ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಸಿನಿಮಾ ಕಡಲ ತೀರದ ಭಾರ್ಗವ. ಈ ಹೆಸರು ಕೇಳಿದಾಕ್ಷಣವೇ ಸಾಹಿತ್ಯಾಸಕ್ತರಿಗೆಲ್ಲ ಶಿವರಾಮ ಕಾರಂತರ ನೆನಪಾಗುತ್ತದೆ. ಆದರೆ ಈ ಚಿತ್ರದಲ್ಲಿರೋದು ಪಕ್ಕಾ ಮಾಸ್ ಭಾರ್ಗವ. ಈ ಹಿಂದೆ ಇದರದ್ದೊಂದು ಮಿಂಚಿನಂಥಾದ್ದೊಂದು ಟೀಸರ್ ಲಾಂಚ್ ಆಗಿತ್ತು. ಆ ಮೂಲಕ ಕಡಲ ತೀರದ ಭಾರ್ಗವ ಅದೆಂಥಾ ಮಾಸ್ ಲುಕ್ ಹೊಂದಿದ್ದಾನೆ, ಇಲ್ಲಿ ಅದೆಷ್ಟು ಕಟ್ಟುಮಸ್ತಾದ ಕಥೆಯಿದೆ ಅನ್ನೋದರ ಸ್ಪಷ್ಟ ಸುಳಿಉವು ಸಿಕ್ಕಿತ್ತು. ಇಂಥಾ ಸುಳಿವುಗಳ ಮೂಲಕ ಗಾಢ ಕುತೂಹಲ ಮೂಡಿಸಿರುವ ಈ ಸಿನಿಮಾವೀಗ ಬಿಡುಗಡೆಯ ಅಂಚಿನಲ್ಲಿದೆ. ಈ ಹೊತ್ತಿನಲ್ಲಿ ಟ್ರೈಲರ್ ಲಾಂಚ್ಗೂ ಮುಹೂರ್ತ ನಿಗಧಿಯಾಗಿದೆ.
ಚಿತ್ರತಂಡ ಪ್ರಕಟಿಸಿರುವ ಮಾಹಿತಿಯ ಪ್ರಕಾರ ಇದೇ ತಿಂಗಳ 13ರಂದು ಟ್ರೈಲರ್ ಬಿಡುಗಡೆಗೊಳ್ಳಲಿದೆ. ಒಂದು ಕನಸುಗಾರರ, ಸಿನಿಮಾ ವ್ಯಾಮೋಹಿಗಳ ತಂಡ ಸೇರಿ ಸಿದ್ಧಪಡಿಸಿರುವ ಈ ಸಿನಿಮಾ ಈಗಾಗಲೇ ಎಲ್ಲ ದಿಕ್ಕುಗಳಲ್ಲಿಯೂ ಟಾಕ್ ಕ್ರಿಯೇಟ್ ಮಾಡಿದೆ. ಪ್ರಚಾರದ ಅಬ್ಬರದಾಚೆಗೂ ತಾನೇ ತಾನಾಗಿ ಪ್ರೇಕ್ಷಕರೆಲ್ಲ ಕಡಲ ತೀರದ ಭಾರ್ಗವನತ್ತ ಕಣ್ಣಿಟ್ಟಿದ್ದಾರೆ. ಹೀಗೆ ಸದ್ದಿಲ್ಲದೆ ತೆರೆಗಾಣೋ ಸಿನಿಮಾಗಳು ಗಟ್ಟಿತನದಿಂದಲೇ ಗೆದ್ದು ಬೀಗಿದ ಅನೇಕ ಉದಾಹರಣೆಗಳಿದ್ದಾವೆ. ಹೇಳಿಕೇಳಿ ಕಳೆದ ವರ್ಷದಿಂದ ಅಂಥಾ ಪವಾಡಗಳ ಭರಾಟೆ ಹೆಚ್ಚಾಗಿದೆ. ಆ ಸಾಲಿಗೆ ಕಡಲ ತೀರದ ಭಾರ್ಗವ ಕೂಡಾ ಸೇರಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.
ಇನ್ನು ಸಿನಿಮಾದ ಒಳ ಹೊರಗಿನ ವಿಚಾರಕ್ಕೆ ಬರುವುದಾದರೆ, ಕಥೆಗೆ ತಕ್ಕುದಾಗಿ ಈ ಸಿನಿಮಾಗೆ ಕಡಲ ತೀರದ ಭಾರ್ಗವ ಎಂಬ ಹೆಸೆರಿಡಲಾಗಿದೆಯಂತೆ. ಭರತ್ ಮತ್ತು ಭಾರ್ಗವ ಎಂಬ ಇಬ್ಬರ ಕಥೆಯ ಈ ಸಿನಿಮಾ ಟೀಸರ್ ಕಾರಣದಿಂದ ಮತ್ತಷ್ಟು ಸುದ್ದಿ ವiರ್ಡಿತ್ತು. ಅದು ನಿಜಕ್ಕೂ ಇಡೀ ಚಿತ್ರದ ಬಗ್ಗೆ ಕುತೂಹಲವೆಂಬುದು ಉಕ್ಕೇರುವಂತೆ ಮಾಡುವಷ್ಟು ಶಶಕ್ತವಾಗಿದ್ದ ಟೀಸರ್. ಪ್ರೇಮದ ಛಾಯೆಯೊಂದಿಗೇ ಬಿಚ್ಚಿಕೊಂಡಿದ್ದ ಆ ಟೀಸರ್ನಲ್ಲಿ ನಶೆ, ಪ್ರೀತಿ, ನೋವು ಮತ್ತು ದ್ವೇಷದಂಥಾ ನಾನಾ ಭಾವಗಳು ತಟಿಕೆ ಹಾಕಿಕೊಂಡಿದ್ದವು. ಸುಲಭಕ್ಕೆ ಯಾರೂ ಅಂದಾಜಿಸಲಾಗದಂಥಾ ಅನೂಹ್ಯವಾದ ಕಥೆಯ ಸುಳಿವಿನೊಂದಿಗೆ ಕ್ರೇಜ್ ಸೃಷ್ಟಿಸಿದ್ದ ಕಡಲ ತೀರದ ಭಾರ್ಗವನ ಟ್ರೈಲರ್ ಕಣ್ತುಂಬಿಕೊಳ್ಳಲು ಕ್ಷಣಗಣನೆ ಶುರುವಾಗಿದೆ.
ಅಂದಹಾಗೆ, ಇದು ಪನ್ನಗ ಸೋಮಶೇಖರ್ ನಿರ್ದೇಶನದ ಚಿತ್ರ. ಈಗಾಗಲೇ ಪನ್ನಗ ಅನೇಕ ಕಿರು ಚಿತ್ರಗಳ ಮೂಲಕ ಸುದ್ದಿ ಮಾಡಿದ್ದಾರೆ. ಆ ಮೂಲಕವೇ ವμÁರ್ಂತರಗಳ ಅನುಭವವನ್ನು ಪಡೆದುಕೊಂಡು ವಿಶಿಷ್ಟ ಕಥೆಯೊಂದಿಗೆ ಕಡಲ ತೀರದ ಭಾರ್ಗವ ಎಂಬ ಈ ಸಿನಿಮಾದೊಂದಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಭರತ್ ಗೌಡ ಮತ್ತು ವರುಣ್ ರಾಜ್ ನಾಯಕರಾಗಿ ನಟಿಸಿರೋ ಈ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ನಾಯಕಿಯಾಗಿದ್ದಾರೆ. ಶೀರ್ಷಿಕೆಯ ಕಾರಣದಿಂದಲೇ ಈ ಸಿನಿಮಾ ಎಲ್ಲರನ್ನು ಸೆಳೆದುಕೊಂಡಿತ್ತು. ಆ ನಂತರ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ಸೋಕುತ್ತಾ ಸಾಗಿ ಬಂದು, ಇದೀಗ ಟ್ರೈಲರ್ ಬಿಡುಗಡೆಯೊಂದಿಗೆ ನಿರ್ಣಾಯಕ ಘಟ್ಟ ತಲುಪಿಕೊಳ್ಳಲಿದೆ.