ಇದೀಗ ಎಲ್ಲೆಡೆ ನಶೆಯ ಬಗ್ಗೆ ಚರ್ಚೆಗಳಾಗುತ್ತಿವೆ. ಇತ್ತೀಚೆಗಂತೂ ತೀರಾ ಚಿಕ್ಕ ವಯಸ್ಸಿನವರೇ ನಾನಾ ಥರಗಳಲ್ಲಿ ನಶೆಯತ್ತ ಕೈ ಚಾಚಲಾರಂಭಿಸಿದ್ದಾರೆ. ಡ್ರಗ್ಸ್ನಂಥಾ ಚಟ ಯಾಪಾಟಿ ಆವರಿಸಿದೆ ಅಂದ್ರೆ, ನಶೆಯ ಮೋಹ ಇಡೀ ಜಗತ್ತನ್ನೇ ಓಲಾಡಿಸುತ್ತಿದೆ. ನಮ್ಮ ಪಾಲಿಗೆ ನಶೆ ಅಂದ್ರೆ ಒಂದಷ್ಟು ಡ್ರಿಂಕ್ಸು ಮಾತ್ರ. ಅದರಲ್ಲಿ ಕೆಲ ವೆರೈಟಿಗಳು ನಮಗೆ ಪರಿಚಯವೇ ಇಲ್ಲ. ಆದ್ರೆ ಈ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿನ ಮದ್ಯಗಳ ಬಗ್ಗೆ ಕೇಳಿದರೆ ಯಾರೇ ಆದ್ರೂ ಕಂಗಾಲಾಗದಿರೋಕೆ ಸಾಧ್ಯಾನೇ ಇಲ್ಲ.
ಡ್ರಗ್ಸ್, ಅಫೀಮಿನಂಥಾ ಚಟಕ್ಕೆ ಬಿದ್ದವರು ನಶೆಯ ಉತ್ತುಂಗಕ್ಕೇರ್ತಾರೆ. ಬರ ಬರುತ್ತಾ ಹೈ ಡೋಸೇಜುಗಳೂ ಕೂಡಾ ಅಂಥವರಿಗೆ ತಾಕೋದಿಲ್ಲ. ಮತ್ತಷ್ಟು ಮಗದಷ್ಟು ನಶೆಗಾಗಿ ಕೈಚಾಚುತ್ತಾ ಅಂಥವರು ಕಟ್ಟ ಕಡೇಯದಾಗಿ ವಿಷ ಭರಿತ ಹಾವಿನಿಂದ ಕಚ್ಚಿಸಿಕೊಳ್ಳುವ ಹಂತವನ್ನೂ ತಲುಪ್ತಾರೆ. ಆ ಹಾದಿಯಲ್ಲಿ ಕಡೆಗೂ ಹೆಚ್ಚಿನವರು ದುರಂತದ ಸಾವು ಕಾಣ್ತಾರೆ.
ಆದ್ರೆ ವಿಯೆಟ್ನಾಂ ದೇಶದಲ್ಲಿನ ಎಣ್ಣೆ ಪ್ರಿಯರದ್ದು ಮಾತ್ರ ಭಯಾನಕ ಟೇಸ್ಟು. ಅಲ್ಲಿ ಸತ್ತ ಹಲ್ಲಿಯಿಂದ ತಯಾರಾದ ಮದ್ಯ ಒಂದಕ್ಕೆ ಭಾರೀ ಬೆಲೆಯಿದೆ. ಅಷ್ಟೇ ಪ್ರಮಾಣದ ಬೇಡಿಕೆಯೂ ಇದೆಯಂತೆ. ಸತ್ತ ಹಲ್ಲಿಗಳನ್ನ ಕೆಲ ಕೆಮಿಕಲ್ಗಳ ದ್ರವದಲ್ಲಿ ಮದ್ಯದ ಬಾಟಲಿಗೆ ಹಾಕಿಡಲಾಗುತ್ತೆ. ಅದನ್ನು ನಾಲಕೈದು ವರ್ಷಗಳ ವರೆಗೆ ಹಾಗೆಯೇ ಬಿಡಲಾಗುತ್ತೆ. ಆ ನಂತರ ಅದನ್ನು ಎಣ್ಣೆ ಪ್ರಿಯರು ದುಬಾರಿ ಬೆಲೆ ತೆತ್ತು ಚಪ್ಪರಿಸಿಕೊಂಡು ಕುಡೀತಾರಂತೆ. ವರ್ಷ ಜಾಸ್ತಿಯಾದಷ್ಟೂ ಈ ಸತ್ತ ಹಲ್ಲಿಯ ಮದ್ಯಕ್ಕೆ ಬೆಲೆ ಜಾಸ್ತಿಯಾಗುತ್ತಂತೆ!