ಅದ್ಯಾವುದೇ ದೇಶ ಆಗಿದ್ರೂ ಅಲ್ಲಿ ಕಾನೂನು ಸುವ್ಯವಸ್ಥೆಯನ್ನ ಸರಿಕಟ್ಟಾಗಿರೋವಂತೆ ನೋಡ್ಕೊಳ್ಳೋ ಭಾರ ಪೊಲೀಸರ ಮೇಲಿರುತ್ತೆ. ಇಡೀ ಸಮಾಜದಲ್ಲಿ ಯಾವುದೇ ದುಷ್ಟ ದಂಧೆಗಳು ನಡೆಯದಂತೆ ತಡೆಯುವಲ್ಲಿ ಪೊಲೀಸರ ಪಾತ್ರವನ್ನ ಯಾರೂ ಶ್ಲಾಘಿಸದಿರೋಕೆ ಸಾಧ್ಯಾನೆ ಇಲ್ಲ. ಹಾಗೆ ಸಾರ್ವಜನಿಕರ ರಕ್ಷಣೆಯ ಹೊಣೆ ಹೊತ್ತಿರೋ ಪೊಲೀಸ್ ಇಲಾಖೆಯ ಕಾನೂನು ರೀತಿ ರಿವಾಜುಗಳು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ವೆ. ಅದು ಕೇವಲ ಯೂನಿಫಾಂಗೆ ಮಾತ್ರ ಸೀಮಿತವಲ್ಲ; ಕಾರ್ಯವೈಖರಿಯಲ್ಲೂ ವ್ಯತ್ಯಾಸಗಳಿರುತ್ವೆ. ಅನ್ಯಾಯ ನಡೀತಿದ್ರೆ ಯಾವ ಮೂಲಾಜೂ ಇಲ್ಲದೆ ಎದುರಾಗಿ ನಿಲ್ಲೋ ಪೊಲೀಸರ ಪಾಲಿಗೆ ಮಾನವೀಯ ಗುಣಗಳೂ ಮುಖ್ಯ. ನಮ್ಮಲ್ಲಿ ಕೆಲ ಖಡಕ್ ಅಧಿಕಾರಿಗಳೂ ಕೂಡಾ ಅಂಥಾ ಮಾನವೀಯತೆಯಿಂದಾನೇ ಪ್ರಸಿದ್ಧಿ ಪಡೆಯೋದಿದೆ. ನಿಷ್ಠುರತೆ, ಪ್ರಾಮಾಣಿಕತೆ ಮತ್ತು ಮನುಷ್ಯತ್ವವನ್ನ ಜೊತೆಯಾಗಿಸಿಕೊಂಡವರು ಮಾತ್ರವೇ ಅಂಥಾ ಮನ್ನಣೆ ಪಡೆಯೋಕೆ ಸಾಧ್ಯ. ಸದ್ಯ ಡಚ್ ಪೊಲೀಸರು ಕೂಡಾ ಅಂಥಾದ್ದೊಂದು ಮಾನವೀಯ ವಿಚಾರದ ಮೂಲಕ ಗಮನ ಸೆಳೆಯುತ್ತಾರೆ. ಪ್ರತೀ ಡಚ್ ಪೊಲೀಸರೂ ಕೂಡಾ ಡ್ಯೂಟಿಗೆ ತೆರಳುವಾಗ ಟೆಡ್ಡಿಬೇರ್‍ಗಳನ್ನ ಜೊತೆಗಿಟ್ಟುಕೊಳ್ತಾರಂತೆ. ಅವರ ಕಾರುಗಳಲ್ಲಿ ಟೆಡ್ಡಿಬೇರ್‍ಗಳು ಇದ್ದೇ ಇರುತ್ವೆ. ಅರೇ ಪೊಲೀಸರಿಗೂ…
Author: Santhosh Bagilagadde
ಈವತ್ತು ಇಡೀ ಜಗತ್ತು ಅಂಗೈಲಿರುವಂತೆಯೇ ಫೀಲ್ ಆಗುವಂಥಾ ವಾತಾವರಣವಿದೆ. ಈ ಆಧುನಿಕ ಜಗತ್ತಿನಲ್ಲೀಗ ಯಾವುದೂ ನಿಗೂಢವಾಗುಳಿದಿಲ್ಲ. ನಮಗೆಲ್ಲ ಯಾವ ವಿಚಾರಗಳೂ ವಿಸ್ಮಯ ಅನ್ನಿಸೋದಿಲ್ಲ. ಹೀಗೆ ಎಲ್ಲ ತಂತ್ರಜ್ಞಾನಗಳೂ ಖುಲ್ಲಂಖುಲ್ಲ ಆಗಿರೋ ಈ ಘಳಿಗೆಯಲ್ಲಿಯೂ ಕೆಲವೊಂದು ವಿಚಾರಗಳು ಮಾತ್ರ ಯಥಾಪ್ರಕಾರ ಆಕರ್ಷಣೆ ಉಳಿಸಿಕೊಂಡಿವೆ. ಅದರಲ್ಲಿ ಇದೀಗ ವಿಶ್ವದ ತುಂಬೆಲ್ಲ ಹಾರಾಡಿಕೊಂಡಿರೋ ವಿಮಾನಗಳದ್ದು ಅಗ್ರ ಸ್ಥಾನ. ಆಕಾಶದಲ್ಲಿ ವಿಮಾನದ ಸೌಂಡು ಕೇಳಿದರೆ ಪುಟ್ಟ ಮಕ್ಕಳಂತೆ ಅದರತ್ತ ನೋಡುವಂಥ ಬೆರಗು ಈಗಲೂ ಉಳಿದು ಹೋಗಿದೆ. ಮೋಡದ ಮುದ್ದೆ ಸೀಳಿಕೊಂಡು ಪುಟ್ಟ ಹಕ್ಕಿಯಂತೆ ಹಾರಾಡೋ ದೈತ್ಯ ವಿಮಾನ ಎವರ್‍ಗ್ರೀನ್ ಆಕರ್ಷಣೆ. ಅದೆಷ್ಟೋ ಸಾವಿರ ಮೈಲಿಗಳಷ್ಟು ಎತ್ತರದಲ್ಲಿ ವಿಮಾನ ಚಲಾಯಿಸೋ ಪೈಲಟ್ ಅಂತೂ ದೇವಮಾನವನಂತೆಯೇ ಕಾಣ್ತಾನೆ. ಹಾಗೆ ವಿಮಾನಗಳು ಹೇಗೆ ಹಾರಾಡ್ತಾವೆ, ಅವುಗಳನ್ನ ಪೈಲಟ್ ಹೇಗೆ ಗಮ್ಯ ಸೇರಿಸ್ತಾನನ್ನೋದೆಲ್ಲ ಕುತೂಹಲದ ಸಂಗತಿಗಳೇ. ಹಾಗೆ ಆ ಪಾಟಿ ಗಾತ್ರದ ವಿಮಾನವನ್ನು ವಿಶ್ವದ ನಾನಾ ದೇಶಗಳಿಗೆ ಮುಟ್ಟಿಸ್ತಾನಲ್ಲಾ ಪೈಲಟ್? ಅದರ ಹಿಂದೆ ಮುನ್ನೂರು ಪದಗಳದ್ದೊಂದು ಸಪರೇಟ್ ಆದ ಭಾಷೆಯ ಪಾತ್ರವೂ ಇದೆ.…
ಇದು ಹೊಸ ಹೊಸಾ ಆವಿಷ್ಕಾರಗಳಿಂದಲೇ ಕಳೆಗಟ್ಟಿಕೊಂಡಿರೋ ಯುಗ. ನಿಂತಿದ್ದಕ್ಕೆ ಕುಂತಿದ್ದಕ್ಕೆಲ್ಲ ನಮಗೆ ಕೆಲಸ ಆರಾಮಾಗಬೇಕು. ಎಲ್ಲದಕ್ಕೂ ಅತ್ಯಾಧುನಿಕ ಆವಿಷ್ಕಾರದ ಫಲಗಳಂತೂ ಬೇಕೇ ಬೇಕು. ಹಾಗೆ ಇಂದು ನಮಗೆಲ್ಲ ಕೈಗೆಟುಕುತ್ತಿರೋ ಕೆಲ ವಸ್ತುಗಳಿಲ್ಲದ ಕಾಲದಲ್ಲಿ ಈ ಜಗತ್ತು ಹೇಗಿತ್ತು? ಆ ಕಾಲದಲ್ಲಿ ಜನ ಆಯಾ ಕೆಲಸಕ್ಕಾಗಿ ಏನನ್ನು ಬಳಸ್ತಿದ್ರು ಅನ್ನೋದೆಲ್ಲ ಶೋಧನಾರ್ಹ ಅಂಶಗಳೇ. ಈ ನಿಟ್ಟಿನಲ್ಲಿ ನೋಡ ಹೋದ್ರೆ ಮುಂದುವರೆದು ಬೀಗುತ್ತಿರೋ ಕೆಲ ದೇಶಗಳಲ್ಲಿನ ಇಂಟರೆಸ್ಟಿಂಗ್ ಪುರಾಣಗಳು ಗರಿಬಿಚ್ಚಿಕೊಳ್ಳುತ್ವೆ. ಈವತ್ತಿಗೆ ಅಮೆರಿಕಾ ಇಡೀ ಜಗತ್ತಿನ ದೊಡ್ಡಣ್ಣ ಎಂಬಂತೆ ಮೆರೆಯುತ್ತಿದೆ. ಜಗತ್ತಿನ ಇತರೇ ರಾಷ್ಟ್ರಗಳ ಆಂತರಿಕ ವಿಚಾರಗಳಲ್ಲಿಯೂ ಮೂಗು ತೂರಿಸ್ತಾ ದೊಡ್ಡಸ್ತಿಕೆ ಪ್ರದರ್ಶಿಸ್ತಿದೆ. ಅಲ್ಲಿನ ಜನರಂತೂ ತೀರಾ ಅಪ್‍ಡೇಟೆಡ್ ವರ್ಷನ್ನುಗಳು. ಅವರದ್ದು ಹೈಫೈ ಕಲ್ಚರ್. ನಮಗೆ ವಿಚಿತ್ರ ಅನ್ನುವಂಥ ನಡವಳಿಕೆ, ಜೀವನ ಕ್ರಮ ಅವರದ್ದು. ಈಗ ಪಾಯಿಖಾನೆ ಬಳಸಿದ ನಂತ್ರ ಶುಚಿತ್ವಕ್ಕೆ ಟಾಯ್ಲೆಟ್ ಪೇಪರ್ ಬಂದಿದೆಯಲ್ಲಾ? ನಮ್ಮ ದೇಶದಲ್ಲಿ ಚೊಂಬು ಹಿಡಿದು ಪೊದೆ ಹುಡುಕುತ್ತಿದ್ದ ಕಾಲದಲ್ಲಿಯೇ ಅಮೆರಿಕನ್ನರು ಒರೆಸಿಕೊಳ್ಳುವ ತಂತ್ರಜ್ಞಾನವನ್ನ ಆವಿಷ್ಕರಿಸಿದ್ರು. ಆದ್ರೆ ಟಾಯ್ಲೆಟ್…
ಹಿರಿಯರನ್ನು ಪೂಜ್ಯನೀಯವಾಗಿ ನೋಡೋ ಪರಿಪಾಠ ಮನುಷ್ಯತ್ವದ ಭಾಗ. ಅದು ಭಾರತೀಯ ಸಂಸ್ಕøತಿಯ ಅವಿಭಾಜ್ಯ ಅಂಗವೂ ಹೌದು. ಅಗಾಧ ಅನುಭವದ ಮೂಟೆ ಹೊತ್ತು ಬೆನ್ನು ಬಾಗಿಸಿಕೊಂಡ ಜೀವಗಳ ಮುಂದೆ ಬಾಗಿ ನಡೆಯಬೇಕನ್ನೋದು ನಮ್ಮ ಸಂಸ್ಕøತಿಯ ಸಾರ. ಇದರ ಫಲವಾಗಿಯೇ ಪ್ರತೀ ಹಂತದಲ್ಲಿಯೂ ಹಿರಿಯರನ್ನು ಗೌರವಿಸೋದು ನಮ್ಮೆಲ್ಲರ ಬದುಕಿನ ಭಾಗವೇ ಆಗಿ ಹೋಗಿದೆ. ಅದೇ ರೀತಿ ಈ ವಿಚಾರದಲ್ಲಿ ನಾವೆಲ್ಲರೂ ಅಚ್ಚರಿಗೊಳ್ಳುವಂಥ ಒಂದಷ್ಟು ರೂಢಿಗತ ವಿಚಾರಗಳು ವಿವಿಧ ದೇಶಗಳಲ್ಲಿಯೂ ಚಾಲ್ತಿಯಲ್ಲಿದೆ. ಉತ್ತರ ಕೊರಿಯಾದಲ್ಲಿ ಹಿರಿಯರನ್ನು ಗೌರವಿಸೋ ಪರಿ ಎಲ್ಲರಿಗೂ ಮಾದರಿಯಂತಿದೆ. ಅಲ್ಲಿ ಯಾವುದೋ ಒಂದು ದಿನವನ್ನ ನಿಗಧಿ ಮಾಡಿಕೊಂಡು ಆವತ್ತು ಮಾತ್ರವೇ ಹಿರೀಕರನ್ನ ಗೌರವಿಸೋ ಭಟ್ಟಂಗಿತನವಿಲ್ಲ. ಅದು ಅವರ ಪ್ರತೀ ಕ್ಷಣದ ಬದುಕಿನ ಭಾಗ. ಅದು ಯಾವ ಪರಿ ಇದೆ ಅನ್ನೋದನ್ನ ಮುಂದಿನ ವಿವರಗಳೇ ತೆರೆದಿಡುತ್ವೆ. ಅಲ್ಲಿನ ಪ್ರತೀ ಮನೆಗಳಲ್ಲಿ ಊಟಕ್ಕೆ ಸಜ್ಜಾಗೋ ರೀತಿಯಲ್ಲಿಯೇ ಹಿರಿಯರಿಗೆ ಸಲ್ಲಿಸೋ ಗೌರವ ಹಾಸು ಹೊಕ್ಕಾಗಿದೆ. ಪ್ರತೀ ಹೊತ್ತಿನ ಊಟದ ಸಂದರ್ಭದಲ್ಲಿಯೂ ಅಲ್ಲಿ ಹಿರಿಯರಿಗೇ ಮೊದಲ ಸ್ಥಾನ. ಮನೆ…
ಕೆಲವೊಮ್ಮೆ ಮನುಷ್ಯರೊಳಗಿನ ಕ್ರಿಯೇಟಿವಿಟಿ ಅಸಾಧ್ಯ ಹುಚ್ಚುತನವಾಗಿ ಅನಾವರಣಗೊಳ್ಳುತ್ತೆ. ಅದರಲ್ಲೊಂದಷ್ಟು ತೀರಾ ವಿಕೃತಿ ಅನ್ನಿಸಿ ವಾಕರಿಕೆ ಹುಟ್ಟುವಂತೆಯೂ ಇರುತ್ವೆ. ಈಗ ವಿವರಿಸ ಹೊರಟಿರೋ ಸ್ಟೋರಿ ಕೂಡಾ ಹೆಚ್ಚೂಕಮ್ಮಿ ಅದೇ ಸಾಲಿಗೆ ಸೇರುವಂಥಾದ್ದು. ಯಾಕಂದ್ರೆ, ತೈವಾನ್‍ನಲ್ಲಿರೋ ಆ ರೆಸ್ಟೋರಾಂಟ್‍ನ ಸ್ವರೂಪ, ರೂಪುರೇಷೆ, ಒಳಾಂಗಣ ಮತ್ತು ಆಹಾರವನ್ನು ಸರ್ವ್ ಮಾಡೋ ರೀತಿಯ ಕಥೆ ಕೇಳಿದ್ರೆ ತಿಂದಿದ್ದೆಲ್ಲವನ್ನೂ ಕಾರಿಕೊಳ್ಳುವಷ್ಟು ಹೇಸಿಗೆ ಹುಟ್ಟಿ ಬಿಡುತ್ತೆ. ಆಹಾರ ಅಂದ್ರೇನೇ ದೈವಸ್ವರೂಪಿ ಎಂಬ ನಂಬಿಕೆ ನಮ್ಮಲ್ಲಿದೆ. ತಿನ್ನೋ ಅನ್ನವನ್ನು ಕಣ್ಣಿಗೊತ್ತಿಕೊಂಡು ಒಳಗಿಳಿಸುವ ಪರಿಪಾಠವೂ ನಮಗೆ ಪರಿಚಿತ. ಅಂತಾದ್ರಲ್ಲಿ ಅದನ್ನು ತಿಂದದ್ದನ್ನೆಲ್ಲ ವಿಸರ್ಜಿಸುವ ಪಾಯಿಖಾನೆಯೊಂದಿಗೆ ಸಮೀಕರಿಸಿದರೆ ಸಿಟ್ಟು ಮತ್ತು ವಾಕರಿಕೆ ಒಟ್ಟೊಟ್ಟಿಗೇ ಹುಟ್ಟುತ್ತೆ. ಆದ್ರೆ ತೈವಾನ್‍ನಲ್ಲಿರೋ ಆ ಪ್ರಸಿದ್ಧ ರೆಸ್ಟೋರಾಂಟ್ ಹುಟ್ಟಿಕೊಂಡಿರೋದೇ ಅಂಥಾ ಥೀಮ್‍ನ ತಳಹದಿಯಲ್ಲಿ. ಅದು ತೈವಾನ್‍ನ ಫೇಮಸ್ ರೆಸ್ಟೋರಾಂಟ್. ಅದರ ಹೆಸರೇ ಮಾಡರ್ನ್ ಟಾಯ್ಲೆಟ್. ನಮ್ಮಲ್ಲಿ ಪಬ್ಲಿಕ್ ಟಾಯ್ಲೆಟ್ಟುಗಳಿವೆಯಲ್ಲಾ? ಹಾಗೆಯೇ ಕಾಣಿಸೋ ಲೋಗೋ ಅದರ ಸೃಷ್ಟಿಕರ್ತನ ಪಾಲಿಗೆ ಭಲೇ ಲಕ್ಕಿ. ಅಂದಹಾಗೆ ಈ ರೆಸ್ಟೋರಾಂಟ್ ಬ್ರ್ಯಾಂಚಿನ ಮೇಲೆ ಬ್ರ್ಯಾಂಚು ತೆರೆದು…
ವರ್ಷಗಳ ಹಿಂದೆ ಭಾರತೀಯ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಅಂತೊಂದು ಅಭಿಯಾನ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದು ಹಾಲಿವುಡ್ಡಿನಿಂದ, ಬಾಲಿವುಡ್ಡನ್ನು ಬಳಸಿ ಬಂದು ಸ್ಯಾಂಡಲ್‍ವುಡ್ಡನ್ನೂ ಸವರಿ ಹೋಗಿತ್ತು. ನಟಿಯರಿಗೆ ಸಿನಿಮಾಗಳಲ್ಲಿ ಅವಕಾಶ ಕೊಟ್ಟು ಮೆತ್ತಗೆ ಮಂಚ ಹತ್ತಿಸಿಕೊಳ್ಳುವ ಖಯಾಲಿ ಎಲ್ಲ ಚಿತ್ರರಂಗದಲ್ಲಿಯೂ ಇದ್ದೇ ಇದೆ. ಹಾಗೆ ಮಂಚಕ್ಕೆ ಕರೆಯೋ ಕಾಮುಕರ ಮುಖವಾಡ ಕಾಸ್ಟಿಂಗ್ ಕೌಚ್ ಮೂಲಕ ಕಳಚಿಕೊಂಡಿತ್ತು. ಇದೀಗ ಆ ಅಭಿಯಾನಕ್ಕೆ ಮತ್ತೆ ಚಾಲನೆ ಸಿಕ್ಕಂತಿದೆ; ಮರಾಠಿ ಚೆಲುವೆ ತೇಜಸ್ವಿನಿ ತೆರೆದಿಟ್ಟಿರುವ ಒಂದಷ್ಟು ವಿಚಾರಗಳ ಮೂಲಕ! ತೇಜಸ್ವಿನಿ ಸದ್ಯ ಮರಾಠಿಯಲ್ಲಿ ಒಂದಷ್ಟು ಬೇಡಿಕೆ ಹೊಂದಿರುವ, ನಾಯಕಿಯಾಗಿ ಮೆರೆದಿದ್ದ ನಟಿ. ಈಕೆ 2009ರ ಆಸುಪಾಸಿನಲ್ಲಿ ನಾಯಕಿಯಾಗಿ ಮರಾಠಿ ಚಿತ್ರರಂಗದಲ್ಲಿ ಪ್ರಚಲಿತಕ್ಕೆ ಬರಲಾರಂಭಿಸಿದ್ದಳು. ಆ ಹೊತ್ತಿನಲ್ಲಿ ನಡೆದಿದ್ದ ಕಹಿ ಘಟನೆಯೊಂದನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾಳೆ. ಆ ಹೊತ್ತಿನಲ್ಲಿ ತೇಜಸ್ವಿನಿ ಪುಣೆಯ ಅಪಾರ್ಟ್‍ಮೆಂಟ್ ಒಂದರಲ್ಲಿ ಬಾಡಿಗೆಗಿದ್ದಳಂತೆ. ಅದರ ಮಾಲೀಕನಾಗಿದ್ದವನು ಓರ್ವ ಕಾರ್ಪೋರೇಟರ್. ಆತ ಸಿನಿಮಾ ನಿರ್ಮಾಣವನ್ನೂ ಮಾಡುತ್ತಿದ್ದ. ಆ ಕಾಲಕ್ಕೆ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದ ತೇಜಸ್ವಿನಿಯ ಮೇಲೆ ಆತನ…
ಗಣಿದಂಧೆಯಲ್ಲಿಯೇ ಅಕ್ರಮಗಳನ್ನು ನಡೆಸುತ್ತಾ ಸಾವಿರಾರು ಕೋಟಿಗಳನ್ನು ಗುಡ್ಡೆ ಹಾಕಿಕೊಂಡು ಮೆರೆದಾಡಿದ್ದವನು ಜನಾರ್ಧನ ರೆಡ್ಡಿ. ಹಾಗೆ ಸಂಪಾದಿಸಿದ ಕಾಸನ್ನು ರಾಜಕಾರಣಕ್ಕೆ ಸುರಿದು, ಮಂತ್ರಿಗಿರಿ ಗಿಟ್ಟಿಸಿಕೊಂಡು ಒಂದಿಡೀ ವ್ಯವಸ್ಥೆಯೇ ಗಣಿಧೂಳಿನಲ್ಲಿ ಉಸಿರುಗಟ್ಟಿದಂಥಾ ವಾತಾವರಣವನ್ನ ಕರ್ನಾಟಕದ ಮಂದಿ ಯಾವತ್ತಿಗೂ ಮರೆಯುವಂತಿಲ್ಲ. ಇಂತಿಪ್ಪ ರೆಡ್ಡಿಯ ಪುತ್ರ ಕಿರೀಟಿಯೀಗ ನಾಯಕನಾಗಿ ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದಾನೆ. ಅಷ್ಟಕ್ಕೂ ಕಿರೀಟಿ ರಂಗಸ್ಥಳ ಪ್ರವೇಶ ಮಾಡಿ ವರ್ಷವಾಗುತ್ತಾ ಬಂದಿದೆ. ಆರಂಭದಲ್ಲಿ ಒಂದಷ್ಟು ಸದ್ದು ಮಾಡಿದ್ದು ಬಿಟ್ಟರೆ, ಆ ನಂತರದಲ್ಲಿ ಯಾವ ಸುದ್ದಿಯೂ ಇರಲಿಲ್ಲ. ಆ ಚಿತ್ರದ ಕಥೆಯೇನಾಯ್ತು? ಕಿರೀಟಿ ಬಂದಷ್ಟೇ ವೇಗವಾಗಿ ಗಾಯಬ್ ಆದನಾ ಅಂತೆಲ್ಲ ಬಹುಶಃ ಯಾರೂ ತಲೆಕೆಡಿಸಿಕೊಂಡಿರಲಿಕ್ಕಿಲ್ಲ. ಆದರೆ, ಇದೀಗ ಏಕಾಏಕಿ ಕಿರೀಟಿಯ ಸಿನಿಮಾ ಮಿಸುಕಾಡಿದೆ! ಖುದ್ದು ಜನಾರ್ಧನ ರೆಡ್ಡಿಯೇ ಮಗನ ಸಿನಿಮಾ ಬಗ್ಗೆ ಒಂದಷ್ಟು ವಿವರಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾನೆ. ಅದರನ್ವಯ ಹೇಳೋದಾದರೆ, ಕಿರೀಟಿ ನಾಯಕನಾಗಿ ನಟಿಸುತ್ತಿರೋ ಜೂನಿಯರ್ ಚಿತ್ರದ ಬಹುಭಾಗದ ಚಿತ್ರೀಕರಣ ಮುಕ್ತಾಯಗೊಂಡಿದೆ. ಗಣಿಧೂಳಿನ ಕಾಸನ್ನು ಯಥೇಚ್ಛವಾಗಿ ಸುರಿದೇ ರೆಡ್ಡಿಗಾರು ಈ ಸಿನಿಮಾವನ್ನು ನಿರ್ಮಾಣ ಮಾಡಿದಂತಿದೆ. ಅದ್ದೂರಿಯಾಗಿ…
ಕನ್ನಡದಲ್ಲಿ ಯಾವ ಪಾತ್ರಕ್ಕೂ ಸೈ ಅನ್ನುತ್ತಾ, ನಾಯಕಿಯಾಗಿ ಗಟ್ಟಿಯಾಗಿ ನೆಲೆಗಾಣಬಹುದಾದ ಪ್ರತಿಭಾನ್ವಿತ ನಟಿಯರಿದ್ದಾರೆ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಆ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳುವಾಕೆ ಅದಿತಿ ಪ್ರಭುದೇವ. ನಾಯಕಿಯಾಗಿ ಮಿಂಚಿದ್ದರೂ, ಹಳ್ಳಿ ಹುಡುಗಿಯ ಗುಣಲಕ್ಷಣಗಳನ್ನು ಇನ್ನೂ ಕಾಪಿಟ್ಟುಕೊಂಡಿರುವ ಅದಿತಿ ಒನ್ಸ್ ಅಪಾನ್ ಎ ಟೈಮ್ ಜಮಾಲಿಗುಡ್ಡ ಅಂತೊಂದು ಚಿತ್ರದ ಮೂಲಕ ಭಾರೀ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಅದಿತಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾಳೆ. ಸಾಂಸಾರಿಕ ಜವಾಬ್ದಾರಿಗಳ ಜೊತೆ ಜೊತೆಗೇ ಸಿನಿಮಾ ಕೆರಿಯರ್ ಅನ್ನೂ ಸಂಭಾಳಿಸಿಕೊಳ್ಳುವ ತೀರ್ಮಾನಕ್ಕೆ ಅದಿತಿ ಬಂದಂತಿದೆ. ಅದರ ಭಾಗವಾಗಿಯೇ ಜಮಾಲಿಗುಡ್ಡ ಈಗ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇತ್ತೀಚೆಗಷ್ಟೇ ಆ ಚಿತ್ರದ ಟ್ರೈಲರ್ ಬಿಡುಗಡೆಗೊಂಡು, ಅದರೊಳಗಿನ ಸಾರ, ಅದಿತಿಯ ಭಿನ್ನ ಗೆಟಪ್ ಕಂಡು ಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದಾರೆ. ಅಂದಹಾಗೆ, ಇದು ಕುಶಾಲ್ ಗೌಡ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ. ಇದರಲ್ಲಿ ಡಾಲಿ ಧನಂಜಯ್ ಕೃಷ್ಣ ಎಂಬ ಪಾತ್ರದ ಮೂಲಕ ವಿಭಿನ್ನ ಗೆಟಪ್ಪಿನಲ್ಲಿ ಮಿಂಚಿದ್ದರೆ, ಅದಿತಿ ಅದಕ್ಕೆ ಸರಿಸಾಟಿಯಾದ ಅವತಾರದಲ್ಲಿ ರುಕ್ಮಿಣಿಯಾಗಿ ಸಾಥ್ ಕೊಟ್ಟಿದ್ದಾರೆÉ. ಸಿನಿಮಾಗಳ ಸಂಖ್ಯೆಗಿಂತಲೂ, ಪಾತ್ರದ…
ನೋವೆಲ್ಲವನ್ನೂ ಎದೆಯಲ್ಲಿಯೇ ಹುಗಿದಿಟ್ಟುಕೊಂಡು ನಗುತ್ತಾ ಬದುಕೋದಿದೆಯಲ್ಲಾ? ಅದು ಸಾಮಾನ್ಯರಿಗೆ ಸಿದ್ಧಿಸೋ ಸಂಗತಿಯೇನಲ್ಲ. ಅದರಲ್ಲೂ ಅಂಥ ನೋವಿಟ್ಟುಕೊಂಡು ನಗಿಸೋದನ್ನೇ ಬದುಕಾಗಿಸಿಕೊಳ್ಳೋದೊಂದು ಸಾಹಸ. ನೀವೇನಾದ್ರೂ ಕಮೇಡಿಯನ್ನುಗಳಾಗಿ ಗೆದ್ದವರ ಬದುಕಿನ ಹಿನ್ನೆಲೆ ಹುಡುಕಿದ್ರೆ ಅಲ್ಲೊಂದು ನೋವಿನ ಕಥೆ ಇದ್ದೇ ಇರುತ್ತೆ. ಈಗ ಹೇಳ ಹೊರಟಿರೋ ಕಥೆ ಕೂಡಾ ಅಂಥದ್ದೆ. ಜಿಮ್ ಕ್ಯಾರಿ ಈ ಕಥೆಯ ನಾಯಕ. ಈತ ಕೆನಡಿಯನ್, ಅಮೆರಿಕನ್ ನಟ. ಇತ್ತೀಚಿನ ದಿನಗಳಲ್ಲಿ ಸ್ಟ್ಯಾಂಡಪ್ ಕಮೆಡಿಯನ್ ಆಗಿಯೂ ಬಲು ವಿಖ್ಯಾತಿ ಗಳಿಸಿಕೊಂಡಿರುವಾತ. ಈವತ್ತಿಗೆ ಆತ ಖ್ಯಾತಿಯ ಉತ್ತುಂಗವೇರಿದ್ದಾನೆ. ಆರ್ಥಿಕವಾಗಿಯೂ ಸಾಕಷ್ಟು ಬಲಾಢ್ಯನಾಗಿದ್ದಾನೆ. ಆದರೆ ಆತನ ಕಾಮಿಡಿ ಪ್ರೋಗ್ರಾಮುಗಳನ್ನು ನೋಡಿದವರ್ಯಾರೂ ಆತ ನಡೆದು ಬಂದು ಕಡು ಕಷ್ಟದ ಹಾದಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಜಗತ್ತಿನ ಅದೃಷ್ಟವಂತ ಮಕ್ಕಳೆಲ್ಲ ಬದುಕನ್ನು ಬೆರಗಿಂದ ನೋಡೋ ಕಾಲದಲ್ಲಿಯೇ ಜಿಮ್ ಪಾಲಿಗೆ ದುರಾದೃಷ್ಟ ವಕ್ಕರಿಸಿಕೊಂಡಿತ್ತು. ಆತನದ್ದು ತೀರಾ ಬಡತನದ ಫ್ಯಾಮಿಲಿ. ಅಪ್ಪ ಹೇಗೋ ಕಷ್ಟಪಟ್ಟು ಒಂದು ಕೆಲಸ ಮಾಡುತ್ತಾ ಸಂಸಾರವನ್ನ ನಿಭಾಯಿಸ್ತಿದ್ದ. ಆದ್ರೆ ಅದೊಂದು ದಿನ ಇದ್ದೊಂದು ಕೆಲಸವೂ ಕೈತಪ್ಪಿ ತಂದೆ ದಿಕ್ಕು…
ಮನುಷ್ಯ ಕೇವಲ ಬುದ್ಧಿವಂತ ಮಾತ್ರವಲ್ಲ, ಧೈರ್ಯವಂತ ಜೀವಿಯಾಗಿಯೂ ಗುರುತಿಸಿಕೊಂಡಿದ್ದಾನೆ. ಯಾವ ಧೈತ್ಯರೇ ಎದುರಾಗಿ ನಿಂತರೂ ಬಡಿದು ಬಿಸಾಡಬಲ್ಲ ಪರಾಕ್ರಮಿಗಳೂ ಮನುಷ್ಯ ಜೀವಿಗಳ ನಡುವಲ್ಲಿದ್ದಾರೆ. ಹಾಗೆ ನಾನಾ ಪರಾಕ್ರಮ ತೋರಿಸುವವರೊಳಗೂ ವಿಚಿತ್ರವಾದ ಭಯಗಳು ತಣ್ಣಗೆ ಕೂತು ಬಿಟ್ಟಿರುತ್ತವೆ. ಮನಃಶಾಸ್ತ್ರ ಈ ವಿಚಾರವನ್ನ ದಾಖಲೆ ಸಮೇತವಾಗಿ ಪ್ರಚುರಪಡಿಸ್ತಾನೆ ಬಂದಿದೆ. ಕೆಲವರಿಗೆ ಎತ್ತರದ ಭಯ. ಮತ್ತೆ ಕೆಲ ಮಂದಿಗೆ ಪಾತಾಳ, ನೀರು ಗಾಳಿ, ಬೆಂಕಿ, ಕ್ರಿಮಿ ಕೀಟಗಳು… ಮನುಷ್ಯ ಹೀಗೆ ಹೆಜ್ಜೆ ಹೆಜ್ಜೆಗೂ ಭಯ ಪಡ್ತಾನೇ ಬದುಕ್ತಿರ್ತಾನೆ. ನೀವು ತೀರಾ ಜಿರಳೆಗಳಿಗೂ ಭಯ ಪಡುವ ಒಂದಷ್ಟು ಮಂದಿಯನ್ನ ನೋಡಿರ್ತೀರಿ. ಆದ್ರೆ ಈ ಜಗತ್ತಲ್ಲಿ ನಿರುಪದ್ರವಿ ತರಕಾರಿಗಳಿಗೂ ಭಯ ಬೀಳೋ ಜನರಿದ್ದಾರೆ, ಅಂಥಾದ್ದೊಂದು ಕಾಯಿಲೆ ಇದೆ ಅಂದ್ರೆ ನಂಬೋದು ತುಸು ಕಷ್ಟವಾದೀತೇನೋ. ಆದ್ರೆ ನಂಬದೆ ವಿಧಿಯಿಲ್ಲ. ಯಾಕಂದ್ರೆ ಲ್ಯಾಚನೋಫೋಭಿಯಾ ಬಾಧಿತ ವ್ಯಕ್ತಿಗಳಿಗೆ ಕೆಲ ತರಕಾರಿಗಳೂ ಕೂಡಾ ಹಾವು, ಹುಳು ಹುಪ್ಪಟೆಗಳಂತೆ ಭಯ ಬೀಳಿಸ್ತಾವಂತೆ. ಪುಟ್ಟ ಮಕ್ಕಳು ಕೆಲ ತರಕಾರಿಗಳನ್ನ ಮುಟ್ಟೋದಿಲ್ಲ. ದೊಡ್ಡವರಿಗೂ ಕೂಡಾ ಆಗಿ ಬರದ ತರಕಾರಿಗಳ…