honeybee: ಜೇನು ತುಪ್ಪ (honey ಅಂದಾಕ್ಷಣ ಬಾಯಲ್ಲಿ ನೀರೂರಿಸದಿರೋರ ಸಂಖ್ಯೆ ವಿರಳ. ರುಚಿಯಲ್ಲಿ, ಔಷಧೀಯ ಗುಣಗಳಲ್ಲಿ ಜೇನುತುಪ್ಪವನ್ನ ಮೀರಿಸುವ ಮತ್ತೊಂದು ಮದ್ದಿರಲಿಕ್ಕಿಲ್ಲ. ಈ ಕಾರಣದಿಂದಲೇ ಜೇನು ತುಪ್ಪ ತೆಗೆಯೋ ಕೆಲಸ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ಆದ್ರೆ, ಹಾಗೆ ಜೇನು ತೆಗೆಯೋ ಕೆಲಸ ಜೇನು ತುಪ್ಪದಷ್ಟು ಸ್ವೀಟಾಗಿರೋ ಮ್ಯಾಟರ್ ಖಂಡಿತಾ ಅಲ್ಲ. ಅದು ಅಕ್ಷರಶಃ ಯುದ್ಧವಿದ್ದಂತೆ. ಯಾಕಂದ್ರೆ, ನೋಡಲು ಪುಟ್ಟ ಗಾತ್ರಕ್ಕಿರೋ ಜೇನು ನೊಣಗಳ ಸಿಟ್ಟಿನ ಮೊನೆ ಅಷ್ಟೊಂದು ಚೂಪಾಗಿದೆ!
ನಿಖರವಾಗಿ ಹೇಳ ಬೇಕಂದ್ರೆ ಈ ಪುಟ್ಟ ಜೇನ್ನೊಣಗಳಿಗೆ ಮೈ ತುಂಬಾ ಸಿಟ್ಟಿರುತ್ತೆ. ಸಾಮಾನ್ಯವಾಗಿ ಜೇನ್ನೊಣಗಳು ಕಚ್ಚುತ್ತವೆಂಬ ತಪ್ಪು ಕಲ್ಪನೆಯಿದೆ. ಅಸಲಿಗೆ ಅವು ಕಚ್ಚೋದಿಲ್ಲ. ಬದಲಾಗಿ ಚೂಪಾದ ಈಟಿಯಂಥಾ ಪಂಜಿನಿಂದ ಚುಚ್ಚುತ್ತವೆ. ಹೆಜ್ಜೇನಿನಂಥಾ ಜೇನು ನೊಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಚ್ಚಿದ್ರೆ ಅದೆಂಥಾ ಗಟ್ಟಿ ಆಸಾಮಿಗಳೇ ಆದ್ರೂ ಬದುಕೋದು ಕಷ್ಟವಿದೆ. ಸಿಹಿಯಾದ ಜೇನು ಕೊಡೋ ಈ ಜೇನ್ನೊಣಗಳು ಯಾಮಾರಿದ್ರೆ ಅಷ್ಟೊಂದು ಡೇಂಜರಸ್ ಈಗಿ ಬಿಡುತ್ವೆ. ಈವತ್ತಿಗೂ ನಮ್ಮ ನಡುವೆ ಜೇನು ಹುಳುಗಳ ಬಗ್ಗೆ ಅಗಾಧ ಭಯ ಇದ್ದೇ ಇದೆ.
ವಿಷಯ ಅದಲ್ಲ, ಜೇನು ನೊಣಗಳು ಕೇವಲ ಮನುಷ್ಯರಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಮಾತ್ರವೇ ಕಚ್ಚೋದಿಲ್ಲ. ಬದಲಾಗಿ ತನ್ನ ಮೇಲೆ ದಾಳಿ ನಡೆಸೋ ತಮ್ಮದೇ ಪ್ರಬೇಧದ ಜೇನ್ನೊಣಗಳ ಮೇಲೆಯೂ ಅವು ಪ್ರಹಾರ ನಡೆಸುತ್ತವೆ. ಪ್ರತೀ ಜೇನು ಗೂಡಿನಲ್ಲಿಯೂ ಇಂಥಾ ಆಪತ್ತಿಗಾಗೋ ಸೈನಿಕ ಹುಳುಗಳದ್ದೊಂದು ಪಡೆಯೇ ಇರುತ್ತೆ. ಅವು ಬೇರೆ ಪ್ರಬೇಧದ ಜೇನು ನೊಣಗಳು ದಾಳಿಯಿಟ್ಟಾಗ ಪ್ರವೇಶ ದ್ವಾರದಲ್ಲಿಯೇ ತಡೆದು ಹೀನಾಮಾನ ಚುಚ್ಚುತ್ತವಂತೆ. ಮನುಷ್ಯರನ್ನೇ ಮಲಗಿಸಬಲ್ಲಷ್ಟು ವಿಷ ಹೊಂದಿರೋ ಇತರೇ ಹುಳುಗಳೂ ಕೂಡಾ ಈ ಕಾರಣದಿಂದಾನೇ ಜೇನುಗಳ ತಂಟೆಗೆ ಹೋಗಲು ಹಿಂದೇಟು ಹಾಕುತ್ವೆ. ಒಟ್ಟಾರೆಯಾಗಿ ಹೇಳೋದಾದ್ರೆ, ಜೇನೆಂಬುದು ಸ್ವೀಟೂ ಹೌದು, ಘಾಟೂ ಹೌದು!