ಸಿಗರೇಟು ಆರೋಗ್ಯಕ್ಕೆ ಹಾನಿಕರ ಅಂತ ಬೋರ್ಡು ಹಾಕಿ ಬ್ಯಾಂಡು ಬಜಾಯಿಸಿದ್ರೂ ಅದರಿಂದಲೇ ಕಿಕ್ಕೇರಿಸಿಕೊಳ್ಳೋರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಈಗಂತೂ ಸಿಗರೇಟು ಪ್ಯಾಕೆಟ್ಟುಗಳ ಮೇಲೆ ಭೀಕರ ಚಿತ್ರಗಳನ್ನು ಪ್ರಿಂಟು ಹೊಡೆಸಲಾಗ್ತಿದೆ. ಅದನ್ನ ಕಂಡ್ರೆ ಬದುಕಿನ ಬಗ್ಗೆಯೇ ಜಿಗುಪ್ಸೆ ಬರಬೇಕು. ಹಾಗಿರುತ್ತೆ ಅದರ ಭಯಾನಕ ರೀತಿ. ಆದ್ರೆ ಸ್ಮೋಕರ್ಸ್ ಅದನ್ನ ನೋಡಿ ಮತ್ತೊಂದು ಸಿಗರೇಟು ಸೇದಿ ಸಮಾಧಾನ ಮಾಡ್ಕೋತಾರೇ ಹೊರತು ಸೇದೋದನ್ನ ಬಿಡೋ ಮನಸು ಮಾಡೋದಿಲ್ಲ. ಹೊಗೆಗೆ ವಶವಾದವರ ಈ ವಿಲ್‍ಪವರ್ ಇದೆಯಲ್ಲಾ? ಅದು ಜಗತ್ತಿನ ಸಿಗರೇಟು ಕಂಪೆನಿಗಳ ಉಸಿರುಳಿಸಿದೆ. ದುಖಃ, ದಾವಂತ, ನೋವು, ನಿರಾಸೆಗಳೆಲ್ಲಕ್ಕೂ ಈ ಜನ ಹೊಗೆಯನ್ನೇ ಆಶ್ರÀ್ರಯಿಸ್ತಾರೆ. ಆರಂಭದಲ್ಲಿ ಸಿಗರೇಟನ್ನ ಅವರು ಸೇದಿದ್ರೆ ನಂತರದಲ್ಲಿ ಸಿಗರೇಟೇ ಅವರನ್ನ ಸೇದಲಾರಂಭಿಸುತ್ತೆ. ಬರಬರುತ್ತಾ ನಿಕೋಟಿನ್ ಅನ್ನೋದು ಮನಸಿನ ಗೋಡೆಗೆ ಗಡಿಯಾರದಂತೆ ನೇತು ಬೀಳುತ್ತೆ. ಆಯಾ ಕಾಲಕ್ಕೆ ಬೆಲ್ಲು ಹೊಡೆದು ಎಚ್ಚರಿಸುತ್ತೆ. ಆಗ ಕೆಂಗಣ್ಣಿನ ಸಿಗರೇಟು ತುಟಿಯ ಮೇಲೆ ನಸುನಗಬೇಕು. ಹಾಗೆ ಒಳ ಹೋದ ಹೊಗೆ ಶ್ವಾಶಕೋಶದ ಅಂಗುಲಂಗುಲದಲ್ಲೂ ಲಗಾಟಿ ಹೊಡೆಯಬೇಕು. ಆಗಲೇ ಸಮಾಧಾನ… ನೀವೂ…
Author: Santhosh Bagilagadde
ಒಂದು ಕಾರ್ಗತ್ತಲ ಸನ್ನಿವೇಷದಲ್ಲಿ ಬೆಳಕಿನ ಸಣ್ಣ ಮಿಣುಕೊಂದು ಹೊತ್ತಿಕೊಂಡಂತಿದೆ. ಸದ್ಯ ದರ್ಶನ್ ಅವರಿಗೆ ಹೊಸಪೇಟೆಯಲ್ಲೆದುರಾದ ದುರಾದೃಷ್ಟಕರ ಸನ್ನಿವೇಷದ ಹಿನ್ನೆಲೆಯಲ್ಲಿ ಅಂಥಾದ್ದೊಂದು ಪವಾಡ ಸೃಷ್ಟಿಯಾಗೋ ಲಕ್ಷಣಗಳು ದಟ್ಟವಾಗಿಯೇ ಗೋಚರಿಸಲಾರಂಭಿಸಿವೆ. ಸಾವಿರ ಕಷ್ಟಕೋಟಲೆಗಳನ್ನೇ ಮೆಟ್ಟಿಲಾಗಿಸಿಕೊಂಡು ಗೆದ್ದು ತೋರಿಸಿರುವವರು ದರ್ಶನ್. ಅವರ ಮೇಲೆ ಚಪ್ಪಲಿ ತೂರುವಂಥಾ ವಿಕೃತಿ ನಡೆದಿರೋದರ ವಿರುದ್ಧ ಒಂದಿಡೀ ಚಿತ್ರಂಗವೇ ಒಂದಾಗಿದೆ. ಶಿವಣ್ಣ ಸೇರಿದಂತೆ ಅನೇಕರು ಈ ಘಟನೆಯನ್ನು ಖಂಡಿಸಿದ್ದಾರೆ. ಹೀಗೆ ಚಿತ್ರರಂಗದ ಮಂದಿಯೆಲ್ಲ ಒಂದು ಕಡೆಯಿಂದ ದರ್ಶನ್ ಬೆಂಬಲಕ್ಕೆ ನಿಲ್ಲುತ್ತಿರುವಾಗಲೇ, ಪ್ರೇಕ್ಷಕರ ಚಿತ್ತ ಕಿಚ್ಚಾ ಸುದೀಪ್ ಅವರತ್ತ ನೆಟ್ಟುಕೊಂಡಿತ್ತು. ಕಡೆಗೂ ಅವರು ತಮ್ಮ ಒಂದು ಕಾಲದ ಗೆಳೆಯನ ಬೆಂಬಲಕ್ಕೆ ನಿಂತಿದ್ದಾರೆ. ಈ ಮೂಲಕ ಈ ಘಟನೆಗೆ ತೀವ್ರವಾದ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದೀರ್ಘವಾದ ಬರಹದ ಮೂಲಕ ಸುದೀಪ್ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಗೆಳೆಯ ದರ್ಶನ್ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಮತ್ತು ಅವರು ಮೇಲೆದ್ದು ನಿಂತ ರೀತಿಯ ಬಗ್ಗೆ ಅಭಿಮಾನ ಪೂರ್ವಕವಾಗಿ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನದ ಹೆಸರಲ್ಲಿ ಅತಿರೇಕದಿಂದ ವರ್ತಿಸುವವರಿಗೂ…
ಕರ್ನಾಟಕದಲ್ಲಿ ಮತ್ತೊಮ್ಮೆ ಕೆಲಸಕ್ಕೆ ಬಾರದ ಸ್ಟಾರ್ ವಾರ್ ಮುನ್ನೆಲೆಗೆ ಬಂದಿದೆ. ಹೊಸಪೇಟೆಯಲ್ಲಿ ನಡೆದ ಕ್ರಾಂತಿ ಚಿತ್ರದ ಹಾಡಿನ ಬಿಡುಗಡೆ ಸಮಾರಂಭದಲ್ಲಿ ನಡೆಬಾರದ್ದು ನಡೆದು ಹೋಗಿದೆ. ಅಲ್ಲಿ ನೆರೆದಿದ್ದ ಜನಸ್ತೋಮದ ನಡುವೆ ಯಾವನೋ ತಲೆಮಾಸಿದವನೊಬ್ಬ ದರ್ಶನ್‍ಗೆ ಗುರಿಯಿಟ್ಟು ಚಪ್ಪಲಿ ಎಸೆದಿದ್ದಾನೆ. ಇದೀಗ ಅದರ ಹಿಂಚುಮುಂಚಿನ ಘಟನಾವಳಿಗಳ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯಲಾರಂಭಿಸಿವೆ. ಹಾಗಾದರೆ, ಇದರ ಹಿಂದಿರೋ ಹಿಕ್ಮತ್ತುಗಳೇನು? ಇದರಲ್ಲಿ ಅಪ್ಪು ಅಭಿಮಾನಿಗಳ ಪಾತ್ರವಿದೆಯಾ? ಅಭಿಮಾನಿಗಳ ಹೆಸರಿನಲ್ಲಿ ರಾಜಕೀಯ ಹಿತಾಸಕ್ತಿ ಕೆಲಸ ಮಾಡಿದೆಯಾ? ಈ ಹಿಂದೆ ದರ್ಶನ್ ಅದೃಷ್ಟ ಲಕ್ಷ್ಮಿಯ ವಿಚಾರದಲ್ಲಿ ಆಡಿದ್ದೊಂದು ಮಾತು ವಿವಾದವೆಬ್ಬಿಸಿತ್ತಲ್ಲಾ? ಅದರ ಬಗ್ಗೆ ಕುದ್ದುಹೋಗಿದ್ದ ಪಟಾಲಮ್ಮೊಂದು ಈ ಮೂಲಕ ದರ್ಶನ್ ವಿರುದ್ಧ ಸೇಡು ತೀರಿಸಿಕೊಂಡಿತಾ… ಹೀಗೆ ಪ್ರಶ್ನೆಗಳ ಸರಮಾಲೆಯೇ ಇದೆ. ಸದ್ಯಕ್ಕೆ ದಿಕ್ಕು ದಿಕ್ಕುಗಳಲ್ಲಿಯೂ ನಾನಾ ಬಗೆಯ ಉತ್ತರಗಳು ಚೆದುರಿ ಬಿದ್ದಂತೆ ಭಾಸವಾಗುತ್ತಿದೆ. ಸ್ಟಾರ್‍ವಾರ್, ಅಭಿಮಾನ, ಅಸಮಾಧಾನಗಳೆಲ್ಲ ಏನೇ ಇದ್ದರೂ ಕಲಾವಿದನೊಬ್ಬನಿಗೆ ಈ ಪರಿಯಾಗಿ ಅವಮಾನಿಸೋದು ಖಂಡಿತವಾಗಿಯೂ ಸರಿಯಲ್ಲ. ದರ್ಶನ್ ಮಾತ್ರವಲ್ಲ; ಯಾವ ನಟ, ನಟಿಯರ ಮೇಲೂ ಇಂಥಾದ್ದೊಂದು…
ಈ ಜಗತ್ತನ್ನ ತುಂಬಿಕೊಂಡಿರೋ ಬೆರಗುಗಳು ನಿಜಕ್ಕೂ ಅಕ್ಷಯಪಾತ್ರೆಯಂಥವು. ನಾವು ತಿಳಿದುಕೊಂಡೆವೆಂದು ಬೀಗೋ ಮುನ್ನವೇ ತಿಳಿಯದೇ ಉಳಿದ ನಿಗೂಢಗಳು ಅಣಿಕಿಸುತ್ವೆ. ಅಂಥಾ ಅನ್ವೇಷಣೆಯ ಕಾಲುದಾರಿಯಲ್ಲಿ ಹೆಜ್ಜೆಯಿಟ್ರೆ ಅದು ಸೀದಾ ಹೆದ್ದಾರಿಗೇ ಕರೆದೊಯ್ದು ತಬ್ಬಿಬ್ಬುಗೊಳಿಸುತ್ತೆ. ಒಟ್ಟಾರೆಯಾಗಿ ಈ ಜಗತ್ತಿನ ಬೆರಗುಗಳು ಮೊಗೆದು ಮುಗಿಯುವಂಥವುಗಳಲ್ಲ. ಅದರಲ್ಲೊಂದು ಅಚ್ಚರಿಯ ಹನಿ ನಮಗೆಲ್ಲ ತೀರಾ ಪರಿಚಿತವಾಗಿರೋ ಜೇನು ನೊಣಗಳ ಬಗೆಗಿದೆ. ಜೇನು ನೊಣಗಳ ಜೀವನಕ್ರಮ, ಅವುಗಳ ಬದುಕಿನ ರೀತಿ ನಿಜಕ್ಕೂ ಅಚ್ಚರಿ. ಅವು ಗೂಡು ಕಟ್ಟೋ ಶಿಸ್ತು, ಅದರ ಇಂಜಿನೀರಿಂಗು, ಜೀವನ ಕ್ರಮಗಳೆಲ್ಲವೂ ಅಪರಿಮಿತ ಆನಂದ ಮೂಡಿಸುತ್ತೆ. ಈಗ ಹೇಳ ಹೊರಟಿರೋದು ಅವುಗಳ ಮತ್ತೊಂದು ಬಗೆಯ ಸಮ್ಮೋಹಕ ಸಾಮಥ್ರ್ಯದ ಬಗ್ಗೆ. ನಮ್ಮ ದೇಶದ ವೈಚಿತ್ರ್ಯಗಳ ಆಗರದಂತಿರೋ ಮೌಂಟ್ ಎವರೆಸ್ಟ್ ಜಗತ್ತಿನ ಅತೀ ಎತ್ತರದ ಪರ್ವತ. ನಮ್ಮ ಕಣ್ಣಿಗೆ ತುಂಬಾ ಪುಟ್ಟದಾಗಿ ಕಾಣಿಸೋ ಜೇನ್ನೊಣಗಳು ಮೌಂಟ್ ಎವರೆಸ್ಟಿಗಿಂತಲೂ ಎತ್ತರಕ್ಕೆ ಹಾರುತ್ತವೆ ಅಂದ್ರೆ ಅದೇನು ಸುಮ್ಮನೆ ಮಾತಲ್ಲ. ಲಾಗಾಯ್ತಿನಿಂದಲೂ ಜೇನು ನೊಣಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ. ಅದರ ಭಾಗವಾಗಿಯೇ ಅವುಗಳ…
ನಮ್ಮೆಲ್ಲರದ್ದು ಜಂಜಾಟಗಳ ಬದುಕು. ಅದರ ನಡುವಲ್ಲಿಯೇ ಒಂದಷ್ಟು ವಿಚಾರಗಳನ್ನ ತಿಳಿದುಕೊಳ್ಳೋಕೆ ಪ್ರಯತ್ನಿಸುವವರಿದ್ದಾರೆ. ಆದ್ರೆ ಅವ್ರ ಗಮನವೆಲ್ಲ ದೊಡ್ಡ ದೊಡ್ಡ ವಿಚಾರಗಳನ್ನ ಅರಿತುಕೊಳ್ಬೇಕು ಅನ್ನೋದ್ರತ್ತಲೇ ಇರುತ್ತೆ. ಈ ಭರಾಟೆಯಲ್ಲಿ ತೀರಾ ಸಣ್ಣಪುಟ್ಟ ಅಂಶಗಳು ಅರಿವಿಗೆ ಬರೋದೇ ಇಲ್ಲ. ಬೇರೆಲ್ಲಾ ಒತ್ತಟ್ಟಿಗಿರ್ಲಿ; ಮನ್ನದೇ ದೇಹದ ಗುಣ ಲಕ್ಷಣಗಳ ಬಗ್ಗೆ ನಮಗೇ ತಿಳಿದಿರೋದಿಲ್ಲ. ಹಾಗೊಂದುವೇಳೆ ನಿಮಗೊಂದಷ್ಟು ತಿಳಿದಿದೆ ಅಂತಿಟ್ಕೊಳ್ಳಿ… ನಿಮ್ಮದೇ ಪಾದಗಳ ಬಗ್ಗೆ ನಿಮಗೆಷ್ಟು ಗೊತ್ತು? ಹೀಗೊಂದು ಪ್ರಶ್ನೆ ಎದುರಾದ್ರೆ ನೀವಲ್ಲ; ಯಾರೇ ಆದ್ರೂ ತಡವರಿಸಬೇಕಾಗುತ್ತೆ. ನಮ್ಮ ಪಾದಗಳು ನಮ್ಮಿಡೀ ದೇಹದಲ್ಲಿ ಎಂಥಾ ಶಕ್ತಿಯುತ ಅನ್ನೋದನ್ನ ತಿಳ್ಕೊಳ್ಳೋದಕ್ಕೆ ಕಾಮನ್‍ಸೆನ್ಸ್ ಸಾಕು. ಆದ್ರೆ ಅದನ್ನ ಮೀರಿದ ವಿಸ್ಮಯಗಳು ಪಾದಗಳಲ್ಲಿವೆ. ಅದಕ್ಕೆ ಪ್ರಾಕೃತಿಕವಾಗಿಯೇ ಅಂಥಾ ಶಕ್ತಿ ದಕ್ಕಿದೆ. ಇಡೀ ದೇಹದ ಭಾರವನ್ನು ಹೊತ್ತುಕೊಳ್ಳಲು ಅನುವಾಗುವಂತೆ ಅದರ ರಚನೆಯಿದೆ. ಈ ಕಾರಣದಿಂದಲೇ ನಮ್ಮ ದೇಹದಲ್ಲಿರೋ ಒಟ್ಟಾರೆ ಮೂಳೆಗಳ ಹೆಚ್ಚಿನ ಪಾಲು ಪಾದಗಳಲ್ಲಿದೆ. ಮನುಷ್ಯನ ದೇಹದೊಳಗೆ ಸಾಮಾನ್ಯವಾಗಿ 206 ಮೂಳೆಗಳಿರುತ್ತವೆ. ಅದರಲ್ಲಿ ಸಣ್ಣದು, ದೊಡ್ಡವುಗಳೆಲ್ಲ ಸೇರಿಕೊಂಡಿರುತ್ವೆ. ಆ ಒಟ್ಟಾರೆ ಮೂಳೆಗಳಲ್ಲಿ ಪಾದಗಳಲ್ಲಿಯೇ…
ಕಣ್ಣಿನ ಪ್ರಾಬ್ಲಂಗೋ, ತಲೆ ನೋವಿನ ಬಾಧೆಗೋ ಕನ್ನಡಕ ಹಾಕ್ಕೊಂಡ್ರೆ ಸೋಡಾಬುಡ್ಡಿ ಅಂತ ಕಾಲೆಳೆಸಿಕೊಳ್ಳೋ ಸಾಧ್ಯತೆಗಳಿರುತ್ವೆ. ಆದ್ರ ಸನ್‍ಗ್ಲಾಸ್ ಹಾಕೊಂಡ್ರೆ ಮಾತ್ರ ಅದನ್ನು ಸ್ಟೈಲಿಶ್ ಲುಕ್ ಅಂತ ಕೊಂಡಾಡಲಾಗುತ್ತೆ. ಅದು ಈಗ ಆಧುನಿಕ ಜಗತ್ತಿನ ಫ್ಯಾಷನ್ ಹುಟ್ಟಿನ ಭಾಗ. ಅದು ಜನಸಾಮಾನ್ಯರ ಸೌಂದರ್ಯ ಪ್ರಜ್ಞೆಯನ್ನ ಕೊಂಚ ತಣಿಸಿರೋದು ಸುಳ್ಳಲ್ಲ. ಆದ್ರೆ ಅದು ಮೊದಲು ಬಳಕೆಯಾಗಿದ್ದು ಫ್ಯಾಷನ್‍ಗಲ್ಲ ಅನ್ನೋದು ನಿಜವಾದ ಮಜದ ಸಂಗತಿ. ಈ ಮಾತು ಕೇಳಿದ್ರೆ ಅರೇ ಶೋಕಿಯ ಭಾಗವಾಗಿರೋ ಕೂಲಿಂಗ್ ಗ್ಲಾಸುಗಳು ಮತ್ತೇನಕ್ಕೆ ಬಳಕೆಯಾದ್ವು ಅನ್ನೋ ಕ್ಯೂರಿಯಾಸಿಟಿ ಮೂಡಿಕೊಳ್ಳುತ್ತೆ. ಅದಕ್ಕೆ ಪಕ್ಕಾ ಇಂಟರೆಸ್ಟಿಂಗ್ ಉತ್ತರವೂ ರೆಡಿಯಾಗಿದೆ. ಅದ್ರ ಪ್ರಕಾರ ಹೇಳೋದಾದ್ರೆ ಈ ಕೂಲಿಂಗ್ ಗ್ಲಾಸ್ ಅನ್ನೋ ಪರಿಕಲ್ಪನೆ ಮೊದಲು ಆರಂಭವಾಗಿದ್ದ ಹನ್ನೆರಡನೇ ಶತಮಾನದಲ್ಲಿ. ಗ್ಯಾರೆಂಟಿಯಿಲ್ಲದ ಸರಕುಗಳ ಕಾರ್ಖಾನೆಯಂತಿರೋ ಚೀನಾ ಅದರ ತವರು ನೆಲ. ಈವತ್ತಿಗೆ ಕೂಲಿಂಗ್ ಗ್ಲಾಸ್ ಶೋಕಿಗೆ ಹೆಚ್ಚಾಗಿ ಬಳಕೆಯಾಗ್ತಿದೆ. ಆದ್ರೆ ಅದ್ರ ಹಿಂದೆ ಸೂರ್ಯನ ತೀಕ್ಷ್ಣವಾದ ಕಿರಣಗಳಿಂದ ಕಣ್ಣನ್ನ ಕಾಪಾಡಿಕೊಳ್ಳೋ ಇರಾದೆಯೂ ಇದೆ. ಆದ್ರೆ ಮೊದಲು ಕೂಲಿಂಗ್ ಗ್ಲಾಸಿನ…
ಕನ್ನಡ ಸಿನಿಮಾಗಳು ಸೀಮಿತ ಪರಿಧಿಯಲ್ಲಿ ಗಿರಕಿ ಹೊಡೆಯುತ್ತಿದ್ದ ಘಳಿಗೆಯಲ್ಲಿ, ಎಲ್ಲೆ ಮೀರಿ ಹಬ್ಬಿಕೊಂಡು ವಿಶ್ವ ಮಟ್ಟದಲ್ಲಿ ಗೆದ್ದಿದ್ದ ಚಿತ್ರ ಕೆಜಿಎಫ್. ಈ ಗೆಲುವಿನ ಹಿಂದೆ ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಒಂದಿಡೀ ತಂಡದ ಶ್ರಮವಿದೆ. ಆದರೆ, ಅಂಥಾದ್ದೊಂದು ಪವಾಡಸದೃಶ ಗೆಲುವು ಸಾಧ್ಯವಾಗಿದ್ದರಲ್ಲಿ ರಾಕಿಂಗ್ ಸ್ಟಾರ್ ಯಶ್ ಪಾತ್ರ ಪ್ರಧಾನವಾಗಿದೆ. ಈ ಮೂಲಕ ಅತ್ಯಂತ ಕಡುಗಷ್ಟದಿಂದ ಬಂದ ಹುಡುಗನೊಬ್ಬ, ವಿಶ್ವವೇ ನಿಬ್ಬರಗಾಗುವಂತೆ ಬೆಳೆದುನಿಲ್ಲ ಬಲ್ಲ ಎಂಬುದಕ್ಕೆ ಯಶ್ ಸಜೀವ ಉದಾಹರಣೆಯಾಗಿ ನಿಂತಿದ್ದಾರೆ. ಕನಸು ಬಿಟ್ಟರೆ ಬೇರೇನೂ ದಿಕ್ಕಿಲ್ಲದ ಕೋಟಿ ಜೀವಗಳ ಕಣ್ಣುಗಳಲ್ಲಿ ಭರವಸೆಯ ಮಿಂಚೊಂದು ಹೊಳೆಯುವಂತೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಯಶ್ ನಡೆದು ಬಂದ ರೀತಿ, ಪರಿಶ್ರಮದಿಂದಲೇ ಏರಿರುವ ಎತ್ತರ ಸಾರ್ವಕಾಲಿಕ ಸ್ಫೂರ್ತಿ. ಕೆಜಿಎಫ್ ಚಿತ್ರೀಕರಣವಾಗುತ್ತಿದ್ದ ಘಳಿಗೆಯಲ್ಲಿದ್ದ ವಾತಾವರಣವನ್ನೊಮ್ಮೆ ರಿವೈಂಡ್ ಮಾಡಿಕೊಳ್ಳಿ. ಆಗ ಪ್ಯಾನಿಂಡಿಯಾ ಅಂತೊಂದು ಪದವೇ ಅಸಾಧ್ಯವೆಂಬಂತೆ ಭಾಸವಾಗುತ್ತಿತ್ತು. ಇದೆಲ್ಲದರ ನಡುವೆ ಯಶ್, ಇಡೀ ಭಾರತವೇ ತಿರುಗಿ ನೋಡುವಂಥಾ ಸಿನಿಮಾ ಮಾಡಬೇಕು, ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೇರಿಸಬೇಕೆಂಬಂಥಾ ಸ್ಫೂರ್ತಿಯ ಮಾತಾಡುತ್ತಿದ್ದರು. ಆ ಕಾಲಕ್ಕದು…
ಈ ವರ್ಷವಿಡೀ ಕನ್ನಡ ಚಿತ್ರರಂಗದ ಪಾಲಿಗೆ ಮನ್ವಂತರದಂಥಾ ಅನೇಕ ಬೆಳವಣಿಗೆಗಳಾಗಿವೆ. ಒಂದಷ್ಟು ಗೆಲುವುಗಳು, ಅದರ ಫಲವಾಗಿ ಮೂಡಿಕೊಂಡಿರೋ ನಿರೀಕ್ಷೆಗಳ ಜೊತೆ ಜೊತೆಗೇ ಒಂದಷ್ಟು ಭಿನ್ನ ಸಿನಿಮಾಗಳು ಬಿಡುಗಡೆಯ ಹೊಸ್ತಿಲಿನಲ್ಲಿವೆ. ಹಾಗೆ ಈ ವರ್ಷದಂಚಿನಲ್ಲಿ ಕಮಾಲ್ ಮಾಡಲು ಮುಂದಾಗಿರುವ ಚಿತ್ರಗಳ ಸಾಲಿನಲ್ಲಿ ಧನಂಜಯ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಮೈಸೂರು ಡೈರೀಸ್ ಕೂಡಾ ಪ್ರಧಾನವಾಗಿ ಸೇರಿಕೊಳ್ಳುತ್ತದೆ. ನಮ್ಮಾಳದಲ್ಲಿರುವ ನೆನಪಿನ ಪರಾಗ ಬಚ್ಚಿಟ್ಟುಕೊಂಡಂತೆ ಭಾಸವಾಗೋ ಈ ಟ್ರೈಲರ್ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ಚಿತ್ರ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಪ್ರೀತಿ ಎಂಬುದಕ್ಕೆ ವಯಸ್ಸಿನ ಗಡಿ ರೇಖೆಗಳಿಲ್ಲ. ಎಲ್ಲವನ್ನೂ ಮೀರಿಕೊಂಡು, ಎಲ್ಲರನ್ನೂ ಆವರಿಸಿಕೊಳ್ಳುವ ಪ್ರೀತಿಯ ಜೊತೆಗೆ, ಹಲವಾರು ಅಂಶಗಳನ್ನು ಬೆರೆಸಿ ತಯಾರಿಸಲಾಗಿರುವ ಚಿತ್ರ ಮೈಸೂರು ಡೈರೀಸ್. ಟ್ರೈಲರ್‍ನಲ್ಲಿಯೇ ಒಟ್ಟಾರೆ ಕಥೆಯ ಸೊಬಗು ಎಂಥಾದ್ದಿದೆ ಎಂಬುದು ಸುಳಿವು ಗೋಚರಿಸಿದೆ. ಈ ಟ್ರೈಲರ್ ಮೂಲಕವೇ ಮೈಸೂರು ಡೈರೀಸ್ ಎಲ್ಲೆಡೆಗಳಿಂದಲೂ ಚರ್ಚೆ ಹುಟ್ಟು ಹಾಕಿದೆ. ಜೊತೆಗೆ ಸದಭಿಪ್ರಾಯಗಳೂ ಕೂಡಾ ಕೇಳಿ ಬರುತ್ತಿದ್ದಾವೆ. ಒಟ್ಟಾರೆ ಸಿನಿಮಾ ಬಗ್ಗೆ ಚಿತ್ರತಂಡ ಯಾವುದೇ ರೀತಿಯ…
ವರ್ಷವೊಂದು ಮುಗಿಯುತ್ತಾ ಬಂದಾಗ, ಇನ್ನೇನು ಹೊಸಾ ವರ್ಷವೊಂದು ಕಣ್ಣಳತೆಯಲ್ಲಿಯೇ ಕೈಚಾಚುತ್ತಿರುವಾಗ, ಪಡೆದದ್ದೇನು ಕಳೆದುಕೊಂಡಿದ್ದೇನೆಂಬ ಲೆಕ್ಕಾಚಾರಗಳು ಶುರುವಾಗುತ್ತವೆ. ಆದರೆ, ಕನ್ನಡ ಚಿತ್ರರಂಗದ ಮಟ್ಟಿಗೆ ಈ ವರ್ಷ ಪಡೆದುಕೊಂಡಿದ್ದೇ ಹೆಚ್ಚೆಂದರೂ ಅತಿಶಯವೇನಲ್ಲ. ಹಾಗೆ ಗಳಿಸಿಕೊಂಡ ಗೆಲುವಿನ ಪಟ್ಟಿಗೆ ಕಡೇ ಕ್ಷಣದಲ್ಲಿ ಸೇರ್ಪಡೆಯಾಗಬಲ್ಲ ಒಂದಷ್ಟು ಚಿತ್ರಗಳಿದ್ದಾವೆ. ಆ ಯಾದಿಯಲ್ಲಿ ಇದೇ ಡಿಸೆಂಬರ್ 22ರಂದು ಬಿಡುಗಡೆಗೊಳ್ಳಲಿರುವ ಹೊಸ ದಿನಚರಿ ಚಿತ್ರ ಖಂಡಿತವಾಗಿಯೂ ಸೇರ್ಪಡೆಗೊಳ್ಳುತ್ತದೆ. ಇದು ಹೊಸಬರ ತಂಡವೊಂದು ಸೇರಿ ರೂಪಿಸಿರುವ, ಹೊಸತನಗಳನ್ನು ಹೊಂದಿರುವ ಚಿತ್ರ. ಕೀರ್ತಿ ಶೇಖರ್ ಮತ್ತು ವೈಶಾಕ್ ಪುಷ್ಪಲತಾ ಸೇರಿಕೊಂಡ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹಾಗಾದರೆ, ಹೊಸಾ ದಿನಚರಿ ಯಾವ ಬಗೆಯ ಚಿತ್ರ? ಅದರಲ್ಲಿರುವ ಕಥೆ ಎಂಥಾದ್ದೆಂಬ ಪ್ರಶ್ನೆಗಳೀಗ ಮೂಡಿಕೊಂಡಿವೆ. ಆ ನಿಟ್ಟಿನಲ್ಲಿ ಚಿತ್ರತಂಡವೇ ಒಂದಷ್ಟು ವಿಚಾರಗಳನ್ನು ಜಾಹೀರು ಮಾಡಿದೆ. ಆ ಎಲ್ಲವುಗಳ ಸಾರಾಂಶವಾಗಿ ಕಣ್ಣೆದುರು ನಿಲ್ಲೋದು ಪ್ರೀತಿ ಎಂಬ ಮಾಯೆ. ಪ್ರೀತಿ ಎಂಬುದು ಎಂದಿಗೂ ಸವಕಲಾಗದಂಥಾ ಸಿನಿಮಾ ಸರಕು. ಆದರೆ, ಅದನ್ನು ಹೊಸತನಕ್ಕೆ ಒಗ್ಗಿಸಿಕೊಂಡು ರೂಪಿಸೋದು ತ್ರಾಸದಾಯಕ ಕೆಲಸ. ಅದನ್ನು ಈ…
ನಾನಾ ದಿಕ್ಕಿನಿಂದ, ಹಲವಾರು ಆಲೋಚನೆಗಳು ಹರಿಉ ಬಂದು ಸಂಗಮಿಸಿರೆ ಮಾತ್ರವೇ ಯಾವುದೇ ಚಿತ್ರರಂಗದ ಗೆಲುವಿನ ಹಿವಿಗೊಂದು ಹೊಸಾ ಓಘ ಸಿಗುತ್ತದೆ. ಕನ್ನಡ ಚಿತ್ರರಂಗವೀಗ ಅದರ ಪರ್ವಕಾಲವೊಂದನ್ನು ಸಂಭ್ರಮಿಸುತ್ತಿದೆ. ಭೂತಾರಾಧನೆಯ ಅಸ್ಮಿತೆ ಹೊಂದಿರುವ ತುಳುನಾಡ ಕಥನವನ್ನೊಳಗೊಂಡಿದ್ದ ಕಾಂತಾರವೀಗ ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ. ಆ ಚಿತ್ರದ ಮೂಲಕ ಪಂಜುರ್ಲಿ ದೈವದ ಕಾರಣೀಕ ಜಗದಗಲ ಹಬ್ಬಿಕೊಂಡಿದೆ. ಅದೇ ತುಳುನಾಡಮಣ್ಣಿನಲ್ಲಿ ಜೀವಪಡೆದು, ಇದೀಗ ನಾನಾ ದಿಕ್ಕುಗಳತ್ತ ಪ್ರಭೆ ಬೀರಿರುವ ಮತ್ತೊಂದು ಕಾರಣೀಕದ ದೈವ ಕೊರಗಜ್ಜ. ಈಗ ಕೊರಗಜ್ಜನ ರೋಚಕ ಕಥನ ಚಿತ್ರರೂಪ ಧರಿಸಿಕೊಂಡಿದೆ. ಅದು ಕರಿ ಹೈದ ಕರಿ ಅಜ್ಜ ಚಿತ್ರವಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನ್ನಾಹದಲ್ಲಿದೆ. ಸರಿಸುಮಾರು ಹನ್ನೆರಡನೇ ಶತಮಾನದಲ್ಲಿ ಜೀವಿಸಿದ್ದ ಕೊರಗಜ್ಜ ದೈವದ ಬಗ್ಗೆ ಈಗ ನಾನಾ ದಿಕ್ಕುಗಳಲ್ಲಿ ಚರ್ಚೆಗಳಾಗುತ್ತಿವೆ. ಕರುನಾಡಿನ ನಾನಾ ದಿಕ್ಕುಗಳಿಂದ ಭಕ್ತರು ಕೊರಗಜ್ಜನ ದರ್ಶನಕ್ಕಾಗಿ ದಕ್ಷಿಣಕನ್ನಡದತ್ತ ಬಂದು ಹೋಗಲಾರಂಭಿಸಿದ್ದಾರೆ. ಇದೇ ಹೊತ್ತಿನಲ್ಲಿ ಮೈಸೂರು ಮುಂತಾದೆಡೆಗಳಲ್ಲಿ ಕೊರಗಜ್ಜನನ್ನು ಪ್ರತಿಷ್ಠಾಪಿಸಿ ಕಾಸು ಗೆಬರುವ ದಂಧೆಗಳೂ ಕೂಡಾ ಜೋರಾಗಿಯೇ ನಡೆಯುತ್ತಿವೆ. ಈ ಕುರಿತಾದ ಪರ ವಿರೋಧದ…