ಅಲ್ಲಿಂದಲೇ ಹಬ್ಬುತ್ತಿದೆ ಗಾಂಜಾ ನಶೆ!
ಬೆಂಗಳೂರೆಂಬ ಮಹಾನಗರದಿಂದ ಅಕ್ರಮ ವಲಸಿಗರನ್ನು ಹೊರ ದಬ್ಬಬೇಕೆಂಬ ಕೂಗು ಆಗಾಗ ಕೇಳಿ ಬಂದು ತಣ್ಣಗಾಗುತ್ತದೆ. ಹಾಗೆ ನಾನಾ ಥರದಲ್ಲಿ ಇಲ್ಲಿಗೆ ಬಂದು ಠಿಕಾಣಿ ಹೂಡಿರುವವರೆಲ್ಲ ಗಾಂಜಾ ಮಾಫಿಯಾವೂ ಸೇರಿದಂತೆ ಥರ ಥರದ ದಂಧೆಗಳಲ್ಲಿ ಭರಪೂರವಾಗಿಯೇ ಕಾಸೆಣಿಸುತ್ತಿದ್ದಾರೆ. ಓದುವ ನೆಪದಲ್ಲಿ ಇಲ್ಲಿ ಬೀಡು ಬಿಟ್ಟಿರುವ ವಿದೇಶಿ ವಿದ್ಯಾರ್ಥಿಗಳು ಶುದ್ಧಾನುಶುದ್ಧ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಕತ್ತಲಾವರಿಸುತ್ತಲೇ ಅಡ್ಡಾ ಹಾಕಿ ಹೊಟ್ಟೆತುಂಬಾ ಕುಡಿದು, ಗಾಂಜಾ ಸೇದಿ ತಾರಾಡುತ್ತಾ ಈ ಲಫಂಗರು ನಡೆಸುತ್ತಿರುವ ಅನಾಹುತಗಳು ಒಂದೆರಡಲ್ಲ. ಈ ಬಗ್ಗೆ ಆಗಾಗ ಮಾತಾಡುತ್ತಾ ಬಂದಿರೋ ಬೆಂಗಳೂರು ಪೊಲೀಸ್ ಆಯುಕ್ತರು ತಕ್ಷಣಕ್ಕೆ ಈ ಬಗ್ಗೆ ಗಮನಮ ಹರಿಸದೇ ಹೋದರೆ ಮತ್ತದೇ ಅನಾಹುತಗಳು ಪುನರಾವರ್ತನೆಯಾಗೋದರಲ್ಲಿ ಯಾವ ಅನುಮಾನವೂ ಇಲ್ಲ.ಅದೇನೇ ಸರ್ಕಸ್ಸು ನಡೆಸಿದರೂ ದಕ್ಷಿಣಾಫ್ರಿಕಾ ಮೂಲದ ಮಂದಿ ಬೆಂಗಳೂರಲ್ಲಿ ನಡೆಸುತ್ತಿರುವ ಅಕ್ರಮ ದಂಧೆಗಳನ್ನು ಮರೆಮಾಚಲು ಸಾಧ್ಯವಿಲ್ಲ. ಈ ಘಟನೆಯನ್ನಿಟಟುಕೊಂಡು ಬೆಂಗಳೂರಲ್ಲಿ ವಾಸ ಮಾಡುತ್ತಿರುವ ದಕ್ಷಿಣಾಫ್ರಿಕಾ ಖಂಡದ ಮಂದಿ ವಿಶ್ವದ ಮಾಧ್ಯಮಗಳ ಮುಂದೆ ನಿಂತು ಅಮಾಯಕರಂತೆ ಪೋಜು ಕೊಡುತ್ತಿದ್ದಾರೆ. ಒಂದು ಮಗ್ಗುಲನ್ನೇ ಮುಂದಿಟ್ಟುಕೊಂಡು ಚರ್ಚೆ ನಡೆಸುತ್ತಿರುವ ಭಾರತೀಯ ಮಾಧ್ಯಮಗಳೇ ಬೆಂಗಳೂರಿಗರ ಅಖಂಡ ಸೈರಣೆಗೆ ಮಹಾ ಅವಮಾನ ಎಸಗುತ್ತಿದ್ದಾರೆ. ಆದರೆ ದಕ್ಷಿಣಾಫ್ರಿಕಾ ಮೂಲದ ಆಸಾಮಿಗಳು ಇಲ್ಲಿ ಎಂತೆಂಥಾ ದಂಧೆ ನಡೆಸುತ್ತಿದ್ದಾರೆ, ಅವರು ತಮ್ಮ ಖಂಡದಿಂದ ಇಲ್ಲಿಗೆ ಓದಲು ಬಂದ ವಿದ್ಯಾರ್ಥಿಗಳನ್ನೂ ಹೇಗೆಲ್ಲಾ ಅದಕ್ಕೆ ಬಳಸಿಕೊಳ್ಳುತ್ತಿದ್ದಾರೆಂಬ ಬಗ್ಗೆ ತಲಾಶ್ ನಡೆಸಿದರೆ ಆಘಾತಕಾರಿ ಮಾಹಿತಿಗಳೇ ಹೊರ ಬೀಳುತ್ತವೆ.
ವ್ಯಾಪಾರ ವಹಿವಾಟು ಸೇರಿದಂತೆ ನಾನಾ ನೆಪದಿಂದ ಇಲ್ಲಿಗೆ ಬರುವ ಆಫ್ರಿಕಾ ಮೂಲದವರು ವಿಸಾ ಅವಧಿ ಮುಗಿದ ಮೇಲೂ ಇಲ್ಲಿಯೇ ಝಾಂಡಾ ಊರುತ್ತಾರೆ. ಮೊದಲಿಗೆ ಬೆಂಗಳೂರಿಗೆ ಬಂದು ವಿಸಾ ಅವಧಿ ಮುಗಿದ ಮೇಲೆ ಕಾನೂನಿನ ಕಣ್ಣಿಂದ ತಪ್ಪಿಸಿಕೊಳ್ಳಲು ರಾಜ್ಯದ ನಾನಾ ಮೂಲೆಗಳಲ್ಲಿ ಚದುರಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಮಾಹಿತಿ ಕಲೆರ ಹಾಕಿದರೆ ರಾಜ್ಯಾದ್ಯಂತ ಆಫ್ರಿಕಾದ ಹದಿನೈದು ದೇಶಗಳ ಮೂವತೈದು ಸಾವಿರಕ್ಕೂ ಹೆಚ್ಚು ಮಂದಿ ವಾಸಿಸುತ್ತಿರುವ ಸಂಗತಿ ಸಾಬೀತಾಗುತ್ತದೆ. ಇದರಲ್ಲಿ ಬಹುತೇಕರು ಅಕ್ರಮ ನಿವಾಸಿಗಳು. ಇಂಥವರೆಲ್ಲ ನಾನಾ ದಂಧೆಗಳಲ್ಲಿ ತೊಡಗಿಕೊಂಡು ಪೊಲೀಸರಿಗೇ ಸವಾಲಾಗಿದ್ದಾರೆ. ಹೀಗೆ ಅಕ್ರಮವಾಗಿ ಇಲ್ಲಿ ವಾಸವಿರುವ ಅರ್ಧದಷ್ಟು ಮಂದಿ ಥರ ಥರದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರೋದನ್ನು ಪೊಲೀಸ್ ಇಲಾಖೆಯ ಫೈಲ್ಗಳೇ ಸಾಕ್ಷೀಕರಿಸುತ್ತವೆ. ಕೆಲ ಖಡಕ್ ಪೊಲೀಸ್ ಅಧಿಕಾರಿಗಳು ಇವರ ದಂಧೆಗಳನ್ನು ಮಟ್ಟಹಾಕಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಆದರೆ ಈ ಸರ್ಕಾರ ಮಾತ್ರ ಇದೀಗ ವಿದೇಶಿಗರನ್ನು ಓಲೈಸಿಕೊಳ್ಳಲು ಅಂಥಾ ದಕ್ಷ ಅಧಿಕಾರಿಗಳನ್ನೇ ಅಮಾನತುಗೊಳಿಸಿ ಜನವಿರೋಧಿಯಾಗಿ ನಡೆದುಕೊಳ್ಳುತ್ತಾ ಬಂದಿದೆ.
ಬೆಂಗಳೂರೆಂಬುದು ಈವತ್ತು ಬೇರೆ ಬೇರೆ ರಾಜ್ಯಗಳ ಪಾತಕಿಗಳು ಮತ್ತು ವಿಶ್ವದ ಅನೇಕ ದೇಶಗಳ ಅಕ್ರಮ ನಿವಾಸಿಗಳ ಗುಡಾಣದಂತಾಗಿದೆ. ತಾಂಜೇನಿಯಾ, ಉಗಾಂಡ, ನೈಜೀರಿಯಾ, ಕೀನ್ಯಾ, ಘಾನಾ, ಸುಡಾನ್, ಲಿಬಿಯಾ, ಇಥಿಯೋಫಿಯಾ, ಕಾಂಗೋ, ಅಲ್ಜೀರಿಯಾ, ಜಾಂಬಿಯಾ ನಮೀಬಿಯಾ ಸೇರಿದಂತೆ ಹದಿನೈದಕ್ಕೂಕ್ಕೂ ಹೆಚ್ಚು ಆಫ್ರಿಕನ್ ದೇಶಗಳ ಮೂವತ್ತೆರಡು ಸಾವಿರ ಪ್ರಜೆಗಳ ವೀಸಾ ಅವಧಿ ಮುಗಿದು ಭರ್ತಿ ಮೂರು ವರ್ಷವೇ ಕಳೆದು ಹೋಗಿವೆ. ಅವರೆಲ್ಲರೂ ರಾಜ್ಯದ ವಿವಿಧ ನಗರಗಳಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ. ಇಂಥಾ ಅಕ್ರಮ ನಿವಾಸಿಗಳಲ್ಲಿ ಅರ್ಧದಷ್ಟು ಆಫ್ರಿಕನ್ ಪ್ರಜೆಗಳು ನಾನಾ ಸಮಾಜ ಬಾಹಿರ ದಂಧೆಗಳಲ್ಲಿ ಭಾಗಿಗಳಾಗಿದ್ದಾರೆ. ಮಾದಕ ವಸ್ತು ಕಳ್ಳ ಸಾಗಣೆ, ವೇಶ್ಯಾವಾಟಿಕೆ, ಆನ್ಲೈನ್ ವಂಚನೆ, ದರೋಡೆ, ಸುಲಿಗೆ, ನಕಲಿ ಪದವಿಗಳ ಮಾರಾಟ ದಂಧೆಯಲ್ಲಿ ಆಫ್ರಿಕನ್ ಪ್ರಜೆಗಳು ವ್ಯಾಪಕವಾಗಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರು, ಮಂಗಳೂರು ಹಾಗೂ ಬೆಳಗಾವಿಯಲ್ಲೂ ಮಾದಕ ವಸ್ತು ಮಾರಾಟ ಭರ್ಜರಿಯಾಗಿಯೇ ನಡೆಯುತ್ತಿದೆ. ವಿದೇಶಕ್ಕೆ ಕಳ್ಳಸಾಗಣೆ ಮಾಡುವುದನ್ನು ಹೊರತುಪಡಿಸಿ ಒಟ್ಟಾರೆಯಾಗಿ ರಾಜ್ಯದಲ್ಲಿ ಕೋಟಿ ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಪಬ್, ಬಾರ್, ರೆಸಾರ್ಟ್ ಗಳ ಜತೆಗೆ ಶಾಲಾ-ಕಾಲೇಜುಗಳು ಡ್ರಗ್ಸ್ ಮಾಫಿಯಾದ ಟಾರ್ಗೆಟ್ ಆಗಿರುವುದರಿಂದ ಇಲ್ಲಿನ ವಹಿವಾಟು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ.
ಇದುವರೆಗೆ ರಾಜ್ಯದಲ್ಲಿ ಒಂದಷ್ಟು ಮಂದಿಯ ಮೇಲೆ ಮಾತ್ರ ದೂರು ದಾಖಲಾಗಿದೆ. ಅಂದಹಾಗೆ ಆಫ್ರಿಕನ್ ಖದೀಮರು ನಡೆಸುತ್ತಿರುವ ಮುಖ್ಯ ದಂಧೆ ಡ್ರಗ್ಸ್ ಡೀಲಿಂಗ್. ಇದಕ್ಕೆ ಈ ಹಲಾಲುಕೋರರು ಬಳಸಿಕೊಳ್ಳುತ್ತಿರುವುದು ಆಫ್ರಿಕಾ ಖಂಡದಿಂದ ಬಂದು ಇಲ್ಲಿನ ನಾನಾ ಕಾಲೇಜುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನೇ. ಇಂಥಾ ವಿದ್ಯಾರ್ಥಿಗಳ ಮೂಲಕ ಕಾಲೇಜುಗಳಲ್ಲಿ ಡ್ರಗ್ಸ್ ಸರಬರಾಜಾಗುವಂತೆ ನೋಡಿಕೊಳ್ಳುವ ಮಾಫಿಯಾ ಮಂದಿ ಕೈತುಂಬಾ ಕಾಸು ಕೊಡುತ್ತಾರೆ. ಈವತ್ತು ಹೆಸರಘಟ್ಟ ಸೇರಿದಂತೆ ನಾನಾ ಭಾಗಗಳಲ್ಲಿ ಆಫ್ರಿಕನ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರಲ್ಲಿ ಓಡಾಡುತ್ತಾ, ಬಾರು ಪಬ್ಬುಗಳಲ್ಲಿ ತೂರಾಡುತ್ತಾ ಹೈಫೈ ಜೀವನ ನಡೆಸುತ್ತಿರುವುದರ ಹಿಂದೆ ಇರುವುದು ಡ್ರಗ್ಸ್ ಮಾಫಿಯಾದ ಹಡಬೇ ಕಾಸೇ ಹೊರತು ಬೇರೇನಲ್ಲ!
ಆಳೋ ಸರ್ಕಾರಗಳಿಗೆ ಈ ಬಗ್ಗೆ ಕೊಂಚ ಗಮನವಿದ್ದಿದ್ದರೂ ಬೆಂಗಳೂರೆಂಬುದು ಈವತ್ತಿಗೆ ಈ ಪಾಟಿ ದಂಧೆಗಳ ದಾವಾನಲವಾಗಿ ಮಾರ್ಪಾಡುಗೊಳ್ಳುತ್ತಿರಲಿಲ್ಲ. ವಿಸಾ ಅವಧಿ ಮುಗಿದರೂ ಇಲ್ಲೇ ಮಾಡ ಬಾರದ್ದು ಮಾಡುತ್ತಿರುವವರ ಬುಡಕ್ಕೊದ್ದು ಓಡಿಸುವ ಕೆಲಸಗಳೂ ಆಗುತ್ತಿದ್ದವು. ಆದರೆ ವಿಶವಮಟ್ಟದಲ್ಲಿ ಜನಾಂಗೀಯ ದ್ವೇಶದ ಆಪಾದನೆಗೆ ಗುರಿಯಾಗಬೇಕಾದೀತೆಂಬ ಹೆದರಿಕೆಯಲ್ಲಿ ಸರ್ಕಾರಗಳು ಅಕ್ರಮ ವಾಸಿಗಳ ದಂಧೆಗಳಿಗೆ ಮತ್ತಷ್ಟು ಬಲ ತುಂಬುವ ದುಷ್ಟ ಕೆಲಸ ಮಾಡುತ್ತಾ ಬಂದಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇನ್ನಾದರೂ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇಲ್ಲಿ ಇಳಿಬಿಟ್ಟಿರುವ ವಿದೇಶಿ ಪ್ರಜೆಗಳ ಅಕ್ರಮ ದಂಧೆಗಳ ಬೇರುಗಳನ್ನು ಕಿತ್ತೆಸೆಯದೇ ಹೋದರೆ ಅದು ರಾಜ್ಯಾದ್ಯಂತ ವ್ಯಾಪಿಸಿ ಯುವ ಸಮುದಾಯವನ್ನೇ ಬಲಿ ತೆಗೆದುಕೊಳ್ಳುತ್ತದೆ. ಈ ಬಗ್ಗೆ ಸರ್ಕಾರ ಮತ್ತು ಪೊಲೀಸ್ ಆಯುಕ್ತರು ಗಮನಹರಿಸಬಹುದೇ?