ಕನ್ನಡ ಚಿತ್ರರಂಗವೀಗ ಹೊಸಾ ಸಂವತ್ಸರದತ್ತ ನವೋತ್ಸಾಹದಿಂದ ಮುಖ ಮಾಡಿ ನಿಂತಿದೆ. ಕಳೆದ ವರ್ಷದ ಸಮ್ಮೋಹಕ ಗೆಲುವಿನ ಪ್ರಭೆಯಲ್ಲಿಕಯೇ ಮತ್ತೊಂದಷ್ಟು ಹೊಸತನದ, ಭಿನ್ನ ಕಥಾನಕದ ಚಿತ್ರಗಳು ಬಿಡುಗಡೆಯ ಹೊಸ್ತಿಲಿನಲ್ಲಿವೆ. ಅದರಲ್ಲೊಂದಷ್ಟು ಸಿನಿಮಾಗಳು ಕಳೆದ ವರ್ಷದಿಂದಲೇ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡು ಸಾಗಿ ಬಂದಿವೆ. ಈ ಕಾರಣದಿಂದಲೇ ನಿರೀಕ್ಷೆ ಮೂಡಿಸಿರುವ ಅಂಥಾ ಚಿತ್ರಗಳ ಸಾಲಿನಲ್ಲಿ ಕಡಲ ತೀರದ ಭಾರ್ಗವ ಚಿತ್ರವೂ ಸೇರಿಕೊಳ್ಳುತ್ತೆ. ಈ ಹಿಂದೆ ಟೀಸರ್ ಮೂಲಕ ಸಂಚನ ಸೃಷ್ಟಿಸಿದ್ದ ಈ ಈ ಕಥನವೀಗ, ಚೆಂದದ ಹಾಡೊಂದರ ಮೂಲಕ ಭೋರ್ಗರೆದಿದೆ. ಮಧುರ ಮಧುರ ಎಂಬ ಹಾಡಿನೊಂದಿಗೆ ರೊಮ್ಯಾಂಟಿಕ್ ಫೀಲ್ ಒಂದನ್ನು ಕೇಳುಗರೆದೆಗೆ ದಾಟಿಸಿ, ಅವ್ಯಕ್ತ ಭಾವವೊಂದನ್ನು ಪ್ರತೀ ಮನಸುಗಳಿಗೆ ನಾಟಿಸುವಲ್ಲಿ ಯಶ ಕಂಡಿದೆ.
ಅಂದಹಾಗೆ, ಇದು ಪನ್ನಗ ಸೋಮಶೇಖರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಇದರ ಭಾಗವಾಗಿರೋ ಸದರಿ ಹಾಡನ್ನು ಭರ್ಜರಿ ಚೇತನ್ ಬರೆದಿದ್ದಾರೆ. ಅನಿಲ್ ಸಿಜೆ ಸಂಗೀತ ನ ಇರ್ದೇಶನದಲ್ಲಿ ಕಳೆಗಟ್ಟಿಕೊಂಡಿರುವ ಈ ಗೀತೆ ಎಆರ್ಸಿ ಮ್ಯೂಸಿಕ್ ಚಾನೆಲ್ ಮೂಲಕ ಬಿಡುಗಡೆಗೊಂಡಿದೆ. ನಾಯಕ ಭರತ್ ಗೌಡ ಮತ್ತು ನಾಯಕಿ ಶ್ರುತಿ ಪ್ರಕಾಶ್ ಮುದ್ದಾಗಿ ಕಾಣಿಸಿಕೊಂಡಿರುವ ಈ ವೀಡಿಯೋ ಸಾಂಗ್ಗೆ ಕೇಳುಗರೆಲ್ಲ ಭೇಷ್ ಅಂದಿದ್ದಾರೆ. ಈ ಕಾರಣದಿಂದಲೇ ಹೆಚ್ಚೆಚ್ಚು ವೀಕ್ಷಣೆ ಪಡೆಯುತ್ತಾ ಮುಂದುವರೆಯುತ್ತಿದೆ.
ಕಥೆಗೆ ತಕ್ಕುದಾಗಿ ಈ ಸಿನಿಮಾಗೆ ಕಡಲ ತೀರದ ಭಾರ್ಗವ ಎಂಬ ಹೆಸೆರಿಡಲಾಗಿದೆಯಂತೆ. ಭರತ್ ಮತ್ತು ಭಾರ್ಗವ ಎಂಬ ಇಬ್ಬರ ಕಥೆಯ ಈ ಸಿನಿಮಾ ಈ ಹಿಂದೆ ಟೀಸರ್ ಕಾರಣದಿಂದ ಮತ್ತಷ್ಟು ಸುದ್ದಿ ಮಾಡಿತ್ತು. ಅದು ನಿಜಕ್ಕೂ ಇಡೀ ಚಿತ್ರದ ಬಗ್ಗೆ ಕುತೂಹಲವೆಂಬುದು ಉಕ್ಕೇರುವಂತೆ ಮಾಡುವಷ್ಟು ಶಶಕ್ತವಾಗಿ ಮೂಡಿ ಬಂದಿತ್ತು. ಗಾಢ ಪ್ರೇಮದ ಛಾಯೆಯೊಂದಿಗೇ ಬಿಚ್ಚಿಕೊಳ್ಳೋ ಈ ಟ್ರೇಲರ್ನಲ್ಲಿ ನಶೆ, ಪ್ರೀತಿ, ನೋವು ಮತ್ತು ದ್ವೇಷದಂಥಾ ನಾನಾ ಭಾವಗಳ ತಟಿಕೆ ಹಾಕಿಕೊಂಡಂತಿತ್ತು. ಇದು ಮಾತ್ರವಲ್ಲದೇ ಸುಲಭಕ್ಕೆ ಯಾರೂ ಅಂದಾಜಿಸಲಾಗದಂಥಾ ಅನೂಹ್ಯವಾದ ಕಥೆಯ ಸುಳಿವಿನೊಂದಿಗೆ ಟೀಸರ್ ಪರಿಣಾಮಕಾರಿಯಾಗಿ ಮೂಡಿ ಬಂದಿತ್ತು. ಹಾಗೆ ಸದ್ದು ಮಾಡಿದ್ದ ಕಡಲತೀರದ ಭಾರ್ಗವ, ಇದೀಗ ರೊಮ ಯಾಂಟಿಕ್ ಹಾಡಿನ ಮೂಲಕ ಮತ್ತೆ ಮನಸು ಮುಟ್ಟಿದ್ದಾನೆ.
ಇದು ಪನ್ನಗ ಸೋಮಶೇಖರ್ ನಿರ್ದೇಶನದ ಚಿತ್ರ. ಈಗಾಗಲೇ ಪನ್ನಗ ಅನೇಕ ಕಿರು ಚಿತ್ರಗಳ ಮೂಲಕ ಸುದ್ದಿ ಮಾಡಿದ್ದಾರೆ. ಆ ಮೂಲಕವೇ ವμÁರ್ಂತರಗಳ ಅನುಭವವನ್ನು ಪಡೆದುಕೊಂಡು ವಿಶಿಷ್ಟ ಕಥೆಯೊಂದಿಗೆ ಕಡಲ ತೀರದ ಭಾರ್ಗವ ಎಂಬ ಈ ಸಿನಿಮಾದೊಂದಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಭರತ್ ಗೌಡ ಮತ್ತು ವರುಣ್ ರಾಜ್ ನಾಯಕರಾಗಿ ನಟಿಸಿರೋ ಈ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ನಾಯಕಿಯಾಗಿದ್ದಾರೆ. ಶೀರ್ಷಿಕೆಯ ಕಾರಣದಿಂದಲೇ ಈ ಸಿನಿಮಾ ಎಲ್ಲರನ್ನು ಸೆಳೆದುಕೊಂಡಿತ್ತು. ಆದರೆ ಈಗ ಬಿಡುಗಡೆಯಾಗಿರೋ ಈ ಹಾಡು ಎಲ್ಲರೊಳಗೂ ಹೊಸಾ ಅನುಭೂತಿಯೊಂದನ್ನು ಸ್ಫುರಿಸುವಲ್ಲಿ ಯಶ ಕಂಡಿದೆ.