ಅವಳಿಂದ ಕೊಲೆಯಾದ ರೋಗಿಗಳ ಸಂಖ್ಯೆ ೧೦೬!
ಮಾನಸಿಕ ಸ್ಥಿಮಿತ ಕೈ ಮೀರಿ ಹೋದರೆ ಎಂಥಾ ಜವಾಬ್ದಾರಿಯುತ ಸ್ಥಾನದಲ್ಲಿ ಕೂತವರನ್ನೂ ಪಾತಾಳಕ್ಕಿಳಿಸುತ್ತದೆ. ಸಾಮಾನ್ಯರನ್ನೂ ಕ್ರಿಮಿನಲ್ಗಳನ್ನಾಗಿಸುತ್ತೆ. ತೀರಾ ಜೀವ ಉಳಿಸೋ ವೈದ್ಯ ವೃತ್ತಿಯ ಭಾಗವಾದ ನರ್ಸ್ಗಳನ್ನೂ ಕೊಲೆ ಪಾತಕಿಗಳಾಗಿಸುತ್ತೆ. ಇದಕ್ಕೆ ತಾಜಾ ಉದಾಹರಣೆ ಜರ್ಮನಿಯ ನಲವತ್ತೊಂದು ವರ್ಷ ವಯಸ್ಸಿನ ನರ್ಸ್ ನಿಯೆಲ್ ಹ್ಯೂಗೆಲ್!
ಜರ್ಮನಿಯ ಬ್ರಮೆನ್ ನಗರದ ಪ್ರಸಿದ್ಧವಾದ ಆಸ್ಪತ್ರೆಯೊಂದರಲ್ಲಿ ೨೦೦೫ರವರೆಗೆ ನರ್ಸ್ ಆಗಿ ಸೇವೆ ಮಾಡಿದ್ದ ನಿಯೆಲ್ ಹ್ಯೂಗೆಲ್ಜೀ ವೃತ್ತಿಯಲ್ಲಿ ಸಾಕಷ್ಟು ಮನ್ನಣೆ ಗಳಿಸಿದ್ದಳು. ೧೯೯೯ರಲ್ಲಿ ವೃತ್ತಿಗೆ ಸೇರಿಕೊಂಡಿದ್ದ ಈಕೆ ೨೦೦೫ರ ವರೆಗೂ ಎರಡು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದಳು. ಆದರೆ ೨೦೦೫ರಲ್ಲಿ ಈಕೆಯಿಂದ ಚಿಕಿತ್ಸೆ ಪಡೆದ ರೋಗಿಗಳು ಸಾಲು ಸಾಲಾಗಿ ಸತ್ತಿದ್ದರು. ಇದು ಭಾರೀ ದೊಡ್ಡ ಸುದ್ದಿಯಾಗಿ ಅಲ್ಲಿನ ಪೊಲೀಸರು ನಿಯೆಲ್ ಹ್ಯೂಗೆಲ್ಳ ವಿರುದ್ಧ ದೂರುಗಳು ಕೇಳಿ ಬರಲಾರಂಭಿಸಿದ್ದವು. ಆದರೆ ಹೇಗೋ ಬಚಾವಾಗಿದ್ದ ಈಕೆಯನ್ನು ೨೦೦೮ರಲ್ಲಿ ಪೊಲೀಸರು ಬಂಧಿಸಿದ್ದರು.
ಇದೀಗ ಈ ಬಗ್ಗೆ ವಿಸ್ತೃತವಾಗಿ ತನಿಖೆ ನಡೆಸಿರೋ ಪೊಲೀಸರು ಬೆಚ್ಚಿ ಬೀಳೋ ವಿವರ ಜಾಹೀರು ಮಾಡಿದ್ದಾರೆ. ನಿಯೆಲ್ ಹ್ಯೂಗೆಲ್ ಬರೋಬ್ಬರಿ ೧೦೬ ರೋಗಿಗಳನ್ನು ಅಅಮಾನುಷವಾಗಿ ಕೊಲೆ ಮಾಡಿದ್ದಳೆಂಬ ಬೆಚ್ಚಿ ಬೀಳಿಸೋ ಸಂಗತಿ ಈ ಮೂಲಕ ಹೊರ ಬಿದ್ದಿದೆ. ವೃತ್ತಿ ಆರಂಭಿಸಿದ ಹೊಸದರಲ್ಲಿ ಚೆನ್ನಾಗೇ ಇದ್ದ ನರ್ಸ್ ನಿಯೆಲ್ ಹ್ಯೂಗೆಲ್ ವೈಕ್ತಿತ್ವದಲ್ಲಿ ಬದಲಾವಣೆಗಳಾಗಲಾರಂಭಿಸಿದ್ದು ೨೦೦೦ದಿಂದೀಚೆಗಂತೆ. ಆ ಹೊತ್ತಿಗೆಲ್ಲಾ ತನ್ನ ವೃತ್ತಿಯ ಬಗ್ಗೆಯೇ ಆಕೆಗೆ ಬೇಸರ ಬಂದಿತ್ತು. ನಂತರ ಅದು ಅಸಹನೆಯಾಗಿ ಬದಲಾಗಿ ಆ ಬಗ್ಗೆ ದ್ವೇಷ ಬೆಳೆಸಿಕೊಂಡು ಮಾನಸಿಕ ಸ್ಥಿಮಿತ ಕಳೆದುಕೊಂಡಂತಾದ ನಿಯೆಲ್ ಹ್ಯೂಗೆಲ್ ಸಾಲು ಸಾಲಾಗಿ ರೋಗಿಗಳ ಹೆಣ ಕೆಡವಲಾರಂಭಿಸಿದ್ದಳು.
ತನ್ನ ದೇಖಾರೇಖಿಗೆ ಬರೋ ರೋಗಿಗಳನ್ನು ಒಂದಷ್ಟು ಕಾಲ ಶುಶ್ರೂಷೆ ಮಾಡಿ ನಂತರ ಹಾರ್ಟ್ ಅಟ್ಯಾಕ್ ಸಂಭವಿಸೋ ಭೀಕರ ಚುಕ್ಕುಮದ್ದು ಕೊಟ್ಟು ಕೊಲ್ಲಲಾರಂಭಿಸಿದ್ದಳು. ತಿಂಗಳೊಪ್ಪತ್ತಿನಲ್ಲೇ ಈಕೆಯಿಂದ ತೊಂಭತ್ತಕ್ಕೂ ಹೆಚ್ಚು ರೋಗಿಗಳು ಸತ್ತಿದ್ದರಂತೆ. ಆರಂಭದಲ್ಲಿ ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ನೂರು ಕೇಸುಗಳನ್ನು ಪತ್ತೆ ಹಚ್ಚಿದ್ದರು. ಆ ನಂತರ ಇನ್ನೂ ಒಂದಷ್ಟು ಪ್ರಕರಣಗಳು ಬೆಳಕಿಗೆ ಬಂದು ಆ ಸಂಖ್ಯೆ ಈಗ ನೂರಾ ಆರರ ಗಡಿ ದಾಟಿಕೊಂಡಿದೆ. ನಿಯೆಲ್ ಹ್ಯೂಗೆಲ್ ಹಿಂದಿನದ್ದೆಲ್ಲದರ ಬಗ್ಗೆ ಅಸ್ಪಷ್ಟ ನೆನಪುಗಳನ್ನಷ್ಟೇ ಹೊಂದಿದ್ದಾಳಂತೆ. ಈ ಕೊಲೆಗಾತಿಯೀಗ ತನ್ನ ಮೇಲೇ ಹಿಡಿತವಿಲ್ಲದ ಹೀನಾಯ ಸ್ಥಿತಿ ತಲುಪಿಕೊಂಡಿದ್ದಾಳೆ. ಆದರೆ ಈಕೆಯ ಕಡೆಯಿಂದಾದ ಭೀಕರ ಕೃತ್ಯದ ಕಥೆ ಕೇಳಿ ಇಡೀ ಜಗತ್ತೇ ಬೆಚ್ಚಿಬಿದ್ದಿದೆ!