ಕೊರೋನಾ ವೈರಸ್ಸು ಸೃಷ್ಟಿಸಿ ಇಡೀ ಜಗತ್ತನ್ನೇ ಸೂತಕದ ಮನೆಯಾಗಿಸಿದ್ದ ಪಾಪಿ ದೇಶ ಚೀನಾ. ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಯಿಂದಲೇ ನೋಡುವ ಅಲ್ಲಿನ ಆಡಳಿತ ವ್ಯವಸ್ಥೆಯೀಗ ಆಂತರಿಕ ಸ್ಥಿತಿಯನ್ನು ಹಾಳುಗೆಡವಿದೆ. ಕೊರೋನಾದಿಂದ ಅಲ್ಲಿನ ಜನಸಂಖ್ಯೆಯಲ್ಲಿ ಒಂದಷ್ಟು ಪಾಲು ಇಲ್ಲವಾಗಿದೆ. ಜಗತ್ತಿಗೆ ತೋರಿಸಿಕೊಳ್ಳದಿದ್ದರೂ ನಾನಾ ಒಳ ಬೇಗುದಿಗಳಿಂದ ಹೈರಾಣಾಗಿರುವ ಚೀನಾ ಇದೀಗ ಭೀಕರವಾದ ಮಳೆ ಗಾಳಿಯಿಂದ ಅಕ್ಷರಶಃ ನಲುಗಿ ಹೋಗಿದೆ!
ಚೀನಾ ದೇಶ ಕಳೆದೊಂದಷ್ಟು ವರ್ಷಗಳಿಂದ ವ್ಯಾಪಕವಾಗಿ ಪ್ರಾಕೃತಿಕ ವಿಕೋಪಗಳನ್ನು ಎದುರಿಸಿಕೊಂಡು ಬರುತ್ತಿದೆ. ವರ್ಷಗಳ ಹಿಂದೆ ಭೀಕರ ಪ್ರವಾಠಹದಿಂದ ಕೊಚ್ಚಿಹೋಗಿದ್ದ ಅಲ್ಲಿನ ಜನರ ಬದುಕು, ಇದೀಗ ರಣಭೀಕರವಾದ ಚಂಡಮಾರುತ ಮತ್ತು ಅದರ ಫಲವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ತತ್ತರಿಸಿದೆ. ಮಾ ಆನ್ ಎಂದು ಹೆಸರಿಸಲಾಗಿರುವ ಈ ಚಂಡಮಾರುತದಿಂದಾಗಿ ಚೀನಾದ ಬಹುಪಾಲು ಪ್ರದೇಶಗಳು ಛಿದ್ರಗೊಂಡಿವೆ.
ಇಲ್ಲಿನ ಮೀನುಗಾರಿಕಾ ದೋಣಿಗಳು ಕೊಚ್ಚಿ ಹೋಗಿವೆ. ಆ ರಣ ಗಾಳಿ ಎಲ್ಲವನ್ನೂ ಬಾಚಿಕೊಂಡು ಜನರ ಬದುಕನ್ನು ಬರ್ಬಾದಾಗಿಸಿದೆ. ನೀರು ನುಗ್ಗದ ಸೇಫೆಸ್ಟ್ ಪ್ರದೇಶವೆಂದು ಈ ವರೆಗೆ ಅಂದಿಕೊಂಡಿದ್ದ ಒಂದಷ್ಟು ಏರಿಯಾಗಳೂ ಕೂಡಾ ಮುಳುಗಡೆ ಕಂಡಿವೆ. ಈ ಮಳೆ ಮತ್ತು ಚಂಡಮಾರುತ ಇನ್ನೊಂದಷ್ಟು ಕಾಲ ಹೀಗೆಯೇ ಮುಂದುವರೆದರೆ ಒಂದಷ್ಟು ಮನೆ ಮಾರುಗಳೂ ಧರಾಶಾಯಿಯಾಗುವ ಆತಂಕವೂ ಏರ್ಪಟ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಹಲವಾರು ಚಂಡ ಮಾರುತಗಳೆದ್ದಿವೆ. ಆದರೆ ಚೀನಾದ ಮಟ್ಟಿಗೆ ಅವ್ಯಾವುವೂ ಈ ಮಟ್ಟಕ್ಕೆ ನರಕ ತೋರಿಸಿರಲಿಲ್ಲ.