ನಾವು ಬದುಕು ಯಾಂತ್ರಿಕ ಅನ್ನಿಸಿದಾಗೆಲ್ಲ ಹೊಸದರ ಹುಡುಕಾಟಕ್ಕಿಳಿಯುತ್ತೇವೆ. ಅಂಥಾ ಘಳಿಗೆಯಲ್ಲಿ ಒಂದಷ್ಟು ಚಿತ್ರ ವಿಚಿತ್ರವಾದ ಅಂಶಗಳು ಅನಾಯಾಸವಾಗಿಯೇ ಸಿಕ್ಕು ಬಿಡುತ್ತವೆ. ಆದರೆ ನಮ್ಮ ಆಲೋಚನೆಯ ವ್ಯಾಪ್ತಿ ಮೀರಿದ, ನಮಗೆಲ್ಲ ತೀರಾ ವಿಚಿತ್ರ ಅನ್ನಿಸಿ ನಂಬಲು ಸಾಧ್ಯ ಅನ್ನಿಸಿ ಬಿಡುವ ಅದೆಷ್ಟೋ ಅಂಶಗಳು ಈ ಜಗತ್ತಿನ ಗರ್ಭದಲ್ಲಿವೆ. ಈಗ ನಿಮಗೆ ಹೇಳಲಿರೋದೂ ಕೂಡಾ ಅಂಥಾದ್ದೇ ಒಂದು ವಿಚಿತ್ರ ಊರಿನ ಬಗ್ಗೆ.
ಒಂದು ಊರೆಂದರೆ ಹತ್ತಾರು ಮನೆ, ನೂರಾರು ಮಂದಿಯ ಚಿತ್ರಣ ನಿಮ್ಮ ತಲೆಯಲ್ಲಿ ಮಿಂಚಿ ಮರೆಯಾಗುತ್ತೆ. ಊರೆಂದು ಕರೆಸಿಕೊಳ್ಳಲು ಅಂಥಾ ಚಹರೆಗಳು ಇರಲೇ ಬೇಕಾಗುತ್ತೆ. ಆದರೆ ಅದೊಂದು ಪಟ್ಟಣದಲ್ಲಿ ವಾಸವಿರೋದು ಒಬ್ಬಳೇ ಗಟ್ಟಿಗಿತ್ತಿ ಮಹಿಳೆ. ಆ ಊರು ಯುನೈಟೈಡ್ ಸ್ಟೇಟ್ಸ್ನ ನೆಬ್ರಸ್ಕಾ. ಆ ಊರಿನಲ್ಲಿ ಲೈಬ್ರೇರಿಯನ್ ವೃತ್ತಿ ಮಾಡೋ ಒಬ್ಬಳೇ ಮಹಿಳೆ ವಾಸಿಸುತ್ತಿದ್ದಾಳಂತೆ. ಸರಿಯಾದ ಪ್ರಮಾಣದಲ್ಲಿ ತೆರಿಗೆ ಕಟ್ಟುತ್ತಾ ಆಕೆ ತನಗೆ ಬೇಕಾದ ಸೌಕರ್ಯಗಳನ್ನು ಪಡೆದುಕೊಂಡು ನೆಮ್ಮದಿಯಾಗಿದ್ದಾಳಂತೆ.
ಆ ಊರಿನಲ್ಲಿ ಒಂದು ಕಾಲಕ್ಕೆ ನೂರೈವತ್ತರಷ್ಟು ಮಂದಿ ವಾಸಿಸುತ್ತಿದ್ದರಂತೆ. ಬರ ಬರುತ್ತಾ ಆ ಪ್ರಮಾಣದಲ್ಲಿ ಇಳಿಕೆ ಕಾಣುತ್ತಾ ಸಾಗಿತ್ತು. ಆ ಬಳಿಕ ಒಂದು ಗಂಡ ಹೆಂಡತಿಯ ಜೋಡಿ ಮಾತ್ರವೇ ಅಲ್ಲಿ ವಾಸವಾಗಿತ್ತು. ಕಡೆಗೂ ಗಂಡ ಅಸುನೀಗಿ ಈಗ ಮಹಿಳೆ ಮಾತ್ರವೇ ಉಳಿದುಕೊಂಡಿದ್ದಾಳೆ. ಆಕೆ ಒಂದು ಮಟ್ಟಕ್ಕೆ ದೊಡ್ಡದಾದ ಆ ಪಟ್ಟಣದಲ್ಲಿ ಒಂಟಿಯಾಗಿ ಬದುಕುತ್ತಿದ್ದಾಳೆ. ಆಕೆಯ ಪಾಲಿಗೆ ಆ ಏಕಾಂತವೇ ಸ್ವರ್ಗ ಅನಿಸಿದೆಯಂತೆ. ಆಗಾಗ ಆಕೆಗೆ ಮಧ್ಯದ ವ್ಯವಸ್ಥೆಯೂ ಇರೋದರಿಂದ ಯಾವ ಜಂಜಾಟಗಳೂ ಇಲ್ಲದೆ ಆಕೆ ಆರೋಗ್ಯವಂತೆಯಾಗಿ ಖುಷಿಯಾಗಿ ಬದುಕುತ್ತಿದ್ದಾಳಂತೆ!