ವಿಚಿತ್ರ ಬ್ಲಡ್ಗ್ರೂಪಿನ ಆ ಹುಡುಗನ್ಯಾರು ಗೊತ್ತಾ?
ವೈದ್ಯಲೋಕದ ವಿಸ್ಮಯಗಳಿಗೆ ಕೊನೆ ಮೊದಲಿಲ್ಲ. ನಮಗೆಲ್ಲ ಮನುಷ್ಯನ ಒಂದಷ್ಟು ರಕ್ತದ ಗುಂಪುಗಳ ಪರಿಚಯವಿದೆ. ಅದರಲ್ಲೆ ಕೆಲ ರಕ್ತದ ಗುಂಪುಗಳು ವಿಶೇಷವಾದವೆಂದು ಪರಿಗಣಿಸಲ್ಪಟ್ಟಿದೆ. ಆದರೆ ಬೆಂಗಳೂರಿನ ಈ ಹುಡುಗನದ್ದು ವಿರಳಾತಿ ವಿರಳ ರಕ್ತದ ಗುಂಪು. ಅದನ್ನು ವೈದ್ಯಲೋಕ ಊಊ ಅಂತ ಗುರುತಿಸುತ್ತದೆ. ಬೆಂಗಳೂರಿನ ಮೂವತ್ನಾಲಕ್ಕು ವರ್ಷದ ಆದಿತ್ಯ ಹೆಗಡೆಯದ್ದೂ ಅದೇ ರಕ್ತದ ಗುಂಪು. ಈ ರಕ್ತದ ಗುಂಪು ಅದೆಷ್ಟು ಅಪರೂಪವೆಂದರೆ ನೂರಾರು ಕೋಟಿ ಜನರಿರೋ ಭಾರತದಲ್ಲಿ ಈ ರಕ್ತದ ಗುಂಪಿನವರ ಸಂಖ್ಯೆ ಹತ್ತು ಸಾವಿರವಿರಬಹುದಷ್ಟೆ!
ಇಂಥಾ ವಿರಳ ಬ್ಲಡ್ ಗ್ರೂಪ್ ಹೊಂದಿರೋ ವ್ಯಕ್ತಿಗಳ ಸಂಖ್ಯ ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾಧ್ಯಂತ ಹುಡುಕಿದರೂ ಕಡಿಮೆ ಸಂಖ್ಯೆಯಲ್ಲಿ ಪತ್ತೆಯಾಗುತ್ತದೆ. ಆದ್ದರಿಂದ ತೀರಾ ಎಮರ್ಜೆನ್ಸಿ ಸಮಯದಲ್ಲಿ ಈ ಬ್ಲಡ್ ಗ್ರೂಪಿನವರನ್ನು ಹುಡುಕೋದು ಕಷ್ಟ. ಆದ್ದರಿಂದಲೇ ಆದಿತ್ಯ ಹೆಗ್ಡೆಗೆ ಭಾರತದ ವಿವಿಧ ಊರುಗಳಿಂದ, ವಿದೇಶಗಳಿಂದಲೂ ಆಗಾಗ ಕರೆಗಳು ಬರುತ್ತವೆ. ಅದೇನೇ ಕೆಲಸ ಕಾರ್ಯವಿದ್ದರೂ ಅವದೆಷ್ಟೇ ದೂರದ ಊರಾದರೂ ಹೋಗಿ ರಕ್ತ ಕೊಟ್ಟು ಜೀವ ಉಳಿಸೋದು ಆದಿತ್ತಯ ಹೆಗ್ಡೆ ರೂಢಿಸಿಕೊಂಡು ಬಂದಿರೋ ಮಾನವೀಯತೆ.
ಇತ್ತೀಚೆಗೆ ಚೆನೈನಲ್ಲಿ ಇದೇ ರಕ್ತದ ಗುಂಪಿನ ಬಸುರಿ ಹೆಣ್ಣುಮಗಳೊಬ್ಬಳು ಅನಾರೋಗ್ಯದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಳು. ಆದರೆ ತೀವ್ರ ಅಸ್ವಸ್ಥಳಾದರೂ ಆಕೆಗೆ ರಕ್ತ ಸಿಕ್ಕಿರಲಿಲ್ಲ. ಕಡೆಗೂ ಅಲ್ಲಿನ ವೈದ್ಯರು ಸಂಕಲ್ಪ ಎಂಬ ಸ್ವಯಂ ಸೇವಾ ಸಂರ್ಸಥೆಯ ಮೂಲಕ ಆದಿತ್ಯರನ್ನು ಸಂಪರ್ಕಿಸಿದ್ದರು. ಕೂಡಲೆ ಚೆನೈಗೆ ಹೊರಟ ಆದಿತ್ಯ ರಕ್ತ ಕೊಟ್ಟು ಆ ಮಹಿಳೆಯನ್ನು ಬದುಕಿಸಿದ್ದರು. ಆಕೆಗೆ ಎರಡೆರಡು ಸಲ ರಕ್ತ ಕೊಟ್ಟ ಆದಿತ್ಯ ಸರಾಗವಾಗಿ ಮಗು ಜನನವಾಗಲೂ ಕಾರಣವಾಗಿದ್ದರು. ಇದೀಗ ಆ ಮಹಿಳೆ ಮಗುವಿನೊಂದಿಗೆ ಚೇತರಿಸಿಕೊಂಡಿದ್ದಾಳಂತೆ. ತನ್ನ ಅಪರೂಪದ ರಕ್ತದ ಗುಂಪನ್ನು ಹಲವರ ಜೀವ ಉಳಿಸೋ ಸೇವೆಯಾಗಿ ಪರಿಗಣಿಸಿರೋ ಆದಿತ್ಯ ಈ ವರೆಗೆ ಏನಿಲ್ಲವೆಂದರೂ ಐವತೈದಕ್ಕೂ ಹೆಚ್ಚು ಸಲ ರಕ್ತ ಕೊಟ್ಟಿದ್ದಾರಂತೆ. ದೇಶದಲ್ಲಿ ಮಾತ್ರವಲ್ಲದೇ ಕೆಲವೊಮ್ಮೆ ಪಾಕಿಸ್ತಾನ, ಸಿಂಗಾಪೂರ್ನಂಥಾ ದೇಶದ ರೋಗಿಗಳಿಗೂ ರಕ್ತ ನೀಡಿರೋ ಆದಿತ್ಯ ಮಾನವೀಯತೆ ಮೆರೆದಿದ್ದಾರೆ. ಇವರು ನಮ್ಮ ಬೆಂಗಳೂರಿನವರೆಂಬುದು ನಿಜಕ್ಕೂ ಹೆಮ್ಮೆಯ ಸಂಗತಿ.