ಶೀತಲ್ ಶೆಟ್ಟಿ ನಿರ್ದೇಶನದ ಚೊಚ್ಚಲ ಚಿತ್ರ ವಿಂಡೋ ಸೀಟ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಒಂದು ಕಾಲದಲ್ಲಿ ಟಿವಿ೯ ನಿರೂಪಕಿಯಾಗಿದ್ದುಕೊಂಡು ಸ್ಪಷ್ಟ ಕನ್ನಡದ ಮೂಲಕವೇ ಎಲ್ಲರ ಮನಗೆದ್ದಿದ್ದ ಶೀತಲ್, ಇದೀಗ ನಿರ್ದೇಶಕಿಯಾಗಿಯೂ ನೆಲೆ ಕಂಡುಕೊಳ್ಳುವ ಸನ್ನಾಹದಲ್ಲಿದ್ದಾರೆ. ಹಾಗೆ ನೋಡಿದರೆ ಕನ್ನಡದಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ತೀರಾ ಕಡಿಮೆ ಇದೆ. ಆ ಸಾಲಿನಲ್ಲಿ ಶೀತಲ್ ಭದ್ರವಾಗಿ ನೆಲೆ ಕಂಡುಕೊಳ್ಳುವ ಮುನ್ಸೂಚನೆ ಈಗಾಗಲೇ ಸಿಕ್ಕಿ ಬಿಟ್ಟಿದೆ. ಟ್ರೈಲರ್, ಟೀಸರ್ಗಳ ಮೂಲಕ ವಿಂಡೋ ಸೀಟ್ ಒಂದು ವಿಭಿನ್ನ ಚಿತ್ರವೆಂಬ ಸುಳಿವು ಈಗಾಗಲೇ ಎಲ್ಲರಿಗೂ ಸಿಕ್ಕಿದೆ. ಅತ್ತ ಪ್ರೀಮಿಯರ್ ಶೋಗೆ ಸಿಕ್ಕಿರುವ ಭರಪೂರ ಪ್ರತಿಕ್ರಿಯೆ, ಇತ್ತ ಪ್ರೇಕ್ಷಕ ವಲಯದಲ್ಲಿ ಮಿರುಗುತ್ತಿರುವ ಗಾಢ ನಿರೀಕ್ಷೆಗಳೆಲ್ಲವೂ ಸೇರಿಕೊಂಡು ನಿರ್ದೇಶಕಿಯಾಗಿ ಶೀತಲ್ ಹಾದಿಯನ್ನು ಸುಗಮಗೊಳಿಸುವಂಥಾ ವಾತಾವರಣವಿದೆ. ಈ ಸಿನಿಮಾ ಮೂಲಕ ಶೀತಲ್ ಶೆಟ್ಟಿ ನಿಜಕ್ಕೂ ಪ್ರೇಕ್ಷಕರಿಗೆ ಕೊರೋನಾ ಕಾಲದಲ್ಲೊಂದು ಸರ್ಪ್ರೈಸ್ ಕೊಟ್ಟಿದ್ದರು. ೨೦೨೦ರ ಸುಮಾರಿಗೆ ಆರಂಭವಾಗಿದ್ದ ಈ ಚಿತ್ರ ಸಾಕಷ್ಟು ಅಡತಡೆಗಳನ್ನು ಮೀರಿಕೊಂಡು ಚಿತ್ರೀಕರಣ ಮುಗಿಸಿಕೊಂಡಿದ್ದೇ ಒಂದು ಸಾಹಸ. ಓರ್ವ ನಿರ್ದೇಶಕಿಯಾಗಿ ಮೊದಲ…