ಯಾವುದಂದ್ರೆ ಯಾವುದಕ್ಕೂ ಕೇರು ಮಾಡದವರೂ ಜಿರಲೆ ಕಂಡರೆ ಜೀವವೇ ಹೋದಂತೆ ಕಿರುಚಿಕೊಳ್ಳೋದಿದೆ. ಅದ್ರಲ್ಲಿಯೂ ಹೆಚ್ಚಿನ ಹೆಂಗಳೆಯರಿಗೆ ಈ ಜಿರಲೆ ಭಯ ತುಸು ಹೆಚ್ಚು. ಅಡುಗೆ ಮನೆಯಲ್ಲಿಯೇ ಹೆಚ್ಚಾಗಿ ಉತ್ಪತ್ತಿಯಾಗೋ ಜಿರಲೆಗಳು ಬಹುತೇಕ ಎಲ್ಲರಲ್ಲಿಯೂ ಅಸಹ್ಯ ಹುಟ್ಟಿಸುತ್ವೆ. ಈ ಕಾರಣದಿಂದಾನೆ ಆಗಾಗ ಹೊಟೇಲು ತಿನಿಸುಗಳಲ್ಲಿ ಜಿರಲೆ ಫ್ಲೇವರ್ ಪ್ರತ್ಯಕ್ಷವಾಗೋದಂತೂ ನಮ್ಮಲ್ಲಿ ಮಾಮೂಲು. ಈಗ ಹೇಳ ಹೊರಟಿರೋದು ಅದೇ ಜಿರಲೆಯ ಅಚ್ಚರಿಯ ಅವತಾರವೊಂದರ ಬಗ್ಗೆ.
ನಿಮಗೆ ಕಾರು, ಬೈಕ್ ಮುಂತಾದ ರೇಸ್ಗಳು ಕಾಮನ್. ಅದರ ನಾನಾ ಪ್ರಾಕಾರಗಳು ನಮ್ಮ ದೇಶದಲ್ಲಿಯೂ ಕ್ರೇಜ಼್ ಸೃಷ್ಟಿಸಿರೋದು ಗೊತ್ತೇ ಇದೆ. ಆದ್ರೆ ಕಣ್ಣೆದುರು ಕಾಣಿಸಿಕೊಂಡರೆ ಕಸಿವಿಸಿಗೀಡು ಮಾಡೋ ಜಿರಳೆಗಳದ್ದೂ ಒಂದು ರೇಸ್ ಭಲೇ ಫೇಮಸ್ಸಾಗಿದೆ. ಅದು ದೂರದ ದೇಶ ಆಸ್ಟ್ರೇಲಿಯಾದಲ್ಲಿ ಕಾಮನ್. ಆದ್ರೆ ಆ ಜಿರಲೆ ರೇಸಿನ ಹಿಂದೆ ಅದೆಷ್ಟೋ ವರ್ಷಗಳ ಇತಿಹಾಸವೇ ಇದೆ.
ಜಿರಲೆ ರೇಸ್ ಎಂಬುದು ಒಂದು ಜೂಜಿನ ರೂಪದಲ್ಲಿ ಆಸ್ಟ್ರೇಲಿಯಾದಲ್ಲಿ ಬಹು ಕಾಲದಿಂದಲೂ ಚಾಲ್ತಿಯಲ್ಲಿದೆ. ಈ ವಿಚಿತ್ರ ರೇಸ್ ಅಲ್ಲಿ ಪ್ರತೀ ಜನವರಿ ೨೬ನೇ ತಾರೀಕಿನಂದು ಅದ್ಧೂರಿಯಾಗಿ ನಡೆಯುತ್ತೆ. ಜಿರಲೆ ರೇಸ್ ಅಂದಾಕ್ಷಣ ಅದು ಹೇಗೆ ನಡೆಯುತ್ತೆಂಬ ಕುತೂಹಲ ಮೂಡಿಕೊಳ್ಳೋದು ಸಹಜ. ಕಟ್ಟುಮಸ್ತಾದ, ಟ್ರೇನಿಂಗ್ ಕೊಟ್ಟ ಜಿರಳೆಗಳನ್ನು ಬಾಟಲಿಯಲ್ಲಿ ಹಿಡಿದಿಡಲಾಗುತ್ತೆ. ನಂತ್ರ ಅದನ್ನ ಆರು ಮೀಟರ್ ಸುತ್ತಳತೆಯಿರೋ ರಿಂಗ್ನಲ್ಲಿ ಬಿಡಲಾಗುತ್ತೆ. ಅದರೊಳಗಿನ ಫಿನಿಶ್ ಲೈನ್ ಅನ್ನು ಮೊದಲು ಮುಟ್ಟಿದ ಜಿರಳೆ ಗೆಲ್ಲುತ್ತೆ.
ಅಂದಹಾಗೆ, ಆ ಆರು ಮೀಟರ್ ಅಖಾಡಕ್ಕಿಳಿಯೋ ರೇಸರ್ ಜಿರಳೆಗಳ ಮೇಲೆ ದೊಡ್ಡ ಮೊತ್ತದಲ್ಲಿ ಬೆಟ್ಟಿಂಗ್ ನಡೆಯುತ್ತೆ. ಹಾಗೆಂದ ಮಾತ್ರಕ್ಕೆ ಇದೊಂದು ಹಣಕಾಸಿನ ಬೇಸಿನ ಜೂಜು ಅಂದ್ಕೋಳೋವಂತಿಲ್ಲ. ಯಾಕಂದ್ರೆ, ಹಾಗೆ ಜೂಜಿನಲ್ಲಿ ಗೆದ್ದ ಹಣವನ್ನು ಹಲವಾರು ಸಾಮಾಜಿಕ ಕೆಲಸ ಕಾರ್ಯಗಳಿಗೆ ಬಳಸಲಾಗುತ್ತಂತೆ. ಇದೀಗ ಫೇಮಸ್ ಆಗಿರೋ ಈ ಜಿರಲೆ ರೇಸ್ ಆರಂಭವಾದದ್ದು ೧೯೮೨ರಲ್ಲಿ. ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನ ಬ್ರಿಸ್ಟೆಲ್ ಎಂಬಲ್ಲಿರೋ ಸ್ಟೋರಿ ಬ್ರಿಡ್ಜ್ ಹೊಟೆಲಿನಲ್ಲದು ಶುರುವಾಗಿತ್ತು.