ಹೆಚ್ಚೇನಲ್ಲ; ಹದಿನೈದಿಪ್ಪತ್ತು ಅಡಿಯಿಂದ ಕೆಳಕ್ಕೆ ಬಿದ್ದರೂ ಸೊಂಟವೂ ಸೇರಿದಂತೆ, ದೇಹದ ನಾನಾ ಭಾಗದ ಮೂಳೆಗಳು ಮುರಿಯೋ ಸಂಭವವಿದೆ. ತಲೆ ಕೆಳಗಾಗಿ ಬಿದ್ದರಂತೂ ಬದುಕೋದೇ ಡೌಟು. ಇನ್ನು ನೂರಾರು ಅಡಿಯಿಂದ ಬಿದ್ದರಂತೂ ಮೇಲೆದ್ದು ಬರೋ ಸಾಧ್ಯತೆಗಳೇ ಕಡಿಮೆ. ಹಾಗಿದ್ದ ಮೇಲೆ ಸಾವಿರಾರು ಅಡಿಯಿಂದ ಕೆಳಕ್ಕೆ ಬಿದ್ದರೆ ಬದುಕೋದು ಸಾಧ್ಯವೇ? ಇಂಥಾ ಪ್ರಶ್ನೆ ಎದುರಾದ್ರೆ ಸಾರಾಸಗಟಾಗಿ ಸಾಧ್ಯವಿಲ್ಲ ಎಂಬ ಉತ್ತರವೇ ಎದುರುಗೊಳ್ಳುತ್ತೆ. ಆದರೆ ಅದನ್ನು ಸುಳದ್ಳು ಮಾಡುವಂಥಾ ಘಟನೆಯೊಂದು 1970ರ ದಶಕದಲ್ಲಿಯೇ ನಡೆಯಲಾಗಿದೆ. ಅದು ಗಿನ್ನಿಸ್ ರೆಕಾರ್ಡಿನಲ್ಲಿಯೂ ದಾಖಲಾಗಿ ಬಿಟ್ಟಿದೆ! ಸರ್ಬಿಯಾ ದೇಶದ ಪ್ಲೈಟ್ ಅಟೆಂಡೆಂಟ್ ವೆಸ್ನಾ ವುಲೋವಿಕ್ ಎಂಬ ಗಟ್ಟಿಗಿತ್ತಿ ಹೆಣ್ಣು ಮಗಳು ಈ ಪವಾಡಸದೃಶ ಘಟನೆಯ ಕೇಂದ್ರಬಿಂದು. ಹಲವಾರು ವರ್ಷಗಳಿಂದಲೂ ವಿಮಾನ ಯಾನದ ಬಗ್ಗೆ ಕನಸು ಕಂಡು ಕಡೆಗೂ ಪ್ಲೈಟ್ ಅಟೆಂಡೆಂಟ್ ಆಗಿದ್ದ ಆಕೆ ವಿಮಾನ ಪತನದ ಆಘಾತ ಎದುರಿಸುವಂತಾಗಿತ್ತು. ಗಡಿಬಿಡಿಯಲ್ಲಿ ಪ್ಯಾರಾಚೂಟ್ ಅನ್ನೂ ಹಿಡಿದುಕೊಳ್ಳದೆ ಕ್ರ್ಯಾಶ್ ಆಗಿದ್ದ ವಿಮಾನದಿಂದ ಹಾರಿಕೊಂಡ ಆಕೆ ಮೂವತ್ಮೂರು ಸಾವಿರ ಅಡಿಗಳಷ್ಟು ಎತ್ತರದಿಂದ ಭೂಮಿಗೆ ಬಿದ್ದಿದ್ದಳು.…
Author: Santhosh Bagilagadde
ನಮಗೆಗೆಲ್ಲ ಆಂಬ್ಯುಲೆನ್ಸ್ ಸೇವೆ ತುಂಬಾನೇ ಚಿರಪರಿಚಿತ. ಕೆಲವಾರು ಆರೋಗ್ಯ ಸಮಸ್ಯೆಗಳು ಚಿಕಿತ್ಸೆ ತಡವಾಗಿಯೇ ಸಾವಿನಂಚಿಗೆ ತಳ್ಳುತ್ತವೆ. ಹಾಗೆ ಉಸಿರು ಚೆಲ್ಲುವ ಅಪಾಯದಿಂದ ದಿನನಿತ್ಯವೂ ಅದೆಷ್ಟೋ ಜೀವಗಳನ್ನ ಆಂಬ್ಯುಲೆನ್ಸ್ ಸೇವೆ ಪಾರುಗಾಣಿಸುತ್ತಿದೆ. ಆದರೆ ನಮ್ಮಿಂದಲೇ ಪ್ರತೀ ನಿತ್ಯವೂ ಘಾಸಿಗೊಳ್ಳುವ, ನಮ್ಮನ್ನು ಬದುಕಿಸಿಯೂ ತಾವು ಸಾವು ಕಾಣುತ್ತಿರುವ ಮರಗಳ ರಕ್ಷಣೆಯತ್ತ ಮಾತ್ರ ಅಷ್ಟಾಗಿ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಒಂದು ವೇಳೆ ಯಾರಾದರೂ ಪರಿಸರ ಸಂರಕ್ಷಣೆಯ ಬಗ್ಗೆ ಮಾತಾಡಿದರೂ ಅದು ಒಂದೆರಡು ದಿನ, ಕೆಲವೇ ಕೆಲ ಸಂದರ್ಭಗಳಿಗೆ ಮಾತ್ರವೇ ಸೀಮಿತ ಎಂಬಂತಾಗಿದೆ. ಆದರೆ ದೆಹಲಿ ಮಂದಿಗೆ ಮಾತ್ರ ಪೂರ್ತಿ ಕೆಟ್ಟ ಮೇಲೆ ಒಂಚೂರು ಬುದ್ಧಿ ಬಂದಂತಾಗಿದೆ! ದೇಹಲಿ ಎಂಬುದು ಎಷ್ಟು ಪುರಾತನ ಸಿಟಿ ಎಂಬ ಹೆಗ್ಗಳಿಕೆ ಹೊಂದಿದೆಯೋ, ಅಷ್ಟೇ ಮಾಲಿನ್ಯದ ನಗರಿ ಎಂಬ ಕಪ್ಪು ಚುಕ್ಕೆಯನ್ನೂ ತನ್ನದಾಗಿಸಿಕೊಂಡಿದೆ. ಅದಕ್ಕೆ ಕಾರಣವಾಗಿರೋದು ಮರಗಳ ನಿರಂತರ ಹನನ ಎಂಬ ಜ್ಞಾನೋದಯವಾದದ್ದು ಮಾತ್ರ ತುಂಬಾನೇ ತಡವಾಗಿ. ವಾತಾವರಣವೆಲ್ಲ ಕಲುಶಿತಗೊಂಡು ಜನ ಉಸಿರಾಡೋದೇ ಕಷ್ಟ ಎಂಬಂಥ ಪರಿಸ್ಥಿತಿ ಬಂದಾಗ ಅಲ್ಲಿನ ಸರ್ಕಾರ…
ನಾವು ಬದುಕು ಯಾಂತ್ರಿಕ ಅನ್ನಿಸಿದಾಗೆಲ್ಲ ಹೊಸದರ ಹುಡುಕಾಟಕ್ಕಿಳಿಯುತ್ತೇವೆ. ಅಂಥಾ ಘಳಿಗೆಯಲ್ಲಿ ಒಂದಷ್ಟು ಚಿತ್ರ ವಿಚಿತ್ರವಾದ ಅಂಶಗಳು ಅನಾಯಾಸವಾಗಿಯೇ ಸಿಕ್ಕು ಬಿಡುತ್ತವೆ. ಆದರೆ ನಮ್ಮ ಆಲೋಚನೆಯ ವ್ಯಾಪ್ತಿ ಮೀರಿದ, ನಮಗೆಲ್ಲ ತೀರಾ ವಿಚಿತ್ರ ಅನ್ನಿಸಿ ನಂಬಲು ಸಾಧ್ಯ ಅನ್ನಿಸಿ ಬಿಡುವ ಅದೆಷ್ಟೋ ಅಂಶಗಳು ಈ ಜಗತ್ತಿನ ಗರ್ಭದಲ್ಲಿವೆ. ಈಗ ನಿಮಗೆ ಹೇಳಲಿರೋದೂ ಕೂಡಾ ಅಂಥಾದ್ದೇ ಒಂದು ವಿಚಿತ್ರ ಊರಿನ ಬಗ್ಗೆ. ಒಂದು ಊರೆಂದರೆ ಹತ್ತಾರು ಮನೆ, ನೂರಾರು ಮಂದಿಯ ಚಿತ್ರಣ ನಿಮ್ಮ ತಲೆಯಲ್ಲಿ ಮಿಂಚಿ ಮರೆಯಾಗುತ್ತೆ. ಊರೆಂದು ಕರೆಸಿಕೊಳ್ಳಲು ಅಂಥಾ ಚಹರೆಗಳು ಇರಲೇ ಬೇಕಾಗುತ್ತೆ. ಆದರೆ ಅದೊಂದು ಪಟ್ಟಣದಲ್ಲಿ ವಾಸವಿರೋದು ಒಬ್ಬಳೇ ಗಟ್ಟಿಗಿತ್ತಿ ಮಹಿಳೆ. ಆ ಊರು ಯುನೈಟೈಡ್ ಸ್ಟೇಟ್ಸ್‍ನ ನೆಬ್ರಸ್ಕಾ. ಆ ಊರಿನಲ್ಲಿ ಲೈಬ್ರೇರಿಯನ್ ವೃತ್ತಿ ಮಾಡೋ ಒಬ್ಬಳೇ ಮಹಿಳೆ ವಾಸಿಸುತ್ತಿದ್ದಾಳಂತೆ. ಸರಿಯಾದ ಪ್ರಮಾಣದಲ್ಲಿ ತೆರಿಗೆ ಕಟ್ಟುತ್ತಾ ಆಕೆ ತನಗೆ ಬೇಕಾದ ಸೌಕರ್ಯಗಳನ್ನು ಪಡೆದುಕೊಂಡು ನೆಮ್ಮದಿಯಾಗಿದ್ದಾಳಂತೆ. ಆ ಊರಿನಲ್ಲಿ ಒಂದು ಕಾಲಕ್ಕೆ ನೂರೈವತ್ತರಷ್ಟು ಮಂದಿ ವಾಸಿಸುತ್ತಿದ್ದರಂತೆ. ಬರ ಬರುತ್ತಾ ಆ ಪ್ರಮಾಣದಲ್ಲಿ…
ಮನುಷ್ಯ ತನಗೆಲ್ಲ ತಿಳಿದಿದೆ ಎಂಬ ಅಹಮ್ಮಿಕೆಯಲ್ಲಿ ಕೆನೆದಾಡುತ್ತಾ ಪ್ರಕೃತಿಯ ಸಮತೋಲನದ ಬುಡಕ್ಕೇ ಕುಡುಗೋಲಿಟ್ಟಿದ್ದಾನೆ. ಎಲ್ಲವನ್ನೂ ಆವಿಷ್ಕಾರ ಮಾಡಿ, ಪ್ರತಿಯೊಂದನ್ನೂ ಸಂಶೋಧನೆಗಳ ಒರೆಗೆ ಹಚ್ಚಿ ಇಲ್ಲಿ ನಿಗೂಢವಾದುದೇನೂ ಉಳಿದಿಲ್ಲ ಎಂಬಂತೆ ಮೆರೆದಾಡುತ್ತಿದ್ದಾನೆ. ಆದರೆ ನಮ್ಮ ಸುತ್ತಲೇ ಅಡಗಿ ಕೂತಿರೋ ಹಲವಾರು ಪ್ರಾಕೃತಿಕ ನಿಗೂಢಗಳು ಮನುಷ್ಯನ ಬುದ್ಧಿವಂತಿಕೆಗೆ ಸವಾಲೆಸೆದು, ಅಡಿಗಡಿಗೆ ಅಣಕಿಸಿ ನಗುತ್ತಿವೆ. ಈ ಕ್ಷಣದ ವರೆಗೂ ಕೂಡಾ ಅಂಥಾ ಅದೆಷ್ಟೋ ನಿಗೂಢಗಳು ಬಿಡಿಸಲಾರದ ಕಗ್ಗಂಟಾಗಿ ಉಳಿದುಕೊಂಡಿವೆ. ನಮ್ಮದೇ ದೇಶದ ಭಾಗವಾಗಿರೋ ಅಸ್ಸಾಂನ ಕಾಡುಗಳಲ್ಲಿ ಅವಿತಿರೋದು ಕೂಡಾ ಅಂಥಾದ್ದೇ ನಿಗೂಢ! ಅಸ್ಸಾಂ ಅಂದರೇನೇ ವಿಶಿಷ್ಟ ಪ್ರದೇಶ. ಅಲ್ಲಿ ಹೇರಳವಾದ ಸಸ್ಯ ರಾಶಿ ಮತ್ತು ಪ್ರಾಣಿ ಪಕ್ಷಿಗಳ ಸಂಕುಲವಿದೆ. ಇಂಥಾ ಎಲ್ಲ ಗುಣ ಲಕ್ಷಣಗಳನ್ನು ಹೊಂದಿರೋ ಊರು ಜತಿಂಗಾ. ಇಲ್ಲಿ ಬಹುವಾಗಿ ಕಾಡಿನಿಂದ ಆವೃತವಾದ ಪ್ರದೇಶಗಳಿದ್ದಾವೆ. ಅದರ ಒಳಗೆಯೇ ಲೆಕ್ಕವಿಡಲಾರದಷ್ಟು ಪ್ರಬೇಧಗಳ ಪಕ್ಷಿಗಳೂ ಇದ್ದಾವೆ. ಅಂಥಾ ಪಕ್ಷಿಗಳೇ ಅಲ್ಲಿನ ನಿಗೂಢ ಘಟನೆಯೊಂದರ ಕೇಂದ್ರ ಬಿಂದುಗಳು. ಯಾಕಂದ್ರೆ, ಪ್ರತೀ ವರ್ಷ ಒಂದು ನಿರ್ದಿಷ್ಟವಾದ ಕಾಲಘಟ್ಟದಲ್ಲಿ ಅಲ್ಲಿನ ಪಕ್ಷಿಗಳೆಲ್ಲ…
ನಮಗೆ ಗೊತ್ತಿರೋ ಒಂದಷ್ಟು ಪ್ರಬೇಧದ ಜೀವಿಗಳ ಬದುಕಿನ ಕ್ರಮದ ಬಗ್ಗೆ ನಮಗೆಲ್ಲ ತೆಳುವಾಗಿ ಗೊತ್ತಿರುತ್ತೆ. ಅವುಗಳ ಆಹಾರ ಕ್ರಮ, ಅವುಗಳ ವರ್ತನೆ, ಅವುಗಳಿಂದ ನಮಗಾಗಬಹುದಾದ ಅಪಾಯಗಳ ಬಗ್ಗೆ ಮಾತ್ರವೇ ನಮ್ಮ ದೃಷಿ ನೆಟ್ಟಿರುತ್ತೆ. ಆದರೆ ನಮ್ಮ ಕಣ್ಣಿಗೆ ಕಾಣಿಸೋ ಅದೆಷ್ಟೋ ಜೀವಿಗಳ ಬಗ್ಗೆ ನಮಗೆಲ್ಲ ಏನೆಂದರೆ ಏನೂ ಗೊತ್ತಿರೋದಿಲ್ಲ. ಅದೇನಿದ್ದರೂ ಅಸೀಮ ಕುತೂಹಲ, ತಪಸ್ಸಿನಂಥಾ ಅಧ್ಯಯನಗಳಿಗೆ ಮಾತ್ರವೇ ದಕ್ಕುವಂಥಾದ್ದು. ಈ ಮಾತಿಗೆ ಕಪ್ಪೆಗಳಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಕಪ್ಪೆಗಳಲ್ಲಿ ನಾನಾ ಪ್ರಬೇಧಗಳಿದ್ದಾವೆ. ಮನುಷ್ಯರು ವಾಸವಿರೋ ಪ್ರದೇಶಗಳಲ್ಲಿಯೇ ಒಂದಷ್ಟು ಜಾತಿಯ ಕಪ್ಪೆಗಳು ವಾಸಿಸುತ್ತವೆ. ಮಲೆನಾಡಿನ ಪ್ರದೇಶಗಳಲ್ಲಿಯಂತೂ ಅವೂ ಕೂಡಾ ಮನುಷ್ಯರ ಸಹಜೀವಿಗಳಂತಿರುತ್ತವೆ. ಆದರೆ ಹಾಗೆ ಕಪ್ಪೆಗಳನ್ನು ದಿನನಿತ್ಯ ನೋಡುವವರಿಗೂ ಕೂಡಾ ಅವುಗಳ ಬಗ್ಗೆ ಏನೂ ಗೊತ್ತಿರೋದಿಲ್ಲ. ಅದೆಷ್ಟೋ ವರ್ಷಗಳ ಕಾಲ ಇಂಥಾ ಕಪ್ಪೆಗಳ ಬಗ್ಗೆ ಜೀವ ಶಾಸ್ತ್ರಜ್ಞರು ಅಧ್ಯಯನ ನಡೆಸುತ್ತಾ ಬಂದಿದ್ದಾರೆ. ಜಗತ್ತಿನ ನಾನಾ ಭಾಗಗಳಲ್ಲಿ ನಡೆದಿರೋ ಇಂಥಾ ಅಧ್ಯಯನಗಳು ಕಪ್ಪೆಗಳ ಜೀವನಕ್ರಮದ ಬಗ್ಗೆ ಅಚ್ಚರಿಯ ಸಂಗತಿಗಳನ್ನ ಬಯಲಾಗಿಸಿವೆ. ಅದೆಲ್ಲದರಲ್ಲಿ ಯಾರೇ ಆದರೂ…
ಸಮುದ್ರದಲ್ಲಿ ವಾಸಿಸೋ ತಿಮಿಂಗಿಲ ಅತ್ಯಂತ ಅಪಾಯಕಾರಿ ಜಲಚರ. ಟನ್ನುಗಟ್ಟಲೆ ತೂಕದ, ಎಂಥಾ ದೊಡ್ಡ ಪ್ರಾಣಿಗಳನ್ನಾದರೂ ಸಲೀಸಾಗಿ ನುಂಗಿ ಜೀರ್ಣಿಸಿಕೊಳ್ಳಬಲ್ಲ ಸಾಮಥ್ರ್ಯ ಹೊಂದಿರೋ ತಿಮಿಂಗಿಲದ ಬಗೆಗಿನ ಸತ್ಯಗಳು ಅದರ ಗಾತ್ರದಷ್ಟೇ ಅಗಾಧವಾಗಿವೆ. ತಿಮಿಂಗಿಲ ಅತ್ಯಂತ ದೊಡ್ಡ ಗಾತ್ರದ ಜಲಚರ. ಹಾಗಿದ್ದ ಮೇಲೆ ಅವುಗಳ ಜೀವನ ಕ್ರಮ, ಅಂಗಾಗಗಳ ವಿಸ್ಮಯಗಳೂ ಕೂಡಾ ಅಷ್ಟೇ ದೊಡ್ಡ ಗಾತ್ರದ್ದಾಗಿರುತ್ತವೆ. ಒಂದು ಅಧ್ಯಯನ ತಿಮಿಂಗಿಲದ ಹೃದಯದ ಬಗೆಗಿನ ಇಂಟರೆಸ್ಟಿಂಗ್ ವಿಚಾರಗಳನ್ನು ಪತ್ತೆಹಚ್ಚಿದೆ. ತಿಮಿಂಗಿಲಗಳು ಕಡಿಮೆ ಅಂದರೂ ನೂರಾ ಐವತ್ತು ಟನ್‍ಗಿಂತ ಅಧಿಕ ತೂಕ ಹೊಂದಿರುತ್ತವೆ. ಅವುಗಳು ಸುಮ್ಮನೊಮ್ಮೆ ಮಿಸುಕಾಡಲೂ ಕೂಡಾ ತೊಂಭತ್ತು ಅಡಿಗಳಷ್ಟು ವಿಶಾಲವಾದ ಪ್ರದೇಶ ಬೇಕಾಗುತ್ತೆ. ಇಂಥಾ ದೈತ್ಯ ಗಾತ್ರದ ಹೃದಯವೇ ಒಂದು ವಿಸ್ಮಯ. ತಿಮಿಂಗಿಲಗಳ ಗಾತ್ರಕ್ಕೆ ತಕ್ಕ ಹಾಗೆಯೇ ಅವುಗಳ ಹೃದಯವೂ ಇರುತ್ತದೆ. ಅದು ಎಷ್ಟು ದೊಡ್ಡದಾಗಿರುತ್ತೆ ಅಂದ್ರೆ, ಅದರ ಗಾತ್ರ ಕಾರುಗಳಷ್ಟಿರುತ್ತೆ. ಅದನ್ನು ತೂಕಕ್ಕಿಟ್ಟರೆ 1300 ಪೌಂಡುಗಳಷ್ಟು ತೂಗುತ್ತೆ. ಕೇವಲ ಹೃದಯ ಮಾತ್ರವಲ್ಲದೆ ಅವುಗಳ ಪ್ರತೀ ಅಂಗಾಂಗಗಳೂ ಕೂಡಾ ಅಷ್ಟೇ ದೊಡ್ಡ ಗಾತ್ರದ್ದಾಗಿರುತ್ತವಂತೆ. ಅಷ್ಟು…
ಈಗಂತೂ ಮಾರುಕಟ್ಟೆಗೆ ತೆರಳಿದರೆ, ಅಂಗಡಿ ಹೊಕ್ಕರೆ ಯಾವುದನ್ನು ತೆಗೆದುಕೊಳ್ಳಬೇಕೆಂದೇ ಕನ್ಪ್ಯೂಸ್ ಆಗುವಷ್ಟು ಟೂತ್ ಪೇಸ್ಟುಗಳಿವೆ. ಟಿವಿ ಚಾನೆಲ್ಲುಗಳನ್ನ ಆನ್ ಮಾಡಿದರೆ ಆನ್ ಏರಲ್ಲೇ ಬಕರಾ ತೋರಿಸುವಂಥಾ ಥರ ಥರದ ಜಾಹೀರಾತುಗಳೂ ಮೇಳೈಸುತ್ತವೆ. ನೀವೊಮ್ಮೆ ಸುಮ್ಮನೆ ಕಲ್ಪಿಸಿಕೊಳ್ಳಿ; ಯಾವ ಆವಿಷ್ಕಾರಗಳೂ ಆಗದಿದ್ದ ಕಾಲದಲ್ಲಿ ಜನ ಟೂತ್ ಪೇಸ್ಟಿನಂತೆ ಏನನ್ನು ಬಳಸುತ್ತಿದ್ದರು. ಇಜ್ಜಿಲು, ಬೇವಿನ ಕಡ್ಡಿಯಂಥಾ ಪಾರಂಪರಿಕ ಮಾರ್ಗಗಳಾಚೆಗೆ ಟೂತ್ ಪೇಸ್ಟ್ ಅನ್ನೋ ಕಲ್ಪನೆ ಮೂಡಿಕೊಂಡಿದ್ದು ಹೇಗೆ ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಆನ ಪಾರಂಪರಿಕವಾದ ಕ್ರಮಗಳಾಚೆಗೆ ಹಲ್ಲುಜ್ಜೋದಕ್ಕಾಗಿ ಹಲವಾರು ಪ್ರಯೋಗಗಳನ್ನ ಮಾಡಲಾರಂಭಿಸಿದ್ದರು. ಹುಡುಕುತ್ತಾ ಹೋದರೆ ಒಂದಷ್ಟು ಚಿತ್ರವಿಚಿತ್ರವಾದ ಆವಿಷ್ಕಾರಗಳು ನಡೆದಿರೋದು ಪತ್ತೆಯಾಗುತ್ತೆ. ಅದು ಒಂದು ದೇಶಕ್ಕಿಂತ ದೇಶಕ್ಕೆ ಬದಲಾಗುತ್ತಾ ಸಾಗೋದೂ ಕೂಡಾ ಗಮನಕ್ಕೆ ಬರುತ್ತೆ. ಆದ್ರೆ ಕೆಲವೊಂದು ದೇಶಗಳಲ್ಲಿನ ಆರಂಭಿಕ ಟೂತ್ ಪೇಸ್ಟುಗಳಂತೂ ನಿಜಕ್ಕೂ ವಾಕರಿಕೆ ಹುಟ್ಟಿಸುವಂತಿವೆ. ರೋಮನ್ನರು ಒಂದು ಕಾಲದಲ್ಲಿ ಬಳಸುತ್ತಿದ್ದ ಟೂತ್ ಪೇಸ್ಟಿನ ಬಗ್ಗೆ ಕೇಳಿದರಂತೂ ಯಾರಿಗೇ ಆದರೂ ಬವಳಿ ಬಂದಂತಾಗದಿರೋದಿಲ್ಲ. ರೋಮನ್ನರು ಅಂಥಾ ವೆರೈಟಿಯ ಯಾವ ಟೂತ್ ಪೇಸ್ಟ್ ಬಳಸುತ್ತಿದ್ದರೆನ್ನೋ…
ವಯಸ್ಸು ಯೌವನದತ್ತ ಹೊರಳಿಕೊಳ್ಳುತ್ತಲೇ ಮನಸು ನಾನಾ ಭಾವನೆಗಳಿಂದ ಕಳೆಗಟ್ಟಿಕೊಳ್ಳಲಾರಂಭಿಸುತ್ತೆ. ಅದರಲ್ಲಿ ಪ್ರಧಾನವಾಗಿ ಕಂಡು ಬರೋದು ಗಂಡು ಹೆಣ್ಣುಗಳ ಪರಸ್ಪರ ಆಕರ್ಷಣೆ. ಎದುರಿಗೆ ಚೆಂದದ ಹುಡುಗೀರು ಹಾದು ಹೋದಾಗೆಲ್ಲ ತಂಗಾಳಿ ತೀಡಿದಂತಾಗಿ, ಅದೇ ಗುಂಪಿನ ಒಬ್ಬಳೊಂದಿಗೆ ಲವ್ವಲ್ಲಿ ಬಿದ್ದು ಸಾಮಿಪ್ಯಕ್ಕಾಗಿ ಹಂಬಲಿಸೋದಿದೆಯಲ್ಲಾ? ಬಹುಶಃ ಅದು ಸ್ಫುರಿಸೋ ಭಾವನೆಗಳಿಗೆ ಗಡಿರೇಖೆಗಳ ಹಂಗಿಲ್ಲ. ಹಾಗೆ ಹುಟ್ಟಿಕೊಳ್ಳುವ ಪ್ರೀತಿಯಲ್ಲಿ ಪ್ರಪೋಸು ಹಾಳುಮೂಳುಗಳ ಸಂತೆಯಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳೋದು ಕಿಸ್ ಅರ್ಥಾತ್ ಮುತ್ತು! ಈಗಂತೂ ಸ್ಪೀಡ್ ದುನಿಯಾ. ಹುಡುಗ ಹುಡುಗೀರೆಲ್ಲರೂ ಎಲ್ಲ ವಿಚಾರದಲ್ಲಿಯೂ ವೇಗಕ್ಕೆ ಒಗ್ಗಿಕೊಂಡಿದ್ದಾರೆ. ಪ್ರೀತಿ ಪ್ರೇಮಗಳ ವಿಚಾರಕ್ಕೂ ಅದು ಪಕ್ಕಾ ಅನ್ವಯಿಸುತ್ತೆ. ಹಿಂದಿನ ಕಾಲದಲ್ಲಿ ವರ್ಷಾಂತರಗಳ ಕಾಲದ ಪ್ರೀತಿಯಲ್ಲಿ ಘಟಿಸುವಂಥವೆಲ್ಲ ಈಗ ಒಂದೇ ವಾರದಲ್ಲಿಯೇ ಘಟಿಸಿ ಬಿಡುತ್ತವೆ. ಬೆಳಗ್ಗೆ ಪ್ರೀತಿಯಾದರೆ ಮಧ್ಯಾನ್ಹ ಪ್ರಪೋಸ್ ಮಾಡ್ತಾರೆ. ಸಂಜೆ ಗೋಧೂಳಿಯ ಹೊತ್ತಿಗೆಲ್ಲ ಕಾಫಿ ಶಾಪುಗಳಲ್ಲಿ ಎದುರುಬದುರಾಗಿ, ಕತ್ತಲ ಸೆರಗು ಹಾಸುತ್ತಲೇ ಮುತ್ತಿನ ವಿನಿಮಯವಾಗಿ ಜೋಡಿ ಜೀವಗಳು ಬೆಚ್ಚಗಾಗುತ್ತವೆ. ಹೀಗೆ ರೋಮಾಂಚಕ ಭಾವ ಮೂಡಿಸೋ ಮುತ್ತು ಅದೆಷ್ಟು ಅಪಾಯ ಅಂತೇನಾದರೂ ತಿಳಿದರೆ…
ಎಂಥವರಲ್ಲೂ ನಡುಕ ಹುಟ್ಟಿಸಿತ್ತು ಅವಳ ನಟೋರಿಟಿ! ಇದೀಗ ಕರ್ನಾಟಕದ ತುಂಬೆಲ್ಲ ಮತ್ತೆ ಡ್ರಗ್ಸ್ ಮ್ಯಾಟರ್ ಭಾರೀ ಸದ್ದು ಮಾಡ್ತಿದೆ. ದೃಷ್ಯ ಮಾಧ್ಯಮಗಳ ಟಿಆರ್‌ಪಿ ಹಸಿವಿಗಂತೂ ಡ್ರಗ್ಸ್ ದಂಧೆ ಭೂರೀ ಬೋಜನವನ್ನೇ ಒದಗಿಸಿಬಿಟ್ಟಿದೆ. ಹಾದಿ ಬಿಟ್ಟ ನಟಿಗರಿಬ್ಬರಿಗೆ ಜೈಲೇ ಗಟ್ಟಿ ಎಂಬ ವಾತಾವರಣವೂ ಪ್ರಸ್ತುತ ಚಾಲ್ತಿಯಲ್ಲಿದೆ. ಇದರ ಹಿನ್ನೆಲೆಯಲ್ಲಿಯೇ ಊರು ತುಂಬಾ ಮೈಚಾಚಿಕೊಂಡಿರೋ ಡ್ರಗ್ಸ್ ಮಾಫಿಯಾ ಮತ್ತದರ ಅಪಾಯಗಳ ಬಗೆಗೂ ಒಂದಷ್ಟು ಚರ್ಚೆಗಳಾಗುತ್ತಿವೆ. ಹಾಗಂತ ಇದು ಕೇವಲ ಕರ್ನಾಟಕದಲ್ಲಿ ಮಾತ್ರವೇ ಮೈಚಾಚಿಕೊಂಡಿರೋ ಮಾಫಿಯಾವಲ್ಲ; ಅದು ಇಡೀ ದೇಶವನ್ನೇ ಆವರಿಸಿಕೊಂಡು ಯುವ ಜನಾಂಗದ ನರನಾಡಿಗಳಿಗೆ ತೂರಿಕೊಳ್ಳಲು ಹವಣಿಸ್ತಿರೋ ಭೀಕರ ವಿಷ. ಹಾಗೆ ನೋಡಿದರೆ ಅದಕ್ಕೆ ದೇಶದ ಗಡಿಯ ಹಂಗೂ ಇಲ್ಲ. ಯಾಕಂದ್ರೆ, ಅದು ಇಡೀ ವಿಶ್ವಕ್ಕೇ ಹಬ್ಬಿಕೊಂಡಿರೋ ಸಾಂಕ್ರಾಮಿಕ. ಸಂಜನಾ ಮತ್ತು ರಾಗಿಣಿ ಎಂಬ ಚಿಲ್ರೆ ನಟಿಯರು ಡ್ರಗ್ ಕೇಸಲ್ಲಿ ತಗುಲಿಕೊಳ್ಳುತ್ತಲೇ ಜನ ಎಂಥಾ ಕಾಲ ಬಂತಪ್ಪಾ ಅಂತ ನಿಟ್ಟುಸಿರಿಡುತ್ತಿದ್ದಾರೆ. ಹೆಣ್ಣುಮಕ್ಕಳೂ ಗಾಂಜಾಕ್ಕೆ ವಶವಾಗೋದಂದ್ರೇನು ಅಂತ ಮಡಿವಂತಿಕೆಯ ಮಂದಿ ಅಸಹನೆಗೀಡಾಗಿದ್ದಾರೆ. ಈವತ್ತಿಗೆ ಈ ನಟಿಯರಿಬ್ಬರೂ…
ಮನುಷ್ಯರ ದೇಹ ರಚನಾ ಕ್ರಮವೇ ಒಂದು ಪ್ರಾಕೃತಿಕ ಅದ್ಭುತ. ಅದು ಈ ಜಗತ್ತಿನಲ್ಲಿರೋ ದಿವ್ಯ ಶಕ್ತಿಯೊಂದರ ಲೀಲೆ ಅನ್ನೋರಿದ್ದಾರೆ. ಅದನ್ನೇ ಭಗವಂತನ ಕೊಡುಗೆ ಅನ್ನುವವರೂ ಇದ್ದಾರೆ. ಆದರೆ ವಿಜ್ಞಾನ ಮಾತ್ರ ಅದರಾಚೆಗಿನ ಸತ್ಯಗಳನ್ನ ತೆರೆದಿಡುತ್ತಲೇ ಬಂದಿದೆ. ಬಾಹ್ಯ ಸೌಂದರ್ಯದ ಮಾತು ಹಾಗಿರಲಿ; ಮನುಷ್ಯದ ದೇಹದೊಳಗಿನ ರಚನೆ ನಿಜಕ್ಕೂ ವಿಸ್ಮಯ. ಅಲ್ಲಿರೋ ಒಂದೊಂದು ಆಯವ್ಯಯಗಳದ್ದೂ ಒಂದೊಂದು ಬಗೆ. ಅವು ಇಡೀ ದೇಹವನ್ನು ಸಮಸ್ಥಿತಿಯಲ್ಲಿಡುವ ರೀತಿ, ಅವು ಕಾರ್ಯ ನಿರ್ವಹಿಸುವ ಕ್ರಮಗಳೆಲ್ಲವೂ ರೋಚಕ. ಅದರಲ್ಲಿಯೂ ನಮ್ಮ ದೇಹದ ಆಧಾರಸ್ತಂಭದಂತಿರೋ ಮೂಳೆಗಳ ಶಕ್ತಿಯ ಬಗ್ಗೆ ಕೇಳಿದರಂತೂ ಯಾರೇ ಆದರೂ ಅವಾಕ್ಕಾಗುವಂತಿದೆ. ಸಾಮಾನ್ಯವಾಗಿ ಮನುಷ್ಯರ ತೂಕದಲ್ಲಿ ವೈಪರೀತ್ಯಗಳಿರುತ್ತವೆ. ಕೆಲ ಮಂದಿ ಕ್ವಿಂಟಾಲುಗಟ್ಟಲೆ ತೂಕ ಇರ್ತಾರೆ. ಅಂಥವರಿಗೆ ತಮ್ಮ ದೇಹವನ್ನು ತಾವೇ ಹೊರೋದೂ ಕೂಡಾ ತ್ರಾಸದಾಯಕವಾಗಿರುತ್ತೆ. ಆದ್ದರಿಂದಲೇ ಕೂತಲ್ಲಿಂದ ಮೇಲೇಳಲೂ ಕೂಡಾ ಯಾವುದಾದರೊಂದು ಆಸರೆ ಬೇಡುತ್ತಾರೆ. ಹಾಗಿರುವಾಗ ಆ ಪಾಟಿ ದೇಹ ಉದುರಿಕೊಳ್ಳದಂತೆ ಸಮಸ್ಥಿತಿಯಲ್ಲಿಟ್ಟಿರೋದು ನಮ್ಮ ದೇಹದ ತುಂಬಾ ಹರಡಿಕೊಂಡಿರೋ ಮೂಳೆಗಳು. ಈ ವಿಚಾರವೇ ಮನುಷ್ಯನ ಮೂಳೆಗಳಿಗೆ ಅದೆಂಥಾ…