Author: Santhosh Bagilagadde

Santhosh Bagilagadde is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Santhosh has worked in reputed publications like Hi Bangalore, Agni, Lankesh Patrike and Himagni.

ಪ್ರತೀ ಸಿನಿಮಾ ಪ್ರೇಮಿಗಳ ಪಾಲಿಗೂ ಒಂದೊಂದು ನಿರ್ದಿಷ್ಟ ಜಾನರಿನ ಸಿನಿಮಾಗಳು ಪ್ರಿಯವಾಗಿರುತ್ತವೆ. ಆದರೆ ಈ ಹಾರರ್ ಸಿನಿಮಾಗಳ ಮೋಹ ಮಾತ್ರ ಬಹುತೇಕ ಎಲ್ಲ ವರ್ಗಗಳ ಪ್ರೇಕ್ಷಕರನ್ನೂ ಬಹುವಾಗಿ ಆವರಿಸಿಕೊಂಡಿದೆ. ಬೇರೆ ಭಾಷೆಗಳ ಕಥೆ ಹಾಗಿರಲಿ; ನಮ್ಮ ಕನ್ನಡ ಸಿನಿಮಾ ಪ್ರೇಮಿಗಳೂ ಕೂಡಾ ಹಾರರ್ ಮೂವಿಗಳನ್ನ ಮುಗಿಬಿದ್ದು ನೋಡ್ತಾರೆ. ಕಥೆ, ನಿರೂಪಣೆ ಕೊಂಚ ಚೆನ್ನಾಗಿದ್ದರೂ ಕೂಡಾ ಇಂಥಾ ಸಿನಿಮಾಗಳು ಭರ್ಜರಿ ಕಲೆಕ್ಷನ್ನಿನೊಂದಿಗೆ ಜಯ ಗಳಿಸಿ ಬಿಡುತ್ತವೆ. ಆದರೆ ಇಂಥ ಹಾರರ್ ಸಿನಿಮಾಗಳು ನಮ್ಮ ಮೇಲೆ ಮಾಡೋ ಪರಿಣಾಮಗಳ ಕಥೆ ಮಾತ್ರ ತುಂಬಾನೇ ಹಾರಿಬಲ್ ಆಗಿದೆ! ಹಾರರ್ ಸಿನಿಮಾ ನೋಡಲು ಒಂದು ರೇಂಜಿಗೆ ಗುಂಡಿಗೆ ಇರಬೇಕಾಗುತ್ತೆ. ಅದರಲ್ಲಿನ ಕೆಲ ಸೀನುಗಳಂತೂ ರೋಮವೆಲ್ಲ ಸೆಟೆದು ನಿಂತು ಭಯವಾಗಿ ಬಾಯಿ ಬಡಿದುಕೊಳ್ಳುವಂತಿರುತ್ತವೆ. ಅಂಥಾ ಭಯದ ಉತ್ತುಂಗದಲ್ಲಿ ನಮ್ಮ ದೇಹದೊಳಗೆ ಎಂತೆಂಥಾ ಬದಲಾವಣೆಗಳಾಗಬಹುದು, ಯಾವ್ಯಾವ ಥರದ ರಾಸಾಯನಿಕಗಳು ಉತ್ಪತ್ತಿಯಾಗಬಹುದೆಂದು ಅರ್ಥವಾಗದಿರುವಂಥಾದ್ದೇನೂ ಅಲ್ಲ. ಆ ಭಯವೇ ನಸೀಬುಗೆಟ್ಟರೆ ಜೀವವನ್ನೇ ಕಿತ್ತುಕೊಳ್ಳುವಷ್ಟು ಅನಾಹುತಕಾರಿಯಾಗಿರುತ್ತದೆ. ಈ ವಿಚಾರವನ್ನು ವೈದ್ಯಕೀಯ ಜಗತ್ತೇ ಸ್ಪಷ್ಟೀಕರಿಸಿದೆ. ಅಂದಹಾಗೆ,…

Read More

ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಬನಾರಸ್ ಎಲ್ಲ ಭಾಷೆಗಳ ಪ್ರೇಕ್ಷಕರ ಮನಗೆದ್ದಿದೆ. ಅದರಲ್ಲಿಯೂ ವಿಶೇಷವಾಗಿ ಕನ್ನಡದ ಪ್ರೇಕ್ಷಕರಂತೂ ಝೈದ್ ಖಾನ್ ನಟನೆ ಕಂಡು ಭೇಷ್ ಅಂದಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಪಳಗಿದ ನಟನಂತೆ ನಟಿಸಿರೋ ಝದ್‍ಗೆ ಎಲ್ಲ ದಿಕ್ಕಿನಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಝೈದ್ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಮುಖ್ಯ ನಾಯಕನಾಗಿ ನೆಲೆ ಕಂಡುಕೊಳ್ಳುತ್ತಾರೆಂಬಂಥಾ ನಂಬಿಕೆಯೂ ಬಲಗೊಂಡಿದೆ. ಇದೇ ಹೊತ್ತಿನಲ್ಲಿ ಝೈದ್ ಖಾನ್‍ಗೆ ಬಾಲಿವುಡ್ಡಿನಿಂದ ಬಿಗ್ ಆಫರ್ ಒಂದು ಬಂದಿದೆ. ಹಿಂದಿಯ ಖ್ಯಾತ ನಿರ್ದೇಶಕರೋರ್ವರು ಝೈದ್ ಒಂದೊಳ್ಳೆ ಕಥೆ ಹಿಡಿದು ಝೈದ್‍ರನ್ನು ಸಂಪರ್ಕಿಸಿದ್ದಾರೆ. ಅದು ದೊಡ್ಡ ಬಜೆಟ್ಟಿನ ಚಿತ್ರ. ಪ್ರಸಿದ್ಧ ನಟಿಯೋರ್ವರು ಅದರಲ್ಲಿ ನಟಿಸಲಿದ್ದಾರಂತೆ. ಈ ಅವಕಾಶವನ್ನು ಝೈದ್ ಸೇರಿದಂತೆ ಯಾವ ನಾಯಕನೂ ನಿರಾಕರಿಸಲು ಸಾಧ್ಯವಿರಲಿಲ್ಲ. ಆದರೂ ಕೂಡಾ ಝೈದ್ ಅದನ್ನು ನಿರಾಕರಿಸಿದ್ದಾನೆÉ. ಅದಕ್ಕೆ ಕಾರಣವಾಗಿರೋದು ಅವರೊಳಗೆ ಹಾಸುಹೊಕ್ಕಾಗಿರುವ ಕನ್ನಡತನ! ಝೈದ್ ಖಾನ್‍ರನ್ನು ಸಂಪರ್ಕಿಸಿದ್ದ ಆ ನಿರ್ದೇಶಕರು ವಿವರಿಸಿದ್ದೆಲ್ಲವೂ ಝೈದ್‍ಗೆ ಇಷ್ಟವಾಗಿತ್ತು. ಆದರೆ ಆ ಚಿತ್ರ ಹಿಂದಿಯಲ್ಲಿ ಮಾತ್ರವೇ ತಯಾರಾಗುತ್ತದೆಂಬ…

Read More

ಆತ ಅಂತರ್ಮುಖಿ. ಸಂಗೀತ ನಿರ್ದೇಶಕನಾಗಿ ಎಲ್ಲರಲ್ಲೊಂದು ಅಚ್ಚರಿ ಮೂಡಿಸಿದ್ದರೂ ಈ ಆಸಾಮಿ ಪಕ್ಕಾ ಮೂಡಿ. ಹೆಂಡತಿಯ ಜೊತೆಗೊಂದು ಫೋಟೋಗೆ ಪೋಸು ಕೊಡಲೂ ಕೊಸರಾಡುವ ಸಂಕೋಚ ಸ್ವಭಾವ… ಇಷ್ಟೆಲ್ಲ ಗುಣ ಲಕ್ಷಣಗಳನ್ನ ವಿವರಿಸುತ್ತಾ ಹೋದರೆ, ಖಂಡಿತವಾಗಿಯೂ ಕೇಳುಗರ ಮನಸಲ್ಲಿ ಒಂದು ಸ್ಪಷ್ಟವಾದ ಚಿತ್ರ ಮೂಡಿಕೊಳ್ಳುತ್ತೆ. ಅದು ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರದ್ದು! ಯೋಗರಾಜ್ ಭಟ್ಟರ ಯಬುಡಾ ತಬುಡಾ ಶೈಲಿಗೆ ಸಂಗೀತದ ಒಗ್ಗರಣೆ ಹಾಕುತ್ತಲೇ ಫೇಮಸ್ ಆಗಿದ್ದವರು ಹರಿಕೃಷ್ಣ. ಯಾವುದೇ ಸಂಗೀತ ನಿರ್ದೇಶಕನ ಹಾಡಿಗಾಗಿ ಜನ ಕಾದು ಕೂರೋದಿದೆಯಲ್ಲಾ? ಅದು ಅತ್ಯಂತ ಅಪರೂಪದ ವಿದ್ಯಮಾನ. ಅಂಥಾದ್ದನ್ನು ಸಾಧ್ಯವಾಗಿಸಿದವರು ನಿಜಕ್ಕೂ ಗೆದ್ದಂತೆಯೇ. ಈ ನಿಟ್ಟಿನಲ್ಲಿ ಹೇಳೋದಾದರೆ, ಹರಿಕೃಷ್ಣ ಸಂಗೀತ ನಿರ್ದೇಶಕರಾಗಿ ದೊಡ್ಡ ಮಟ್ಟದಲ್ಲಿಯೇ ಗೆದ್ದಿದ್ದಾರೆ. ಅಂಥಾ ಹರಿ, ಖ್ಯಾತಿಯ ಉತ್ತುಂಗದಲ್ಲೇ, ಏಕಾಏಕಿ ಸಿನಿಮಾ ನಿರ್ದೇಶನದತ್ತ ಹೊರಳಿಕೊಳ್ಳುತ್ತಾರೆಂದರೆ ಅಚ್ಚರಿ ಮೂಡದಿರಲು ಸಾಧ್ಯವೇ? ಅಂಥಾದ್ದೊಂದು ಅಚ್ಚರಿ ಯಜಮಾನ ಚಿತ್ರದ ಸಂದರ್ಭದಲ್ಲಿಯೇ ಎದುರಾಗಿತ್ತು. ಯಾಕೆಂದರೆ, ಆ ಸಂದರ್ಭದಲ್ಲಿ ನಿರ್ದೇಶಕರ ತಂಡದಲ್ಲಿ ಹರಿ ಕೂಡಾ…

Read More

ಹುಟ್ಟಿನಿಂದಲೇ ಮೂಗರಾದವರು, ಕಿವಿ ಕೇಳಿಸದ ಸಮಸ್ಯೆಯಿರುವವರು ಕೈ ಸನ್ನೆಯಲ್ಲಿಯೇ ಮಾತಾಡೋದು ಗೊತ್ತೇ ಇದೆ. ಅದು ಮೂಗರ ಕಥೆಯಾಯ್ತು. ಇನ್ನುಳಿದಂತೆ ಮಾತು ಬರುವವರಿಗೆ ಸಂವಹನ ನಡೆಸೋದಕ್ಕಾಗಿ ಇಡೀ ವಿಶ್ವದಲ್ಲಿ ನಾನಾ ಭಾಷೆಗಳಿದ್ದಾವೆ. ಈ ಭಾಷೆಗಳೇ ಯಾವ ಸಂಶೋಧನೆಗಳಿಗೂ ನಿಲುಕದಷ್ಟು ಸಂಖ್ಯೆಯಲ್ಲಿವೆ. ನಮ್ಮ ದೇಶವನ್ನೇ ತೆಗೆದುಕೊಂಡರೆ ಗ್ರಾಮೀಣ ಭಾಗಗಳಲ್ಲಿಯೂ ಹರಡಿಕೊಂಡಿರೋ ಭಾಷೆಗಳು ಮತ್ತವುಗಳ ಶೈಲಿಗಳು ಅಚ್ಚರಿಯ ಗುಡಾಣದಂತಿವೆ. ಆದರೆ ಮಾತು ಬಂದರೂ ಕೂಡಾ ಕೈ ಸನ್ನೆಯಲ್ಲಿಯೇ ಮಾತಾಡೋ ಜನರೂ ಈ ಭೂಮಿಯ ಮೇಲಿದ್ದಾರೆ. ಅವರ ಪಾಲಿಗೆ ಅಂಥಾ ಸನ್ನೆಗಳೇ ಭಾಷೆ! ಈ ವಿಚಾರವನ್ನ ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ. ಇದು ನಿಜಾನಾ ಎಂಬಂಥಾ ಸಂದೇಹವೂ ಕಾಡದಿರೋದಿಲ್ಲ. ಮಾತಾಡೋ ಶಕ್ತಿ ಇದ್ದರೂ ಜನ ಸನ್ನೆಗಳ ಮೂಲಕವೇ ಮಾತಾಡ್ತಾರೆ ಅಂದ್ರೆ ಸಹಜವಾಗಿಯೇ ಗುಮಾನಿ ಮೂಡಿಕೊಳ್ಳುತ್ತೆ. ಆದರಿದನ್ನ ನಂಬದೇ ವಿಧಿಯಿಲ್ಲ. ಯಾಕಂದ್ರೆ ಅಂಥಾ ವಿಚಿತ್ರ ಜನ ಪ್ರಸಿದ್ಧ ಪ್ರವಾಸಿಗರ ಸ್ವರ್ಗ ಎಂದೆನಿಸಿರೋ ಬಾಲಿಯಲ್ಲಿದೆ. ಇಲ್ಲಿನ ಬಿಂಕಲಾ ಎಂಬ ಒಂದಿಡೀ ಹಳ್ಳಿಯ ಜನ ಸನ್ನೆಗಳಲ್ಲಿಯೇ ಪರಸ್ಪರ ಮಾತಾಡಿಕೊಳ್ತಾರೆ. ಬಾಲಿ ಅಂದರೆ ಭೂಲೋಕದ…

Read More

ಪ್ರವಾಸ ಮತ್ತು ವಿಶಿಷ್ಟವಾದ ಸ್ಥಳಗಳ ವೀಕ್ಷಣೆ ಅಂದ್ರೆ ಇಷ್ಟವಿಲ್ಲ ಅನ್ನುವವರೇ ಸಿಗಲಿಕ್ಕಿಲ್ಲ. ಜೀವನದಲ್ಲಿ ಒಮ್ಮೆಯಾದ್ರೂ ವಿಶ್ವದ ಅಷ್ಟೂ ಸುಂದರ ಪ್ರದೇಶಗಳನ್ನು, ಚಿತ್ರವಿಚಿತ್ರವಾದ ತಾಣಗಳನ್ನು ಕಣ್ತುಂಬಿಕೊಳ್ಳಬೇಕೆಂಬುದು ಬಹುತೇಕರ ಕನಸು. ಈ ಜಗತ್ತಿನಲ್ಲಿ ಅಡಕವಾಗಿರೊ ವಿಶಿಷ್ಟ ಸ್ಥಳಗಳು ಒಂದೆರಡಲ್ಲ. ಅದರ ಆಕರ್ಷಣೆಗಳಿಗಂತೂ ಕೊನೆ ಮೊದಲೆಂಬುದೇ ಇಲ್ಲ. ಅದು ವಿಶ್ವದ ಕಥೆಯಾಯ್ತು. ನಮ್ಮ ದೇಶದಲ್ಲಿಯೇ ನಮಗೆ ಗೊತ್ತಿಲ್ಲದ, ಒಮ್ಮೆಯಾದ್ರೂ ನೋಡಲೇ ಬೇಕಾದ ಅದೆಷ್ಟು ತಾಣಗಳಿದ್ದಾವೆ ಅಂತ ಯಾವತ್ತಾದರೂ ಯೋಚಿಸಿದ್ದೀರಾ? ನಮ್ಮ ದೇಶದಲ್ಲಿರೋ ಒಂದಷ್ಟು ವಿಸ್ಮಯಕಾರಿ ಪ್ರದೇಶಗಳು ನಮಗೆ ಚಿರಪರಿಚಿತ. ಅದನ್ನು ನೋಡೇ ತೀರಬೇಕೆಂಬುದು ನಮ್ಮೆಲ್ಲರ ಹಂಬಲ. ಆದ್ರೆ ನಮಗೆ ಅಷ್ಟು ಸಲೀಸಾಗಿ ಗೊತ್ತಾಗದ ಒಂದಷ್ಟು ಅದ್ಭುತಗಳು ನಮ್ಮಲ್ಲಿವೆ. ಅಂಥಾದ್ದರಲ್ಲಿ ಲೋಕ್ತಕ್ ಸರೋವರವೂ ಒಂದಾಗಿ ಸೇರಿಕೊಳ್ಳುತ್ತೆ.ನಮಗೆಲ್ಲ ರಾಷ್ಟ್ರೀಯ ಉದ್ಯಾನ ವನಗಳು ಗೊತ್ತು. ಅದರೊಳಗೆ ಕೋಟಿ ಕೋಟಿ ಸಸ್ಯ ಮತ್ತು ಜೀವ ಸಂಕುಲಗಳಿವೆ ಅನ್ನೋದೂ ಗೊತ್ತು. ಆದರೆ, ಅಂಥಾದ್ದೇ ಒಂದು ಉದ್ಯಾನವನ ಸರೋವರವೊಂದರ ಮೇಲೆ ತೇಲುತ್ತಿದೆ ಅಂದ್ರೆ ನಂಬಲು ತುಸು ಕಷ್ಟವಾಗಬಹುದೇನೋ… ಅಂಥಾ ಅಪರೂಪದ ಬೆರಗುಗಳನ್ನ ಲೋಕ್ತಕ್ ಸರೋವರ…

Read More

ಒಂದು ಕಡೆಯಲ್ಲಿ ಮೂಢ ನಂಬಿಕೆಗಳು ಈ ಸಮಾಜದ ಆಳದಲ್ಲಿ ಬೇರೂರಿಕೊಂಡಿವೆ. ಅದರ ವಿಡುದ್ಧ ಸಾಕಷ್ಟು ವರ್ಷಗಳಿಂದಲೂ ನಾನಾ ಜಾಗೃತಿಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದೇ ಸಮಾಜದ ಮತ್ತೊಂದು ಮಗ್ಗುಲಲ್ಲಿ ಪ್ರಾಕೃತಿಕ ಅಚ್ಚರಿಗಳು, ನಾಸ್ತಿಕ ನಂಬಿಕೆಗಳು ಎಲ್ಲವಕ್ಕೂ ಸವಾಲೊಡ್ಡುವಂತೆ ಪ್ರಜ್ವಲಿಸುತ್ತಲೇ ಇದ್ದಾವೆ. ಹುಡುಕಿದರೆ ನಮ್ಮಲ್ಲಿ ವಿಜ್ಞಾನಕ್ಕೇ ನೇರ ಸವಾಲೆಸೆಯುವಂಥಾ, ಬರಿಗಣ್ಣಿಗೆ ಕಾಣಿಸಿದ್ದನ್ನು ನಂಬಲು ಸಾಧ್ಯವಾಗದಂಥಾ ಅಚ್ಚರಿಗಳಿದ್ದಾವೆ. ಅಂಥಾ ಅಚ್ಚರಿಗಳಲ್ಲಿ ಹಿಮಾಚಲ ಪ್ರದೇಶದಲ್ಲಿರೋ ಜ್ವಾಲಾಜಿ ಮಾತಾ ಮಂದಿರ ಪ್ರಮುಖವಾದದ್ದು. ಇದು ಭಾರತೀಯ ಆಧ್ಯಾತ್ಮಿಕ ವಲಯದಲ್ಲಿಯೇ ಪ್ರಧಾನವಾದ ಶಕ್ತಿ ಪೀಠಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಸಾಮಾನ್ಯವಾಗಿ ಯಾವುದೇ ದೇವಸ್ಥಾನಗಳಲ್ಲಿತಯಾದ್ರೂ ದೇವರ ವಿಗ್ರಹಗಳಿಗೆ ಪೂಜೆ ಸಲ್ಲಿಸಲಾಗುತ್ತೆ. ಆದರೆ ಈ ದೇವಳದಲ್ಲಿ ಒಂದು ಬೆಂಕಿಯ ಜ್ವಾಲೆಯನ್ನೇ ಆರಾಧಿಸಲಾಗುತ್ತೆ. ಹಾಗಂತ ಅದು ಮನುಷ್ಯರ್ಯಾರೋ ಹಚ್ಚಿಟ್ಟ ದೀಪವಲ್ಲ. ದೊಂದಿಯೂ ಅಲ್ಲ. ಅದು ಅದೆಷ್ಟೋ ಶತಮಾನಗಳ ಹಿಂದಿನಿಂದಲೂ ಸಣ್ಣ ಕಿಂಡಿಯ ಮೂಲಕ ಭೂಗರ್ಭದಿಂದ ಹೊರ ಹೊಮ್ಮುತ್ತಿರೋ ಜ್ವಾಲೆ. ಇದರ ಮಗ್ಗುಲಲ್ಲಿಯೇ ಕುದಿಯೋ ನೀರಿನ ಒರತೆಯೂ ಇದೆ ಅನ್ನೋದು ಈ ಸ್ಥಳದ ಮತ್ತೊಂದು ವಿಶೇಷ. ಈ ಜ್ವಾಲೆಯನ್ನು…

Read More

ಐಸ್‍ಕ್ರೀಮ್ ಎಂದಾಕ್ಷಣ ಬಾಯಲ್ಲಿ ನೀರೂರಿಸಿಕೊಳ್ಳದಿರುವವರೇ ವಿರಳ. ಮಕ್ಕಳಿಂದ ಮೊದಲ್ಗೊಂಡು ಮುದುಕರವರೆಗೂ ಐಸ್ ಕ್ರೀಂ ಅಭಿಮಾನಿಗಳಿದ್ದಾರೆ. ಈಗಂತೂ ನಾನಾ ವೆರೈಟಿಗಳ ಈಸ್ ಕ್ರೀಂಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಒಂದು ಫ್ಲೇವರ್ ಇಷ್ಟವಿಲ್ಲದಿದ್ದರೆ ನೂರಾರು ಫ್ಲೇವರುಗಳು ನಿಮಗಾಗಿ ಕಾದು ಕೂತಿರುತ್ತವೆ. ಅದರಲ್ಲಿ ಒಂದಷ್ಟು ಫ್ಲೇವರುಗಳು ಇಷ್ಟವಿಲ್ಲ ಅನ್ನುವವರು ಸಿಗಬಹುದು. ಆದರೆ ಸಾರಾಸಗಟಾಗಿ ಐಸ್ ಕ್ರೀಮನ್ನೇ ಒಲ್ಲೆ ಅನ್ನುವರು ಸಿಗೋದು ಅಪರೂಪ. ಇಂಥಾದ್ದೊಂದು ಸಾರ್ವಕಾಲಿಕ ಫೇವರಿಟ್ ತಿನಿಸು ಹುಟ್ಟಿಕೊಂಡಿದ್ದು ಹೇಗೆ? ಇಂಥಾ ಕಲ್ಪನೆ ಮೊದಲು ಮೂಡಿಕೊಂಡಿದ್ದು ಯಾವ ಕಾಲಮಾನದಿಂದ ಅನ್ನೋ ಬೆಚ್ಚಗಿನ ಆಲೋಚನೆಗೆ ತಣ್ಣಗಿನ ಐಸ್‍ಕ್ರೀಮು ಕಿಚ್ಚು ಹಚ್ಚುತ್ತೆ. ಈ ನಿಟ್ಟಿನಲ್ಲಿ ಹುಡುಕಾಡಿದರೆ ಇಂಥಾದ್ದೇ ಕಾಲಮಾನದಲ್ಲಿ ಐಸ್ ಕ್ರೀಂ ಆವಿಷ್ಕರಿಸಲ್ಪಟ್ಟಿತು ಅಂತ ನಿಖರವಾಗಿ ಹೇಳುವಂಥಾ ಅಂಶಗಳು ಪತ್ತೆಯಾಗೋದಿಲ್ಲ. ಯಾಕಂದ್ರೆ, ಅದರ ಹುಟ್ಟು ಮನುಷ್ಯನ ರೂಪಾಂತರಗಳಷ್ಟೇ ಸಂಕೀರ್ಣವಾಗಿದೆ. ನಾನಾ ಬಗೆಯಲ್ಲಿ ಟ್ರೈ ಮಾಡುತ್ತಾ, ಹಲವಾರು ಕಾಲಮಾನಗಳಲ್ಲಿ ಹೈ ಫೈ ಜನರ ನಾಲಗೆಗಳನ್ನು ತಣ್ಣಗಾಗಿಸುತ್ತಾ ರುಚಿ ಹತ್ತಿಸಿದ ಐಸ್ ಕ್ರೀಮಿಗೆ ಶತಮಾನಗಳಷ್ಟು ಹಿಂದಿನ ಐತಿಹ್ಯವಿದೆ! ಅದರ ಜಾಡು ಕ್ರಿಸ್ತಪೂರ್ವ 200ನೇ…

Read More

ಭೂಮಿಯನ್ನು ಅಗೆದು ಉತ್ಖನನ ಮಾಡಿದಾಗೆಲ್ಲ ನೂರಾರು, ಸಾವಿರಾರು ವರ್ಷಗಳ ಇತಿಹಾಸ ತೆರೆದುಕೊಳ್ಳುತ್ತಲೇ ಇರುತ್ತೆ. ಆದ್ದರಿಂದಲೇ ವಿಶ್ವದ ನಾನಾ ದೇಶಗಳಲ್ಲಿರುವ ಪುರಾತತ್ವ ಇಲಾಖೆಯ ಮಂದಿ ಅವ್ಯಾಹತವಾಗಿ ಉತ್ಖನನ ನಡೆಸುತ್ತಲೇ ಇದ್ದಾರೆ. ಈ ಭೂಮಿಯ ಮೇಲೆ ಮನುಷ್ಯ ಜೀವಿಯ ಅಟಾಟೋಪ ಶುರುವಾಗಿ ಸಾವಿರಾರು ವರ್ಷಗಳೇ ಕಳೆದಿವೆ. ಅಲ್ಲಿಂದೀಚೆಗಿನ ಆತನ ಹೆಜ್ಜೆ ಗುರುತುಗಳು ಇಂಥ ಉತ್ಖನನದ ಸಂದರ್ಭದಲ್ಲೆಲ್ಲ ಹೊಸಾ ಬಗೆಯಲ್ಲಿ ಹೊಳಪು ಪಡೆಯುತ್ತಿವೆ. ಇಂಥಾ ತಲಾಶಿನ ಸಂದರ್ಭದಲ್ಲಿ ಇದುವರೆಗೂ ನಾನಾ ವಸ್ತುಗಳು ಸಿಕ್ಕಿವೆ. ಆದರೆ ಚೀನಾದ ಸಮಾಧಿಯೊಂದರಲ್ಲಿ ಸಿಕ್ಕಿರೋದು ಕೊಂಚ ಡಿಫರೆಂಟಾಗಿರೋ ಐಟಮ್ಮು! ಇಂಥಾದ್ದೊಂದು ಅಚ್ಚರಿದಾಯಕ ವಸ್ತು ಪತ್ತೆಯಾಗಿರೋದು ಚೀನಾದ ಕ್ಸಿಯಾನಾಂಗ್ ಪ್ರದೇಶದಲ್ಲಿ. ಅಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಂದನೇ ಹಂತದ ಕಾಮಗಾರಿ ಪೂರ್ಣಗೊಂಡಿತ್ತು. 2010ರ ಸುಮಾರಿಗೆ ಎರಡನೇ ಹಂತದ ಕಾಮಗಾರಿಗೆಂದು ನಿಗಧಿತ ಪ್ರದೇಶದ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಭೂಮಿಯನ್ನು ಅಗೆಯುವಾಗ ಪುರಾತನ ಕಾಲದ ಸಮಾಧಿಯೊಂದು ಪತ್ತೆಯಾಗಿತ್ತು. ತಕ್ಷಣವೇ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಹೋಗಿ ಅವರ ಸಮ್ಮುಖದಲ್ಲಿಯೇ ಮತ್ತೊಂದಷ್ಟು ಅಗೆತ ನಡೆದಿತ್ತು.…

Read More

ಈ ಜಗತ್ತಿನಲ್ಲಿ ಹೊರಜಗತ್ತಿಗೆ ಗೊತ್ತಾಗದಂಥಾ ಅದೆಷ್ಟೋ ಕೆಲಸ ಕಾರ್ಯಗಳಿರುತ್ತವೆ. ಸಾಮಾನ್ಯವಾಗಿ ಪ್ರಿಯೊಬ್ಬರೂ ಕೂಡಾ ತಾನು ಮಾಡೋ ಕೆಲಸಕ್ಕೆ ವಾರಸೂದಾರಿಕೆ ಬೇಕೆಂದು ಆಶಿಸುತ್ತಾರೆ. ಆದರೆ ಕೆಲವಾರು ಕೆಲ ಕಾರ್ಯಗಳಿಗೆ ಅದು ಸಿಕ್ಕೋದೇ ಇಲ್ಲ. ಪ್ರತೀ ಕ್ಷಣವೂ ಭಯವನ್ನು ಬೆನ್ನಿಗಿಟ್ಟುಕೊಂಡೇ ಬದುಕುತ್ತಾ, ಕೊಂಚ ಯಾಮಾರಿದರೂ ಅನಾಥ ಹೆಣವಾಗಿ ಬಿಡುವ ಅಪಾಯ ಸದಾ ಕೆಲ ಕಸುಬುದಾರರ ಸುತ್ತ ಗಸ್ತು ತಿರುಗುತ್ತಿರುತ್ತದೆ. ಅಂಥಾ ಅಪಾಯಕಾರಿ ವೃತ್ತಿಗಳಲ್ಲಿ ಗೂಢಾಚಾರ ವೃತ್ತಿ ಪ್ರಧಾನವಾದದ್ದು. ಅದರಲ್ಲಿಯೂ ಶತ್ರು ರಾಷ್ಟರಗಳಿಗೆ ತೆರಳಿ ದೇಶದ ಪರವಾಗಿ ಗೂಢಾಚರ್ಯೆ ನಡೆಸೋದಿದೆಯಲ್ಲಾ? ಅದರಷ್ಟು ಅಪಾಯದ ಕಸುಬು ಬೇರೊಂದಿಲ್ಲ. ಗುರುತು ಪರಿಚಯವಿಲ್ಲದ ಊರು, ಜನರ ನಡುವೆ ದೇಶದ ಪರವಾಗಿ ಮಾಹಿತಿ ಕಲೆ ಹಾಕುತ್ತಾ, ಅದನ್ನು ಸ್ವದೇಶದ ಅಧಿಕಾರಿಗಳಿಗೆ ರವಾನಿಸೋದು ಅದೆಂಥಾ ರಿಸ್ಕಿ ಕೆಲಸವೆಂಬುದು ಯಾರಿಗಾದ್ರೂ ಅರ್ಥವಾಗುತ್ತೆ. ಅಂಥಾ ಕೆಲಸ ಮಾಡಿ ಪ್ರಸಿದ್ಧ ಸ್ಪೈ ಅನ್ನಿಸಿಕೊಂಡ ಅನೇಕರು ನಮ್ಮ ದೇಶದಲ್ಲಿದ್ದಾರೆ. ಆ ಯಾದಿಯಲ್ಲಿ ದೊಡ್ಡ ಹೆಸರು ಸಂಪಾದಿಸಿರುವವರು ಅಜಿತ್ ದೋವಲ್. ಅಜಿತ್ ದೋವಲ್ ಭಾರತದ ಪ್ರಖ್ಯಾತ ಗೂಢಾಚಾರ ವ್ಯಕ್ತಿ. ಅವರು…

Read More

ಶಿಕ್ಷಕ ವೃತ್ತಿ ಅನ್ನೋದು ಪವಿತ್ರವಾದ ವೃತ್ತಿಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ನಮ್ಮ ದೇಶದಲ್ಲಿ ಮಾತ್ರವಲ್ಲದೇ ಬೇರೆಲ್ಲ ದೇಶಗಳಲ್ಲಿಯೂ ಕೂಡಾ ಈ ವೃತ್ತಿಯ ಬಗೆಗೊಂದು ಗೌರವಾಧರ ಇದ್ದೇ ಇದೆ. ಈ ವೃತ್ತಿಯನ್ನು ಕೂಡಾ ಬಹುತೇಕರು ಅಂಥಾ ಗೌರವ ಉಳಿಯುವಂತೆಯೇ ನಿರ್ವಹಿಸಿಕೊಳ್ಳುತ್ತಾ ಬರುತ್ತಿದ್ದಾರೆ. ಆದರೆ ಅತಿರೇಕ ಎಂಬುದು ಯಾರಲ್ಲಿ ಯಾವ ಬಗೆಯಲ್ಲಾದರೂ ಉದ್ಭವಿಸಬಹುದು. ಅಂಥಾದ್ದೇ ಅತಿರೇಕದಿಂದ ಟ್ಯಾಟೂ ಹುಚ್ಚಿಗೆ ಬಿದ್ದಿದ್ದ ಪರ್ಶಿಯಾದ ಶಿಕ್ಷಕನೊಬ್ಬ ಕೇಸು ಜಡಿಸಿಕೊಂಡು ಕೆಲಸವನ್ನೇ ಕಳೆದುಕೊಂಡಿದ್ದಾನೆ. ಹೀಗೆ ವಿಚಿತ್ರವಾದ ಟ್ಯಾಟೂ ಹುಟ್ಟಿನಿಂದಲೇ ವಿಶ್ವ ವಿಖ್ಯಾತಿ, ಕುಖ್ಯಾತಿ ಗಳಿಸಿಕೊಂಡಿರುವಾತ ಸಿಲ್ವಾಯ್ನ್ ಹೆಲೈನ್. ಈತ ಆರಂಭದಿಂದಲೂ ಸ್ಟೈಲಿಶ್ ಆಸಾಮಿ. ಆದ್ರೆ ಅದೇಕೋ ಶಿಕ್ಷಕ ವೃತ್ತಿಯನ್ನ ಆರಿಸಿಕೊಂಡಿದ್ದ. ಪ್ರತಿಷ್ಟಿತವಾದ ಶಾಲೆಯೊಂದರಲ್ಲಿ ಆತ ಶಿಕ್ಷಕನಾಗಿ ಸೇರಿಕೊಂಡಿದ್ದ. ಒಂದಷ್ಟು ವರ್ಷಗಳ ಕಾಲ ಚೆಂದಗೆ ಆ ವೃತ್ತಿಯನ್ನ ನಿರ್ವಹಿಸಿದ್ದ. ಇಂಥಾ ಆಸಾಮಿಗೆ ಇತ್ತೀಚೆಗೆ ಅದೇನಾಯ್ತೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಟ್ಯಾಟೂ ಹುಟ್ಟು ಅಂಟಿಕೊಂಡಿತ್ತು. ನಿಧಾನಕ್ಕೆ ದೇಹದ ಒಂದೊಂದೇ ಭಾಗಗಳಿಗೆ ಟ್ಯಾಟೂ ಹಾಕಿಸಲಾರಂಭಿಸಿದೆದ. ಆಡಳಿತ ಮಂಡಳಿ ಟ್ಯಾಟೂ ಬಗ್ಗೆ ಅಷ್ಟಾಗಿಯೇನೂ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಒಂದಷ್ಟು…

Read More