Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಭಾರತದಲ್ಲಿನ ನಾನಾ ಪ್ರದೇಶಗಳಲ್ಲಿ ಹಾಸು ಹೊಕ್ಕಾಗಿರೋ ನಂಬಿಕೆಗಳೇ ಚಿತ್ರ ವಿಚಿತ್ರ. ಕೆಲವೊಂದನ್ನು ಕೇಳಿದರೆ ಯಾವ ಪ್ರತಿಕ್ರಿಯೆಯನ್ನೂ ಕೊಡದೇ ಅವಾಕ್ಕಾಗುವಂತಿರುತ್ತವೆ. ಇನ್ನೂ ಕೆಲ ಆಚರಣೆಗಳಂತೂ ಇಂಥಾದ್ದು ಈ ಕಾಲದಲ್ಲಿ ಮಾತ್ರವಲ್ಲ, ಯಾವ ಕಾಲದಲ್ಲಿಯೂ ಇರಲು ಸಾಧ್ಯವೇ ಇಲ್ಲ ಅನ್ನಿಸುವಂತಿರುತ್ತವೆ. ಈಗ ಹೇಳ ಹೊರಟಿರೋ ವಿಚಾರ ಕೇಳಿದರಂತೂ ನಿಮಗೂ ಕೂಡಾ ಅಂಥಾದ್ದೊಂದು ದಿಗ್ಭ್ರಮೆ ಆಗದಿರಲು ಸಾಧ್ಯವೇ ಇಲ್ಲ! ಅಂಥಾದ್ದೊಂದು ವಿಚಿತ್ರದಲ್ಲಿಯೇ ವಿಚಿತ್ರವಾದ ಆಚರಣೆ ರೂಢಿಯಲ್ಲಿರೋದು ಪ್ರಸಿದ್ಧ ಪ್ರವಾಸಿ ಸ್ಥಳಗಾಳಾದ ಕುಲು ಮತ್ತು ಮನಾಲಿ ಪ್ರದೇಶದಲ್ಲಿ. ಇವೆರಡೂ ಕೂಡಾ ಅವಳಿ ಪ್ರದೇಶಗಳು. ಇಲ್ಲಿಗೆ ಜೀವಿತದಲ್ಲಿ ಒಮ್ಮೆಯಾದರೂ ಭೇಟಿ ಕೊಡ ಬೇಕೆಂಬುದು ಅದೆಷ್ಟೋ ಪ್ರವಾಸಪ್ರಿಯರ ಮಹಾ ಕನಸು. ಇಂಥಾ ಪ್ರವಾಸಿಗರ ಚಿತ್ರವೆಲ್ಲ ಆ ಪ್ರದೇಶಗಳ ವಾತಾವರಣ, ಪರಿಸರದ ಸುತ್ತಲೇ ಕೇಂದ್ರೀಕರಿಸಿರುತ್ತೆ. ಆದ್ರೆ ಕೊಂಚ ಕ್ಯೂರಿಯಾಸಿಟಿ ಇದ್ದರೂ ಕೂಡಾ ಆ ವಾತಾವರಣದಲ್ಲಿ ಹಾಸುಹೊಕ್ಕಾಗಿರೋ ಅದೆಷ್ಟೋ ಅಚ್ಚರಿದಾಯಕ ಆಚರಣೆಗಳು ಕಣ್ಣಿಗೆ ಬೀಳುತ್ತವೆ. ಹಿಮಾಚಲಪ್ರದೇಶದ ಭಾಗವಾಗಿರೋ ಕುಲು ಮನಾಲಿಯ ಭಾಗದಲ್ಲಿಯೇ ಪಿನಿ ಅನ್ನೋ ಗ್ರಾಮವಿದೆ. ಅಲ್ಲಿ ದಸರಾ ಬಂತೆಂದರೆ ವಿಶೇಷವಾದ ಹಬ್ಬವೊಂದು…

Read More

ಅಧ್ಯಾತ್ಮಿಕ ನಂಬಿಕೆಗಳು, ನಂಬಲಸಾಧ್ಯ ಅನ್ನಿಸುವಂಥ ಪವಾಡಗಳು ನಮ್ಮ ಬದುಕಿನೊಂದಿಗೆ ಹೊಸೆದುಕೊಂಡಿವೆ. ಬಹುಶಃ ನಮ್ಮ ದೇಶದಷ್ಟು ವೈವಿಧ್ಯಮಯ ನಂಬಿಕೆ, ಆಚರಣೆಗಳನ್ನು ಹೊಂದಿರೋ ಇನ್ನೊಂದು ದೇಶ ವಿಶ್ವ ಭೂಪಟದಲ್ಲಿ ಸಿಗಲಿಕ್ಕಿಲ್ಲ. ಈವತ್ತಿಗೂ ವೈಜ್ಞಾನಿಕ ತಳಹದಿಯಲ್ಲಿ ಯೋಚಿಸುವವರು ಇಂಥಾ ನಂಬಿಕೆಗಳನ್ನು ವಿಮರ್ಶೆಯ ಒರೆಗೆ ಹಚ್ಚುತ್ತಾರೆ. ಅವುಗಳನ್ನ ವಿರೋಧಿಸುತ್ತಾರೆ. ಆದರೆ ಇಲ್ಲಿರೋ ಕೆಲ ನಂಬಿಕೆಗಳು, ದೃಷ್ಟಾಂತಗಳಂತೂ ವಿಜ್ಞಾನಕ್ಕೇ ಸವಾಲೆಸೆಯುವಂತಿವೆ. ಅಂಥಾ ಕಾರಣೀಕದ ತಾಣವಾದ ಅನೇಕ ದೇವಸ್ಥಾನಗಳೂ ನಮ್ಮಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಅದರಲ್ಲೊಂದು ದೇವಸ್ಥಾನದ ಬಗೆಗಿನ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ. ರಾಜಸ್ಥಾನದ ಜೈಸಲ್ಮೇರ್‍ನಲ್ಲಿರೋ ತನೋತ್ ಮಾತಾ ದೇವಾಲಯ ಅಂಥಾದ್ದೊಂದು ಅದ್ಭುತ ಲೀಲೆಗಳನ್ನು ತನ್ನದಾಗಿಸಿಕೊಂಡಿದೆ. ವಿಶೇಷ ಅಂದ್ರೆ ಈ ದೇವಾಲಯವನ್ನು ಭಾರತೀಯ ಸೇನೆಯೇ ಭಯ ಭಕ್ತಿಯಿಂದ ಆರಾಧಿಸುತ್ತಿದೆ. ಅದನ್ನು ಸೇನೆಯೇ ನೋಡಿಕೊಳ್ತಿದೆ. ಈ ದೇವಾಲಯ ಭಾರತೀಯ ಸೇನೆಯನ್ನೇ ಈ ಪರಿಯಾಗಿ ತನ್ನತ್ತ ಸೆಳೆದುಕೊಂಡಿರೋದಕ್ಕೆ ಕಾರಣ ಬಹು ವರ್ಷಗಳ ಹಿಂದೆ ನಡೆದಿದ್ದ ಯುದ್ಧ. ಮತ್ತು ಅದರಲ್ಲಿ ಪಾಪಿ ಪಾಕಿಸ್ತಾನ ಇದೇ ದೇವಾಲಯದ ಮುಂದೆ ಮಣ್ಣು ಮುಕ್ಕಿದ್ದ ರೀತಿ! ಈ ದೇವಾಲಯ ಇಂಡೋ…

Read More

ಶೀತಲ್ ಶೆಟ್ಟಿ ನಿರ್ದೇಶನ ಮಾಡಿರುವ ಮೊದಲ ಚಿತ್ರ ವಿಂಡೋ ಸೀಟ್. ಆರಂಭದಿಂದಲೂ ರೋಮಾಂಚಕ ವಾತಾವರಣ ಸೃಷ್ಟಿಸಿದ್ದ ಈ ಚಿತ್ರ ಬಿಡುಗಡೆಗೊಂಡು ಯಶಸ್ವೀ ಪ್ರದರ್ಶನವನ್ನೂ ಕಂಡಿತ್ತು. ಇದೀಗ ವಿಂಡೋ ಸೀಟ್ ಓಟಿಟಿಗೆ ಲಗ್ಗೆಯಿಟ್ಟಿದೆ. ಇದೇ ಅಕ್ಟೋಬರ್ ೨೮ರಂದು ಜ಼ೀ೫ನಲ್ಲಿ ಬಿಡುಗಡೆಗೊಂಡಿದ್ದ ವಿಂಡೋ ಸೀಟ್, ದಿನದಿಂದ ದಿನಕ್ಕೆ ಹೆಚ್ಚೆಚ್ಚು ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಿದೆ. ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾದಾಗ ಹೋಗಿ ನೋಡಲಾಗದವರೆಲ್ಲ ಓಟಿಟಿಯಲ್ಲಿ ವಿಂಡೋ ಸೀಟ್ ಅನ್ನು ನೋಡಿ ಸಂಭ್ರಮಿಸುತ್ತಿದ್ದಾರೆ. ಹಾಗೆ ನೋಡಿದವರೆಲ್ಲ ಒಟ್ಟಾರೆ ಚಿತ್ರವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಕೊರೋನಾ ಕಾಲಘಟ್ಟದಿಂದೀಚೆಗೆ ಓಟಿಟಿ ಟ್ರೆಂಡ್ ವ್ಯಾಪಕವಾಗಿ ಹಬ್ಬಿಕೊಂಡಿದೆ. ಒಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಯಾವ ಮಟ್ಟದಲ್ಲಿ ಹವಾ ಸೃಷ್ಟಿಸುತ್ತೋ, ಅಂಥಾದ್ದೇ ಸಂಚಲನವೀಗ ಓಟಿಟಿ ಪ್ಲಾಟ್‌ಫಾರ್ಮಿನಲ್ಲಿಯೂ ಸೃಷ್ಟಿಯಾಗುತ್ತೆ. ಅಲ್ಲಿಯೂ ಸೋಲು ಗೆಲುವುಗಳ ಲೆಕ್ಕಾಚಾರವಿರುತ್ತದೆ. ಅದೆಲ್ಲವನ್ನೂ ಕೂಡಾ ಅತ್ಯಂತ ಕಡಿಮೆ ಅವಧಿಯಲ್ಲಿ ವಿಂಡೋ ಸೀಟ್ ಗೆದ್ದುಕೊಂಡಿದೆ. ಜೊತೆಗೆ ಎಲ್ಲ ದಿಕ್ಕುಗಳಿಂದಲೂ ವಿಂಡೋ ಸೀಟ್ ಬಗ್ಗೆ ಒಳ್ಳೆ ಅಭಿಪ್ರಾಯಗಳೇ ಕೇಳಿ ಬರಲಾರಂಭಿಸಿವೆ. ಈ ವಿದ್ಯಮಾನದಿಂದ ನಿರ್ದೇಶಕಿ ಶೀತಲ್ ಶೆಟ್ಟಿ ಖುಷಿಗೊಂಡಿದ್ದಾರೆ. ಕಿರುಚಿತ್ರಗಳ…

Read More

ಝೈದ್ ಖಾನ್ ನಾಯಕನಾಗಿ ನಟಿಸಿರುವ ಬನಾರಸ್ ಇದೀಗ ದೇಶಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಎಲ್ಲ ಅಡೆತಡೆಗಳನ್ನೂ ಮೀರಿಕೊಂಡು, ಈ ಚಿತ್ರವೀಗ ಕರ್ನಾಟಕದಲ್ಲಿಯೂ ಗಟ್ಟಿಯಾಗಿ ಕಾಲೂರಿ ನಿಂತಿದೆ. ಈ ಮೂಲಕ ಝೈದ್ ಖಾನ್ ಭರವಸೆಯ ನಾಯಕನಾಗಿಯೂ ಹೊರಹೊಮ್ಮಿದ್ದಾರೆ. ಇದೊಂದು ರೀತಿಯಲ್ಲಿ ರೋಮಾಂಚಕ ಗೆಲುವೆಂದರೂ ಅತಿಶಯವೇನಲ್ಲ. ಇದು ಸಾಧ್ಯವಾಗಿದ್ದು ಹೇಗೆ? ಎಲ್ಲವನ್ನೂ ಗೌಣವಾಗಿಸಿದಂತೆ ಬನಾರಸ್ ಪ್ರೇಕ್ಷಕರನ್ನು ಈ ರೀತಿಯಲ್ಲಿ ಸೆಳೆಯುವಂತೆ ಮಾಡಿದ ಮಾಯೆ ಯಾವುದು ಅಂತೆಲ್ಲ ನೋಡಹೋದರೆ ಬನಾರಸ್‌ನ ಸಮ್ಮೋಹಕ ಹಾಡುಗಳ ಸಾಲು ಎದುರುಗೊಳ್ಳುತ್ತೆ! ಹಾಡುಗಳು ಗೆದ್ದರೆ ಸಿನಿಮಾವೂ ಗೆಲ್ಲುತ್ತೆ ಅನ್ನೋದು ಸಿನಿಮಾ ರಂಗದ ಹಳೇ ಫಾರ್ಮುಲಾ. ಆದರೆ, ಅದು ಕಾಲಕಾಲಕ್ಕೆ ನಿಜವಾಗುತ್ತಾ, ಮತ್ತಷ್ಟು ಹೊಳಪುಗಟ್ಟಿಕೊಂಡು ಮುಂದುವರೆಯುತ್ತಿದೆ. ಹಾಗೆ ಹಾಡುಗಳ ಒಡ್ಡೋಲಗದಲ್ಲಿಯೇ ಗೆಲುವು ದಾಖಲಿಸಿದ ಚಿತ್ರಗಳ ಸಾಲಿನಲ್ಲಿ ಬನಾರಸ್ ಕೂಡಾ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡಿದೆ. ಆರಂಭಿಕವಾಗಿ ಬನಾರಸ್ ಅಚ್ಚರಿಯಂತೆ ಪ್ರೇಕ್ಷಕರೆಲ್ಲರ ಮನಸಿಗೆ ತಾಕಿದ್ದೇ ಮಾಯಗಂಗೆ ಎಂಬ ಹಾಡಿನ ಮೂಲಕ. ಅದು ಟ್ರೆಂಡಿಂಗ್‌ನಲ್ಲಿರುವಾಗಲೇ ಲಾಂಚ್ ಆಗಿದ್ದದ್ದು ಬೆಳಕಿನ ಕವಿತೆ ಎಂಬ ಹಾಡು. ಹಾಗೆ ಬನಾರಸ್…

Read More

ಥೇಟು ಝರಾಕ್ಸು ಮಾಡಿದಂಥಾ ಹೋಲಿಕೆಯಿರುವ ಅವಳಿ ಮಕ್ಕಳು ಹುಟ್ಟೋದು ನಮಗೇನು ಅಪರಿಚಿತವಲ್ಲ. ಆದರೆ ಅಂಥಾ ಅವಳಿ ಮಕ್ಕಳು ಹುಟ್ಟೋದು ಅಪರೂಪದಲ್ಲಿಯೇ ಅಪರೂಪ. ಆದ್ದರಿಂದಲೇ ಅವಳಿಗಳ ಬಗೆಗೊಂದು ಕುತೂಹಲ ಬಹುತೇಕರಲ್ಲಿರುತ್ತೆ. ಅದೊಂದು ಪ್ರಾಕೃತಿಕ ಅಚ್ಚರಿ. ಮಾಯೆ ಎಂದರೂ ಅತಿಶಯವೇನಲ್ಲ. ಈ ಅಚ್ಚರಿಯನ್ನೇ ಮೀರಿಸುವಂಥ ಸಯಾಮಿಗಳೂ ಕೂಡಾ ಆಗಾಗ ಸದ್ದು ಮಾಡುತ್ತಿರುತ್ತವೆ. ಆದರೆ ಅಪರೂಪದ ಅವಳಿಗಳಿಂದಲೇ ತುಂಬಿ ತುಳುಕೋ ಊರೊಂದು ನಮ್ಮದೇ ದೇಶದಲ್ಲಿದೆ ಅನ್ನೋದು ಬಹುತೇಕರ ಅರಿವಿಗೆ ಬಂದಿರಲಿಕ್ಕಿಲ್ಲವೇನೋ… ಅಂಥಾದ್ದೊಂದು ಅಪರೂಪದ ಊರು ದೇವರ ನಾಡೆಂದೇ ಖ್ಯಾತಿವೆತ್ತಿರುವ ಕೇರಳದಲ್ಲಿದೆ. ಆ ಊರು ವೈದ್ಯಕೀಯ ವಿಜ್ಞಾನ ಜಗತ್ತಿನ ಪಾಲಿಗೊಂದು ನಿರಂತರ ಬೆರಗಾಗಿ ಹುಟ್ಟಿಕೊಂಡಿವೆ. ಸಾಮಾನ್ಯವಾಗಿ ಈ ಅವಳಿ ಮಕ್ಕಳು ಹುಟ್ಟೋದು ತೀರಾ ವಿರಳ. ಆದರೆ ಕೋದಿನ್ನಿ ಎಂಬ ಊರಿನ ತುಂಬಾ ಅವಳಿಗಳದ್ದೇ ಸಾಮ್ರಾಜ್ಯ. ಅಲ್ಲಿ ಹುಟ್ಟುವ ಬಹುತೇಕ ಮಕ್ಕಳು ಅವಳಿಗಳಾಗಿರುತ್ತವೆ. ಇಲ್ಲಿನ ಶಾಲೆಗಳಲ್ಲಿಯಂತೂ ವ್ಯತ್ಯಾಸ ಕಂಡು ಹಿಡಿಯೋದೇ ಕಷ್ಟ ಎಂಬಷ್ಟು ಹೋಲಿಕೆ ಇರುವ ಅವಳಿ ಮಕ್ಕಳು ತುಂಬಿಕೊಂಡಿರುತ್ತವೆ. ಇಂಥಾ ಅಚ್ಚರಿಯನ್ನ ಬಚ್ಚಿಟ್ಟುಕೊಂಡಿರೋ ಕೋದಿನ್ನಿ ಕೋಳಿಕೋಡ್‌ನಿಂದ ಮೂವತೈದು…

Read More

ಮನುಷ್ಯ ತನಗೆಲ್ಲ ತಿಳಿದಿದೆ ಎಂಬ ಅಹಮ್ಮಿಕೆಯಲ್ಲಿ ಕೆನೆದಾಡುತ್ತಾ ಪ್ರಕೃತಿಯ ಸಮತೋಲನದ ಬುಡಕ್ಕೇ ಕುಡುಗೋಲಿಟ್ಟಿದ್ದಾನೆ. ಎಲ್ಲವನ್ನೂ ಆವಿಷ್ಕಾರ ಮಾಡಿ, ಪ್ರತಿಯೊಂದನ್ನೂ ಸಂಶೋಧನೆಗಳ ಒರೆಗೆ ಹಚ್ಚಿ ಇಲ್ಲಿ ನಿಗೂಢವಾದುದೇನೂ ಉಳಿದಿಲ್ಲ ಎಂಬಂತೆ ಮೆರೆದಾಡುತ್ತಿದ್ದಾನೆ. ಆದರೆ ನಮ್ಮ ಸುತ್ತಲೇ ಅಡಗಿ ಕೂತಿರೋ ಹಲವಾರು ಪ್ರಾಕೃತಿಕ ನಿಗೂಢಗಳು ಮನುಷ್ಯನ ಬುದ್ಧಿವಂತಿಕೆಗೆ ಸವಾಲೆಸೆದು, ಅಡಿಗಡಿಗೆ ಅಣಕಿಸಿ ನಗುತ್ತಿವೆ. ಈ ಕ್ಷಣದ ವರೆಗೂ ಕೂಡಾ ಅಂಥಾ ಅದೆಷ್ಟೋ ನಿಗೂಢಗಳು ಬಿಡಿಸಲಾರದ ಕಗ್ಗಂಟಾಗಿ ಉಳಿದುಕೊಂಡಿವೆ. ನಮ್ಮದೇ ದೇಶದ ಭಾಗವಾಗಿರೋ ಅಸ್ಸಾಂನ ಕಾಡುಗಳಲ್ಲಿ ಅವಿತಿರೋದು ಕೂಡಾ ಅಂಥಾದ್ದೇ ನಿಗೂಢ! ಅಸ್ಸಾಂ ಅಂದರೇನೇ ವಿಶಿಷ್ಟ ಪ್ರದೇಶ. ಅಲ್ಲಿ ಹೇರಳವಾದ ಸಸ್ಯ ರಾಶಿ ಮತ್ತು ಪ್ರಾಣಿ ಪಕ್ಷಿಗಳ ಸಂಕುಲವಿದೆ. ಇಂಥಾ ಎಲ್ಲ ಗುಣ ಲಕ್ಷಣಗಳನ್ನು ಹೊಂದಿರೋ ಊರು ಜತಿಂಗಾ. ಇಲ್ಲಿ ಬಹುವಾಗಿ ಕಾಡಿನಿಂದ ಆವೃತವಾದ ಪ್ರದೇಶಗಳಿದ್ದಾವೆ. ಅದರ ಒಳಗೆಯೇ ಲೆಕ್ಕವಿಡಲಾರದಷ್ಟು ಪ್ರಬೇಧಗಳ ಪಕ್ಷಿಗಳೂ ಇದ್ದಾವೆ. ಅಂಥಾ ಪಕ್ಷಿಗಳೇ ಅಲ್ಲಿನ ನಿಗೂಢ ಘಟನೆಯೊಂದರ ಕೇಂದ್ರ ಬಿಂದುಗಳು. ಯಾಕಂದ್ರೆ, ಪ್ರತೀ ವರ್ಷ ಒಂದು ನಿರ್ದಿಷ್ಟವಾದ ಕಾಲಘಟ್ಟದಲ್ಲಿ ಅಲ್ಲಿನ ಪಕ್ಷಿಗಳೆಲ್ಲ…

Read More

ಝೈದ್ ಖಾನ್ ನಾಯಕನಾಗಿ ನಟಿಸಿರೋ ಬನಾರಸ್ ಬಿಡುಗಡೆಗೊಂಡು ದಿನವೊಂದು ಹೊರಳಿಕೊಂಡಿದೆ. ಕರ್ನಾಟಕವೂ ಸೇರಿದಂತೆ, ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಹೀಗೆ ಬನಾರಸ್ ಪ್ರಭೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿರೋದರಿಂದ, ಒಟ್ಟಾರೆ ಕಲೆಕ್ಷನ್ ಬಗ್ಗೆ ಎಲ್ಲ ಚಿತ್ತ ಕದಲಿಕೊಂಡಿದೆ. ಈ ಬಗ್ಗೆ ಇದೀಗ ಚಿತ್ರತಂಡದ ಕಡೆಯಿಂದಲೇ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಅದರನ್ವಯ ಹೇಳೋದಾದರೆ, ಬನಾರಸ್ ಮೊದಲ ದಿನದ ಕಲೆಕ್ಷನ್ ಮೂರು ಕೋಟಿ ಮೀರಿಕೊಂಡಿದೆ. ಮೊದಲ ದಿನವೇ ಸಿನಿಮಾ ನೋಡಿದವರ ಬಾಯಿಂದ ಬಾಯಿಗೆ ಸದಭಿಪ್ರಾಯ ಹಬ್ಬಿಕೊಳ್ಳುತ್ತಿರೋದರಿಂದ, ಎರಡನೇ ದಿನ ಆ ಮೊತ್ತ ದುಪ್ಪಟ್ಟಾಗುವ ನಿರೀಕ್ಷೆಗಳಿವೆ. ಒಟ್ಟಾರೆಯಾಗಿ ಜಯತೀರ್ಥ ನಿರ್ದೇಶನದ ಬನಾರಸ್ ಕಥೆ ಸೇರಿದಂತೆ ಎಲ್ಲ ದಿಕ್ಕಿನಿಂದಲೂ ಮೆಚ್ಚುಗೆ ಪಡೆದುಕೊಂಡಿದೆ. ಝೈದ್ ಖಾನ್ ನಟನೆಯನ್ನೂ ಕೂಡಾ ಪ್ರೇಕ್ಷಕರು ಕೊಂಡಾಡಲಾರಂಭಿಸಿದ್ದಾರೆ. ಈ ಮೂಲಕ ಇದೀಗ ದೇಶಾದ್ಯಂತ ಬನಾರಸ್ ಬೆಳುದಿಂಗಳು ಹಬ್ಬಿಕೊಂಡಂತಾಗಿದೆ. ಕರ್ನಾಟಕದಲ್ಲಿ ಕೆಲ ಮಂದಿ ಶುರುವಾತಿನಿಂದಲೂ ಬಾಯ್ಕಾಟ್ ಬನಾರಸ್ ಅಂತೆಲ್ಲ ಬಡಬಡಿಸಿದ್ದರು. ಆದರೆ, ಸಿನಿಮಾ ಚೆನ್ನಾಗಿದ್ದರೆ ಪ್ರೇಕ್ಷಕರು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ, ನೋಡಿ ಗೆಲ್ಲಿಸುತ್ತಾರೆಂಬ ನಂಬಿಕೆ…

Read More

ಈ ಸೃಷ್ಟಿಯ ವೈಚಿತ್ರ್ಯಗಳೇ ಊಹಾತೀತ. ಈವತ್ತಿಗೆ ಎಲ್ಲವನ್ನೂ ಕೂಡಾ ವಿಜ್ಞಾನದ ಒರೆಗೆ ಹಚ್ಚಿ ನೋಡುವಷ್ಟು ಜನ ಅಪ್‌ಡೇಟ್ ಆಗಿದ್ದಾರೆ. ನಂಬಿಕೆ ಮತ್ತು ಮೂಢ ನಂಬಿಕೆಗಳ ಗೆರೆ ಒಂದಷ್ಟು ಸ್ಪಷ್ಟವಾಗಿಯೇ ಗೊತ್ತಾಗಲಾರಂಭಿಸಿದೆ. ಆದರೆ ವೈಜ್ಞಾನಿಕ ನೆಲೆಗಟ್ಟಿನಲ್ಲಿಯೇ ಬಗೆಹರಿಯದಂಥಾ ಅದೆಷ್ಟೋ ಕಗ್ಗಂಟುಗಳಿದ್ದಾವೆ. ವಿಜ್ಞಾನಕ್ಕೆ ನೇರ ಸವಾಲೆಸೆಯುವಂಥಾ ಘಟನಾವಳಿಗಳು ಆಗಾಗ ವಿಶ್ವದ ಮೂಲೆ ಮೂಲೆಗಳಲ್ಲಿಯೂ ಕೇಕೆ ಹಾಕುತ್ತಿರುತ್ತವೆ. ಅಂಥಾ ಘಟನಾವಳಿಗಳು ಮಾತ್ರವಲ್ಲ; ಸಜೀವ ಉದಾಹರಣೆಗಳೇ ಸಾಕಷ್ಟಿವೆ. ಅದರಲ್ಲಿ ಮೆಕ್ಸಿಕೋದ ಪ್ರಸಿದ್ಧ ಸೈಲೆಂಟ್ ಜ಼ೋನ್ ಕೂಡಾ ಒಂದಾಗಿ ಸೇರಿಕೊಂಡಿದೆ. ಮೆಕ್ಸಿಕೋದ ಡುರಾಂಗೋದಲ್ಲಿರೋ ಬೊಲ್ಸೋನ್ ಡಿ ಮ್ಯಾಪಿಮೋದಲ್ಲಿ ಈ ಸೈಲೆಂಟ್ ಜಷೋನ್ ಇದೆ. ಅಲ್ಲಿನ ಮರುಭೂಮಿಯ ತುಂಬೆಲ್ಲ ಮೈ ಚಾಚಿಕೊಂಡಿರೋ ಈ ಪ್ರದೇಶದ ಚಹರೆಗಳೇ ಒಂದು ವಿಸ್ಮಯ. ಯಾಕೆಂದರೆ, ಇಲ್ಲಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಆಧುನೀಕರಣ ತಾಂಡವವವಾಡಲು ಶುರುವಿಟ್ಟು ಅದೆಷ್ಟೋ ವರ್ಷಗಳು ಕಳೆದಿವೆ. ಆದರೆ ಸದರಿ ಪ್ರದೇಶದಲ್ಲಿ ಮಾತ್ರ ಮೊಬೈಲು, ರೇಡಿಯೋ, ಸ್ಯಾಟಿಲೈಟ್ ಸೇರಿದಂತೆ ಎಲ್ಲ ಸಿಗ್ನಲ್ಲುಗಳೂ ಸ್ತಬ್ಧವಾಗಿವೆ. ಅದೇನೇ ತಾಂತ್ರಿಕವಾಗಿ ಪ್ರಯತ್ನ ಪಟ್ಟರೂ ಕೂಡಾ ಈ ಪ್ರದೇಶದಲ್ಲಿ ಸಿಗ್ನಲ್ಲುಗಳನ್ನು…

Read More

ನಾವು ಯಾವುದನ್ನು ಸಾಧ್ಯವೇ ಇಲ್ಲ ಅಂತ ತೀರ್ಮಾನಿಸಿಕೊಂಡಿರುತ್ತೇವೋ, ನಾವು ಯಾವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲವೋ ಅಂಥವನ್ನೆಲ್ಲ ಸಾಧ್ಯವಾಗಿಸೋ ಛಾತಿ ಪ್ರಕೃತಿಗಿದೆ. ಅದಕ್ಕೆ ಉದಾಹರಣೆ ಎಂಬಂತೆ ತುಂಬಾನೇ ವಿಚಿತ್ರ ಅನ್ನಿಸುವಂಥಾ ಪ್ರಾಣಿ ಪಕ್ಷಿಗಳು, ಒಂದಷ್ಟು ಪ್ರದೇಶಗಳೂ ನಮ್ಮ ಸುತ್ತಲಿವೆ. ಅಂಥಾ ಪ್ರಕೃತಿಯ ಮಾಯೆಗೆ ಊಸರವಳ್ಳಿಯೊಂದು ಸೂಕ್ತ ಉದಾಹರಣೆ. ಅದು ನೋಡ ನೋಡುತ್ತಲೇ ದೇಹದ ಬಣ್ಣ ಬದಲಿಸೋದಕ್ಕೆ ಫೇಮಸ್ಸು. ಆದರೆ ತಣ್ಣಗೆ ಹರಿಯೋ ನದಿಯೊಂದು ಬಣ್ಣ ಬದಲಿಸುತ್ತೆ ಅಂದ್ರೆ ನಂಬ್ತೀರಾ? ಊಸರವಳ್ಳಿ ಕ್ಷಣಕ್ಕೊಂದು ಬಣ್ಣ ಬದಲಿಸುತ್ತೆ. ಅದಕ್ಕೇ ಪ್ರತಿಸ್ಪರ್ಧೆ ಕೊಡುವಂತೆ ಅದೊಂದು ನದಿ ಬಣ್ಣ ಬದಲಾಯಿಸಿಕೊಳ್ಳುತ್ತದೆಯಂತೆ. ಅದು ಕ್ರಿಸ್ಟಲ್ ರಿವರ್. ಅದಿರೋದು ದಕ್ಷಿಣ ಅಮೆರಿಕಾದ ಕೊಲಂಬೋದಲ್ಲಿ. ಆ ನದಿಯ ವಿಶೇಷತೆಯನ್ನು, ಬಣ್ಣದ ಬೆರಗುಗಳನ್ನು ಕಣ್ತುಂಬಿಕೊಳ್ಳಲೆಂದೇ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ತದೇಕಚಿತ್ತದಿಂದ ಆ ನದಿಯ ನೀರನ್ನೇ ದಿಟ್ಟಿಸುತ್ತಾ ಅದರ ಬಣ್ಣ ಬದಲಾಗೋ ಪರಿ ಕಂಡು ತಮ್ಮನ್ನು ತಾವೇ ಚಿವುಟಿ ನೋಡಿಕೊಳ್ಳುವಷ್ಟರ ಮಟ್ಟಿಗೆ ರೋಮಾಂಚಿತರಾಗ್ತಾರೆ. ಒಂದು ಮಟ್ಟಿಗೆ ದೊಡ್ಡದಾದ ಆ ನದಿ ನಿಜಕ್ಕೂ ಸಜೀವ ನಿಗೂಢ. ಆ…

Read More

ನಾವು ಭಾರತದಲ್ಲಿ ಮಾತ್ರವೇ ಭೂತ ಪ್ರೇತಗಳ ಬಾಧೆ ಇರುತ್ತೆ ಅಂದುಕೊಂಡಿರುತ್ತೇವೆ. ಅದಕ್ಕೆ ಕಾರಣವಾಗಿರೋದು ನಮ್ಮ ಸಮಾಜದಲ್ಲಿ ಶತ ಶತಮಾನಗಳಿಂದಲೂ ಹಾಸುಹೊಕ್ಕಾಗಿರೋ ಕೆಲವಾರು ನಂಬಿಕೆಗಳು. ಆದರೆ ಯಾವ ದೇಶಗಳನ್ನೂ ಕೂಡಾ ಈ ಭಯ ಆವರಿಸಿಕೊಳ್ಳದೆ ಬಿಟ್ಟಿಲ್ಲ. ಬಹುತೇಕ ಎಲ್ಲ ಪ್ರದೇಶಗಳಲ್ಲಿಯೂ ಕೂಡಾ ಭೂತ ಪ್ರೇತಗಳ ಭಯ ತೀವ್ರವಾಗಿದೆ. ಅಲ್ಲೆಲ್ಲ ಭೂತ ಚೇಷ್ಟೆಯ ಪ್ರದೇಶಗಳು, ಅದರ ಸುತ್ತ ಬೆಚ್ಚಿ ಬೀಳಿಸುವಂಥಾ ದೃಷ್ಟಾಂತಗಳೂ ಹೇರಳವಾಗಿದ್ದಾವೆ. ಕೆನಡಾದಲ್ಲಿರೋ ಸ್ಟೀಮಿಂಗ್ ಟನಲ್ ಅದಕ್ಕೊಂದು ತಾಜಾ ಉದಾಹರಣೆ. ಸ್ಟೀಮಿಂಗ್ ಟನಲ್ ಇರೋದು ಕೆನಡಾದ ಒಂಟಾರಿಯೋ ಪ್ರದೇಶದಲ್ಲಿ. ಅಲ್ಲಿಂದ ವಾಯುವ್ಯ ದಿಕ್ಕಿನಲ್ಲಿಯೇ ವಿಶ್ವ ಪ್ರಸಿದ್ಧ ನಯಾಗರ ಜಲಪಾತವಿದೆ. ಈ ಟನಲ್ ಸುತ್ತ ಹತ್ತಾರು ಕಥೆಗಳೇ ಇದ್ದಾವೆ. ಅವೆಲ್ಲವೂ ಬೆಚ್ಚಿ ಬೀಳಿಸುವಂಥವುಗಳು. ಅದು ಸುಣ್ಣದ ಕಲ್ಲುಗಳಿಂದ ನಿರ್ಮಿಸಲಾಗಿರೋ ಪುರಾತನ ಸುರಂಗ. ಅದರ ಮೇಲೆ ರೂಲು ಹಳಿಗಳಿದ್ದಾವೆ. ಅದರೊಳಗೆ ರಾತ್ರಿ ಹೊತ್ತು ಹೋಗಿ ಕ್ಯಾಂಡಲ್ಲು ಹಚ್ಚಿದರೆ ಬೆಂಕಿಯ ಕೆನ್ನಾಲಿಗೆಗೆ ಬಿದ್ದ ಹುಡುಗಿಯೊಬ್ಬಳ ಆಕ್ರಂದನ ಸ್ಪಷ್ಟವಾಗಿಯೇ ಕೇಳಿಸುತ್ತದೆಯಂತೆ. ಅಲ್ಲಿ ಅಂಥಾ ಹಾರರ್ ಶಬ್ಧ ಕೇಳಿಸೋದರ ಹಿಂದೆಯೂ…

Read More