ನಾವು ಮನುಷ್ಯರನ್ನು ಬಾಧಿಸುವ ಚಿತ್ರ ವಿಚಿತ್ರವಾದ ಕಾಯಿಲೆಗಳನ್ನ ಕಂಡು ಆಗಾಗಾ ಹೌಹಾರ್ತೇವೆ. ದೇಹದೊಳಗೆ ಸಣ್ಣಪುಟ್ಟ ವ್ಯತ್ಯಯಗಳಾದಾಗಲೂ ಅದರ ಬಗ್ಗೆ ವಿಪರೀತ ತಲೆಕೆಡಿಸಿಕೊಳ್ತೇವೆ. ಯಾರನ್ನೋ ಬಾಧಿಸಿದ ಕಾಯಿಲೆ ನಮಗೇ ಅಮರಿಕೊಳ್ಳಬಹುದೇನೋ ಅಂತ ಚಿಂತೆಗೀಡಾಗ್ತೇವೆ. ಅಂಥಾ ಎಲ್ಲ ಭಯ, ಚಿಂತನೆಗಳ ದಾವಾನಲದಂತಿರೋ ನಮ್ಮ ಮನಸಿನೊಳಗಿನ ಕಾಯಿಲೆಗಳ ಬಗ್ಗೆ ನಾವೇ ಕುರುಡಾಗ್ತೇವೆ. ನಿಮಗೇನಾದರೂ ಮಾನಸಿಕವಾಗಿ ಬಾಧಿಸೋ ಭಯ, ಕಾಯಿಲೆಗಳ ಇಂಚಿಂಚು ವಿವರ ಗೊತ್ತಾದ್ರೆ ನಿಜಕ್ಕೂ ಕಸಿವಿಸಿಗೀಡಾಗ್ತೀರಿ. ಮಾನಸಿಕವಾಗಿ ಜರ್ಝರಿತಗೊಂಡ ಮನುಷ್ಯನಿಗೆ ಹುಚ್ಚನ ಪಟ್ಟ ಕಟ್ಟೋ ಜನರಿಗೆ ತಾವೂ ಕೂಡಾ ಅದಕ್ಕೆ ಸಮೀಪವಾಗುವಂಥಾ ನಾನಾ ಭಯ, ಕಾಯಿಲೆಗಳ ಗುಡಾಣವಾಗುತ್ತಿದೆ ಅನ್ನೋದರ ಪರಿವೆಯೇ ಇರೋದಿಲ್ಲ. ನಿಖರವಾಗಿ ನೋಡಿದ್ರೆ ನಾವೆಲ್ಲರೂ ಒಂದಲ್ಲಾ ಒಂದು ರೀತಿಯ ಮಾನಸಿಕ ರೋಗಿಗಳೇ! ಮನಃಶಾಸ್ತ್ರದಲ್ಲಿ ನಾನಾ ಫೋಬಿಯಾಗಳ ಉಲ್ಲೇಖಗಳಿದ್ದಾವೆ. ಅದರಲ್ಲಿ ಒಂದಷ್ಟು ಗುಣ ಲಕ್ಷಣಗಳಿಲ್ಲದ ಮನುಷ್ಯರು ಸಿಗೋದೇ ಡೌಟು. ಕೆಲವರಿಗೆ ನೀರು ಕಂಡ್ರೆ ಭಯ. ಮತ್ತೆ ಕೆಲವರಿಗೆ ಎತ್ತರ, ಪ್ರಪಾತಗಳ ಭಯ. ಇದರಾಚೆಗೆ ಮತ್ತೊಂದಷ್ಟು ಫೋಬಿಯಾಗಳು ಮನುಷ್ಯನ ಬೆಳವಣಿಗೆಯನ್ನೇ ಕುಂಠಿತಗೊಳಿಸ್ತಾವೆ. ಆ ಸಾಲಿನಲ್ಲಿ ಅಲೋಡಕ್ಸಾಫೋಬಿಯಾ ಕೂಡಾ…
Author: Santhosh Bagilagadde
ಬೆಕ್ಕು ಅನೇಕರಿಗೆ ಪ್ರಿಯವಾದ ಮುದ್ದಿನ ಪ್ರಾಣಿ. ಮನೆಯೊಳಗೇ ಅಡ್ಡಾಡಿಕೊಂಡು ಮಡಿಲೇರಿ ಕೂರೋ ಬೆಕ್ಕುಗಳಿರದ ಮನೆ ವಿರಳ. ಬೆಕ್ಕುಗಳಿಗೆ ಸಾಕಿದ ಮನೆಯಲ್ಲಿ ಸಕಲ ಸೌಕರ್ಯಗಳಿದ್ದರೂ ಪಕ್ಕದ ಮನೆಯ ಅಡುಗೆಮನೆ ಜಾಲಾಡಿದರೇನೇ ಸಮಾಧಾನ. ಕೊಂಚ ಕದ್ದು ತಿಂದರೆ ಅದೇನೋ ತೃಪ್ತಿ. ಇಂಥಾ ಬೆಕ್ಕು ಜಾಗತಿಕ ಶೀತಲ ಸಮರದ ಕಾಲಘಟ್ಟದಲ್ಲಿ ಪತ್ತೇದಾರಿಕೆ ನಡೆಸಿತ್ತೆಂದರೆ ನಂಬ್ತೀರಾ? ಅದನ್ನ ನಂಬದೇ ವಿಧಿಯಿಲ್ಲ. ಈಗಲೂ ಯುದ್ಧ ಕಾಲದಲ್ಲಿ ಶತ್ರು ದೇಶಗಳ ಮೇಲೆ ಕಣ್ಣಿಡಲು ಪಾರಿವಾಳದಂಥ ಪಕ್ಷಿಗಳನ್ನ ಬಳಸೋ ಪರಿಪಾಠವಿದೆ. ಆದರೆ ಅಮೆರಿಕದ ಬೇಹುಗಾರಿಕಾ ಅಲಾಖೆಯ ಅಧಿಕಾರಿಗಳು ಶೀತಲ ಸಮರದ ಕಾಲದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಯಪ್ರವೃತ್ತರಾಗಿದ್ದರು. ಬೆಕ್ಕುಗಳ ಗುಣ ಲಕ್ಷಣ ಅರಿತಿದ್ದ ಅಧಿಕಾರಿಗಳು ಶತ್ರುಗಳ ಕಾರ್ಯ ಯೋಜನೆ ಅರಿಯಲು ಬೆಕ್ಕನ್ನ ಬಳಸಿಕೊಳ್ಳಲು ಪ್ರಯತ್ನಿಸಿದ್ದರು. ಶತ್ರು ಪಾಳೆಯದವರು ಗುಪ್ತ ಮಾತುಕತೆ ನಡೆಸೋದನ್ನು ಕದ್ದಾಲಿಸಲು ಬೆಕ್ಕನ್ನ ಪಣಕ್ಕಿಟ್ಟಿದ್ದರು. ಬೆಕ್ಕಿನ ಕಿವಿಗೆ ರೆಕಾರ್ಡರ್ ಅಳವಡಿಸಿ ಶತ್ರುಗಳ ಸುತ್ತ ಬೀಟು ಹೊಡೆಯುವಂಥಾ ವ್ಯವಸ್ಥೆ ಮಾಡಿದ್ದರಂತೆ. ಒಂದು ಬೆಕ್ಕಿನ ಕಿವಿಗೆ ಸಾಧನ ಅಳವಡಿಸಿ ಅದಕ್ಕೆ ತಯಿಂಗಳುಗಟ್ಟಲೆ…
ನೀವೇನಾದರೂ ಕೊಂಚ ಗ್ರಾಮೀಣ ಪ್ರದೇಶದವರಾಗಿದ್ದರೆ ಕಣಜನ ಹುಳುವಿನ ಪರಿಚಯವಿರುತ್ತೆ. ಪ್ರದೇಶದಿಂದ ಪ್ರದೇಶಕ್ಕೆ ಇದರ ಹೆಸರು ಬದಲಾದೀತೇನೋ. ಆದ್ರೆ ಅದರ ದಾಳಿಯ ಭಯ ಮಾತ್ರ ಎಲ್ಲ ಕಡೆಯೂ ಅಷ್ಟೇ ತೀವ್ರವಾಗಿರುತ್ತೆ. ಕೊಂಚ ಕಾಡಿನ ಅಂಚಿನಲ್ಲಿರೋ ಕಣಜನ ಹುಳುವಿನ ದಾಳಿ ನಿಜಕ್ಕೂ ಭೀಕರವಾಗಿರುತ್ತೆ. ತಲೆಗೇನಾದರೂ ಐದಾರು ಹುಳ ಚುಚ್ಚಿದರೆ ಮನುಷ್ಯ ಸತ್ತೇಹೋಗಿ ಬಿಡ್ತಾನೆ. ಜೇನು ಹುಳಗಳಿಗಿಂತ ತುಸು ದೊಡ್ಡ ಗಾತ್ರ ಕಣಜನ ಹುಳುಗಳದ್ದು. ಜೇನು ಹುಳುಗಳಿರೋ ಪ್ರದೇಶದಲ್ಲಿ ಇವುಗಳ ಹಾಜರಿ ಇರುತ್ತೆ. ಜೇನು ಸಾಕಣೆ ಮಾಡುವಲ್ಲಿಯಂತೂ ಇವು ಇದ್ದೇ ಇರುತ್ತವೆ. ಜೇನು ನೊಣಗಳನ್ನ ಕೊಂದು ಮಕರಂದ ಅಪಹರಿಸುವಲ್ಲಿಯೂ ಕಣಜಗಳದ್ದು ಎತ್ತಿದ ಕೈ. ಇಂಥಾ ಕಣಜಗಳು ಯಾವುದೇ ಪ್ರಚೋದನೆ ಇಲ್ಲದೆಯೂ ಮನುಷ್ಯರ ಮೇಲೆ ದಾಳಿ ಮಾಡಿ ಬಿಡುತ್ತವೆ. ಜೇನು ಹುಳುಗಳಾದರೆ ಕೆಣಕಿದರೆ ಮಾತ್ರವೇ ಆತ್ಮರಕ್ಷಣೆಗೆ ದಾಳಿ ಮಾಡುತ್ವೆ. ಆದ್ರೆ ಈ ಕಣಜನ ಹುಳುಗಳು ಮಾತ್ರ ಅದೇಕೆ ಪ್ರಚೋದನೆ ಇಲ್ಲದೆ ದಾಳಿ ಮಾಡುತ್ವೆ ಅನ್ನೋದು ಗ್ರಾಮೀಣರನ್ನ ಕಾಡೋ ಪ್ರಶ್ನೆ. ಅದಕ್ಕೆ ಉತ್ತರವಾಗಿ ನಿಲ್ಲೋದು ಎಣ್ಣೆ ಏಟು. ಅರೇ…
ಹಾರರ್ ಜಾನರಿನ ಚಿತ್ರವೆಂದಾಕ್ಷಣ ಸಹಜವಾಗಿಯೇ ಪ್ರೇಕ್ಷಕರು ಕಣ್ಣರಳಿಸುತ್ತಾರೆ. ಅದರಲ್ಲಿಯೂ ಹಲವಾರು ವಿಶೇಷತೆಗಳನ್ನೊಳಗೊಂಡಿರುವ, ಪ್ರಯೋಗಾತ್ಮಕ ಗುಣಗಳಿರುವ, ತಾಂತ್ರಿಕ ಶ್ರೀಮಂತಿಕೆಯಿಂದ ಮೈ ಕೈ ತುಂಬಿಕೊಂಡಿರುವ ಚಿತ್ರವೆಂದ ಮೇಲೆ ಅದರತ್ತ ಪ್ರೇಕ್ಷಕರು ಆರ‍್ಷಿತರಾಗದಿರಲು ಸಾಧ್ಯವೇ? ಆ ದಿಸೆಯಲ್ಲಿಯೇ ಸಮಸ್ತ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿರುವ ಚಿತ್ರ ಸ್ಪೂಕಿ ಕಾಲೇಜ್. ಎಫ್‌ಎಂ ಜಾಕಿಯಾಗಿದ್ದುಕೊಂಡು, ಭಿನ್ನ ಅಭಿರುಚಿಗಳನ್ನೊಳಗೊಂಡಿರುವ ಭರತ್ ಜೆ ನಿರ‍್ದೇಶನದ ಈ ಚಿತ್ರವೀಗ ಟ್ರೈಲರ್ ಮೂಲಕ ಟಾಕ್ ಕ್ರಿಯೇಟ್ ಮಾಡಿದೆ. ಹೀಗೆ ಎಲ್ಲ ವರ್ಗದ ಪ್ರೆಕ್ಷಕರ ಕುತೂಹಲದ ಕಿನಾರೆಯಲ್ಲಿ ಲಂಗುರು ಹಾಕುವಂತೆ ಮಾಡಿದ ೀ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ .ಬಿಡುಗಡೆಗೊಂಡ ಕ್ಷಣದಿಂದಲೇ ಈ ಟ್ರೈಲರ್ ಗೆ ಹೆಚ್ಚೆಚ್ಚು ವೀಕ್ಷಣೆಗಳು ಸಿಗುತ್ತಿವೆ. ಸಾಮಾಜಿಕ ಜಾಲತಾಣವೂ ಸೇರಿದಂತೆ ಎಲ್ಲಡೆಯಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ರಂಗಿತರಂಗದ ನಂತರದಲ್ಲಿ ಗಟ್ಟಿ ಕಥೆ ಹೊಂದಿರುವ ಹಾರರ್ ಚಿತ್ರ ಅಂತೆಲ್ಲ ಪ್ರೇಕ್ಷಕ ವಲಯದಲ್ಲಿಯೇ ಮಾತುಗಳು ಹರಿದಾಡುತ್ತಿದೆ. ಅಷ್ಟರ ಮಟ್ಟಿಗೆ ಈ ಟೀಸರ್ ಪರಿಣಾಮಕಾರಿಯಾಗಿದೆ. ಹಾರರ್ ಸಿನಿಮಾಗಳೆಂದರೆ ಬರೀ ಭಯ ಬೀಳಿಸೋದಷ್ಟೇ ಎಂಬಂತೆ ಅನೇಕರು…
ನೀವೇನಾದ್ರೂ ಸರಿರಾತ್ರಿಯವರೆಗೂ ಕೆಲಸ ಮಾಡೋ ರೂಢಿಯಿಟ್ಟುಕೊಂಡಿದ್ರೆ ನಿಮ್ಮನ್ನ ಥರ ಥರದ ಗೊಂದಲಗಳು ಮುತ್ತಿಕೊಂಡಿರುತ್ವೆ. ಯಾಕಂದ್ರೆ ಬೆಳಗ್ಗೆ ಬೇಗನೆ ಏಳಲಾರದ ಸ್ಥಿತಿ ಒಟಾರೆ ಬದುಕಿನ ಟೈಂ ಟೇಬಲ್ಲನ್ನೇ ಅದಲು ಬದಲು ಮಾಡಿರತ್ತೆ. ಯಾಕಂದ್ರೆ ನಮ್ಮಲ್ಲಿ ಬೆಳಗ್ಗೆ ಬೇಗನೆದ್ದು ದಿನಚರಿ ಆರಂಭಿಸೋದು ಜೀವನ ಕ್ರಮವಾಗಿ ಬಿಟ್ಟಿದೆ. ದಿನಾ ಬೆಳಗ್ಗೆ ಸೂರ್ಯೋದಯಕ್ಕಿಂತಲೂ ಮುಂಚೆ ಏಳೋದು ಸಾತ್ವಿಕ ವಿದ್ಯಮಾನ ಅಂತಲೂ ಬಿಂಬಿತವಾಗಿದೆ. ಇನ್ನುಳಿದಂತೆ ಅಧ್ಯಾತ್ಮಿಕವಾಗಿಯೂ ಬೆಳಗ್ಗೆ ಬೇಗನೆ ಏಳೋದರ ಮಹತ್ವದ ಬಗ್ಗೆ ಮಣಗಟ್ಟಲೆ ವಿವರಣೆಗಳಿದ್ದಾವೆ. ಆದ್ರೆ ರಾತ್ರಿ ಕೆಲಸದ ಗುಂಗು ಹತ್ತಿಸಿಕೊಂಡವರಿಗೆ ಬದುಕಲ್ಲೇನೋ ಅಮೂಲ್ಯ ಕ್ಷಣಗಳು ಮಿಸ್ ಆದಂತೆ ಭಾಸವಾಗುತ್ತಿರುತ್ತೆ. ಬೆಳಗಿನ ಆ ಸ್ಫಟಿಕದಂಥಾ ವಾತಾವರಣಕ್ಕೆ ಕಣ್ತೆರೆಯುವ ಮುದ, ಎಳೇಯ ಸೂರ್ಯ ರಶ್ಮಿಗಳ ಹಿಮ್ಮೇಳದ ಆಹ್ಲಾದಗಳನ್ನೆಲ್ಲ ಮಿಸ್ ಮಾಡ್ಕೋತಿದ್ದೀವೇನೋ ಅನ್ನೋ ಭಾವ ಬಿಡದೇ ಕಾಡುತ್ತಿರುತ್ತೆ. ಇದು ಮಾನಸಿಕ ತೊಳಲಾಟವಾದ್ರೆ, ಮನೆಮಂದಿಯಿಂದ ದಿನಾ ಲೇಟಾಗಿ ಏಳ್ತಾರೆನ್ನೋ ಕಂಪ್ಲೇಟಂತೂ ಇದ್ದೇ ಇರುತ್ತೆ. ಇಂಥಾ ಸಂದರ್ಭದಲ್ಲಿ ಬದುಕು ಗೂಬೆಗಿಂತಲೂ ಕಡೆಯಾಗ್ತೇನೋ ಅಂತ ಕೊರಗ್ತಿರೋರಿಗೆ ಇಲ್ಲೊಂದು ಶುಭ ಸುದ್ದಿಯಿದೆ. ಬೆಳಗ್ಗೆ ಬೇಗನೆದ್ದು ಮೈ…
ಮನಸಿಗೆ ಘಾಸಿಯಾದಾಗ, ದೊಡ್ಡ ಮಟ್ಟದಲ್ಲಿ ಪೆಟ್ಟುಗಳು ಬಿದ್ದಾಗ, ಸೋತು ಕೂತಾಗ ಅದೆಂಥಾ ಗಟ್ಟಿ ಆಸಾಮಿಗಳಾದ್ರೂ ಅತ್ತು ಬಿಡ್ತಾರೆ. ಅಂಥಾ ಘಳಿಗೆಯಲ್ಲಿ ಒಳಗಿನ ಬೇಗುದಿಗಳೆಲ್ಲವೂ ಧ್ರವ ರೂಪ ಧರಿಸಿ ಕಣ್ಣೀರಾಗಿ ಬಸಿದು ಹೋಯ್ತೇನೋ ಎಂಬಂಥ ನಿರಾಳ ಭಾವ ಆವರಿಸುತ್ತೆ. ಇದು ಎಲ್ಲರಿಗೂ ಬದುಕಿನ ಒಂದಲ್ಲ ಒಂದು ಘಟ್ಟದಲ್ಲಿ ಅರಿವಿಗೆ ಬರೋ ಸಾರ್ವತ್ರಿಕ ಸತ್ಯ. ಆದ್ರೆ ಅದೇಕೋ ಹೀಗೆ ಹಗುರಾಗಿಸೋ ಅಳುವಿಗೆ ಬಲಹೀನತೆಯ ಬಣ್ಣ ಸವರಲಾಗಿದೆ. ಆದ್ದರಿಂದಲೇ ಜನ ಅಳುವನ್ನು ಮರೆಮಾಚಿ ಗಟ್ಟಿಗರೆಂಬ ಮುಖವಾಡ ಧರಿಸಿ ಬದುಕುವಂತಾಗಿದೆ. ಆದ್ರೆ ಅಳುವೆಂಬುದು ಬಲಹೀನತೆಯಲ್ಲ; ಅದು ಎಂಥಾ ನೋವಿಗೂ ಮದ್ದಾಗಬಲ್ಲ ಸಂಜೀವಿನಿ ಅನ್ನೋದನ್ನು ಸಂಶೋಧನೆಗಳೇ ಸಾಬೀತುಪಡಿಸಿವೆ. ಅಷ್ಟಕ್ಕೂ ಅತ್ತರೆ ನಿರಾಳವಾಗುತ್ತೆಂಬುದನ್ನ ಜನರಿಗೆ ಪರಿಚಯಿಸೋದಕ್ಕೆ ಯಾವ ರಿಸರ್ಚುಗಳೂ ಬೇಕಾಗಿಲ್ಲ. ಪ್ರತಿಯೊಬ್ಬರಿಗೂ ಅನುಭವ ಜನ್ಯವಾಗಿಯೇ ಅದು ಅರಿವಿಗೆ ಬಂದಿರುತ್ತೆ. ಆದರೂ ಈ ಬಗ್ಗೆ ಇದುವರೆಗೂ ವೈಜ್ಞಾನಿಕ ತಳಹದಿಯಲ್ಲಿ ಒಂದಷ್ಟು ಸಂಶೋಧನೆಗಳು ನಡೆದಿವೆ. ಅದೆಲ್ಲವೂ ಅಳು ನಗುವನ್ನೇ ಮೀರಿಸುವ ಸಂಜೀವಿನಿ ಅನ್ನೋದನ್ನ ಸಾರಿ ಹೇಳಿವೆ. ತೀರಾ ನೋವಾದಾಗ ನಾವು ಪೈನ್ ಕಿಲ್ಲರ್…
ಎಲ್ಲಿ ಮಡಿವಂತಿಕೆ ಅಧಿಕವಾಗಿರುತ್ತೋ ಅಲ್ಲಿಯೇ ನಾನಾ ಬಯಕೆಗಳು ಥರ ಥರದ ಮುಖವಾಡ ತೊಟ್ಟು ಕೂತಿರುತ್ವೆ. ಭಾರತದಲ್ಲಿಯಂತೂ ನಾನಾ ವಿಚಾರಗಳಲ್ಲಿ ಇಂಥಾ ಮಡಿವಂತಿಕೆ ತೀವ್ರವಾಗಿದೆ. ಹಾಗಿರುವಾಗ ಕಾಮದ ಬಗ್ಗೆ ಇಲ್ಲಿ ಬಿಡು ಬೀಸಾಗಿ ಮಾತಾಡೋದು ಕೊಂಚ ಕಷ್ಟ. ಆದ್ರೆ ಜನಸಂಖ್ಯೆ ಮಾತ್ರ ಇಡೀ ವಿಶ್ವಕ್ಕೇ ಸೆಡ್ಡು ಹೊಡೆಯುವಂತೆ ಬೆಳೆಯುತ್ತಲೇ ಇದೆ. ಇದರಾಚೆಗೆ ಮೈಥುನದ ಬಗ್ಗೆ ಅತೀವ ಆಸಕ್ತಿ ಹೊಂದಿರೋ ಮಂದಿಯ ಪಾಲಿಗೆ ಇತ್ತೀಚಿನ ದಿನಗಳಲ್ಲಿ ನೀಲಿ ಚಿತ್ರಗಳು ವರದಾನವಾಗಿವೆ. ಇಂಥಾ ನೀಲಿ ಚಿತ್ರಗಳನ್ನ ಹುಕಾಡಿ ನೋಡೋ ದೇಶಗಳ ಲಿಸ್ಟಿನಲ್ಲಿ ನಮಗೂ ಅಗ್ರ ಸ್ಥಾನವಿದೆ. ಅದರಲ್ಲಿ ಲಿಂಗಾಧಾರಿತ ಸರ್ವೆಗಳು ನಡೆದಾಗ ಹೆಂಗಳೆಯ ಪಾಲೂ ಮಹತ್ತರವಾಗಿರೋ ವಿಚಾರ ಬಯಲಾಗಿದೆ. ಅದರರ್ಥ ನೀಲಿ ಚಿತ್ರಗಳತ್ತ ವಯೋಮಾನದ ಹಂಗಿಲ್ಲದೆ ಜನ ವಾಲಿಕೊಂಡಿದ್ದಾರನ್ನೋದು. ಹೀಗೆ ನೀಲಿ ಚಿತ್ರಗಳನ್ನ ನೋಡೋದನ್ನೇ ಚಟವಾಗಿಸಿಕೊಂಡರೆ ಅದರಿಂದ ಮನೋ ದೈಹಿಕವಾಗಿ ಒಂದಷ್ಟು ಅಡ್ಡಪರಿಣಾಮಗಳಾಗುತ್ತವೆ. ಹಾಗಂತ ನೀಲಿ ಚಿತ್ರಗಳಿಂದ ಮನಸಿಗೆ, ದೇಹಕ್ಕೆ ಮಾತ್ರವೇ ಪರಿಣಾಮವಾಗುತ್ತೆ ಅಂದುಕೊಳ್ಳುವಂತಿಲ್ಲ. ಅದರಿಂದ ನಿಮ್ಮ ಮೊಬೈಲು, ಕಂಪ್ಯೂಟರ್, ಲ್ಯಾಪ್‍ಟಾಪ್‍ಗಳು ವೈರಸ್ ದಾಳಿಗೀಡಾಗಬಹುದು. ನಿಮ್ಮ…
ಜನ ಸಮುದಾಯದ ನಡುವೆ ಚಿತ್ರವಿಚಿತ್ರವಾದ ನಂಬಿಕೆಗಳು ಬೇರಿಳಿಸಿಕೊಂಡಿವೆ. ಅವುಗಳಲ್ಲಿ ಕೆಲವಂತೂ ಆಳವಾಗಿ ಆಲೋಚನೆಗೆ ಹಚ್ಚುತ್ತವೆ. ಭಾವುಕತೆ ಬೆರೆತ ರೂಢಿ, ಆಚರಣೆಗಳಂತೂ ವಿಶ್ವಾದ್ಯಂತ ಹಬ್ಬಿಕೊಂಡಿವೆ. ಈ ಜಗತ್ತಿನ ನಾನಾ ದೇಶಗಳಲ್ಲಿ ಬೀಡು ಬಿಟ್ಟಿರೋ ಬುಡಕಟ್ಟು ಜನಾಂಗದಲ್ಲಿ ಹಾಸುಹೊಕ್ಕಾಗಿರೋ ಆಚರಣೆಗಳಂತೂ ತೀರಾ ವಿಚಿತ್ರವಾಗಿವೆ. ಆ ಮುಗ್ಧ ಜನರ ನಂಬಿಕೆ, ಆಚರಣೆಗಳು ನಾಗರಿಕ ಸಮುದಾಯವನ್ನು ತಬ್ಬಿಬ್ಬುಗೊಳಿಸುವಂತಿವೆ. ಅಂಥಾದ್ದೇ ಒಂದು ನಂಬಿಕೆ, ಸಂಪ್ರದಾಯ ತೋರಾಜನ್ ಬುಡಕಟ್ಟು ಸಮುದಾಯದಲ್ಲಿ ಚಾಲ್ತಿಯಲ್ಲಿದೆ. ಈ ಸಮುದಾಯದಲ್ಲಿ ಹಸುಗೂಸುಗಳು ಮರಣ ಹೊಂದಿದಾಗ ಅವುಗಳ ಅಂತ್ಯ ಸಂಸ್ಕಾರ ಮಾಡೋ ವಿಧಾನವೇ ವಿಚಿತ್ರ. ಸಾಮಾನ್ಯವಾಗಿ ಎಳೇ ಕಂದಮ್ಮಗಳು ಅಸನೀಗಿಸರೆ ಮಣ್ಣು ಮಾಡುವ ಸಂಪ್ರದಾಯ ಎಲ್ಲೆಡೆಯಲ್ಲಿದೆ. ಆದ್ರೆ ತೋರಾನ್ನಿಯರು ಮಾತ್ರ ಸತ್ತ ಕೂಸನ್ನು ನಿರ್ಧಿಷ್ಟವಾದ ಬೃಹತ್ ಮರವೊಂದರ ಪೊಟರೆಯಲ್ಲಿಟ್ಟು ಅದಕ್ಕೆ ಕಟ್ಟಿಗೆಯ ಬಾಗಿಲಿನಿಂದ ಮುಚ್ಚಿಗೆ ಮಾಡೋ ಸಂಪ್ರದಾಯವನ್ನ ಪರಿ ಪಾಲಿಸಿಕೊಂಡು ಬಂದಿದ್ದಾರೆ. ಆರು ತಿಂಗಳೊಳಗಿನ, ಇನ್ನೂ ಹಲ್ಲು ಮೂಡದ ಮಕ್ಕಳು ಸತ್ತರೆ ಅವುಗಳ ಕಳೇಬರವನ್ನು ಟರ್ರಾ ಎಂಬ ಜಾತಿಯ ಮರದ ಪೊಟರೆಯಲ್ಲಿಟ್ಟು ಸಂಸ್ಕಾರ ಮಾಡಲಾಗುತ್ತೆ. ಟರ್ರಾ ಅನ್ನೋದು…
ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸಿದೆ. ಈ ಹೊತ್ತಿನಲ್ಲಿ ರಾಜಕೀಯ ಪಡಸಾಲೆಯ ತುಂಬಾ ನಾನಾ ಲಾಬಿಗಳು, ಟಿಕೇಟು ಗಿಟ್ಟಿಸುವ ಪೈಪೋಟಿಗಳೆಲ್ಲ ಚಾಲ್ತಿಗೆ ಬಂದಿವೆ. ಇಂಥಾ ಸಮಯದಲ್ಲಿ ಬೇರೆ ಬೇರೆ ಸೋಗಿನಲ್ಲಿದ್ದುಕೊಂಡು, ಎಮ್ಮೆಲ್ಲೆ ಆಗುವ ಕನಸಿಟ್ಟುಕೊಂಡಿರುವ ಒಂದಷ್ಟು ಮಂದಿ ನಾನಾ ಸ್ವರೂಪದಲ್ಲಿ ಲಗಾಟಿ ಹೊಡೆಯಲಾರಂಭಿಸಿದ್ದಾರೆ. ಅಂಥಾ ಗುಪ್ತ ಕ್ಯಾಂಡಿಡೇಟುಗಳಲ್ಲಿ ಕೆಲವರು ಸಮಾನತೆ ಅಂತೆಲ್ಲ ಬೊಂಬಡಾ ಬಜಾಯಿಸುತ್ತಿದ್ದಾರೆ. ಮತ್ತೆ ಕೆಲ ಮಂದಿ ದೇಶಪ್ರೇಮ, ಸಂಸ್ಕøತಿ ಎಂಬಿತ್ಯಾದಿ ಸವಕಲು ಸರಕುಗಳೊಂದಿಗೆ ಅಖಾಡಕ್ಕಿಳಿದಿದ್ದಾರೆ. ಹೊಸ ವರ್ಷದ ಆಸುಪಾಸಿನಲ್ಲಿ ಏಕಾಏಕಿ ಕೇಸರಿ ಶಾಲು ಹೊದ್ದು ಪಾದಯಾತ್ರೆ ಆರಂಭಿಸಿದ್ದ ನಟಿ, ನಿರ್ದೇಶಕಿ ರೂಪಾ ಅಯ್ಯರ್ ಕೂಡಾ ಆ ಸಾಲಿಗೆ ಸೇರಿಕೊಂಡಿರುವ ಕುರುಹುಗಳು ಸ್ಪಷ್ಟವಾಗಿಯೇ ಗೋಚರಿಸಲಾರಂಭಿಸಿವೆ! ಅಷ್ಟಕ್ಕೂ ದೇಶಪ್ರೇಮವೆಂಬುದು ರಾಜಕೀಯ ಸರಕಾಗಿ ಯಾವುದೋ ಕಾಲವಾಗಿದೆ. ದೇಶಭಕ್ತಿಯನ್ನು ಒಂದಷ್ಟು ಮಂದಿ ಗುತ್ತಿಗೆ ಹಿಡಿದವರಂತಾಡುತ್ತಿದ್ದಾರೆ. ಈಗೊಂದಷ್ಟು ಕಾಲದಿಂದ ಅಂಥಾ ಪಟಾಲಮ್ಮಿನ ಪರವಾಗಿ ಬ್ಯಾಟಿಂಗು ನಡೆಸುತ್ತಾ, ಸುದ್ದಿ ಕೇಂದ್ರದಲ್ಲಿದ್ದಾಕೆ ರೂಪಾ ಅಯ್ಯರ್. ತನ್ನನ್ನು ತಾನು ಭರತನಾಟ್ಯ ಕಲಾವಿದೆಯಾಗಿ, ನಿರ್ದೇಶಕಿಯಾಗಿ, ನಟಿಯಾಗಿ ಗುರುತಿಸಿಕೊಂಡಿರುವ ರೂಪಾ ಅಯ್ಯರ್ ಬಗ್ಗೆ ಗಾಂಧಿನಗರದಲ್ಲಿ…
ಭೂಭಾಗಗಳು ಯಾವುದೇ ಇದ್ದರೂ ಕರೆಯದೇ ಬರೋ ಅತಿಥಿಗಳಂತಿರುವವು ಇಲಿಗಳು. ಯಾವ ಮಾಯಕದಲ್ಲೋ ಮನೆ ಸೇರಿಕೊಂಡು ಎಲ್ಲವನ್ನೂ ಹರುಕುಪರುಕು ಮಾಡೋ ಕಲೆ ಇಲಿಗಳಿಗೆ ಸ್ವಂತವಾಗಿದೆ. ಹೀಗೆ ಇಲಿ ಕಾಟ ಹೆಚ್ಚಾದಾಗ ಬೋನಿಟ್ಟು ಬಲಿ ಹಾಕೋ ಪರಿಪಾಠ ಬೆಳೆದು ಬಂದಿದೆ. ಆದರೆ, ಅಂಥಾ ಇಲಿಗಳ ಸೀನಿಯಾರಿಟಿಯ ಬಗ್ಗೆ ನಾವ್ಯಾರೂ ಅಪ್ಪಿತಪ್ಪಿಯೂ ಆಲೋಚಿಸೋದಿಲ್ಲ. ನೀವು ರೊಚ್ಚಿಗೆದ್ದು ಬೋನಿಗೆ ತುಂಬಿಕೊಂಡ ಇಲಿಯ ವಯಸ್ಸು ಎಷ್ಟಿರಬಹುದಂತ ಯಾವತ್ತಾದ್ರೂ ಯೋಚ್ಸಿದ್ರಾ? ಹೀಗೊಂದು ಆಲೋಚನೆ ಬರೋದು ಜೀವ ವಿಜ್ಞಾನಿಗಳಿಗೆ ಮಾತ್ರವೇನೋ. ಪ್ರತೀ ಜೀವಿಗಳ ಹುಟ್ಟಿನ ಮೂಲ, ಆಯಸ್ಸು, ಜೀವನ ಕ್ರಮಗಳ ಮೇಲೆ ಅವರೆಲ್ಲ ಸದಾ ಕಣ್ಣಿಟ್ಟಿರ್ತಾರೆ. ಆ ಕಾರಣದಿಂದಲೇ ಜೀವ ಜಗತ್ತಿನ ಒಂದಷ್ಟು ವಿವರಗಳು ಜಾಹೀರಾಗಿವೆ. ಹೀಗೆಯೇ ಇಲಿಗಳ ಬಗ್ಗೆ ಅಧ್ಯಯನ ನಡೆಸ್ತಿದ್ದ ವಿಜ್ಞಾನಿಯೊಬ್ರು 2016ರಲ್ಲಿ ಒಂದು ಇಲಿಯನ್ನ ಬೋನಿಗೆ ಕೆಡವಿಕೊಂಡಿದ್ರು. ಹಾಗೆ ಬೋನು ಸೇರಿದ ಇಲಿಯ ಪೂರ್ವಾಪರಗಳು ನಿಜಕ್ಕೂ ಇಂಟರೆಸ್ಟಿಂಗ್ ಆಗಿವೆ. ಆ ಇಲಿ ವಯಸ್ಸಾದಂತೆ ಕಂಡ್ರೂ ಆಕ್ಟೀವ್ ಆಗಿತ್ತು. ಯಾವ ನಖರಾವನ್ನೂ ಮಾಡದೆ ಸಲೀಸಾಗಿಯೇ ಬೋನಿಗೆ ಬಿದ್ದಿತ್ತು. ಆದ್ರೆ…