wonder matter: ಈಗ ನಮ್ಮ ಮಾತುಗಳೆಲ್ಲವೂ ಬೆರಳಂಚಿಗೆ ಬಂದು ನಿಂತಿವೆ. (communication) ಸಂಭಾಷಣೆ, (thinking) ಆಲೋಚನೆ, ವ್ಯವಹಾರಗಳೆಲ್ಲವೂ ಬೆರಳ ತುದಿಯಲ್ಲಿ ನಿಂತು ಲಾಸ್ಯವಾಡಲಾರಂಭಿಸಿವೆ. ಒಂದು ಕಾಲದಲ್ಲಿ (freinds) ಸ್ನೇಹಿತರು, ಸಂಬಂಧಿಕರು ವರ್ಷಕ್ಕೊಂದು ಸಾರಿ ಸೇರಿದರೆ ಅದೇ ಹೆಚ್ಚು. ಆ ನಂತರದ ಸಂಭಾಷಣೆ, ಹಾರೈಕೆಗಳೆಲ್ಲವೂ ಮನಸಲ್ಲಿಯೇ ಸಂಭವಿಸುತ್ತಿತ್ತು. ಈಗ ಮೊಬೈಲು (mobile) ಎಲ್ಲರನ್ನೂ ಹತ್ತಿರ ಬೆಸೆದಿದೆ. ದಿನಾ ಬೆಳಗ್ಗೆ ಒಂದು ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜು (messages) ಬಿಟ್ಟರೇನೇ ಸಂಬಂಧ ಗಟ್ಟಿಯಾಗಿರುತ್ತೆಂಬಂತೆ ಬಹುತೇಕರು ಅದಕ್ಕೆ ಅಡಿಕ್ಟ್ (addiction ಆಗಿಬಿಟ್ಟಿದ್ದಾರೆ.
ತೀರಾ ಕೆಲಸ ಕಾರ್ಯಕ್ಕೆ ಸಂಬಂಧಿಸಿದ ಮೆಸೇಜುಗಳೇ ಕಿರಿಕಿರಿ ಉಂಟು ಮಾಡುತ್ತವೆ. ಅಂಥಾ ಒತ್ತಡದಲ್ಲಿರುವವರ ಪಾಲಿಗೆ ಗುಡ್ ಮಾರ್ನಿಂಗ್ ಮತ್ತು ಗುಡ್ನೈಟ್ಗಳಂಥ ಯಾಂತ್ರಿಕ ಮೆಸೇಜುಗಳಂದ್ರೆ ಅಲರ್ಜಿ. ಕಸುಬಿಲ್ಲದವರು ಮಾತ್ರವೇ ಅಂಥಾದ್ದನ್ನು ವಿನಿಮಯ ಮಾಡಿಕೊಳ್ತಾರೆ ಅನ್ನೋದು ಆ ವೆರೈಟಿಯ ಜನರ ಅಚಲ ನಂಬಿಕೆ. ಇಂತಿಂಥವರಿಗೇ ಅಂತೇನಿಲ್ಲ; ಇಂಥಾ ಯಾಂತ್ರಿಕ ಮೆಸೇಜುಗಳ ವಿನಿಮಯ ನಮಗೆಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ರೇಜಿಗೆ ಹುಟ್ಟಿಸಿರುತ್ತೆ. ಆದರೆ ಸೈಕಾಲಜಿ ಮಾತ್ರ ಇದಕ್ಕೆ ತದ್ವಿರುದ್ಧವಾದ ಸಂಶೋಧನೆಯೊಂದನ್ನು ನಡೆಸಿದೆ.
ಅದರನ್ವಯ ಹೇಳೋದಾದ್ರೆ, ಬೆಳಗ್ಗೆ ಮತ್ತು ರಾತ್ರಿ ವಿನಿಮಯ ಮಾಡೋ ಇಂಥ ಮೆಸೇಜುಗಳು ಮಿದುಳಲ್ಲಿರೋ ಖುಷಿಯ ಕಣಗಳನ್ನು ಆಕ್ಟೀವ್ ಆಗಿಡುತ್ತದೆಯಂತೆ. ಅದೊಂದು ಥರದಲ್ಲಿ ಬೆಚ್ಚನೆಯ ಭಾವವನ್ನ ಮೂಡಿಸುತ್ತದೆಯಂತೆ. ಒಂದು ದಿಕ್ಕಿನಲ್ಲಿ ಆಲೋಚಿಸಿದರೆ ಈ ಸಂಶೋಧನೆಯಲ್ಲಿ ಸತ್ಯವಿದ್ದರೂ ಇರಬಹುದು. ಯಾರೂ ಇಲ್ಲದೆ ಅನಾಥರಾಗಿರುವವರು, ಎಲ್ಲರೂ ಇದ್ದೂ ಆ ಪ್ರೀತಿ ದಕ್ಕದಿರೋ ಜೀವಗಳ ಪಾಲಿಗೆ ಇಂಥಾ ಮೆಸೇಜುಗಳು ತಮ್ಮನ್ನು ವಿಚಾರಿಸಿಕೊಳ್ಳಲು ಯಾರೋ ಇದ್ದಾರೆಂಬ ಭಾವ ಮೂಡಬಹುದು.