ಶೋಧ ನ್ಯೂಸ್ ಡೆಸ್ಕ್: ಭಾರತದಲ್ಲಿ ನಡೆಯುತ್ತಾ ಬಂದಿರುವ ಭಯೋತ್ಪಾದಕ ಕೃತ್ಯಗಳಲ್ಲಿ ಪಾಪಿ ಪಾಕಿಸ್ತಾನದ ಕೈವಾಡವಿದೆ ಎಂಬ ಸತ್ಯ ಯಾವತ್ತೋ ಬಟಾಬಯಲಾಗಿದೆ. ಭಾರತದೊಳಗಿನ ಶಾಂತಿಯನ್ನು ಹೇಗಾದರೂ ಮಾಡಿ ಕದಡಬೇಕೆಂಬ ಉದ್ದೇಶದಿಂದ, ಪಾಕ್ನ ಆಡಳಿಕಾರರೇ ಒಂದಿಲ್ಲೊ ಂದು ಸಂಚು ರೂಪಿಸುತ್ತಿರುತ್ತಾರೆ. ಇಂಥವರ ಕುಮ್ಮಕ್ಕಿಲ್ಲದೆ ಭಯೋತ್ಪಾದಕ ಕ್ರಿಮಿಗಳು ಭಾರತಡ ಗಡಿಯ ಸುತ್ತ ಸುಳಿಯಲೂ ಸಾಧ್ಯವಿಲ್ಲ. ಈ ಮಾತಿಗೆ ಇದೀಗ ಮತ್ತೊಮ್ಮೆ ಸಾಕ್ಷಿ ಸಿಕ್ಕಿದೆ; ಭಾರತೀಯ ಸೇನೆಯ ಮೇಲೆ ಆತ್ಮಾಹುತಿ ದಾಳಿ ಮಾಡಲು ನೋಡಿ ಬಂಧಿಯಾದ ಉಗ್ರನೊಬ್ಬನ ಸ್ಫೋಟಕ ಹೇಳಿಕೆಯ ಮೂಲಕ!
ಹೀಗೆ ಭಾರತೀಯ ಸೇನೆಯ ಮೇಲೆ ಗುಂಡಿನ ದಾಳಿ ನಡೆಸಲೆತ್ನಿಸಿ ತಗುಲಿಕೊಂಡವನು, ಲಷ್ಕರ್ ಎ ತೊಯ್ಬಾ ಸಂಘಟನೆಯ ಭಯೋತ್ಪಾದಕ ತಬಾರಕ್ ಹುಸೇನ್. ಇದೀಗ ಸಾಯ ಒದೆ ತಿಂದು ಆಸ್ಪತ್ರೆಯಲ್ಲಿ ಮಲಗಿರುವ ಹುಸೇನ್ ಒಂದಷ್ಟು ವಿಚಾರವನ್ನು ಅರುಹಿಕೊಂಡಿದ್ದಾನೆ. ಅದರ ಆಧಾರವಾಗಿ ಹೇಳೋದಾದರೆ, ಈತನಿಗೆ ಮೂವತ್ತು ಸಠಾವಿರ ಕೊಟ್ಟು ಇಂಥಾದ್ದೊಂದು ಕೃತ್ಯ ಎಸಗುವಂತೆ ಸುಪಾರಿ ಕೊಟ್ಟವನು ಪಾಕಿಸ್ತಾನ ಸೇನೆಯ ಕರ್ನಲ್. ಆತ ಯೂನಸ್!
ಇದೇ ತಿಂಗಳ ಇಪ್ಪತ್ತೊಂದರಂದು ನೌಶೇರಾ ಸೆಕ್ಟರಿನಲ್ಲಿ ಒಳ ನುಸುಳಲೆತ್ನಿಸಿದ್ದ ಮೂವರು ಭಯೋತ್ಪಾದಕರ ಮೇಲೆ ಭಾರತೀಯ ಸೇನೆ ದಾಳಿ ನಡೆಸಿತ್ತು. ಆದರೆ ಇಬ್ಬರು ಪರಾರಿಯಾಗಿ ಹುಸೇನ್ ತಗುಲಿಕೊಂಡಿದ್ದ. ಈ ಹುಸೇನ್ ಈಗಾಗಲೇ ಆರು ಬಾರಿ ಭಾರತದ ಗಡಿಯೊಳಗೆ ನುಸುಳುವ ಪ್ರಯತ್ನ ಮಾಡಿದ್ದ. ಆದರೆ ಒಂದು ಸಲ ಭಾರತೀಯ ಸೇನೆ ಮಾನವೀಯತೆಯ ಆಧಾರದಲ್ಲಿ ಬಿಟ್ಟು ಕಳಿಸಿತ್ತು. ಈ ಬಾರಿ ಪಾಕ್ ಸೇನಾ ಕರ್ನಲ್ನಿಂದ ಮೂವತ್ತು ಸಾವಿರ ಪಡೆದುಕೊಂಡು ಬಂದ ಹುಸೇನ್ ಕಡೆಗೂ ಬಂಧಿಯಾಗಿದ್ದಾನೆ.