ರಾಜಕಾರಣವೆಂಬದೀಗ ಹೊಲಸೆದ್ದು ನಾರುವ ಗಟಾರಕ್ಕಿಂತಲೂ ಕಡೆಯಾಗಿಬಿಟ್ಟಿದೆ. ಹಾಗಂತ ಸಾರಾಸಗಟಾಗಿ ಷರಾ ಬರೆಯಲು ಹಿಂದೆ ಮುಂದೆ ನೋಡುವಂತೆ ಮಾಡಬಲ್ಲ ಕೆಲವೇ ಕೆಲ ವ್ಯಕ್ತಿತ್ವಗಳು ಆ ವಲಯದಲ್ಲಿರೋದು ನಿಜ. ಅದರಾಚೆಗೆ ಪಿತಗುಡುತ್ತಿರುವ ಪ್ರಭೃತ್ತಿಗಳು ಜನಸಾಮಾನ್ಯರ ಪಾಲಿಗೆ ಕಂಟಕವಾಗಿರೋದು ಕಣ್ಣೆದುರಿನ ವಾಸ್ತವ. ರಾಜಕಾರಣ ಅಂದೇಟಿಗೆ ಭ್ರಷಾಚಾರ ಕಣ್ಣೆದುರು ನಿಲ್ಲುತ್ತದೆ. ಆದರೆ, ಕೆಲ ರಾಜಕಾರಣಿಗಳ ವಿಕೃತಿಗಳಿವೆಯಲ್ಲಾ? ಅದು ನಾಗರಿಕ ಸಮಾಜದ ಊಹೆಗೆ ನಿಲುಕದ ಕರಾಳ ಸತ್ಯ. ಇದೀಗ ಹಾಸನ ಸೀಮೆಯ ತುಂಬ ಇಟ್ಟಾಡುತ್ತಿರುವ ವಿಕೃತ ಯುವ ರಾಜಕಾರಣಿಯೊಬ್ಬನ ಕಾಮಪುರಾಣ ಮೇಲಕ್ಕಂಡ ಮಾತಿಗೆ ಸ್ಪಷ್ಟ ಸಾಕ್ಷಿಯಂತಿದೆ. ಕಂಡೋರ ಮನೆ ಹೆಣ್ಣುಮಕ್ಕಳನ್ನು ತನ್ನ ತೆವಲಿಗೆ ಬಳಸಿಕೊಂಡ ಈ ಗಳಗಂಟೆ ಪುರಾಣ ನಾಗರಿಕ ಸಮುದಾಯವನ್ನೇ ತಲೆತಗ್ಗಿಸುವಂತೆ ಮಾಡಿಬಿಟ್ಟಿದೆ. ಕಾಮದ ಕೊಚ್ಚೆಯಲ್ಲಿ ಉರುಳಾಡುವ ಇಂಥಾ ಹೇಸಿಗೆ ಹುಳಗಳ ಹುಟ್ಟಡಗಲೆಂಬ ಆಶಯದೊಂದಿಗೆ, ಒಟ್ಟಾರೆ ಗಲೀಜು ವೃತ್ತಾಂತದ ಒಳ ಹೊರಗಿನ ವಿಸೃತ ವರದಿ ಇಲ್ಲಿದೆ…  -ಸಂತೋಷ್ ಬಾಗಿಲಗದ್ದೆ ಇನ್ನೇನು ಲೋಕಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಘಳಿಗೆಯಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಬಿರುಸಿನ ವಾತಾವರಣ…