ಕನ್ನಡ ಚಿತ್ರರಂಗದ ಯಶಸ್ವೀ ಯುವ ನಿರ್ಮಾಪಕರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಹೆಸರು ತರುಣ್ ಶಿವಪ್ಪ ಅವರದ್ದು. ಸಿನಿಮಾ ನಿರ್ಮಾಣ ಕೂಡಾ ಅತೀವವಾದ ಶ್ರದ್ಧೆ ಮತ್ತು ವ್ಯಾವಹಾರಿಕ ಅಂಶಗಳಾಚೆಗಿನ ಆಸಕ್ತಿ ಬೇಡುವ ಕೆಲಸ. ಅದು ಮೈಗೂಡದೇ ಹೋಗಿದ್ದರೆ ಖಾಕಿ, ಮಾಸ್ ಲೀಡರ್, ವಿಕ್ಟರಿ೨, ರೋಸ್ನಂಥಾ ಯಶಸ್ವೀ ಚಿತ್ರಗಳನ್ನು ನಿರ್ಮಾಣ ಮಾಡಿ ಸೈ ಅನ್ನಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅಂಥಾ ಶ್ರದ್ಧೆಯನ್ನು ದಕ್ಕಿಸಿಕೊಂಡು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ತರುಣ್ ಶಿವಪ್ಪ ಇತ್ತೀಚೆಗೆ ಸಿನಿಮಾ ಸ್ಕೂಲ್ ಆರಂಭಿಸಿದ್ದರು. ಎಲ್ಲ ಥರದಲ್ಲಿಯೂ ಸನ್ನದ್ಧಗೊಂಡ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಡಮಾಡುವ ಸದುದ್ದೇಶದಿಂದ ಈ ಸಿನಿಮಾ ಸ್ಕೂಲ್ ಆರಂಭವಾಗಿತ್ತು. ಇದೀಗ ಅದರ ಮತ್ತೊಂದು ಆರಂಭವಾಗಲು ತಯಾರಿ ಶುರುವಾಗಿದೆ. ಪ್ರವೇಶಾತಿ ಪ್ರಕ್ರಿಯೆಯೂ ಸಹ ಶುರುವಾಗಿದೆ.
ಸಾಮಾನ್ಯವಾಗಿ ಸಿನಿಮಾ ಕನಸು ಸೋಕದ ಮನಸುಗಳೇ ವಿರಳ. ಯಾವುದಾದರೊಂದು ಬಗೆಯಲ್ಲಿ ಸಿನಿಮಾ ರಂಗದಲ್ಲಿ ಏನಾದರೂ ಸಾಧಿಸಬೇಕೆಂಬುದು ಹಲವರ ಕನಸಾಗಿರುತ್ತದೆ. ದುರಂತವೆಂದರೆ, ಬದುಕಿನ ಅನಿವಾರ್ಯತೆಗಳ ತಿರುಗಣಿಗೆ ಸಿಕ್ಕು ಅಂಥವರೊಂದಷ್ಟು ಮಂದಿ ಕನಸಿನ ಸಮೇತ, ಕುಹುಗಳೂ ಸಿಗದಂತೆ ಮಾಯವಾಗಿ ಬಿಟ್ಟಿರುತ್ತಾರೆ. ಹಾಗೆ ಎಲ್ಲೋ ಕಳೆದು ಹೋದವರಲ್ಲಿ ನಿಜವಾಗಿ ಪ್ರತಿಭಾವಂತರು ಇರಲಿಕ್ಕೂ ಸಾಕು. ಮತ್ತೆ ಕೆಲ ಮಂದಿಗೆ ಸನ್ನದ್ಧವಾಗಿ ಚಿತ್ರರಂಗ ಪ್ರವೇಶಕ್ಕೆ ಮಾರ್ಗಗಳೇ ಸಿಗುವುದಿಲ್ಲ. ಅಂಥವರೆಲ್ಲರಿಗೂ ಆಸರೆಯಾಗಬಲ್ಲ, ಅವರ ಆಸಕ್ತಿಗೆ ನೀರೆರೆದು ಪೋಶಿಸಿ ಚಿತ್ರರಂಗದಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬಲ್ಲ ಶಕ್ತಿ ಸಿನಿಮಾ ಸ್ಕೂಲಿಗಿದೆ. ಸಿನಿಮಾ ಬಗ್ಗೆ ಆಸೆ ಹೊಂದಿರುವ ಯಾರ ಕನಸೂ ಕಮರಬಾರದು, ಯಾವ ಪ್ರಭಾನ್ವಿತರೂ ಬದುಕಿನ ಸಿಕ್ಕುಗಳಲ್ಲಿ ಸಿಲುಕಿ ಮರೆಯಾಗಬಾರದೆಂಬ ಮಹದುದ್ದೇಶದಿಂದ ಈ ಸಿನಿಮಾ ಸ್ಕೂಲ್ ಆರಂಭವಾಗಿದೆ.
ಪ್ರತಿಯೊಂದು ಹಂತದಲ್ಲಿಯೂ ಪರಿಣಿತರಿಂದ ತರಬೇತಿ ಕೊಡಿಸಿ, ರಂಗಭೂಮಿಯ ಮಟ್ಟದಿಂದಲೇ ಕಲಿಕೆಗೆ ಅವಕಾಶ ಮಾಡಿಕೊಡುವ ಅಪರೂಪದ ಕಾನ್ಸೆಪ್ಟು ಸಿನಿಮಾ ಸ್ಕೂಲ್ನದ್ದು. ಸಿನಿಮಾ ರಂಗಕ್ಕೆ ಹೇಗೋ ಪ್ರವೇಶ ಪಡೆದು, ಅಲ್ಲಿ ಕಲಿಕೆಗೆಂದೇ ಒಂದಷ್ಟು ವರ್ಷಗಳನ್ನು ಮೀಸಲಿಡುವ ಬದಲು, ಸರ್ವರೀತಿಯಿಂದಲೂ ತಯಾರಾದ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಕೊಡಮಾಡುವ ಉದ್ದೇಶವೂ ಈ ಸಿನಿಮಾ ಶಾಲೆಗಿದೆ. ಈಗಾಗಲೇ ಇಲ್ಲಿ ಕಲಿತ ವಿದ್ಯಾರ್ಥಿಗಳ ಚಿತ್ರರಂಗದ ನಾನಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರೊಲ್ಲೋರ್ವ ಹುಡುಗ ‘ದಂಡಿ’ ಎಂಬ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾನೆ. ಅದು ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ನಲ್ಲಿ ಪ್ರಥಮ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಇದು ಸಿನಿಮಾ ಸ್ಕೂಲ್ನ ಅಸಲೀ ಕಸುವಿಗೆ ಸಾಕ್ಷಿ.
ಸಿನಿಮಾ ಕಲಿಕೆ ಮಾಡಬೇಕೆಂದಿರುವ ಎಲ್ಲ ವರ್ಗದವರ ಆಶೋತ್ತರಗಳಿಗೆ ಅನುಕೂಲವಾಗುವಂತೆ ಸಿನಿಮಾ ಸ್ಕೂಲ್ನಲ್ಲಿ ಮೂರು ಬಗೆಯ ಕೋರ್ಸ್ಗಳನ್ನು ರೂಪಿಸಲಾಗಿದೆ. ಅದರಲ್ಲಿನ ಒಂದು ಬಗೆಯ ಕೋರ್ಸ್ ಪೂರ್ಣಾವಧಿಯಲ್ಲಿ ಹಾಜರಾಗಿ ಕಲಿಯುವ ಉದ್ದೇಶ ಹೊಂದಿರುವಂಥ ಅಭ್ಯರ್ಥಿಗಳಿಗಾಗಿ ಸಿದ್ಧಪಡಿಸಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ ಹತ್ತರಿಂದ ಸಂಜೆ ನಾಲಕ್ಕು ಗಂಟೆಯವರೆಗೆ ಈ ಬ್ಯಾಚಿನ ತರಗತಿಗಳು ಎರಡು ತಿಂಗಳ ಕಾಲ ನಡೆಯಲಿವೆ. ಆದರೆ, ಬದುಕಿಗಾಗಿ ಯಾವುದೋ ಕೆಲಸ ಮಾಡುತ್ತಾ, ಸಿನಿಮಾ ಕನಸು ಹೊತ್ತವರಿಗೆ ಪೂರ್ಣಾವಧಿ ಕೋರ್ಸಿನಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕುವುದಿಲ್ಲ. ಅವರಿಗೆಂದೇ ಸಂಜೆ ತರಗತಿಗಳನ್ನು ರೂಪಿಸಲಾಗಿದೆ. ಈ ತರಗತಿಗಳು ಸಂಜೆ ಆರಂರಿಂದ, ರಾತ್ರಿ ಒಂಬತ್ತರವರೆಗಿನ ಈ ಕೋರ್ಸ್ಗಳು ಮೂರು ತಿಂಗಳ ಕಾಲಾವಧಿಯನ್ನು ಹೊಂದಿದೆ.
ಅದರಲ್ಲೂ ಕೆಲ ಮಂದಿಗೆ ಈ ಸಂಜೆ ತರಗತಿಗಳಲ್ಲಿ ಪಾಲ್ಗೊಳ್ಳುವ ಅವಕಾಶವೂ ಇರುವುದಿಲ್ಲ. ಅಂಥವರ್ಯಾರೂ ಮರುಗಬೇಕಿಲ್ಲ. ಯಾಕೆಂದರೆ, ಸಿನಿಮಾ ಸ್ಕೂಲ್ನಲ್ಲಿ ವೀಕೆಂಡ್ ತರಗತಿಗಳು ಅವರಿಗೆಂದೇ ರೂಪುಗೊಂಡಿವೆ. ಶನಿವಾರ ಅರ್ಧ ದಿನ ಮತ್ತು ಭಾನುವಾರದಂದು ಬೆಳಗ್ಗೆ ಹತ್ತರಿಂದ ಸಂಜೆ ಐದರವರೆಗೆ ಈ ಕ್ಲಾಸುಗಳು ನಡೆಯಲಿವೆ. ಕಲಿಕೆಗೆ ಕಡಿಮೆ ಕಾಲಾವಕಾಶ ಇರೋದರಿಂದ ಈ ಕೋರ್ಸನ್ನು ನಾಲಕ್ಕು ತಿಂಗಳ ಕಾಲ ನಡೆಸಲು ತೀರ್ಮಾನಿಸಲಾಗಿದೆ. ಹೀಗೆ ರೂಪಿಸಲ್ಪಟ್ಟಿರುವ ಪ್ರತೀ ಕೋರ್ಸಿನಲ್ಲಿಯೂ ವಿದ್ಯಾರ್ಥಿಗಳನ್ನು ಪ್ರತಿಯೊಂದು ವಿಚಾರದಲ್ಲಿಯೂ ತಯಾರುಗೊಳಿಸಲೊಂದು ಪರಿಣಿತರ ತಂಡ ರೆಡಿಯಾಗಿದೆ. ಸಿನಿಮಾ ರಂಗದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರೇ ಇಲ್ಲಿ ಪಾಠ ಮಾಡಲಿರೋದು ನಿಜವಾದ ವಿಶೇಷ.
ಬ್ರೀಥ್, ವಾಯ್ಸ್, ಮೈಂಡ್ ಎಮೋಷನ್ಸ್, ಬಾಡಿ ಗ್ಯಾಂಗ್ವೇಜ್ ಸೇರಿದಂತೆ ಆರಂಭಿಕ ಕಲಿಕೆಗಳಿರುತ್ತವೆ. ಆ ನಂತರದಲ್ಲಿ ರಂಗಭೂಮಿಯ ವಾತಾವರಣವನ್ನು ಅಭ್ಯರ್ಥಿಗಳಿಗೆ ಸೃಷ್ಟಿಸಿ ಕೊಡಲಾಗುತ್ತದೆ. ಅದರಲ್ಲಿ ಒಂದಷ್ಟು ಪರಿಣತಿ ಹೊಂದಿದ ನಂತರ ಸಿನಿಮಾ ಸ್ಕೂಲ್ ಕಡೆಯಿಂದಲೇ ಬೀದಿ ನಾಟಕವೊಂದನ್ನು ರೂಪಿಸಿ, ಅದರಲ್ಲಿ ನಟಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಈ ಹಂತ ದಾಟಿಕೊಂಡ ಅಭ್ಯರ್ಥಿಗಳು ಸರ್ವ ರೀತಿಯಿಂದಲೂ ಪರಿಪಕ್ವವಾದ ನಂತರದಲ್ಲಿ ಕ್ಯಾಮೆರಾ ಎದುರಿಸುವ ಬಗೆಯನ್ನು ಕಲಿಸಲಾಗುತ್ತದೆ. ಇದರ ಜೊತೆ ಜೊತೆಗೇ ಡ್ಯಾನ್ಸ್, ಮಾಡಡೆಲಿಂಗ್ನಂಥಾದ್ದನ್ನೂ ಕಲಿಸಲಾಗುತ್ತದೆ. ಫೋಟೋ ಶೂಟ್, ಮೇಕಪ್ ಹಾಗೂ ಆಡಿಷನ್ನುಗಳಿಗೆ ರೆಡಿಯಾಗೋ ಬಗೆಯನ್ನೂ ಹೇಳಿ ಕೊಡಲಾಗುತ್ತದೆ. ಹೀಗೆ ಕೋರ್ಸಿನ ಅಂತಿಮ ಘಟ್ಟ ತುಲುಪಿಕೊಂಡಾದ ಮೇಲೆ ಸಿನಿಮಾ ಸ್ಕೂಲ್ ಕಡೆಯಿಂದಲೇ ಒಂದು ಕಿರುಚಿತ್ರವನ್ನು ನಿರ್ಮಿಸಿ ಅದರಲ್ಲಿ ನಟಿಸಲು ಅವಕಾಶ ಮಾಡಿ ಕೊಡಲಾಗುತ್ತದೆ.
ಹೀಗೆ ತರಬೇತಿ ಪಡೆದ ನಂತರವೂ ಸಿನಿಮಾಗಳಲ್ಲಿ ಅವಕಾಶ ಹುಡುಕೋದೊಂದು ಸಾಹಸ. ಸಿನಿಮಾ ಸ್ಕೂಲ್ನಲ್ಲಿ ಕಲಿತ ಅಭ್ಯರ್ಥಿಗಳು ಅಂಥಾ ಯಾವುದೇ ಪಡಿಪಾಟಲುಗಳನ್ನೂ ಅನುಭವಿಸುವ ಪ್ರಮೇಯ ಬರುವುದಿಲ್ಲ. ಯಾಕೆಂದರೆ, ತರುಣ್ ಶಿವಪ್ಪ ಸಾರಥ್ಯದ ತರುಣ್ ಟಾಕೀಸ್ನಲ್ಲಿಯೇ ಹಲವಾರು ಚಿತ್ರಗಳು ನಿರ್ಮಾಣಗೊಳ್ಳುತ್ತವೆ. ಇನ್ನೊಂದಷ್ಟು ಸಿನಿಮಾಗಳು ಸರತಿಯಲ್ಲಿವೆ. ಈ ಸಿನಿಮಾ ಸ್ಕೂಲಿನಲ್ಲಿ ಕಲಿತವರಿಗೆ ಅವರವರ ಆಸಕ್ತಿಗನುಗುಣವಾಗಿ ತಮ್ಮ ಸಿನಿಮಾಗಳಲ್ಲಿಯೇ ಅವಕಾಶ ಕೊಡಲು ತರುಣ್ ಶಿವಪ್ಪ ಮುಂದಾಗಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಸಿನಿಮಾ ಸ್ಕೂಲಿನ ತಳಹದಿಯೇ ಭಿನ್ನವಾಗಿದೆ. ಅದು ಎಲ್ಲ ವರ್ಗದ ಆಕಾಂಕ್ಷಿಗಳಿಗೂ ನಿಲುಕುವಂತಿದೆ. ನಿಮಗೂ ಈ ಬಗ್ಗೆ ಆಸಕ್ತಿ ಇದ್ದರೆ ಈಗಲೇ ಹೆಸರು ನೋಂದಾಯಿಸಿಕೊಂಡು ಪ್ರವೇಶ ಪಡೆಯಬಹುದಾಗಿದೆ. ಆಸಕ್ತರು #40, ಎರಡನೇ ಮಹಡಿ, ನಮ್ಮೂರ ತಿಂಡಿ ಹತ್ತಿರ, ಎನ್ ಜಿ ಇ ಎಫ್ ಲೇಔಟ್ ಪಾರ್ಕ್ ಎದುರು, ನಾಗರಬಾವಿ ಬೆಂಗಳೂರು- 560072. ಮೊ: 92069 20689… ಆಸಕ್ತರು ಈ ವಿಳಾಸದಲ್ಲಿರುವ ಸಿನಿಮಾ ಸ್ಕೂಲ್ ಅನ್ನು ಸಂಪರ್ಕಿಸಬಹುದು.