ಪ್ರಕೃತಿಯ ವೈಚಿತ್ರ್ಯಗಳಿಗೆ ಕೊನೆಯೆಂಬುದಿಲ್ಲ. ವಿಜ್ಞಾನ ಅದೆಷ್ಟೇ ಆವಿಷ್ಕಾರಗಳನ್ನ ನಡೆಸಿದರೂ ಅದರ ಕಣ್ಣು ತಪ್ಪಿಸಿಕೊಂಡಿರೋ ಅದೆಷ್ಟೋ ಅದ್ಭುತಗಳು ಈ ಜಗತ್ತಿನಲ್ಲಿವೆ. ನಾವು ಪ್ರಕೃತಿಯನ್ನ ನಮ್ಮ ದೃಷ್ಟಿಗೆ ಸೀಮಿತಗೊಳಿಸಿ ನೋಡುತ್ತೇವೆ. ಆದರೆ ಅದರ ನಿಗೂಢಗಳು ಕಣ್ಣಳತೆಯನ್ನ ಮೀರಿದಂತಿವೆ. ನದಿ ನೀರೆಂದರೆ ತಣ್ಣಗಿರುತ್ತದೆಂಬುದು ನಮ್ಮ ನಂಬಿಕೆ. ಅದನ್ನ ಸುಳ್ಳು ಮಾಡುವಂಥಾ ವರತೆಯೊಂದು ನಮ್ಮದೇ ದೇಶದಲ್ಲಿದೆ. ಆದ್ರೆ ಅಮೇಜಾನಿನ ದಟ್ಟ ಕಾಡಿನ ಒಡಲಲ್ಲೊಂದು ನದಿ ಕೊತ ಕೊತನೆ ಕುದಿಯುತ್ತಾ ಅದೆಷ್ಟೋ ಕಾಲದಿಂದ ಹರಿಯುತ್ತಿದೆ.
ಅದು ದಟ್ಟವಾದ ಅಮೇಜಾನ್ ಕಾಡಿನ ಗರ್ಭದಲ್ಲಿರೋ ಅಚ್ಚರಿ. ಆಂಡ್ರ್ಯೂ ರೋeóÉೂೀ ಎಂಬ ಉತ್ಸಾಹಿ ಯುವ ವಿಜ್ಞಾನಿ ಪ್ರಯತ್ನಿಸದಿದ್ದರೆ ಆ ನದಿ ನಿಗೂಢವಾಗಿಯೇ ಉಳಿದು ಬಿಡುತ್ತಿತ್ತೇನೋ… ಆದ್ರೆ ಆತನ ಪರಿಶ್ರಮ, ಕುತೂಹಲದ ಕಾರಣದಿಂದ ಇಂಥಾದ್ದೊಂದು ಪರಮಾಚ್ಚರಿ ಜಗತ್ತಿನೆದುರು ಅನಾವರಣಗೊಂಡಿದೆ. ಅಂಥಾ ಅಪರೂಪದ ನದಿಯ ಗುಣಲಕ್ಷಣಗಳನ್ನ ನೋಡಿದ್ರೆ ಯಾರೇ ಆದ್ರೂ ಅವಾಕ್ಕಾಗದಿರೋಕೆ ಸಾಧ್ಯವೇ ಇಲ್ಲ.
ಅಮೇಜಾನ್ ಕಾಡೆಂದರೆ ಅಪಾರ ಜೀವರಾಶಿ, ಯಾವ ಲೆಕ್ಕಕ್ಕೂ ನಿಲುಕದ ಸಸ್ಯ ಸಂಪತ್ತಿನಿಂದ ಕೂಡಿದ ಪ್ರದೇಶ. ಆ ದಟ್ಟಡವಿಯ ತುಂಬಾ ನಿಗೂಢಗಳದ್ದೇ ದಟ್ಟಣೆಯಿದೆ. ಅಂಥಾ ಕಾಡಿನ ಒಂದು ಭಾಗದಲ್ಲಿ ಕೊತಕೊತನೆ ಕುದಿಯೋ ನದಿ ಸದ್ದಿಲ್ಲದೆ ಹರಿಯುತ್ತೆ. ಅದರ ನೀರು ಅದೆಷ್ಟು ಬಿಸಿಯಿರುತ್ತದಂದ್ರೆ ಆಯ ತಪ್ಪಿ ಒಂದು ಆನೆ ನೀರೊಳಗೆ ಬಿದ್ದರೂ ಬೆಂದೇ ಹೋಗುತ್ತೆ. ಆ ಪಾಟಿ ಬಿಸಿ ನೀರು ಧುಮ್ಮಿಕ್ಕಿ ಹರಿಯುತ್ತದೆಂದರೆ ಬೆರಗಾಗದಿರೋಕೆ ಸಾಧ್ಯವೇ?
ಅಮೇಜಾನ್ ಕಾಡು ಅನ್ವೇಷಕರ ಪಾಲಿನ ಸ್ವರ್ಗ. ಅದರ ದೆಸೆಯಿಂದಲೇ ಸಾಕಷ್ಟು ವಿಚಾರಗಳು ಜಗತ್ತಿನ ಮುಂದೆ ಜಾಹೀರಾಗಿವೆ. ಆದರೆ ಜಾಹೀರಾಗಿರೋ ಅಂಶಗಳು ಅಮೇಜಾನ್ ಒಡಲಲ್ಲಿರೋ ನಿಗೂಢಗಳ ಮುಂದೆ ಸೊನ್ನೆ. ಆ ಮಾತಿಗೆ ತಕ್ಕುದಾದ ಅನ್ವೇಷಣೆಯನ್ನ ವಿಜ್ಞಾನಿ ಆಂಡ್ರ್ಯೂ ರೋeóÉೂೀ ಮಾಡಿದ್ದಾರೆ. ಆಂಡ್ರ್ಯೋ ತಾತ ಅಮೇಜಾನ್ ಕಾಡಿನ ಒಡಲಲ್ಲಿ ಕುದಿಯೋ ನದಿಯಿರುವ ಸುಳಿವು ಕೊಟ್ಟಿದ್ದರಂತೆ. ಅದರ ಆಧಾರದಲ್ಲಿ ತಿಂಗಳುಗಟ್ಟಲೆ ಅಮೇಜಾನ್ ಕಾಡಿನಲ್ಲಿ ಅಂಡಲೆದಿದ್ದ ಆಂಡ್ರ್ಯೋ ಕಡೆಗೂ ಕುದಿಯೋ ನದಿಯನ್ನ ವರ್ಷದ ಹಿಂದೆ ಪತ್ತೆಹಚ್ಚಿದ್ದಾರೆ.