ್ಲ. ಈ ವಿಚಾರವೇ ಅದೊಂದು ಪವಿತ್ರವಾದ ಸ್ಥಳ ಎಂಬುದನ್ನ ಬಿಂಬಿಸುತ್ತೆ. ಆದರೆ ಸಾಹಸಪ್ರಿಯದ ಉನ್ಮಾದವೇ ಅದಕ್ಕೊಂದು ಹಾರರ್ ಇಮೇಜನ್ನೂ ಕೂಡಾ ಕಟ್ಟಿ ಕೊಟ್ಟಿದೆ. ಈ ಪರ್ವತದ ಚಾರಣದ ಹಾದಿಗೆ ಶವಗಳೇ ಮೈಲಿಗಲ್ಲುಗಳಂತಿವೆ ಅಂದಮೇಲೆ ಹಿಮಾಲಯದ ಮತ್ತೊಂದು ಭೀಕರ ಮುಖದ ಪರಿಚಯ ಖಂಡಿತವಾಗಿಯೂ ಆಗುತ್ತೆ. ಮೌಂಟ್ ಎವರೆಸ್ಟ್ ಅನ್ನು ಜೀವಿತದಲ್ಲಿ ಒಂದು ಬಾರಿಯಾದರೂ ಅದೆಷ್ಟೋ ಜನರ ಮಹಾ ಕನಸು. ಸಾಹಸ ಪ್ರವೃತ್ತಿಯ ಚಾರಣಪ್ರಿಯರನ್ನಂತೂ ಈ ಪರ್ವತ ಪದೇ ಪದೆ ಕೈಬೀಸಿ ಕರೆಯುತ್ತಿರುತ್ತೆ. ಹಾಗಂತ ಹಿಮಾಲಯವನ್ನು ಏರೋದಂದ್ರೆ ಅದೇನು ಮಕ್ಕಳಾಟದ ಮಾತಲ್ಲ. ಅಲ್ಲಿ ಸೊಗಸಾಗಿ ಪರ್ವತದ ಮೈತುಂಬಾ ತಣ್ಣಗೆ ಹರಡಿಕೊಂಡಿರೋ ಹಿಮದ ನಡುವೆ ಸಾವೆಂಬುದು ಕಣ್ಣೆವೆ ಮುಚ್ಚದೆ ಹೊಂಚಿ ಕೂತಿರುತ್ತೆ. ಕೊಂಚ ಮೈ…
ನೀರಿನಾಳದಲ್ಲಿ ಬದುಕೋ ಜೀವಿಗಳು ಮನುಷ್ಯರೊಂದಿಗೆ ನಿಕಟ ಸಾಂಗತ್ಯ ಹೊಂದೋದು ಅಪರೂಪ. ಪ್ರತಿನಿತ್ಯ ಕಣ್ಣೆದುರೋ ಓಡಾಡಿದರೂ ಕೂಡಾ ಮೀನುಗಳು ಮನುಷ್ಯರನ್ನು ಕಂಡರೆ ಸದಾ ಸೇಫ್ ಆಗಿರಲು ಹವಣಿಸುತ್ತವೆ. ಆದರೆ ಡಾಲ್ಫಿನ್ ಮಾತ್ರ ಅದಕ್ಕೆ ತದ್ವಿರುದ್ಧ. ಅದು ಮನುಷ್ಯರ ಎಲ್ಲ ಭಾವನೆಗಳಿಗೂ ಪ್ರತಿ ಸ್ಪಂದಿಸುವ ಅದ್ಭುತ ಶಕ್ತಿಯನ್ನೊಳಗೊಂಡಿದೆ. ತರಬೇತಿ ಕೊಟ್ಟ ಡಾಲ್ಫಿನ್‌ಗಳು ಮನುಷ್ಯರು ಕಂಡಾಗ ಬಳಿ ಬರುತ್ತವೆ. ನಂಬಿಕೆ ಹುಟ್ಟಿದರೆ ಸುತ್ತಲೇ ಗಿರಕಿ ಹೊಡೆಯುತ್ತವೆ. ಇನ್ನೂ ಹತ್ತಿರಾದರೆ ಮುತ್ತಿಗೂ ಸಿಕ್ಕಿ ಸಂಭ್ರಮ ಪಡುವಂತೆ ಮಾಡುತ್ತವೆ. ಯಾರಿಗೇ ಆದರೂ ಪ್ರೀತಿ ಹುಟ್ಟವಷ್ಟು ಮುದ್ದು ಮುದ್ದಾಗಿರೋ ಡಾಲ್ಫಿನ್‌ಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಆದರೆ ಅವುಗಳ ಬಗ್ಗೆ ಹೆಚ್ಚಾಗಿ ಗೊತ್ತಿರದ ಅದೆಷ್ಟೋ ಅಚ್ಚರಿಗಳಿದ್ದಾವೆ. ನೀರ ಮೇಲೆಯೇ ಮನುಷ್ಯರ ಕೈಗೆ ಸಿಕ್ಕು ಬಿಡುವ ಡಾಲ್ಫಿನ್ನುಗಳಿಗೆ ಅಸಾಧಾರಣವಾದ ಶಕ್ತಿ ಇರುತ್ತೆ. ಸಾಮಾನ್ಯವಾಗಿ ಎಲ್ಲ ಜಲಚರಗಳಿಗೂ ಸಾಕಷ್ಟು ಶಕ್ತಿ ಇರುತ್ತೆ. ಆದ್ರೆ ಡಾಲ್ಫಿನ್ನುಗಳು ಬರೋಬ್ಬರಿ ಸಾವಿರ ಅಡಿಗಳಷ್ಟು ಸಮುದ್ರದಾಳಕ್ಕೆ ಡೈವ್ ಹೊಡೆದು ಈಜಾಡಿಕೊಂಡು ಬರೋ ಸಾಮರ್ಥ್ಯವಿದೆಯಂತೆ. ಹೀಗೆ ಸದಾ ಆಕ್ಟೀವ್ ಆಗಿದ್ದುಕೊಂಡು ಆಹಾರಕ್ಕೇನೂ ಕೊರತೆ…
ಕರ್ನಾಟಕದ ಬಹುಭಾಗಗಳಲ್ಲಿ ಯಶಸ್ವಿಯಾಗಿ ರೋಡ್ ಶೋಗಳನ್ನು ನಡೆಸಿದ್ದ ಬನಾರಸ್ ಹೀರೋ ಝೈದ್ ಖಾನ್ ಇದೀಗ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ. ವಿಶೇಷವೆಂದರೆ, ಸದಾ ಭಾಷೆ ಮತ್ತು ಗಡಿ ವಿವಾದದಿಂದ ಸದ್ದು ಮಾಡುವ ಬೆಳಗಾವಿಯ ನೆಲದಲ್ಲಿಯೇ ಕನ್ನಡ ರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದಾರೆ. ಈ ನಿಮಿತ್ತವಾಗಿ ಬೆಳಗಾವಿಗೆ ಬಂದಿಳಿದ ಝೈದ್ ಖಾನ್ ಅವರಿಗೆ ಬೆಳಗಾವಿ ಸೀಮೆಯ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಅದ್ದೂರಿ ಸ್ವಾಗತ ಕೋರಲಾಯ್ತು. ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರಾದ ಮನ್ಸೂರ್, ಕನ್ನಡ ರಕ್ಷಣಾ ವೇದಿಕೆಯ ರಾಜು ಕಲ್ಲೂರ್ ಮುಂತಾದವರು ಹಾಜರಿದ್ದರು. ಆ ನಂತರದಲ್ಲಿ ಬೆಳಗಾವಿ ಜಿಲ್ಲೆಯ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅರವತ್ತೇಳನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿಯೂ ಬನಾರಸ್ ಹೀರೋ ಝೈದ್ ಖಾನ್ ಅವರಿಗೆ ಗೌರವ ಲಭಿಸಿತ್ತು. ಆ ಕಾರ್ಯಕ್ರಮದ ವೇದಿಕೆಗೆ ಝೈದ್‌ರನ್ನು ಪ್ರೀತಿಯಿಂದ ಬರಮಾಡಿಕೊಂಡು, ಸನ್ಮಾನಿಸಲಾಯಿತು. ಅದಾದ ಬಳಿಕ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಳಗಾವಿಯ ಕನ್ನಡ ಪರ ಸಂಘಟನೆಗಳು ಬೃಹತ್ ಪಾದಯಾತ್ರೆಯನ್ನು ಆರಂಭಿಸಿದ್ದವು. ಅದರಲ್ಲಿಯೂ ಝೈದ್ ಖಾನ್ ಉತ್ಸಾಹದಿಂದ ಹೆಜ್ಜೆ…
ಅದೆಂಥಾ ಧೈರ್ಯಶಾಲಿಗಳೇ ಆಗಿದ್ದರೂ ಅವರನ್ನು ತನ್ನ ಗಾತ್ರದ ಮೂಲಕವೇ ಅಳ್ಳೆ ಅದುರಿಸಿಕೊಳ್ಳುವಂತೆ ಮಾಡೋ ತಾಖತ್ತಿರೋ ಪ್ರಾಣಿ ಆನೆ. ತನ್ನ ಗಾತ್ರದಷ್ಟೇ ಅಗಾಧವಾದ ಶಕ್ತಿಯನ್ನೊಳಗೊಂಡಿರೋ ಆನೆ ರೊಚ್ಚಿಗೆದ್ದಿತೆಂದರೆ ಕಂಟ್ರೋಲು ಮಾಡೋದು ಕಷ್ಟ. ಕಾಡಾನೆಗಳ ಕಥೆ ಹಾಗಿರಲಿ; ಸಾಕಿದ ಆನೆಗಳೂ ಕೂಡಾ ಮದವೇರಿ ಅಬ್ಬರಿಸೋ ಪರಿ ಭೀಕರವಾಗಿರುತ್ತೆ. ಇಂಥಾ ರೌದ್ರಾವತಾರಗಳ ಹೊರತಾಗಿ ಆನೆಯಷ್ಟು ಪಾಪದ, ಸೆನ್ಸಿಟಿವ್ ಆದ ಪ್ರಾಣಿ ಮತ್ತೊಂದಿರಲಾರದು. ಬಹುಶಃ ಆನೆಯೊಂದಿಗೆ ನಿಕಟ ನಂಟು ಹೊಂದಿರುವವರನ್ನು ಹೊರತಾಗಿಸಿದರೆ ಮತ್ಯಾರಿಗೂ ಅದೆಷ್ಟು ಸೆನ್ಸಿಟಿವ್ ಪ್ರಾಣಿ ಎಂಬುದರ ಅರಿವಿರಲು ಸಾಧ್ಯವಿಲ್ಲ. ಮನುಷ್ಯರು ಪ್ರತೀ ಭಾವನೆಗಳನ್ನೂ ವ್ಯಕ್ತ ಪಡಿಸುತ್ತಾರೆ. ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಸ್ಪಂದಿಸೋ ಶಕ್ತಿಯೂ ಮನುಷ್ಯರಿಗಿದೆ. ಯಾರಾದರೂ ಸತ್ತಾಗ, ಸೂತಕ ಆವರಿಸಿಕೊಂಡಾಗ ನಾವು ಮರುಗುತ್ತೇವೆ. ದುಃಖಿಸುತ್ತೇವೆ. ನಾಯಿಯಂಥಾ ಪ್ರಾಣಿಗಳನ್ನು ಹೊರತಾಗಿಸಿದರೆ ಮತ್ಯಾವ ಪ್ರಾಣಿಗಳೂ ಅಂಥಾ ಶಕ್ತಿ ಹೊಂದಿಲ್ಲ ಎಂದೇ ನಾವು ಭಾವಿಸುತ್ತೇವೆ. ಆದರೆ ಆ ವಿಚಾರದಲ್ಲಿ ದೈತ್ಯ ಗಾತ್ರದ ಆನೆ ನಾಯಿಯನ್ನೂ ಮೀರಿಸುತ್ತೆ. ವಿಶೇಷ ಅಂದ್ರೆ ಅದು ಸಹವರ್ತಿ ಆನೆಗಳು ಸತ್ತಾಗ ಮಾತ್ರವಲ್ಲದೇ ತಮ್ಮ…
ಎಲ್ಲ ಬುದ್ಧಿವಂತಿಕೆ, ತಿಳುವಳಿಕೆಗಳನ್ನು ಹೊಂದಿದ್ದರೂ ಕೂಡಾ ಈ ಮನುಷ್ಯನಷ್ಟು ಕೃತಘ್ನ ಜೀವಿ ಈ ಜಗತ್ತಿನಲ್ಲಿ ಹುಡುಕಿದರೂ ಸಿಗಲು ಸಾಧ್ಯವಿಲ್ಲ. ಹಾಗೊಂದು ವೇಳೆ ಚೂರೇ ಚೂರು ಕೃತಜ್ಞತೆ ಇದ್ದಿದ್ದರೂ ಕೂಡಾ ಸಹಜೀವಿಗಳ ಪಾಡು ಈ ಪರಿಯಾಗಿ ಹಡಾಲೇಳುತ್ತಿರಲಿಲ್ಲ. ಅದರಲ್ಲಿಯೂ ಪ್ರಕೃತಿಯ ಮೇಲೆ ನಾವೆಲ್ಲ ನಿರಂತರವಾಗಿ ಮಾಡುತ್ತಿರೋ ಅತಿಕ್ರಮಗಳಿವೆಯಲ್ಲಾ? ಅದನ್ನು ಯಾವ ಶಕ್ತಿಯೂ ಕ್ಷಮಿಸಲು ಸಾಧ್ಯವೇ ಇಲ್ಲ. ಈವತ್ತಿಗೆ ಇಡೀ ವಾತಾವರಣವನ್ನು ಸಮಸ್ಥಿತಿಯಲ್ಲಿಟ್ಟು ಮನುಷ್ಯ ಉಸಿರಾಡೋದಕ್ಕೂ ಅನುವು ಮಾಡಿಕೊಟ್ಟಿರುವ ಗಿಡ ಮರಗಳು ವಿನಾಶದಂಚಿನಲ್ಲಿವೆ. ಹೀಗೆ ನಾಮಾವಶೇಷ ಹೊಂದುತ್ತಿರೋ ಗಿಡಮರಗಳ ಶಕ್ತಿ ನಿಜಕ್ಕೂ ಊಹಾತೀತ. ಗಿಡ ಮರಗಳಿಗೂ ಜೀವವಿದೆ ಅನ್ನೋ ಕಾಮನ್ ಸೆನ್ಸ್ ನಮಗೆ ಬಂದಿದ್ದೇ ತೀರಾ ಇತ್ತೀಚೆಗೆ. ಅವುಗಳಿಗೆ ಬಾಯಿ ಬರೋದಿಲ್ಲ. ತಮಗಾದ ನೋವುಗಳನ್ನು ಕೂಗಿ ಹೇಳುವ, ತೋರ್ಪಡಿಸಿಕೊಳ್ಳುವ ಅವಕಾಶವನ್ನೂ ಕೂಡಾ ಈ ಸೃಷ್ಟಿ ಅವುಗಳಿಗೆ ಕೊಟ್ಟಿಲ್ಲ. ಕೊಂಬೆ ಕಡಿದಾಗಲೂ ಮರ ತೆಪ್ಪಗಿರೋದರಿಂದ ಅವುಗಳಿಗೆ ನೋವಾಗೋದಿಲ್ಲ ಎಂದೇ ಜನ ಪರಿಭಾವಿಸಿಕೊಂಡಿದ್ದರು. ಆದರೆ ಹಾಗೆ ಕಡಿಯುತ್ತಾ ಸಾಗಿದ್ದರ ಫಲವೆಂಬಂತೆ ನಮಗೇ ಈಗ ನೋವಾಗತೊಡಗಿದೆ. ಅಂದಹಾಗೆ, ಮನುಷ್ಯ…
ರಾಗಿಣಿ ಎಂಬ ಹೆಸರು ಕೇಳಿದಾಕ್ಷಣವೇ ಆಕೆ ನಟಿಸಿರುವ ಒಂದಷ್ಟು ಪಾತ್ರಗಳು ಕಣ್ಣ ಮುಂದೆ ಬರುವ ಕಾಲವೊಂದಿತ್ತು. ಆದರೆ ಯಾವಾಗ ಕೊರೋನಾ ಕಾಲಘಟ್ಟ ಆರಂಭವಾಯ್ತೋ, ಅಲ್ಲಿಂದೀಚೆಗೆ ಆಕೆಯ ಇಮೇಜು ಪಟ್ಟಂಪೂರಾ ಬದಲಾಗಿ ಬಿಟ್ಟಿದೆ. ಅದು ಡ್ರಗ್ಸ್ ಕೇಸಲ್ಲಿ ರಾಗಿಣಿ ತಗುಲಿಕೊಂಡು ಜೈಲು ಪಾಲಾಗಿದ್ದರ ಪರಿಣಾಮ. ಅ ನಂತರದಲ್ಲಿ ರಾಗಿಣಿಯ ಒಂದೊಂದೇ ಕಲ್ಯಾಣ ಗುಣಗಳು ಜಾಹೀರಾಗಿ, ಅಭಿಮಾನದ ಜಾಗವನ್ನು ಅನುಮಾನ ಆವರಿಸಿಕೊಂಡಿತ್ತು. ಪೊಲೀಸ್, ಕೇಸು, ವಿಚಾರಣೆ ಅಂತೆಲ್ಲ ಬೇರೆಯದ್ದೇ ಲೋಕದಲ್ಲಿದ್ದ ಆಕೆಯೀಗ ಮತ್ತೆ ನಟನೆಗೆ ಮರಳಿದ್ದಾಳೆ. ಈಗಾಗಲೇ ರಾಗಿಣಿ ಕಿಕ್ ಎಂಬೊಂದು ಕನ್ನಡ ಚಿತ್ರ ಮತ್ತು ತಮಿಳಿನ ಚಿತ್ರವೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಳೆ. ಅದಾಗಲೇ ಆಕೆ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಹೊರಬಿದ್ದಿದೆ. ಈ ಬಗೆಗಿನ ಒಂದಷ್ಟು ವಿವರಗಳೂ ಕೂಡಾ ಜಾಹೀರಾಗಿವೆ. ಅದರನ್ವಯ ಹೇಳೋದಾದರೆ, ಆ ಚಿತ್ರಕ್ಕೆ ಇನ್ನಷ್ಟೇ ಹೆಸರಿಡಬೇಕಿದೆ. ಈಗ ಶಂಭೋ ಶಿವ ಶಂಕರ ಎಂಬ ಚಿತ್ರ ನಿರ್ದೇಶನ ಮಾಡಿರೋ ಶಂಕರ್ ಕೋನಮಾನಹಳ್ಳಿ ಈ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈ ತಿಂಗಳಿನಿಂದಲೇ ಸದರಿ ಚಿತ್ರದ…
ಒಂದು ಸಿನಿಮಾವನ್ನು ಆರಂಭಿಸಿ, ಪ್ರತೀ ಹಂತದಲ್ಲಿಯೂ ಅದರತ್ತ ಪ್ರೇಕ್ಷಕರು ಆಷರ್ಶಿತರಾಗುವಂತೆ ನೋಡಿಕೊಳ್ಳೋದೇ ಒಂದು ಕಲೆ. ಅದಕ್ಕಾಗಿಯೇ ನಾನಾ ಪ್ರಚಾರ ತಂತ್ರಗಳು ಚಾಲ್ತಿಯಲ್ಲಿವೆ; ಆ ಸಾಲಿಗೆ ಹೊಸ ಹೊಸಾ ಪಟ್ಟುಗಳು ಸೇರ್ಪಡೆಯಾಗುತ್ತಲೇ ಸಾಗುತ್ತಿವೆ. ಅಂಥಾ ಸಾಲಿಗೆ ಮತ್ತೊಂದಷ್ಟು ರೋಚಕ ಅಂಶಗಳನ್ನು ಸೇರಿಸಿದ ಖ್ಯಾತಿ ಪ್ರೇಮ್‌ಗೆ ಸಲ್ಲುತ್ತದೆ. ಈ ಕಾರಣಕ್ಕಾಗಿಯೇ ಆತ ಶೋಮ್ಯಾನ್ ಎಂಬ ಬಿರುದಿಗೂ ಪಾತ್ರರಾಗಿದ್ದಾರೆ. ಆದರೆ ಇತ್ತೀಚೆಗೆ ಬದಲಾದಂತಿರುವ ಪ್ರೇಮ್ಸ್ ಇದೀಗ ಕೆಡಿ ಎಂಬ ಚಿತ್ರವನ್ನು ಆರಂಭಿಸಿದ್ದಾರೆ. ಅದು ನಿಜಕ್ಕೂ ಒಂದಷ್ಟು ಸಂಚಲನ ಸೃಷ್ಟಿಸುತ್ತಿದೆ. ಕೆಡಿ ಧ್ರುವ ಸರ್ಜಾ ನಾಯಕನಾಗಿ ನಟಿಸಲಿರೋ ಪ್ಯಾನಿಂಡಿಯಾ ಚಿತ್ರ. ವಾರದ ಹಿಂದಷ್ಟೇ ಅದರ ಟೈಟಲ್ ಲಾಂಚ್ ಆಗಿತ್ತು. ಆ ನಂತರದಲ್ಲಿ ಕೆಡಿಯ ಕ್ರೇಜ್ ಅದ್ಯಾವ ಪರಿಯಾಗಿ ಹಬ್ಬಿಕೊಂಡಿದೆ ಎಂದರೆ, ಬೇರೆ ಬೇರೆ ಭಾಷೆಗಳಲ್ಲಿ ವಿತರಣಾ ಹಕ್ಕ ಖರೀದಿಗಾಗಿ ಪೈಪೋಟಿ ಆರಂಭವಾಗಿದೆಯಂತೆ. ಈ ಸುದ್ದಿಯೂ ಪ್ರೇಮ್ ಪ್ರಚಾರದ ಪಟ್ಟಿನ ಭಾಗವಾಗಿರಬಹುದಾ ಎಂಬಂಥಾ ಸಂದೇಹ ಮೂಡಿಕೊಳ್ಳೋದು ಸಹಜ. ಆದರೆ ಅದರಲ್ಲಿಯೂ ಸತ್ಯಾಂಶವಿದ್ದಂತಿದೆ. ಈ ಬಾರಿ ಕೆಡಿ ಮೂಲಕ ಪ್ರೇಮ್ಸ್…