ಇಡೀ ವಿಶ್ವಕ್ಕೇ ಕೊರೋನಾ ಸಾಂಕ್ರಾಮಿಕವೆಂಬ ಮಾಹಾ ಮಾರಿಯನ್ನು ಹಂಚಿದ ಪರಮ ಪಾಪಿಷ್ಟ ದೇಶ ಚೀನಾ. ಪ್ರತಿಯೊಂದನ್ನೂ ಕೂಡಾ ಲಾಭದ ದೃಷ್ಟಿಯಿಂದಲೇ ದಿಟ್ಟಿಸುವ ನಾಯಕತ್ವವಿರೋ ಚೀನಾ ಮಂದಿ ಈ ವೈರಸ್ಸಿನ ವಿಚಾರದಲ್ಲಿ ಏನೋ ಮಾಡಲು ಹೋಗಿ ಮತ್ತೇನನ್ನೋ ಮಾಡಿಕೊಂಡಿದೆ. ಅಮೆರಿಕಾ ಮಂದಿಯೊಂದಿಗೆ ಶಾಮೀಲಾಗಿ ಮೆಡಿಕಲ್ ಮಾಫಿಯಾದ ಮೂಲಕ ಕಾಸು ಗುಂಜುವ ಉದ್ದೇಶದೊಂದಿಗೇ ಚೀನಾ ಕೊರೋನಾ ವೈರಸ್ ಅನ್ನು ಸೃಷ್ಟಿ ಮಾಡಿತ್ತು. ಅದೇನೋ ಯಡವಟ್ಟು ನಡೆದು ಮೊದಲ ಸಲ ಚೀನಾದ ವುಹಾಂಗ್ನಲ್ಲಿಯೇ ಈ ವೈರಸ್ಸು ಜನರ ಮೇಲೆರಗಿ ಹೋಗಿತ್ತು. ಹೀಗೆ ಮಾಡಿದ ಪಾಪದಿಂದ ಆ ದೇಶಕ್ಕೆ ಈ ಕ್ಷಣಕ್ಕೂ ಮುಕ್ತಿಯೆಂಬುದೇ ಸಿಗುತ್ತಿಲ್ಲ.
ಇಡೀ ಜಗತ್ತು ಈ ಕ್ಷಣದಲ್ಲಿಯೂ ನಾಲಕನ್ನೇ ಅಲೆಯ ಆಘಾತ ಕಾಡುವ ಭಯದಲ್ಲಿದೆ. ಅಷ್ಟರಲ್ಲಾಗಲೇ ಚೀನಾದ ತುಂಬೆಲ್ಲ ನಾಲಕ್ಕನೇ ಅಲೆ ಹಬ್ಬಿಕೊಂಡಾಗಿತ್ತು. ವಿಶ್ವದಿಂದ ಇದೆಲ್ಲವನ್ನೂ ಮರೆಮಾಚಿ ಒಳಗಿಂದೊಳಗೇ ಎಲ್ಲವನ್ನೂ ತಹಬಂಧಿಗೆ ತರುವಂಥಾ ಚೀನಾದ ಕಸರತ್ತು ವ್ಯರ್ಥವಾಗಿದೆ. ಯಾವ್ಯಾವ ಪ್ರದೇಶದಲ್ಲಿ ಕೊರೋನಾ ಕೇಸುಗಳು ಹೆಚ್ಚಳವಾಗುತ್ತವೋ ಅಲ್ಲೆಲ್ಲ ಲಾಕ್ಡೌನ್ ಮಾಡಿ ಕೊರೋನಾವನ್ನು ಅಂಕೆಗೆ ತರುವ ಪ್ರಯತ್ನ ಮಾಡುತ್ತಿದ್ದ ಚೀನಾವೀಗ ಜಾಗತಿಕ ಮಟ್ಟದಲ್ಲಿ ಬೆತ್ತಲಾಗಿದೆ. ಇದೀಗ ಇಂಥಾ ಎಲ್ಲ ಕಸರತ್ತುಗಳ ಫಲವಾಗಿ ಚೀನಾ ನಾಲಕ್ಕನೇ ಹಂತದ ಕೊರೋನಾವನ್ನು ಎದುರಿಸಿ ಕೊಂಚ ನಿರಾಳವಾಗಿದೆ.
ಇಡೀ ಜಗತ್ತು ಕೊರೋನಾದಿಂದ ಸಾವು ನೋವು ಅನುಭವಿಸುತ್ತಿರುವಾಗಲೇ ಚೀನಾ ಎಲ್ಲದರಿಂದ ಪಾರಾದಂತೆ ಸಹಜ ಜೀವನ ಆರಂಭಿಸಿತ್ತು. ತಾನೇ ಸೃಷ್ಟಿ ಮಾಡಿದ್ದ ವೈರಸ್ಸು ಜಗತ್ತಿನ ಇತರೇ ದೇಶದ ಜನರನ್ನು ಆಪೋಶನ ತೆಗೆದುಕೊಳ್ಳುತ್ತಿದ್ದರೂ ಅಲ್ಲಿನ ಅಧಿಕಾರಸ್ಥರಿಗೆ ಕಿಂಚಿತ್ತೂ ಪಾಪ ಪ್ರಜ್ಞೆ ಇರಲಿಲ್ಲ. ಅಂಥಾ ಮನಸ್ಥಿತಿಯ ಮೇಲೆ ಗಧಾಪ್ರಹಾರ ಮಾಡುವಂತೆ ಅಲೆಅಲೆಯಾಗಿ ಕೊರೋನಾ ಚೀನಾಕ್ಕೆ ಬಂದಪ್ಪಳಿಸುತ್ತಿತ್ತು. ಅಲ್ಲಿಂದ ಇಲ್ಲೀವರೆಗೆ ಅಲ್ಲಿನ ಮಂದಿಗೆ ನೆಮ್ಮದಿ ಎಂಬುದೇ ಇರಲಿಲ್ಲ. ಎಲ್ಲದಕ್ಕೂ ನಿರ್ಭಂಧವಿತ್ತು. ಇದೀಗ ಅಲ್ಲಿ ಪರಿಸ್ಥಿತಿ ಕೊಂಚ ತಿಳಿಯಾಗಿದೆ. ಆನ ಜೀವನ ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿದೆ.