ಕೆಲವೊಮ್ಮೆ ಚಿತ್ರರಂಗದಲ್ಲಿ ಹಠಾತ್ ಗೆಲುವು ದಾಖಲಾಗಿ ಬಿಡೋದಿದೆ. ಒಂದಷ್ಟು ಮಂದಿ ಅಪಸ್ವರವೆತ್ತಿದರೂ, ಕಂಟೆಂಟಿನ ಬಗ್ಗೆ ವ್ಯಾಪಕ ತಕರಾರುಗಳಿದ್ದರೂ, ಅವುಗಳೇ ಸಿನಿಮಾ ಮಂದಿರ ಹೌಸ್ ಫುಲ್ಲಾಗುವಂತೆ ಮಾಡೋದೂ ಇದೆ. ಅಂಥಾದ್ದೊಂದು ವಾತಾವರಣಕ್ಕೆ ಇತ್ತೀಚಿನ ಉದಾಹರಣೆಯಾಗಿ ದಾಖಲಾಗುವ ಚಿತ್ರ, ತೆಲುಗಿನ ಪುಷ್ಟ. ಇದರೊಳಗೆ ಹೇಳಿಕೊಳ್ಳುವ ಕಥೆಯಾಗಲಿ, ವೈಶಿಷ್ಟ್ಯವಾಗಲಿ ಏನೂ ಇಲ್ಲ ಎಂಬಂಥಾ ಮಾತುಗಳು ಕೇಳಿ ಬಂದಿದ್ದವು. ಆದರೂ ಅಲ್ಲು ಅರ್ಜುನ್ ನಿರ್ವಹಿಸಿದ್ದ ಪಾತ್ರ, ಡೈಲಾಗುಗಳು ಮತ್ತದರ ಸೆಳೆಯುವಂಥಾ ಚಹರೆಗಳೆಲ್ಲವೂ ಸೇರಿಕೊಂಡು ಪುಷ್ಪಾ ದೊಟ್ಟ ಮಟ್ಟದಲ್ಲಿಯೇ ಗೆಲುವು ದಾಖಲಿಸಿತ್ತು. ಈಗಾಗಲೇ ಒಂದಷ್ಟು ಗೆಲುವು ಕಂಡು ಯಶಸ್ವೀ ನಟನೆನಿಸಿಕೊಂಡಿರುವ ಅಲ್ಲು ಅರ್ಜುನ್ಗೆ ಪುಷ್ಪ ಬಹುದೊಡ್ಡ ಬ್ರೇಕ್ ನೀಡಿ ಬಿಟ್ಟಿದೆ.
ಪಷ್ಪ ಚಿತ್ರ ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಬಿಡುಗಡೆಯಾಗಿ ಸದ್ದು ಮಾಡಿತ್ತು. ಇದರಲ್ಲಿನ ಅಲ್ಲು ಅರ್ಜುನ್ ಹೇಳಿದ್ದ ಬಹುತೇಕ ಡೈಲಾಗುಗಳು ಟ್ರೆಂಡ್ ಸೆಟ್ ಮಾಡಿದ್ದವು. ಇದಾದ ಬಳಿಕ ಅಲ್ಲು ಮುಂದ್ಯಾವ ಚಿತ್ರದಲ್ಲಿ ನಟಿಸುತ್ತಾನೆಂದು ಅಭಿಮಾನಿ ಬಳಗ ಕಾದು ಕೂತಿದೆ. ಈ ನಡುವೆ ಪುಷ್ಪ ಚಿತ್ರದ ನಂತರ ಪ್ಯಾನಿಂಡಿಯಾ ಲೆವೆಲ್ಲಿನ ಹೀರೋನಂತೆ ಮೆರೆಯುತ್ತಿರೋ ಅಲ್ಲುಗೀಗ ಎಲ್ಲೆಲ್ಲಿಂದಲೋ, ಥರ ಥರದ ಆಫರುಗಳು ಬರಲಾರಂಭಿಸಿದ್ದಾವೆ. ಒಂದು ಮೂಲದ ಪ್ರಕಾರ, ಹಾಲಿವುಡ್ ಚಿತ್ರವೊಂದರಲ್ಲಿಯೂ ನಟಿಸುವ ಆಫ್ರ್ ಅಲ್ಲು ಅರ್ಜುನ್ಗೆ ಬಂದಿದೆಯಂತೆ.
ಆದರೆ ಅಲ್ಲು ಕಡೆಯಿಂದ ಈ ಬಗ್ಗೆ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ. ಸದ್ಯಕ್ಕೆ ಪುಷ್ಪಾ ಗೆಲುವಿನ ಹ್ಯಾಂಗೋವರಿನಲ್ಲಿರುವ ಅಲ್ಲು ಮುಂದಿನ ಸಿನಿಮಾದ ಮೂಲಕ ಆ ಗೆಲುವಿನ ಅಲೆಯನ್ನು ಮುಂದುವರೆಸುವ ದರ್ದಿಗೆ ಬಿದ್ದಿದ್ದಾನೆ. ಒಂದು ಮೂಲದ ಪ್ರಕಾರ, ಅಲ್ಲು ಪುಷ್ಪ ದಿ ರೂಲ್ ಎಂಬ ಶೀರ್ಷಿಕೆಯ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾನಂತೆ. ಅದರಲ್ಲಿಯೂ ಕನ್ನಡದ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾಳಂತೆ. ಅಂತೂ ರಕ್ತಚಂದನ ಕಳ್ಳ ಸಾಗಣೆಯನ್ನೇ ಹೀರೋಗಿರಿ ಎಂಬಂತೆ ಬಿಂಬಿಸುತ್ತಾ, ಅಂಥಾ ದುಷ್ಟ ದಂಧೆ ನಡೆಸಲು ಪ್ರೇರೇಪಣೆ ನೀಡುವ ಮೂಲಕವೇ ಅಲ್ಲು ಗೆಲುವಿನ ನಗೆ ಬೀರಿದ್ದಾನೆ. ಇದೀಗ ಅದರ ಸೀಕ್ವೆನ್ಸಿನಂಥಾ ಚಿತ್ರದಲ್ಲಿ ಮತ್ತೆ ನಟಿಸಲು ಮುಂದಾಗಿದ್ದಾನೆ. ಈ ಬಾರಿಯೂ ಗೆಲುವು ಕೈ ಹಿಡಿಯಲಿದೆಯಾ ಎಂಬುದಷ್ಟೇ ಸದ್ಯದ ಕುತೂಹಲ.