ಮನುಷ್ಯನ ಮನಸೆಂಬುದು ತಡಕಿದಷ್ಟೂ ವೈಚಿತ್ರ್ಯಗಳೇ ಸಿಗೋ ಉಗ್ರಾಣವಿದ್ದಂತೆ. ಅಲ್ಲಿ ರಂಗು ರಂಗಾದ ಅಂಶಗಳ ಜೊತೆಗೆ ಅರಗಿಸಿಕೊಳ್ಳಲಾಗದಂಥಾ ಭಯಾನಕ ಭಯ, ಕಾಯಿಲೆಗಳೂ ಇದ್ದಾವೆ. ಅವುಗಳನ್ನೆಲ್ಲ ಬಗೆದು ತೆಗೆಯುವ ಸಲುವಾಗಿ ಮನಃಶಾಸ್ತ್ರಜ್ಞರು ಸದಾ ಕಾಲವೂ ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಅದರ ಅಗೋಚರ, ಅಗಣಿತ ವಿಸ್ತಾರದ ಮುಂದೆ ತಜ್ಞರೇ ಆಗಾಗ ಸೋತು ಮಂಡಿಯೂರುತ್ತಿದ್ದಾರೆ. ನೀವೇನಾದರೂ ಮನುಷ್ಯನಿಗಿರೋ ಫೋಬಿಯಾಗಳ ಬಗ್ಗೆ ತಲಾಶಿಗಿಳಿದರೆ ಮನುಷ್ಯನ ಮನಸ್ಸಿನ ನಿಜವಾದ ಸಂಕೀರ್ಣತೆ ಕಂಡಿತಾ ಅರಿವಿಗೆ ಬರುತ್ತೆ. ಈಗ ನಾವು ಹೇಳಹೊರಟಿರೋದು ಅದೇ ಥರದ ವಿಚಿತ್ರ ಫೋಬಿಯಾದ ಬಗ್ಗೆ. ಕೆಲ ಮಂದಿಗೆ ಎತ್ತರ, ನೀರು, ಪ್ರಾಣಿಗಳು ಸೇರಿದಂತೆ ಅನೇಕಾನೇಕ ವಿಚಾರದಲ್ಲಿ ಭಯಗಳಿರುತ್ತವೆ. ಆದ್ರೆ ಈಗ ಫ್ಯಾಶನ್ ಆಗಿರೋ ಗಡ್ಡದ ಬಗ್ಗೆಯೂ ಬೆಚ್ಚಿಬೀಳುವಂಥಾ ಫೋಬಿಯಾವೊಂದಿದೆ ಅಂದ್ರೆ ನಂಬಲೇ ಬೇಕು. ಗಡ್ಡ ಬಿಟ್ಟವರನ್ನ ಕಂಡರೆ ಒಂದು ಕಾಲದಲ್ಲಿ ಮಕ್ಕಳು ಹೆದರುತ್ತಿದ್ದವು. ಆದರೆ ಈಗಿನ ಜನರೇಷನ್ನಿನ ಮಕ್ಕಳು ನಿರಾಯಾಸವಾಗಿ ಗಡ್ಡ ನೀವಿ, ಕೆದರಿ ಚೆಲ್ಲಾಪಿಲ್ಲಿ ಮಾಡಿ ಕೇಕೆ ಹಾಕುತ್ತವೆ. ಆದರೆ ಅದೆಷ್ಟೋ ದೊಡ್ಡವರೇ ಗಡ್ಡ ಕಂಡರೆ ಎದೆ…
Author: Santhosh Bagilagadde
ಇದೀಗ ಎಲ್ಲೆಡೆ ನಶೆಯ ಬಗ್ಗೆ ಚರ್ಚೆಗಳಾಗುತ್ತಿವೆ. ಇತ್ತೀಚೆಗಂತೂ ತೀರಾ ಚಿಕ್ಕ ವಯಸ್ಸಿನವರೇ ನಾನಾ ಥರಗಳಲ್ಲಿ ನಶೆಯತ್ತ ಕೈ ಚಾಚಲಾರಂಭಿಸಿದ್ದಾರೆ. ಡ್ರಗ್ಸ್‍ನಂಥಾ ಚಟ ಯಾಪಾಟಿ ಆವರಿಸಿದೆ ಅಂದ್ರೆ, ನಶೆಯ ಮೋಹ ಇಡೀ ಜಗತ್ತನ್ನೇ ಓಲಾಡಿಸುತ್ತಿದೆ. ನಮ್ಮ ಪಾಲಿಗೆ ನಶೆ ಅಂದ್ರೆ ಒಂದಷ್ಟು ಡ್ರಿಂಕ್ಸು ಮಾತ್ರ. ಅದರಲ್ಲಿ ಕೆಲ ವೆರೈಟಿಗಳು ನಮಗೆ ಪರಿಚಯವೇ ಇಲ್ಲ. ಆದ್ರೆ ಈ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿನ ಮದ್ಯಗಳ ಬಗ್ಗೆ ಕೇಳಿದರೆ ಯಾರೇ ಆದ್ರೂ ಕಂಗಾಲಾಗದಿರೋಕೆ ಸಾಧ್ಯಾನೇ ಇಲ್ಲ. ಡ್ರಗ್ಸ್, ಅಫೀಮಿನಂಥಾ ಚಟಕ್ಕೆ ಬಿದ್ದವರು ನಶೆಯ ಉತ್ತುಂಗಕ್ಕೇರ್ತಾರೆ. ಬರ ಬರುತ್ತಾ ಹೈ ಡೋಸೇಜುಗಳೂ ಕೂಡಾ ಅಂಥವರಿಗೆ ತಾಕೋದಿಲ್ಲ. ಮತ್ತಷ್ಟು ಮಗದಷ್ಟು ನಶೆಗಾಗಿ ಕೈಚಾಚುತ್ತಾ ಅಂಥವರು ಕಟ್ಟ ಕಡೇಯದಾಗಿ ವಿಷ ಭರಿತ ಹಾವಿನಿಂದ ಕಚ್ಚಿಸಿಕೊಳ್ಳುವ ಹಂತವನ್ನೂ ತಲುಪ್ತಾರೆ. ಆ ಹಾದಿಯಲ್ಲಿ ಕಡೆಗೂ ಹೆಚ್ಚಿನವರು ದುರಂತದ ಸಾವು ಕಾಣ್ತಾರೆ. ಆದ್ರೆ ವಿಯೆಟ್ನಾಂ ದೇಶದಲ್ಲಿನ ಎಣ್ಣೆ ಪ್ರಿಯರದ್ದು ಮಾತ್ರ ಭಯಾನಕ ಟೇಸ್ಟು. ಅಲ್ಲಿ ಸತ್ತ ಹಲ್ಲಿಯಿಂದ ತಯಾರಾದ ಮದ್ಯ ಒಂದಕ್ಕೆ ಭಾರೀ ಬೆಲೆಯಿದೆ.…
ವೈಜ್ಞಾನಿಕ ಭೂಮಿಕೆಯಲ್ಲಿ ಆಲೋಚಿಸುವವರ ಪಾಲಿಗೆ ಈ ದೆವ್ವ ಭೂತಗಳೆಲ್ಲವೂ ಒಂದು ಭ್ರಮೆ. ಅದರ ಆಚೀಚೆಗೆ ಇರೋದು ಬರೀ ಮಿಥ್ಯ ಮಾತ್ರ. ಆದ್ದರಿಂದ ಅದರ ಬಗ್ಗೆ ಹುಡುಕಾಡೋದಕ್ಕೆ ಏನೆಂದರೆ ಏನೂ ಉಳಿದುಕೊಂಡಿಲ್ಲ. ಒಂದೊಂದು ಪ್ರದೇಶಗಳ ರಚನೆ ಮತ್ತು ಅದು ಹುಟ್ಟಿಸೋ ಭೀತ ಭಾವನೆಗಳೇ ದೆವ್ವ-ಭೂತಗಳೆಂಬೋ ಕಲ್ಪನೆಯ ಮೂಲ ಅನ್ನೋದು ವಿಚಾರವಂತರ ಅಭಿಮತ. ಆದರೆ, ಇಂಥಾ ಸಥ್ಯದಾಚೆಗೂ ಈ ಸಮಾಜದಲ್ಲಿ ಒಂದಷ್ಟು ನಂಬಿಕೆಗಳು ಹಾಸು ಹೊಕ್ಕಾಗಿವೆ. ಕೆಲ ಪ್ರದೇಶಗಳು ಈವತ್ತಿಗೂ ಭೂತ ಪ್ರೇತಗಳ ಆವಾಸ ಸ್ಥಾನಗಳಾಗಿ ಬಿಂಬಿಸಲ್ಪಟ್ಟಿವೆ. ಈ ಕ್ಷಣಕ್ಕೂ ಐತಿಹಾಸಿಕ ಕೋಟೆಯೊಂದು ದೆವ್ವಗಳ ಆವಾಸ ಸ್ಥಾನದಂತಾಗಿ ಜನರಲ್ಲೊಂದು ಖಾಯಂ ಭಯವನ್ನ ಬಿತ್ತಿ ಬಿಟ್ಟಿದೆ. ರಾಜಸ್ಥಾನದ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿ ಮೈಚಾಚಿಕೊಂಡಿರೋ ಒಂದು ಕೋಟೆಗೂ ಕೂಡಾ ಅಂಥಾದ್ದೇ ಭೀಕರ ಚರ್ಯೆಯೊಂದು ಅಂಟಿಕೊಂಡಿದೆ. ಈ ಕೋಟೆಯಿರೋದು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಅರಾವಳಿ ಪರ್ವತ ಶ್ರೇಣಿಗಳಲ್ಲಿ. ಭಾನಗಡ್ ಕೋಟೆ ಎಂದೇ ಪ್ರಸಿದ್ಧಿ ಪಡೆದಿರೋ ಈ ಕೋಟೆ ಸುತ್ತಲ ಪ್ರದೇಶಗಳಲ್ಲೊಂದು ಕ್ಯೂರಿಯಾಸಿಟಿಗೆ ಕಾರಣವಾಗಿದೆ. ಯಾಕಂದ್ರೆ ಅಲ್ಲಿ ಅದೆಷ್ಟೋ ದೆವ್ವ…
ಈಗ ನಮ್ಮ ಮಾತುಗಳೆಲ್ಲವೂ ಬೆರಳಂಚಿಗೆ ಬಂದು ನಿಂತಿವೆ. ಸಂಭಾಷಣೆ, ಆಲೋಚನೆ, ವ್ಯವಹಾರಗಳೆಲ್ಲವೂ ಬೆರಳ ತುದಿಯಲ್ಲಿ ನಿಂತು ಲಾಸ್ಯವಾಡಲಾರಂಭಿಸಿವೆ. ಒಂದು ಕಾಲದಲ್ಲಿ ಸ್ನೇಹಿತರು, ಸಂಬಂಧಿಕರು ವರ್ಷಕ್ಕೊಂದು ಸಾರಿ ಸೇರಿದರೆ ಅದೇ ಹೆಚ್ಚು. ಆ ನಂತರದ ಸಂಭಾಷಣೆ, ಹಾರೈಕೆಗಳೆಲ್ಲವೂ ಮನಸಲ್ಲಿಯೇ ಸಂಭವಿಸುತ್ತಿತ್ತು. ಈಗ ಮೊಬೈಲು ಎಲ್ಲರನ್ನೂ ಹತ್ತಿರ ಬೆಸೆದಿದೆ. ದಿನಾ ಬೆಳಗ್ಗೆ ಒಂದು ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜು ಬಿಟ್ಟರೇನೇ ಸಂಬಂಧ ಗಟ್ಟಿಯಾಗಿರುತ್ತೆಂಬಂತೆ ಬಹುತೇಕರು ಅದಕ್ಕೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ತೀರಾ ಕೆಲಸ ಕಾರ್ಯಕ್ಕೆ ಸಂಬಂಧಿಸಿದ ಮೆಸೇಜುಗಳೇ ಕಿರಿಕಿರಿ ಉಂಟು ಮಾಡುತ್ತವೆ. ಅಂಥಾ ಒತ್ತಡದಲ್ಲಿರುವವರ ಪಾಲಿಗೆ ಗುಡ್ ಮಾರ್ನಿಂಗ್ ಮತ್ತು ಗುಡ್‍ನೈಟ್‍ಗಳಂಥ ಯಾಂತ್ರಿಕ ಮೆಸೇಜುಗಳಂದ್ರೆ ಅಲರ್ಜಿ. ಕಸುಬಿಲ್ಲದವರು ಮಾತ್ರವೇ ಅಂಥಾದ್ದನ್ನು ವಿನಿಮಯ ಮಾಡಿಕೊಳ್ತಾರೆ ಅನ್ನೋದು ಆ ವೆರೈಟಿಯ ಜನರ ಅಚಲ ನಂಬಿಕೆ. ಇಂತಿಂಥವರಿಗೇ ಅಂತೇನಿಲ್ಲ; ಇಂಥಾ ಯಾಂತ್ರಿಕ ಮೆಸೇಜುಗಳ ವಿನಿಮಯ ನಮಗೆಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ರೇಜಿಗೆ ಹುಟ್ಟಿಸಿರುತ್ತೆ. ಆದರೆ ಸೈಕಾಲಜಿ ಮಾತ್ರ ಇದಕ್ಕೆ ತದ್ವಿರುದ್ಧವಾದ ಸಂಶೋಧನೆಯೊಂದನ್ನು ನಡೆಸಿದೆ. ಅದರನ್ವಯ ಹೇಳೋದಾದ್ರೆ, ಬೆಳಗ್ಗೆ ಮತ್ತು…
ಜೇನುತುಪ್ಪ ಪ್ರಾಕೃತಿಕವಾಗಿ ಮನುಷ್ಯರಿಗೆಲ್ಲ ದಕ್ಕುವ ಔಷಧಿಗಳ ಕಣಜ. ಅದು ಬಾಯಿರುಚಿಯನ್ನು ತಣಿಸುತ್ತೆ. ಎಲ್ಲ ವಯೋಮಾನದವರೂ ಚಪ್ಪರಿಸಿ ತಿನ್ನುವಂತೆ ಪ್ರೇರೇಪಿಸುತ್ತೆ. ಅದುವೇ ಒಂದಷ್ಟು ಖಾದ್ಯಗಳ ರುಚಿಯನ್ನೂ ಹೆಚ್ಚಿಸುತ್ತೆ. ಹಾಗೆ ಯಾವ ಥರದ ರೂಪಾಂತರ ಹೊಂದಿ ಜೇನುತುಪ್ಪ ನಮ್ಮ ದೇಹದ ಒಳ ಸೇರಿದರೂ ಕೂಡಾ ನಮಗೆ ಅಪಾರ ಪ್ರಮಾಣದಲ್ಲಿ ಲಾಭವಿದೆ. ಈ ಜೇನಿನ ಗುಣ ಲಕ್ಷಣಗಳು ಅದರ ಹುಟ್ಟಿನ ಮೂಲದಷ್ಟೇ ಸಂಕೀರ್ಣ. ಆದರೆ ತಡಕುತ್ತ ಹೋದಷ್ಟೂ ಅಚ್ಚರಿ ಮೆತ್ತಿದ ಜೇನ ಹನಿಗಳು ಸೋಕುತ್ತಲೇ ಇರುತ್ತವೆ. ಕುತೂಹಲವಿರೋ ಮಂದಿಗೆ ಜೇನು ಗೂಡಿನ ರಚನೆ ಮತ್ತು ಜೇನು ನೊಣಗಳ ಜೀವನ ಕ್ರಮವೇ ಒಂದು ಅಚ್ಚರಿ. ಅದು ಜೀವ ಜಗತ್ತಿನ ಸೃಷ್ಟಿಯ ಪರಮಾದ್ಭುತವೂ ಹೌದು. ಇಂಥಾ ಜೇನುಗಳ ಬಗ್ಗೆ ಮತ್ತು ಜೇನು ತುಪ್ಪದ ಬಗ್ಗೆ ನಮಗೆ ಗೊತ್ತಿಲ್ಲದಿರೋ ಅನೇಕಾನೇಕ ಅಂಶಗಳಿವೆ. ಸಾಮಾನ್ಯವಾಗಿ ನಾವು ಹಸುವಿನ ತುಪ್ಪ ಬಳಸುತ್ತೇವೆ. ಅಬ್ಬಬ್ಬಾ ಅಂದ್ರೆ ತಿಂಗಳೊಪ್ಪತ್ತಿನಲ್ಲಿಯೇ ಅದೆಷ್ಟೇ ಚೆಂದಗೆ ಕಾಯಿಸಿ ಶೇಖರಿಸಿಟ್ಟ ತುಪ್ಪವಾದರೂ ಸ್ವಾದ ಕಳೆದುಕೊಳ್ಳುತ್ತೆ. ಆದರೆ ಜೇನು ತುಪ್ಪ ಮಾತ್ರ ನೂರೇನು…
ಮರುಭೂಮಿ ಎಂಬ ಪದ ಕೇಳಿದಾಕ್ಷಣ ಕುಂತಲ್ಲೇ ಬೆವರಾಡಿ, ಭಣಗುಡುವ ಮರಳು ರಾಶಿಯ ಚಿತ್ರಣ ಕಣ್ಣಿಗೆ ಕಟ್ಟುತ್ತೆ. ಹನಿ ನೀರಿಗೂ ತತ್ವಾರವಿರೋ ಆ ಪ್ರದೇಶದಲ್ಲಿ ಜನ ವಾಸಿಸುತ್ತಾರೆಂದರೆ ನಂಬಲು ಯಾರಿಗೇ ಆದರೂ ಕಷ್ಟವಾಗುತ್ತೆ. ಆದರೆ ಭೂಮಿಯ ನೈಸರ್ಗಿಕ ಚಮತ್ಕಾರಗಳು ನಮ್ಮ ನಿಲುಕಿಗೆ ಸಿಗುವಂಥವುಗಳಲ್ಲ. ನಮ್ಮ ಆಲೋಚನೆಯನ್ನೂ ಮೀರಿಕೊಂಡು ಭೂಮಿಯ ರಚನೆಗಿದೆ. ಅದಕ್ಕೆ ಪೂರಕವಾದ ವಾತಾವರಣವಿದೆ. ಅದಿಲ್ಲದೇ ಹೋಗಿದ್ದರೆ ಖಂಡಿತವಾಗಿಯೂ ಥಾರ್ ಮರುಭೂಮಿಯಲ್ಲೊಂದು ಸ್ವರ್ಗದಂಥ ಊರು ಸೃಷ್ಟಿಯಾಗಲು ಸಾಧ್ಯವೇ ಇರುತ್ತಿರಲಿಲ್ಲ. ಥಾರ್ ಮರುಭೂಮಿ ಪ್ರವಾಸ ಪ್ರಿಯರನ್ನು ಸದಾ ಕೈ ಬೀಸಿ ಕರೆಯೋ ಸ್ಥಳ. ಬರಿಗಣ್ಣಿಗೆ ಬರೀ ಮರಳ ರಾಶಿ ಅಂತನ್ನಿಸೋ ಥಾರ್ ತನ್ನೊಡಲಲ್ಲಿ ಸಾಕಷ್ಟು ಅಚ್ಚರಿ, ನಿಗೂಢಗಳನ್ನು ಬಚ್ಚಿಟ್ಟುಕೊಂಡಿದೆ. ಅಲ್ಲಿಯೇ ಹುಟ್ಟಿಕೊಂಡಿರೋ ವಿರಳ ಓಯಾಸೀಸ್‍ಗಳ ಬಾಜಿನಲ್ಲಿಯೇ ಸುಂದರವಾದ ಬದುಕುಗಳು ಅರಳಿಕೊಂಡಿವೆ. ಈಗ ಹೇಳ ಹೊರಟಿರೋದು ಅಂಥಾದ್ದೇ ಒಂದು ಹಳ್ಳಿಯ ಬಗ್ಗೆ. ಅದು ಖಿಮ್ಸರ್ ಡ್ಯೂನ್ಸ್ ಎಂಬ ಹಳ್ಳಿ. ಈ ಹಳ್ಳಿಯೇ ಒಟ್ಟಾರೆ ಥಾರ್‍ನ ಸೌಂದರ್ಯಕ್ಕೆ ಹೊಸಾ ಕಳೆ ತಂದುಕೊಟ್ಟಿದೆ. ಒಂದು ಕೆರೆಯಂಥಾ ನೀರಿನ ಜಾಗ.…
ಅಪ್ಪು ಚಿತ್ರಗಳ ನಿರ್ದೇಶಕರಾಗಿ ಸರಣಿ ಗೆಲುವು ದಾಖಲಿಸಿದ್ದವರು ನಿರ್ದೇಶಕ ಸಂತೋಷ್ ಆನಂದ್ ರಾಮ್. ರಾಜಕುಮಾರ ಚಿತ್ರದ ಅಮೋಘ ಯಶದ ಬಳಿಕ, ಯುವರತ್ನ ಮೂಲಕವೂ ಆ ಕಾಂಬಿನೇಷನ್ ಪ್ರೇಕ್ಷಕರ ಮನಗೆದ್ದಿತ್ತು. ಪುನೀತ್ ಜೊತೆ ಮತ್ತೊಂದಷ್ಟು ಸಿನಿಮಾ ಮಾಡೋ ತುಡಿತ ಹೊಂದಿದ್ದ ಸಂತೋಷ್ ಆನಂದ್‍ರಾಮ್ ಎದೆಯಲ್ಲಿ ಈಗ ಉಳಿದುಕೊಂಡಿರೋದು ಅಪ್ಪು ಅಕಾಲಿಕ ನಿರ್ಗಮನದ ನೋವು ಮಾತ್ರ! ಈಗ ಅಂಥಾದ್ದೊಂದು ನೋವಿಟ್ಟುಕೊಂಡೇ ರಾಜ್‍ಕುಮಾರ್ ಕುಟುಂಬದ ಕುಡಿಗೆ ಸಂತೋಷ್ ಸಾಥ್ ಕೊಟ್ಟಿದ್ದಾರೆ. ಅಪ್ಪು ಎದ್ದು ನಡೆದ ಬಳಿಕ ಒಂದು ನಿರ್ವಾತ ವಾತಾವರಣ ಸೃಷ್ಟಿಯಾಗಿದೆ. ಆ ಜಾಗವನ್ನು ಬೇರ್ಯಾರೂ ತುಂಬಲು ಸಾಧ್ಯವೇ ಇಲ್ಲ. ಆದರೆ, ಪ್ರತಿಭೆ, ಪರಿಶ್ರಮಗಳಲ್ಲಿ ರಾಜ್ ಕುಟುಂಬದ ಕುಡಿಯಾದ ಯುವರಾಜ್ ಕುಮಾರ್ ಅಪ್ಪು ಉತ್ತರಾಧಿಕಾರಿ ಎಂದೇ ಬಿಂಬಿಸಿಕೊಂಡಿದ್ದಾರೆ. ಇದೀಗ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ, ಯುವ ನಾಯಕನಾಗಿ ನಟಿಸಿರೋ ಚಿತ್ರಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಅದರ ಚಿತ್ರೀಕರಣ ಚಾಲೂ ಮಾಡಲು ತಂಡ ಅಣಿಗೊಂಡಿದೆ. ಯುವ ಕೂಡಾ ಸಾಕಷ್ಟು ತಯಾರಿಗಳೊಂದಿಗೆ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಅಂದಹಾಗೆ, ಈ ಚಿತ್ರವನ್ನು…
ರಶ್ಮಿಕಾ ಮಂದಣ್ಣ ಮತ್ತು ಶೆಟ್ಟಿ ಗ್ಯಾಂಗಿನ ನಡುವೆ ಎಲ್ಲವೂ ಹಳಸಿಕೊಂಡಿದೆ ಎಂಬುದೀಗ ಖುಲ್ಲಂಖುಲ್ಲ ಜಾಹೀರಾಗಿದೆ. ಯಾವಾಗ ರಶ್ಮಿಕಾ ಹತ್ತಿದ ಏಣಿಯನ್ನೇ ಒದೆಯೋ ಚಾಳಿ ಆರಂಭಿಸಿದಳೋ, ಆಗಿನಿಂದಲೇ ಕನ್ನಡಿಗರು ಕೂಡಾ ಆಕೆಯ ಮೇಲಿಟ್ಟಿದ್ದ ಪ್ರೀತ್ಯಾಭಿಮಾನಗಳನ್ನು ಮರೆಯಲಾರಂಭಿಸಿದ್ದಾರೆ. ಆದರೆ, ಪರಭಾಷೆಗಳಲ್ಲಿನ ಗೆಲುವನ್ನೇ ಕೊಂಬಾಗಿಸಿಕೊಂಡಿರುವ ರಶ್ಮಿಕಾ ಮಾತ್ರ ಮತ್ತೆ ಮತ್ತೆ ತಿಮಿರು ಪ್ರದರ್ಶಿಸುತ್ತಲೇ ಇದ್ದಾಳೆ. ರಶ್ಮಿಕಾ ಈಗ ಯಾವ ಎತ್ತರಕ್ಕೇರಿದರೂ ಅದಕ್ಕೆಲ್ಲ ಕಾರಣವಾಗಿರೋದು ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಎಂಬುದು ನಿರ್ವಿವಾದ. ಈ ಚಿತ್ರದಲ್ಲಿ ತನಗೆ ಅಚಾನಕ್ಕಾಗಿ ಅವಕಾಶ ಸಿಕ್ಕ ಬಗ್ಗೆ ಖುದ್ದು ರಶ್ಮಿಕಾಳೇ ರಂಗು ರಂಗಾಗಿ ಹೇಳಿಕೊಂಡಿದ್ದಳು. ಆದರೀಗ ಆಕೆ ತನ್ನ ಮೊದಲ ಸಿನಿಮಾದ ಬಗೆಗಾಗಾಗಲಿ, ಅವಕಾಶ ಕೊಟ್ಟ ರಕ್ಷಿತ್ ಮತ್ತು ರಿಷಬ್ ಶೆಟ್ಟಿ ಬಗೆಗಾಗಲಿ ಯಾವ ಸಂದರ್ಶನಗಳಲ್ಲಿಯೂ ಮಾತಾಡುತ್ತಿಲ್ಲ. ಕಾಂತಾರ ವಿಚಾರದಲ್ಲಿಯೂ ದೌಲತ್ತು ತೋರಿಸಿದ್ದ ರಶ್ಮಿಕಾಗೀಗ ರಿಷಬ್ ಶೆಟ್ಟಿ ತಿರುಗೇಟು ನೀಡಿದ್ದಾರೆ. ಪರಭಾಷಾ ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ರಶ್ಮಿಕಾ, ಸಮಂತಾ ಮುಂತಾದವರ ಫೋಟೋ ತೋರಿಸಿ, ಇದರಲ್ಲಿ ಯಾವ ನಟಿಯರ ಜೊತೆ…
ಈಗೊಂದೆರಡು ದಶಕಗಳ ಹಿಂದೆ ಕಾಲದ ಕಾಲುಗಳಿಗೆ ಈ ಪಾಟಿ ವೇಗ ಇರಲಿಲ್ಲವೇನೋ… ಹೀಗಂತ ಸೆನ್ಸಿಟಿವ್ ಮನಸ್ಥಿತಿಯ ಜನರಿಗೆಲ್ಲ ಒಂದಲ್ಲ ಒಂದು ಹಂತದಲ್ಲಿ ಅನ್ನಿಸಿರುತ್ತೆ. ಅದು ಭ್ರಮೆಯೋ, ವಾಸ್ತವವೋ ಭಗವಂತನೇ ಬಲ್ಲ. ಆದರೆ ಆ ಕಾಲಘಟ್ಟದಲ್ಲಿ ಎಲ್ಲವೂ ನಿಧಾನವಾಗಿ ಚಲಿಸಿತ್ತೇನೋ ಅಂತಲೇ ಭಾಸವಾಗುತ್ತೆ. ಹಾಗಿದ್ದ ಮೇಲೆ ಆ ದಿನಮಾನದಲ್ಲಿ ಹುಟ್ಟಿದ ಮಕ್ಕಳು ಬೇಗ ಬೆಳೆಯೋದುಂಟೇ? ಮಕ್ಕಳು ಹುಟ್ಟಿ ಅವು ದೊಡೋರಾಗೋದಕ್ಕೂ ಕೂಡಾ ಸುದೀರ್ಘ ಕಾಲಮಾನವೇ ಬೇಕಾಗುತ್ತಿತ್ತೇನೋ ಅನ್ನಿಸುತ್ತೆ. ಅದೇ ರೀತಿ ಈಗಿನ ಕಾಲಮಾನದಲ್ಲಿ ಕಣ್ಣೆದುರೇ ಹುಟ್ಟಿದ ಮಕ್ಕಳು ಬಹು ಬೇಗನೆ ಬೆಳೆಯುತ್ತಿದ್ದಾರೇನೋ ಎಂಬಂತೆಯೂ ಗುಮಾನಿ ಮೂಡುತ್ತೆ. ಈಗ ನೆನ್ನೆ ಮೊನ್ನೆ ಹುಟ್ಟಿದ ಮಕ್ಕಳೂ ವೇಗವಾಗಿ ಬೆಳೆಯುತ್ತವೆ. ನಮ್ಮ ಜಮಾನಕ್ಕಿಂತಲೂ ಸ್ಪೀಡಾಗಿ ವರ್ತಿಸಲಾರಂಭಿಸುತ್ತವೆ. ಮೊಬೈಲಿನಂಥ ಉಪಕರಣಗಳನ್ನು ನಮಗಿಂತಲೂ ಲೀಲಾಜಾಲವಾಗಿ ಬಳಸೋದನ್ನೂ ಕಲಿತುಕೊಳ್ಳುತ್ತವೆ. ಹಾಗಾದ್ರೆ ನಿಜಕ್ಕೂ ಈ ಜಮಾನದ ಮಕ್ಕಳ ಬೆಳವಣಿಗೆ ವೇಗವಾಗಿದೆಯಾ? ಅಥವಾ ಹಾಗನ್ನಿಸೋದು ನಮ್ಮ ಭ್ರಮೆಯಾ? ಗೊತ್ತಿಲ್ಲ. ಆದರೆ ಒಂದು ಸಂಶೋಧನೆ ಯಾವ ಕಾಲಮಾನದಲ್ಲಿ ಮಕ್ಕಳು ವೇಗವಾಗಿ ಬೆಳೆಯುತ್ತವೆ ಅನ್ನೋದನ್ನ ಪತ್ತೆಹಚ್ಚಿದೆ. ಇಂಥಾದ್ದೊಂದು…
ಕಾಮನಬಿಲ್ಲು ಎಂಬುದು ಅದರ ಬಣ್ಣಗಳಷ್ಟೇ ಆಕರ್ಷಣೆ ಹೊಂದಿರುವ ಪ್ರಾಕೃತಿಕ ಅಚ್ಚರಿ. ಅದು ನಾನಾ ರೂಪದಲ್ಲಿ ಇಡೀ ಜಗತ್ತಿನ ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಅದನ್ನು ಕನಸುಗಳಿಗೆ ಉಪಮೆಯಂತೆ ಬಳಕೆಯಾಗುತ್ತೆ. ಈಬುರು ಮಳೆ ಮತ್ತು ಬಿಸಿಲು ಸಂಗಮಿಸಿದಾಗ ಕಮಾನು ಸ್ವರೂಪದಲ್ಲಿ ಸೃಷ್ಟಿಯಾಗೋ ಬಣ್ಣಗಳ ರೇಖೆಗಳನ್ನು ಕಣ್ತುಂಬಿಕೊಳ್ಳಲು ಜನ ಸದಾ ತಯಾರಾಗಿರ‍್ತಾರೆ. ಅದರ ಮುಂದೆ ಎಲ್ಲರೂ ಮಕ್ಕಳಂತೆ ಸಂಭ್ರಮಿಸಿಸ್ತಾರೆ. ಇಂಥಾ ಕಾಮಬಿಲ್ಲು ಮಳೆ ಮತ್ತು ಬಿಸಿಲಿನ ಮಹಾ ಸಂಗಮವಾದಾಗ ಹಗಲು ಹೊತ್ತಿನಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತೆ. ಅದು ಬೇರ‍್ಯಾವ ಪ್ರಾಕೃತಿಕ ಪಲ್ಲಟಗಳಲ್ಲಿಯೂ ಕಾಣಿಸಿಕೊಳ್ಳಲು ಸಾಧ್ಯವೇ ಇಲ್ಲ ಅಂತ ನಾವೆಲ್ಲ ಅಂದುಕೊಂಡಿರುತ್ತೇವೆ. ಅದನ್ನೇ ಬಲವಾಗಿ ನಂಬಿಕೊಂಡಿದ್ದೇವೆ. ಆದರೆ ಕತ್ತಲೆಯಲ್ಲಿಯೂ ಕಾಮನಬಿಲ್ಲು ಮೂಡಿಕೊಳ್ಳುತ್ತೆ. ಈ ವಿಚಾರವನ್ನು ವಿಜ್ಞಾನಿಗಳೇ ಸ್ಪಷ್ಟಪಡಿಸಿದ್ದಾರೆ. ಆದರೆ ಅದನ್ನು ನೋಡೋದು ಅಷ್ಟೊಂದು ಸಲೀಸಾದ ಸಂಗತಿಯಲ್ಲ. ಅದರ ಬಣ್ಣಗಳನ್ನು ಹಗಲಿನಷ್ಟು ಸ್ಪಷ್ಟವಾಗಿ ಕಂಡು ಹಿಡಿಯೋದೂ ಸಾಧ್ಯವಿಲ್ಲ. ಅಂದಹಾಗೆ, ಅದನ್ನು ಮೂನ್ಬೋ ಅಂತ ಕರೆಯಲಾಗುತ್ತೆ. ಮಳೆ ಮತ್ತು ಬೆಳುದಿಂಗಳು ಒಟ್ಟಾದರೆ ಅದು ಸಂಭವಿಸಬಹುದು. ಆದರೆ ಅವೆರಡು ಸಂಗಮಿಸೋದು ಕಷ್ಟ ಸಾಧ್ಯ. ಹಾಗಂತ…