Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ನಮ್ಮ ಸುತ್ತಲೇ ಎಷ್ಟೊಂದು ಪ್ರಾಣಿ ಪಕ್ಷಿಗಳಿರುತ್ತವೆ. ಕೆಲವೊಂದು ಯಾವ ಸನ್ನಿವೇಷದಲ್ಲಿಯೂ ವ್ಯಘ್ರಗೊಳ್ಳದಷ್ಟು ಸಾಧು ಸ್ವಭಾವ ಹೊಂದಿರುತ್ತವೆ. ಆದರೆ ಅವುಗಳ ಜಗತ್ತಿನಲ್ಲಿ ನಡೆಯೋ ಭಯಾನಕ ಪಲ್ಲಟಗಳು ಮಾತ್ರ ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಗಮನಕ್ಕೆ ಬರುವುದೇ ಇಲ್ಲ. ಅದಕ್ಕೆ ನಮಗೆಲ್ಲ ತುಂಬಾನೇ ಚಿರಪರಿಚಿತವಾಗಿರೋ ಬಾತುಕೋಳಿಗಳೇ ಸೂಕ್ತ ಉದಾಹರಣೆ. ನೋಡಿದರೆ ಮುದ್ದಾಡಬೇಕೆಂಬಷ್ಟು ಮುದ್ದು ಮುದ್ದಾಗಿರೋ ಬಾತುಕೋಳಿಗಳನ್ನ ಸಾಕಷ್ಟು ಮಂದಿ ಸಾಕುತ್ತಾರೆ. ಆದರೆ ಅವರ‍್ಯಾರಿಗೂ ಅವುಗಳ ಕ್ರೌರ್ಯದ ಮುಖ ಕಾಣಿಸೋದೇ ಇಲ್ಲ! ಬಾತುಕೋಳಿಗಳು ನೀರು ಮತ್ತು ಕೆಸರಲ್ಲಿ ಸಿಗೋ ಹುಳು ಹುಪ್ಪಟೆಗಳನ್ನೇ ತಿಂದು ಬದುಕುತ್ತವೆ. ಮನೆಯಲ್ಲಿ ಸಾಕಿದರೆ ಕಾಳು ಕಡಿಗಳಿಗೇ ತೃಪ್ತವಾಗುತ್ತವೆ. ಆದರೆ ಅವು ಮೇಲು ನೋಟಕ್ಕೆ ಗೋಚರವಾಗುವಷ್ಟು ಸಾಧು ಸ್ವಭಾವದವುಗಳಲ್ಲ. ಹಾಗಂತ ಅವುಗಳೇನು ಕೆರಳೋದಿಲ್ಲ. ಅವುಗಳ ಮೂಡು ಬದಲಾಗಲು ಅರೆಕ್ಷಣ ಸಾಕು. ಕೆಲವೊಂಮ್ಮೆ ಅವು ಬೋರಾದಾಗ ಹದ್ದಿಗಿಂತಲೂ ಕ್ರೂರವಾಗಿ ತನ್ನ ಜೊತೆಗಾರ ಬಾತುಕೊಳಿಗಳ ಮೇಲೆಯೇ ಪ್ರಹಾರ ನಡೆಸುತ್ತವಂತೆ. ಆ ಕ್ಷಣದಲ್ಲಿ ಅವುಗಳ ಉದ್ದೇಶ ಜೊತೆಗಾರ ಬಾತುಕೋಳಿಯನ್ನು ತಿನ್ನೋದೇ ಆಗಿರುತ್ತೆ. ಅವುಗಳಿಗೆ ಬೋರಾಗಿ ರೊಚ್ಚಿಗೆದ್ದ ಘಳಿಗೆಯಲ್ಲಿ ಬೇರೆ…

Read More

ನಾವು ನಮ್ಮ ಸುತ್ತ ಮುತ್ತ ಇರೋ ಕೆಲ ಆಚಾರ, ವಿಚಾರ, ನಂಬಿಕೆಗಳನ್ನೇ ವಿಚಿತ್ರ ಅಂದುಕೊಳ್ಳುತ್ತೇವೆ. ಕೆಲವೊಮ್ಮೆ ಅಂಥಾ ಸಂಪ್ರದಾಯಗಳ ಅಸಲೀ ಅರ್ಥವಂತಿಕೆಯ ಬಗ್ಗೆ ತಿಳಿದಾಗ ಪೂರ್ವಜರು ಅದೆಷ್ಟು ಅರ್ಥವತ್ತಾಗಿ ಆಲೋಚಿಸುತ್ತಿದ್ದರಲ್ಲಾ ಅಂತ ಅಚ್ಚರಿಗೊಳ್ಳುತ್ತೇವೆ. ಅದರಲ್ಲಿಯೂ ಬದುಕಿನ ಪ್ರಮುಖ ಘಟ್ಟವಾದ ಮದುವೆಯ ವಿಚಾರದಲ್ಲಿ ನಮ್ಮಲ್ಲಿ ಸಾಕಷ್ಟು ಸಂಪ್ರದಾಯಗಳಿವೆ. ಆದರೆ ಪೂರ್ವ ಜರ್ಮನಿಯಲ್ಲಿರುವಂಥ ಸಂಪ್ರದಾಯ ಮಾತ್ರ ಇಡೀ ಭಾರತದಲ್ಲಿ ಹುಡುಕಿದರೂ ಸಿಗಲಿಕ್ಕಿಲ್ಲ. ಬಹುಶಃ ಬೇರ‍್ಯಾವ ದೇಶಗಳಲ್ಲಿಯೂ ಅದು ಕಾಣ ಸಿಗೋದು ಸಂದೇಹವೇ! ಹಾಗಾದ್ರೆ ಮದುವೆ ವಿಚಾರದಲ್ಲಿ ಜರ್ಮನಿಯಲ್ಲಿ ಚಾಲ್ತಿಯಲ್ಲಿರೋ ಸಂಪ್ರದಾಯ ಯಾವುದು ಎಂಬ ಕುತೂಹಲ ಸಹಜವಾಗಿಯೇ ಒತ್ತರಿಸುತ್ತೆ. ನಮ್ಮಲ್ಲಿ ಮದುವೆಯಾದ ನಂತರದಲ್ಲಿ ಮದುಮಕ್ಕಳನ್ನು ಹೂವಿನಂತೆ ನೋಡಿಕೊಂಡು ಪ್ರಸ್ಥದ ಕೊಠಡಿ ತಲುಪಿಸಲಾಗುತ್ತೆ. ಆದರೆ ಪೂರ್ವ ಜರ್ಮನಿಯಲ್ಲಿ ಮದುವೆಯಾಗೋ ನವ ಜೋಡಿಗಳ ಹಾದಿ ಅಷ್ಟು ಸುಗಮವಾಗಿಲ್ಲ. ಯಾಕಂದ್ರೆ ಗಂಡ ಹೆಂಡಿರಿಬ್ಬರೂ ಸೇರಿಕೊಂಡು ಇಡೀ ಮನೆಯನ್ನ ಸ್ವಚ್ಛಗೊಳಿಸಿ ಹಿರೀಕರನ್ನೆಲ್ಲ ಸಂತೃಪ್ತಗೊಳಿಸಿದ ನಂತರವಷ್ಟೇ ಅವರ ಪಾಲಿಗೆ ಫಸ್ಟ್ ನೈಟ್ ಭಾಗ್ಯ ಲಭಿಸುತ್ತದೆಯಂತೆ. ನಮ್ಮಲ್ಲಿ ಮದುವೆಯ ನಂತರದಲ್ಲಿ ಬೀಗರೂಟದ ಸಂಪ್ರದಾಯ ಇದೆಯಲ್ಲಾ?…

Read More

ಸಾವೆಂಬುದು ಮನುಷ್ಯ ಜೀವನದ ಅಂತಿಮ ನಿಲ್ದಾಣ. ಹುಟ್ಟಿನಿಂದ ಸಾವಿನವರೆಗಿನ ಪಯಣವನ್ನು ಸಾರ್ಥಕಗೊಳಿಸಿಕೊಳ್ಳೋದಿದೆಯಲ್ಲಾ? ಅದು ಮನುಷ್ಯ ಜನುಮದ ಶ್ರೇಷ್ಠ ಸಾಧನೆ. ಆದರೆ ಮನುಷ್ಯ ಮಾತ್ರರಿಗೆ ಬದುಕಿಗಿಂತಲೂ ಸಾವೇ ಹೆಚ್ಚಾಗಿ ಕಾಡುತ್ತೆ. ಅದರಾಚೆಗಿನ ಆಗು ಹೋಗುಗಳತ್ತ ಸದಾ ಮನಸು ಗಿರಕಿ ಹೊಡೆಯುತ್ತೆ. ಸಾವಿನ ನಂತರ ಏನೂ ಇಲ್ಲದ ಶುಷ್ಕ ವಾತಾವರಣವಿರುತ್ತಾ? ಅಥವಾ ಆ ನಂತರವೂ ಒಂದು ಅಗೋಚರ ಬದುಕಿರುತ್ತಾ ಎಂಬುದೂ ಸೇರಿದಂತೆ ಸಹಸ್ರಾರು ಪ್ರಶ್ನೆಗಳಿದ್ದಾವೆ. ಇಂಥಾ ದ್ವಂದ್ವಗಳೇ ಸಾವಿನ ನಂತರದಲ್ಲಿ ಬದುಕಿರೋ ವ್ಯಕ್ತಿಗಳ ನಡುವೆ ಚಿತ್ರವಿಚಿತ್ರವಾದ ನಂಬಿಕೆಗಳು ಮೇಳೈಸುತ್ತವೆ. ಭಾರತದಲ್ಲಿಯೂ ಸೆಂಟಿಮೆಂಟುಗಳಿಗೇನೂ ಕೊರತೆಯಿಲ್ಲ. ಅದು ಸಾವಿನಾಚೆಗೂ ಮೈ ಚಾಚಿಕೊಂಡಿದೆ. ನಮ್ಮ ಸುತ್ತ ಯಾರೇ ಸತ್ತರೂ ನಾವು ಮಣ್ಣು ಮಾಡಿ ಮರೆತು ಕೂರೋದಿಲ್ಲ. ಸದಾ ಕಾಲವೂ ಅವರನ್ನ ನೆನಪಿಸಿಕೊಳ್ಳುತ್ತೇವೆ. ಆಗಾಗ ಎಡೆ ಹಾಕಿ ಇಲ್ಲದವರನ್ನು ಊಟಕ್ಕೆ ಕರೆಯುತ್ತೇವೆ. ನಂತರ ಅವರ ಆತ್ಮ ಊಟ ಮಾಡಿ ಎದ್ದು ಹೋಯಿತೆಂದು ನಂಬಿ ನಿರಾಳವಾಗುತ್ತೇವೆ. ಆದರೆ, ರೋಮನ್ನರು ಮಾತ್ರ ಇಂಥಾ ಸೆಂಟಿಮೆಂಟಿನ ಉತ್ತುಂಗದಲ್ಲಿದ್ದಾರೆ. ಅಲ್ಲಿರೋ ನಂಬಿಕೆಗಳನ್ನ ನೋಡಿದರೆ ಯಾರಿಗೇ ಆದರೂ…

Read More

ಪ್ರದೇಶದಿಂದ ಪ್ರದೇಶಕ್ಕೆ ಜೀವನಕ್ರಮ, ಸಂಪ್ರದಾಯಗಳು ಬದಲಾಗೋದು ಮಾಮೂಲು. ಹಾಗಿದ್ದ ಮೇಲೆ ದೇಶದಿಂದ ದೇಶಕ್ಕೆ ಅದರಲ್ಲಿ ಅಜಗಜಾಂತರ ವ್ಯತ್ಯಾಸಗಳಿರುತ್ತವೆ. ಇಂಥಾ ಒಂದಷ್ಟು ರೀತಿ ರಿವಾಜು ನಂಬಿಕೆಗಳಲ್ಲಿ ಸಾಮ್ಯತೆಗಳಿದ್ದರೂ ಮತ್ತೊಂದಷ್ಟು ಆಯಾ ದೇಶಕ್ಕೆ ಮಾತ್ರವೇ ಸೀಮಿತವಾಗಿರುತ್ತವೆ. ಚೀನಾದಲ್ಲಿ ಸಾವಿರಾರು ವರ್ಷಗಳಿಂದಲೂ ಚಾಲ್ತಿಯಲ್ಲಿದ್ದು, ಇತ್ತೀಚೆಗೆ ನಿಶೇಧಕ್ಕೊಳಪಟ್ಟಿರೋ ಒಂದು ವಿಲಕ್ಷಣ ಸಂಪ್ರದಾಯವೂ ಆ ಸಾಲಿಗೆ ಸೇರುವಂತಿದೆ. ಚೀನಾದ ಹಲವಾರು ಸಂಪ್ರದಾಯಗಳು, ಪ್ರಾಕೃತಿಕ ವಾತಾವರಣ, ಕೃಷಿ ಚಟುವಟಿಕೆ ಮುಂತಾದವುಗಳೆಲ್ಲವೂ ಭಾರತಕ್ಕೆ ಹೋಲಿಕೆಯಾಗುವಂತಿವೆ. ಆದರೆ ಈಗ ಹೇಳಹೊರಟಿರೋ ವಿಚಾರ ಮಾತ್ರ ಯಾವ ದೇಶಗಳೊಂದಿಗೂ ಹೋಲಿಕೆಯಾಗಲು ಸಾಧ್ಯವೇ ಇಲ್ಲದಂಥಾದ್ದು. ಚೀನಾದ ಒಂದಷ್ಟು ಪ್ರದೇಶಗಳಲ್ಲಿ ಹೆಣ್ಣು ಮಕ್ಕಳ ಪಾದಗಳನ್ನು ಪುಟ್ಟದಾಗಿರುವಂತೆ ನೋಡಿಕೊಳ್ಳಲಾಗುತ್ತಿತ್ತಂತೆ. ಹೆಣ್ಣು ಮಕ್ಕಳಿಗೆ ಪಾದ ಚಿಕ್ಕದಾಗಿದ್ದರೆ ಸೌಂದರ್ಯಕ್ಕೆ ಹೊಸಾ ಮೆರುಗು ಸಿಗುತ್ತದೆಂಬುದು ಈ ನಂಬಿಕೆಯ ತಳಹದಿಯಾಗಿತ್ತು. ಹೆಣ್ಣು ಮಕ್ಕಳ ಪಾದ ಬೆಳೆಯುತ್ತಾ ಬಂದಂತೆ ಏನಿಲ್ಲವೆಂದರೂ ಐದಾರು ಇಂಚುಗಳಷ್ಟು ಬೆಳೆಯುತ್ತದೆ. ಆದರೆ ಚೀನೀಯರಿಗೆ ಅಷ್ಟು ದೊಡ್ಡದಾಗಿ ಹೆಣ್ಣು ಮಕ್ಕಳ ಪಾದ ಬೆಳೆಯೋದು ಅಸಹ್ಯದಂತೆ ಕಾಣಿಸುತ್ತಿತ್ತಂತೆ. ಆದ್ದರಿಂದಲೇ ಚಿಕ್ಕಂದಿನಿಂದಲೇ ಹೆಣ್ಣುಮಕ್ಕಳ ಪಾದಗಳಿಗೆ ಟೈಟ್ ಆಗಿ…

Read More

ಸ್ಥಿತಿವಂತರ ಮನೆ ಮಕ್ಕಳು ಸಿನಿಮಾರಂಗಕ್ಕೆ ಬಂದಾಕ್ಷಣ ಮೊದಲು ತೂರಿ ಬರುವುದೇ ಮೂದಲಿಕೆ. ಇತ್ತ ಗಾಂಧಿನಗರದ ಗಲ್ಲಿಯಗುಂಟ ನಾನಾ ಸರ್ಕಸ್ಸು ನಡೆಸೋ ಮಂದಿಯ ಸಂತೆ ನೆರೆದಿರುವಾಗ, ಹಣವಂತರ ಮಕ್ಕಳು ಸಲಾಸಾಗಿ ಬಂದು ಮೆರೆಯುತ್ತಾರೆಂಬುದು ಅಂಥಾದ್ದೊಂದು ಮನಃಸ್ಥಿತಿಗೆ ಕಾರಣವಾಗಿದ್ದಿರಬಹುದು. ಅದು ಒಂದು ಮಟ್ಟಿಗೆ ನಿಜವೆನ್ನಿಸಿದರೂ, ತಯಾರಿ ಮತ್ತು ನಟನೆಯ ಮೂಲಕ ಅಂಥಾ ಮನಃಸ್ಥಿತಿಯನ್ನು ಸುಳ್ಳೆಂದು ಸಾಬೀತು ಮಾಡಿದ ಒಂದಷ್ಟು ಪ್ರತಿಭೆಗಳಿದ್ದಾವೆ. ಆ ಸಾಲಿನಲ್ಲಿ ಬನಾರಸ್ ಹೀರೋ ಝೈದ್ ಖಾನ್ ನಿಸ್ಸಂದೇಹವಾಗಿಯೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇಂದು ಬಿಡುಗಡೆಯಾಗಿರೋ ಜಯತೀರ್ಥ ನಿರ್ದೇಶನದ ಬನಾರಸ್ ಚಿತ್ರ ನೋಡಿದ ಪ್ರತಿಯೊಬ್ಬರೂ ಕೂಡಾ ಅಂಥಾದ್ದೊಂದು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತ ಪಡಿಸುತ್ತಿದ್ದಾರೆ. ಒಟ್ಟಾರೆ ಕಥೆ ಮತ್ತು ಆ ಪಾತ್ರಕ್ಕೆ ಝೈದ್ ಖಾನ್ ಜೀವ ತುಂಬಿರುವ ರೀತಿಯನ್ನು ಪ್ರೇಕ್ಷಕರು ಮನದುಂಬಿ ಮೆಚ್ಚಿಕೊಳ್ಳುತ್ತಿದ್ದಾರೆ. ಯಾವಾಗ ಬನಾರಸ್ ಚಿತ್ರ ಹಾಡುಗಳ ಮೂಲಕವೇ ಕಳೆಗಟ್ಟಿಕೊಳ್ಳಲಾರಂಭಿಸಿತ್ತೋ, ಆ ಕಾಲಘಟ್ಟದಲ್ಲಿಯೇ ಒಂದಷ್ಟು ವಿದ್ಯಮಾನಗಳೂ ಜರುಗಿದ್ದವು. ಆ ಭೂಮಿಕೆಯಲ್ಲಿಯೇ ಒಂದಷ್ಟು ಮಂದಿ ಬಾಯ್ಕಾಟ್ ಬನಾರಸ್ ಅಂತೆಲ್ಲ ಬಾಯಿಬಡಿದುಕೊಳ್ಳಲಾರಂಭಿಸಿದ್ದರಲ್ಲಾ? ಅಂಥವರೇ ಈ ಚಿತ್ರದ ಬಗ್ಗೆ…

Read More

ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕ್ರಾಂತಿ. ಅತ್ತ ಮೀಡಿಯಾಗಳು ಮುನಿಸಿಕೊಂಡಿದ್ದರೂ ಕೂಡಾ, ಖುದ್ದು ಅಭಿಮಾನಿಗಳೇ ಈ ಸಿನಿಮಾದ ಪ್ರಚಾರದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮೀಡಿಯಾ ಮುನಿಸಿನಾಚೆಗೂ ಕ್ರಾಂತಿ ನಿಜಕ್ಕೂ ಕ್ರಾಂತಿ ಮಾಡಲಿದೆ ಎಂಬಂಥಾ ಗಾಢ ನಂಬಿಕೆಯೊಂದು ಅಭಿಮಾನಿ ವಲಯದಲ್ಲಿದೆ. ಮೀಡಿಯಾಗಳಿಗೆ ಸೆಡ್ಡು ಹೊಡೆದು ನಿಂತಿರುವ ದರ್ಶನ್‌ಗೂ ಕೂಡಾ ಅಂಥಾದ್ದೊಂದು ನಂಬಿಕೆ ಬಲವಾಗಿರುವಂತಿದೆ. ಈ ಸಿನಿಮಾದ ಕಥೆ ಏನು? ಅದರಲ್ಲಿ ದರ್ಶನ್ ಯಾವ ಥರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳು ಎಲ್ಲರಲ್ಲಿಯೂ ಇವೆ. ಆದರೆ, ಆ ಬಗ್ಗೆ ಸಣ್ಣದೊಂದು ವಿವರವೂ ಜಾಹೀರಾಗದಂತೆ ಚಿತ್ರತಂಡ ಪಹರೆ ಕಾಯುತ್ತಾ ಬಂದಿದೆ. ಇದೆಲ್ಲದರ ನಡುವೆ ಮೊನ್ನೆ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಖುದ್ದು ದರ್ಶನ್ ಕಥಾ ಎಳೆಯ ಬಗ್ಗೆ ಸೂಕ್ಷ್ಮ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಈ ಸಮಾಜದಲ್ಲಿ ಮೇರೆ ಮೀರಿಕೊಂಡಿರುವ ಖಾಸಗಿ ಶಾಲೆಗಳ ಎಜುಕೇಷನ್ ಮಾಫಿಯಾ ಸುತ್ತ ಕ್ರಾಂತಿಯ ಕಥೆಯಿರೋ ಸುಳಿವನ್ನು ದರ್ಶನ್ ಮಾತುಗಳೇ ಸಾಬೀತುಪಡಿಸಿವೆ. ಅತ್ತ ಬಿ. ಸುರೇಶ್ ನಿರ್ಮಾಣ ಮಾಡುತ್ತಿರೋದರಿಂದ ಈ ಸಿನಿಮಾ ನಿಜಕ್ಕೂ ಕ್ರಾಂತಿಕಾರಕ ಕಥೆ ಹೊಂದಿದೆ…

Read More

ಇದೀಗ ಆಹಾರವೆಂಬುದು ಬರೀ ಹೊಟ್ಟೆ ತುಂಬಿಸೋ ಮೂಲವಾಗುಳಿದಿಲ್ಲ. ಅದಕ್ಕೂ ಕೂಡಾ ಆಧುನಿಕತೆಯ ಶೋಕಿ ಮೆತ್ತಿಕೊಂಡಿದೆ. ತಿನ್ನೋ ಅನ್ನವನ್ನೂ ಕೂಡಾ ಆಡಂಭರ ಅಂದುಕೊಂಡ ಮೂರ್ಖರ ಸಂಖ್ಯೆ ದಿನೇ ದಿನೇ ಬೆಳೆಯುತ್ತಲೇ ಇದೆ. ಇದರ ಭಾಗವಾಗಿ ಜಂಕ್ ಫುಡ್‌ಗಳ ಹಾವಳಿ ಮಿತಿ ಮೀರಿಕೊಂಡಿದೆ. ಇಲ್ಲಿ ದೇಹಕ್ಕೆ ಆಗೋ ಲಾಭಕ್ಕಿಂತಲೂ ಕಣ್ಣಿಗೆ ಸಮಾಧಾನವಾಗಬೇಕು. ಆ ಕ್ಷಣಕ್ಕೆ ರುಚಿಯೆನ್ನಿಸಬೇಕು… ಅಂಥಾದ್ದಿದ್ದರೆ ಅದು ವಿಷವೇ ಆಗಿದ್ದರೂ ಸಂತೋಷದಿಂದ ಮೆಲ್ಲುವವರೇ ಹೆಚ್ಚು. ಆದರೆ ಇಂಥಾ ಶೋಕಿ ಮಿತಿ ಮೀರಿದರೆ ಜೀವಕ್ಕೇ ಕುತ್ತು ಬರುತ್ತೆ. ಕೊಂಚ ಯಾಮಾರಿದರೂ ಹುಟ್ಟೋ ಕೂಸುಗಳೂ ಅನಾರೋಗ್ಯದ ಮುದ್ದೆಗಳಾಗಿಯೇ ಕಣ್ತೆರೆಯೋ ಅಪಾಯಗಳಿದ್ದಾವೆ. ಒಂದು ಅಧ್ಯಯನ ಇಂಥಾ ಅನಾಹುತವನ್ನು ಸ್ಪಷ್ಟೀಕರಿಸಿದೆ. ಇತ್ತೀಚಿನ ದಿನಗಳಲ್ಲಿ ನವಜಾತ ಶೀಶುಗಳು ಹಲವಾರು ಕಾಯಿಲೆ ಕಸಾಲೆಗಳಿಂದ ಬಳಲೋದು ಹೆಚ್ಚಾಗುತ್ತಿದೆ. ವಿಶೇಷವಾಗಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹಾಗೆ ನೋಡಿದರೆ ಹಿಂದಿನ ಕಾಲಕ್ಕಿಂತಲೂ ಈಗಿನ ಕಾಲದಲ್ಲಿ ಪ್ರೆಗ್ನೆನ್ಸಿ ಕಾಲದಲ್ಲಿ ಹೆಚ್ಚು ಎಚ್ಚರ ವಹಿಸಲಾಗುತ್ತಿದೆ. ಆ ಸಂದರ್ಭದಲ್ಲಿ ಅಮ್ಮ ಎಷ್ಟು ಆರೋಗ್ಯ ಕಾಪಾಡಿಕೊಳ್ತಾಳೋ ಅಷ್ಟೇ ಆರೋಗ್ಯವಂತವಾಗಿರೋ…

Read More

ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಅದನ್ನು ಎಲ್ಲರ ಬದುಕಿನ ನಿರ್ಣಾಯಕ ಕಾಲಮಾನ ಎಂದೇ ಪರಿಗಣಿಸಲಾಗುತ್ತೆ. ಆದರೆ ಈ ಮದುವೆಯ ವಿಚಾರದಲ್ಲಿ ರೂಢಿಯಲ್ಲಿರೋ ಸಂಪ್ರದಾಯಗಳು, ವಿಧಿ ವಿಧಾನಗಳನ್ನ ಒಂದು ಚೌಕಟ್ಟಿನಲ್ಲಿ ಸೇರಿಸಲಾಗೋದಿಲ್ಲ. ಯಾಕಂದ್ರೆ ಅವು ತುಂಬಾನೇ ವೈವಿಧ್ಯಮಯವಾಗಿವೆ. ಒಂದು ಮದುವೆ ಅಂದ್ರೆ ಹತ್ತಾರು ಸಂಪ್ರದಾಯಗಳಿರುತ್ತವೆ. ಅದರಲ್ಲೊಂದಿಷ್ಟು ಪ್ರದೇಶದಿಂದ ಪ್ರದೇಶಕ್ಕೆ, ಸಮುದಾಯದಿಂದ ಸಮುದಾಯಕ್ಕೆ ಬದಲಾಗುತ್ತವೆ. ಮತ್ತೊಂದಷ್ಟು ಆಚರಣೆಗಳು ವಿಚಿತ್ರದಲ್ಲಿಯೇ ವಿಚಿತ್ರವಾಗಿರುತ್ತವೆ! ಗುಜರಾತ್ ರಾಜ್ಯದ ಬುಡಕಟ್ಟು ಜನಾಂಗವೊಂದರಲ್ಲಿ ಚಾಲ್ತಿಯಲ್ಲಿರೋ ಆಚರಣೆಯೊಂದರ ಬಗ್ಗೆ ಕೇಳಿದರೆ ಯಾರೇ ಆದರೂ ನಂಬಲು ತಿಣುಕಾಡದಿರೋದಿಲ್ಲ. ಅಂಥಾದ್ದೊಂದು ವಿಕ್ಷಿಪ್ತವಾದ ಮದುವೆಯ ಪದ್ಧತಿ ಆಚರಣೆಯಲ್ಲಿರೋದು ಗುಜರಾತಿನ ಛೋಟಾ ಉದಯಪುರ್ ಪ್ರದೇಶದಲ್ಲಿ. ಇಲ್ಲಿನ ಬುಡಕಟ್ಟು ಜನಾಂಗದಲ್ಲಿ ಮದುವೆಯಾದರೆ ವರ ತನ್ನ ಹೆಂಡತಿಗೆ ತಾಳಿ ಕಟ್ಟುವಂತಿಲ್ಲ. ಆತನ ಮದುವೆಯಾಗದ ಸಹೋದರಿ ತನ್ನ ಸಹೋದರನ ಪರವಾಗಿ ಅತ್ತಿಗೆಗೆ ತಾಳಿ ಕಟ್ಟುತ್ತಾಳೆ. ನಂತರದ ಎಲ್ಲ ವಿಧಿ ವಿಧಾನಗಳನ್ನೂ ಕೂಡಾ ಆಕೆಯೇ ಪೂರೈಸುತ್ತಾಳೆ. ಇನ್ನೂ ವಿಚಿತ್ರ ಅಂದ್ರೆ ಆ ಜನಾಂಗದ ಹುಡುಗರಿಗೆ ತಮ್ಮ ಮದುವೆಯಲ್ಲಿ ತಾವೇ ಹಾಜರಿರುವ ಅವಕಾಶವೂ ಇಲ್ಲ.…

Read More

ನಮ್ಮಲ್ಲಿನ ನಂಬಿಕೆಗಳೇ ಅಸಂಗತವಾದವುಗಳು. ಕುಂತರೆ, ನಿಂತರ, ಕೆಮ್ಮಿದರೆ, ಕಣ್ಣು ರೆಪ್ಪೆ ಹೊಡೆದುಕೊಂಡರೆ, ನರಗಳು ಬಡಿದುಕೊಂಡರೂ ಅದಕ್ಕೆ ಒಂದೊಂದು ಶಕುನಗಳಿದ್ದಾವೆ. ಎಡಗಣ್ಣು ಅದುರಿದರೆ ಏನಾಗುತ್ತೆ? ಬಲಗಣ್ಣು ಅದುರಿದರೆ ಯಾವ್ಯಾವ ಫಲಾಫಲಗಳು ಸಿಗುತ್ತವೆ ಎಂಬಲ್ಲಿಯವರೆಗೆ ಎಲ್ಲದಕ್ಕೂ ಒಂದಷ್ಟು ವಿವರಣೆಗಳಿದ್ದಾವೆ. ಅವುಗಳಲ್ಲಿ ಒಂದಷ್ಟು ಸಿಲ್ಲಿಯಾಗಿ, ಮತ್ತೊಂದಷ್ಟು ಮೂರ್ಖತನದ ಪರಮಾವಧಿಯಾಗಿಯೂ ಕಾಣಿಸುತ್ತವೆ. ಹಾಗಿರುವಾಗ ಅರಿವೇ ಇಲ್ಲದಂತೆ ಆಗಾಗ ಕಾಣಿಸಿಕೊಳ್ಳುವ ಆಕಳಿಕೆಗೆ ಅರ್ಥ, ಶಕುನಗಳು ಇಲ್ಲದಿರಲು ಹೇಗೆ ಸಾಧ್ಯ? ಈ ಆಕಳಿಕೆಯ ಬಗ್ಗೆಯಂತೂ ಕನಸಿನ ಬಗ್ಗೆ ಇರುವಷ್ಟೇ ರಂಗು ರಂಗಾದ ವಿವರಣೆಗಳು, ನಂಬಿಕೆಗಳಿದ್ದಾವೆ. ಸಾಮಾನ್ಯವಾಗಿ ಆಲಸ್ಯದಂಥಾ ಘಳಿಗೆಯಲ್ಲಿ, ಆಯಾಸವಾದ ಸಮಯದಲ್ಲಿ, ಬೋರು ಹೊಡೆದಂಥಾ ಸಂದರ್ಭಗಳಲ್ಲಿ ಆಕಳಿಕೆ ಬರುತ್ತೆ. ಕೆಲ ಮಂದಿ ಹೀಗಾದಾಗೆಲ್ಲ ತಮ್ಮನ್ನು ಯಾರೋ ನೆನೆಸಿಕೊಳ್ಳುತ್ತಿದ್ದಾರೆಂದು ಭ್ರಮಿಸ್ತಾರೆ. ಯಾರೋ ನಮ್ಮ ಬಗ್ಗೆ ಹೆಚ್ಚಾಗಿ ಮಾತಾಡುತ್ತಿದ್ದರೆ ಮಾತ್ರವೇ ಆಕಳಿಕೆ ಬರುತ್ತದೆ ಎಂಬಂಥ ನಂಬಿಕೆಗಳೂ ನಮ್ಮಲ್ಲಿದೆ. ಇಂಥಾ ಶಕುನಗಳಲ್ಲಿ ಅದೆಷ್ಟು ನಿಜವಿದೆಯೋ, ಸುಳ್ಳುಗಳಿವೆಯೋ ಭಗವಂತನೇ ಬಲ್ಲ. ಥಾ ನಂಬಿಕೆಗಳ ಬಗ್ಗೆ ವೈಜ್ಞಾನಿಕವಾಗಿ ವಿವರಣೆಗಳು ಇರಲೇ ಬೇಕಲ್ಲ. ಹಾಗಾದ್ರೆ ಇದರ ಬಗ್ಗೆ ವಿಜ್ಞಾನ…

Read More

ದಶಕಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ, ಸಹ ಕಲಾವಿದನಾಗಿ ಮಿಂಚಿದ್ದವರು ಅಭಿಜಿತ್. ವಿಷ್ಣುವರ್ಧನ್ ಸಿನಿಮಾಗಳಲ್ಲಿ ನಟಿಸುತ್ತಾ, ಆ ಪಾತ್ರಗಳ ಮೂಲಕವೂ ಗುರುತಾಗಿದ್ದ ಅಭಿಜಿತ್ ಈಗೊಂದಷ್ಟು ವರ್ಷಗಳಿಂದ ನೇಪಥ್ಯಕ್ಕೆ ಸರಿದುಬಿಟ್ಟಿದ್ದರು. ಇತ್ತೀಚೆಗೆ ಕಿರುತೆರೆ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದ ಅವರೀಕ ಮತ್ತೆ ಸಿನಿಮಾ ನಾಯಕನಾಗಿ ಬಣ್ಣ ಹಚ್ಚಿದ್ದಾರೆ! ಅಟ್ಲಿ ಎಂಬೊಂದು ಭಿನ್ನ ಕಥಾನಕದ ಚಿತ್ರದ ನಾಯಕನ ಪಾತ್ರಕ್ಕೆ ಅಭಿಜಿತ್ ಬಣ್ಣ ಹಚ್ಚಲಿದ್ದಾರೆ. ಹೆಸರೇ ಹೇಳುವಂತೆ ಇದೊಂದು ವಿಶಿಷ್ಟ ಮಾದರಿಯ ಚಿತ್ರ. ವಿಶೇಷವೆಂದರೆ, ಇದೇ ಮೊದಲ ಬಾರಿ ಮುಸ್ಲಿಂ ವ್ಯಕ್ತಿಯಾಗಿ ಅಭಿಜಿತ್ ಕಾಣಿಸಿಕೊಳ್ಳಲಿದ್ದಾರೆ. ನಿಜ ಜೀವನದಲ್ಲಿ ಅವರು ಶುದ್ಧ ಸಸ್ಯಾಹಾರಿ. ಮಾಂಸವಿರಲಿ; ಮೊಟ್ಟೆಯ ರುಚಿಯನ್ನೂ ಆತ ನೋಡಿಲ್ಲ. ಅಂಥಾ ಅಭಿಜಿತ್ ಈ ಸಿನಿಮಾದಲ್ಲಿ ಮಟನ್ ಅಂಗಡಿ ಮಾಲೀಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಅಭಿಜಿತ್‌ಗೆ ಜೋಡಿಯಾಗಿ ಅಳುಮುಂಜಿ ಶ್ರುತಿ ನಟಿಸಲಿದ್ದಾರೆ. ಈಗ್ಗೆ ಮೂವತ್ತು ವರ್ಷಗಳ ಹಿಂದೆ ಅಭಿಜಿತ್ ಮತ್ತು ಶ್ರುತಿ ಜೋಡಿ ಮೋಡಿ ಮಾಡಿತ್ತು. ಅದು ಪ್ರೇಕ್ಷಕರ ಇಷ್ಟದ ಪೇರ್ ಅನ್ನಿಸಿಕೊಂಡಿತ್ತು. ಇದೀಗ ಮೂರು ದಶಕಗಳ ನಂತರ ಅವರು…

Read More