ಆಧುನಿಕ ಜಗತ್ತು ಪ್ರತಿಯೊಬ್ಬರಿಗೂ ಒತ್ತಡದ ಬಳುವಳಿ ಕೊಟ್ಟಿದೆ. ಕೆಲಸ, ಕಾರ್ಯ , ಕಷ್ಟ ಕಾರ್ಪಣ್ಯಗಳು ಸೇರಿದಂತೆ ಇಲ್ಲಿ ಎಲ್ಲವೂ ಉಸಿರುಗಟ್ಟಿಸೋ ಸರಕುಗಳೇ. ರೇಸಿಗಿಳಿದಂತೆ ಪ್ರತೀ ದಿನ ಕಳೆಯೋ ಮಂದಿಯ ಪಾಲಿಗೆ ಕೊಂಚ ಏಕಾಂತ, ತಟುಕು ಸಮಾಧಾನವೂ ಮರೀಚಿಕೆಯಾಗಿ ಬಿಟ್ಟಿದೆ. ಇಂಥಾ ಜಂಜಾಟಗಳಲ್ಲಿ ಸಿಕ್ಕಿಕೊಂಡಿರೋ ಪ್ರತಿಯೊಬ್ಬರೂ ಸಣ್ಣದೊಂದು ಏಕಾಂತದಲ್ಲಿ ಮಿಂದೆದ್ದು ನಿರಾಳವಾಗಲು ಸದಾ ಹಪಾಹಪಿಸ್ತಾರೆ. ಆದ್ರೆ ಅದೇನೇ ಪ್ರಯತ್ನ ಪಟ್ಟರೂ ಅದು ಬಹುತೇಕರಿಗೆ ಸಿಗೋದೇ ಇಲ್ಲ. ಆ ನಿರಾಸೆಯ ಮುಂದೆ ಹೆಚ್ಚಿನವರಿಗೆ ಕಂತೆ ಕಂತೆ ಕಾಸೂ ಕಸದಂತೆ ಕಾಣಿಸಲಾರಂಭಿಸುತ್ತೆ.
ಹಾಗಾದ್ರೆ ಈ ಏಕಾಂತ, ಬ್ಯುಸಿ ಲೈಫಿನ ಬಾನಿನಲ್ಲಿ ಮೂಡೋ ಕಾಮನಬಿಲ್ಲಿನಂಥಾ ಒಚಿಟಿ ವಾತಾವರಣ ಅಷ್ಟೊಂದು ಪಾಸಿಟಿವ್ ಎನರ್ಜಿ ತುಂಬುತ್ತಾ ಅನ್ನೋ ಪ್ರಶ್ನೆ ಮೂಡುತ್ತೆ. ಇದಕ್ಕೆ ನಮ್ಮ ನಡುವೆ ಬಿಲ್ಡಪ್ಪುಗಳ ಒಂದಷ್ಟು ಉತ್ತರಗಳು ಸಿದ್ಧವಿರಬಹುದು. ಆದರೆ ವಿಜ್ನಾನ, ಸೈಕಾಲಜಿ ಮತ್ತು ಅದರ ತಳಹದಿಯಲ್ಲಿ ನಡೆದಿರೋ ಒಂದಷ್ಟು ಸಂಶೋಧನೆಗಳು ಮಾತ್ರ ಮತ್ತೊಂದು ಭಯಾನಕ ಸಂಗತಿಯನ್ನ ಜಾಹೀರು ಮಾಡುತ್ತವೆ.
lonelinessdangerousಅಂಥಾ ಸಂಶೋಧನೆಗಳು ಏಕಾಂತದ ಡೇಂಜರಸ್ ಮುಖವನ್ನು ಅನಾವರಣಗೊಳಿಸಿದೆ. ಒಂದಷ್ಟು ಮಂದಿ ಸಂಶೋಧಕರು ಏಕಾಂತದ ಬಗ್ಗೆ ವಿವರವಾದ ಅಧ್ಯಯನ ನಡೆಸಿದ್ದರು. ಅದರ ವಿವಿಧ ಹಂತಗಳನ್ನು ಅಭ್ಯಸಿಸಿದ್ದರು. ಆ ಸಂದರ್ಭದಲ್ಲಿ ಏಕಾಂತವೆಂಬುದು ಹೆಚ್ಚು ದಿನಗಳ ಕಾಲ ನಿರಂತರವಾಗಿದ್ದರೆ ಅದರಿಂದ ಅನಾಹುತಗಳೇ ಜಾಸ್ತಿ ಸಂಭವಿಸ್ತವೆ ಎಂಬ ವಿಚಾರವನ್ನ ಮನಗಂಡಿದ್ದಾರೆ. ಅತಿಯಾದ ಏಕಾಂತ ಅದೆಷ್ಟು ಡೇಂಜರ್ ಅಂದ್ರೆ, ಅದು ಪ್ರತೀ ದಿನ ಹದಿನೈದು ಸಿಗರೇಟು ನಮ್ಮ ಆರೋಗ್ಯವನ್ನು ಘಾಸಿಗೊಳಿಸಬಹುದಾದಷ್ಟೇ ಮನಸು ದೇಹಗಳ ಮೇಲೆ ಪ್ರಭಾವ ಬೀರುತ್ತೆ. ಏಕಾಂತ ಬಯಸುವವರು ಅದರ ಈ ಮಗ್ಗುಲನ್ನೂ ಅರಿತುಕೊಂಡು ಎಚ್ಚರಿಕೆಯಿಂದಿದ್ದರೊಳಿತು.