ನಿನ್ನದೊಂದು ತುಂಟ ನೋಟಕ್ಕಾಗಿ ಶಬರಿಯಾಗೋ ಸುಖ!

ನಿಮಗಾದರೆ ಕೊರೆಯುವ ತಲ್ಲಣಗಳಿಂದ ತಲೆತಪ್ಪಿಸಿಕೊಳ್ಳಲು ನಾನಾ ದಾರಿಗಳುಂಟು. ಮುತ್ತಿಕೊಂಡು ಕಾಡಿ ಕಂಗೆಡಿಸೋ ನೆನಪುಗಳಿಂದ ತಪ್ಪಿಸಿಕೊಳ್ಳುವುದಕ್ಕೂ ನಿಮಗೆ ಭಗವಂತ ರಾಜಾರೋಷದ ರಾಜಮಾರ್ಗಗಳನ್ನೇ ಸೃಷ್ಟಿಸಿಟ್ಟಿದ್ದಾನೆ. ಸೀದಾ ಹೋಗಿ ಇರಿಕ್ಕು ಗಲ್ಲಿಗಳಲ್ಲೊಂದು ಬೇಕರಿ ಹುಡುಕಿ ಒಂದರ್ಧ ಟೀ...

ಹೊಸಾ ಬುಲೆಟ್ಟಿನ ಹಿಂಬದಿ ಸೀಟನ್ನು ನಿನಗೆಂದೇ ರಿಸರ್ವ್ ಮಾಡಿಟ್ಟು…

ಸ್ಕೂಟಿ ಹುಡ್ಗಿ, ಭಗವಂತನೇ ಬಂದು ಬಡಿಗೆ ಹಿಡಿದು ನಿಂತರೂ ನಾನಂದುಕೊಂಡಂತೆಯೇ ಮಾಡುವ, ಸರಿಯೆನ್ನಿಸಿದ್ದಂತೆಯೇ ಬದುಕುವ ಆಸಾಮಿ ನಾನು. ನಿನ್ನೆದುರು ನಾನು ಕಾಣಿಸಿಕೊಂಡಿದ್ದ ಸ್ಥಿತಿ ಕೂಡಾ ನನ್ನ ಸ್ವಭಾವದ ಒಂದು ಭಾಗವಷ್ಟೆ. ಅದು ನನ್ನ ಎಷ್ಟನೆಯ...

ಈಗ ಎಲ್ಲವೂ ಇದೆ; ನೀನೊಬ್ಬಳನ್ನು ಹೊರತು ಪಡಿಸಿ!

ಹ್ಯಾಗಿದ್ದಿ ಅಂತ ಖಂಡಿತಾ ಕೇಳೋದಿಲ್ಲ. ಯಾಕೆಂದರೆ, ನೀನು ಚೆನ್ನಾಗಿಯೇ ಇರುತ್ತಿ. ಇರಬೇಕು. ತೀರಾ ನೀ ನನ್ನನ್ನು ಬೆರಳ ತುದಿಗಂಟಿದ ಅಸಹ್ಯಕ್ಕಿಂತಲೂ ಕಡೆಯಾಗಿ ಎಸೆದು ಹೋದೆಯಲ್ಲ? ಆ ಕ್ಷಣವೂ ನಿನಗೆ ನಾನು ಕೇಡು ಬಯಸಲಿಲ್ಲ....

ನಿನ್ನ ನೆನಪೆಂಬುದು ನನ್ನೆದೆಯಲ್ಲಿ ಹುಗಿದಿಟ್ಟ ಹುಣ್ಣಿಮೆ!

ಉಸಿರುಗಟ್ಟಿಸೋ ಸ್ಥಿತಿ ಅಂದರೆ ತುಸು ಸವಕಲಾದೀತೇನೋ... ಆದರಿದು ಅಂಥಾದ್ದೇ ಪರಿಸ್ಥಿತಿ. ನಾನೇ ಬೇಕಂತಲೇ ಕಟ್ಟಿಕೊಂಡಿರೋ ಭ್ರಮೆಗಳ ಜೇನುಗೂಡಿಗೆ ಪಾಪಿಗಳ್ಯಾರೋ ವಾಸ್ತವದ ಕಲ್ಲು ವಗಾಯಿಸಿದಂತಾಗಿ ಬೆಚ್ಚಿಬೀಳುತ್ತಲೇ ಬದುಕೋ ದೈನ್ಯ. ಎದೆಯೊಳಗೆ ತಲ್ಲಣಗಳ ಹುಳುಗಳು ಗುಂಯ್‌ಗುಟ್ಟಿ...

ಪ್ರೀತಿ ಅಂದ್ರೆ ಸೇದಿ ಎಸೆಯೋ ಸಿಗರೇಟಾ?

ನಿನ್ನದೊಂದು ಮೆಸೇಜು ನನ್ನ ಮೊಬೈಲಿನ ಇನ್‌ಬಾಕ್ಸಿಗೆ ಬಿದ್ದು ಬೆಚ್ಚಗಾಗುವ ಕ್ಷಣವೇ ನನ್ನೆದುರು ಮುಂಜಾವು ಕಣ್ತೆರೆಯುತ್ತಿದ್ದ ದಿನಗಳೆಲ್ಲವೂ ಈಗ ನನ್ನ ಪಾಲಿಗೆ ದುಃಸ್ವಪ್ನ. ಮೈಗೆ ಮೈಸೋಕಿದ ಘಳಿಗೆಯ ಪುಳಕಗಳೆಲ್ಲವೂ ಹಾವಾಗಿ ಹರಿದಾಡಿದಂತಾಗಿ ವಾಕರಿಕೆ ಹುಟ್ಟುತ್ತ್ತಿದೆ....

ನಿನ್ನ ಮನೆಯೆದುರಿನ ರಸ್ತೆಯಲ್ಲಿನ್ನು ನನ್ನ ಗುಜರಿ ಸೈಕಲ್ಲು ಕಾಣಿಸೋದಿಲ್ಲ!

ಈವತ್ತು ಬೆಳಗ್ಗಿನಿಂದಲೇ ಭಾರೀ ಮಳೆ. ಇನ್ನೂ ಹನಿ ಕಡಿದಿಲ್ಲ. ಆಗಲೇ ಮತ್ತೊಂದು ದೊಡ್ಡ ಮಳೆ ಸುರಿಯುವ ಮುನ್ಸೂಚನೆ. ‘ಹಬ್ಬದ ದಿನಾನಾದ್ರು ಮಳೆ ಬರ‍್ದಿದ್ರೆ ಸಾಕಿತ್ತು’ ಅಂತ ಅಮ್ಮ ತನಗೆ ತಾನೇ ಗೊಣಗಿಕೊಳ್ತಿದ್ದಾಳೆ. ಈ...

ಮಳೆ ರಚ್ಚೆ ಹಿಡಿದ ರಾತ್ರಿಗಳಿಗೆ ಕರುಣೆಯಿಲ್ಲ!

ಮಿಂಚಿನಂಥವನೇ... ಇಲ್ಲಿ ಜೋರು ಮಳೆ. ಅವಧಿಗಿಂತಲೂ ಮೊದಲೇ ಮಳೆ ಹಿಡೀತಾ ಅಂತೊಂದು ಗುಮಾನಿ ಊರೋರಿಗೆಲ್ಲ. ಅಮ್ಮಂಗೆ ಒಂದಿಡೀ ಮಳೆಗಾಲಕ್ಕಾಗಿ ಮಿಗುವಷ್ಟು ಗರಿಗರಿ ಹಪ್ಪಳ, ಸಂಡಿಗೆ ಪೇರಿಸಿಡುವ ಧಾವಂತ. ಅಪ್ಪಂಗೆ ಯಾವಾಗಿಂದ ಗದ್ದೆ ಉಳುಮೆ ಶುರು...

ಒದ್ದೆಮುದ್ದೆ ರಾತ್ರಿಯೊಂದರಲ್ಲಿ ನೀನು ಬೆಚ್ಚಗಿನ ಕನಸಾಗು!

ಜೀವಾ... ಸುತ್ತೆಲ್ಲ ಜಿಬುರು ಮಳೆ. ಸದಾ ಭಣಗುಡುತ್ತಾ, ಕ್ಷಣ ಕ್ಷಣವೂ ಕಂಗಾಲಾಗಿಸೋ ಈ ಮಾಯಾನಗರಿಯಲ್ಲೂ ಒಂದು ಮಲೆನಾಡು ಸೃಷ್ಟಿಯಾದಂಥಾ ಸಂಭ್ರಮ. ಹೀಗೆ ಹನಿಕಡಿಯದೇ ಬೀಳೋ ಮಳೆ ಶುವುವಾಯಿತೆಂದರೆ ಅದೇಕೋ ನನ್ನೆದೆಯಲ್ಲಿ ನೆನಪುಗಳ ಅತಿವೃಷ್ಟಿ ತಲೆದೋರುತ್ತೆ....

ಪಕ್ಕದಲ್ಲೇ ಇದ್ರೂ ಪತ್ರ ಬರ‍್ಕೊಡ್ತಿಯಲ್ಲೋ ಪಾಪಿ!

ಜೀವಾ... ಇಲ್ಲದಿರೋದನ್ನ ಇದೆಯೆಂದೇ ನಂಬಿ ಹುಡುಕೋ ಮನಸ್ಥಿತಿಗೆ ಮನಃಶಾಸ್ತ್ರಜ್ಞರ ಕೈಪಿಡಿಯಲ್ಲಿ ಮಜಬೂತಾದ ಹೆಸರುಗಳು ಸಿಕ್ಕಾವು. ಕೆಲವೊಮ್ಮೆ ನಿಜವಾಗಿಯೂ ನಂಗೆ ಅಂಥಾದ್ಯಾವುದೋ ಭೀಕರ ಕಾಯಿಲೆ ಅಮರಿಕೊಂಡಿರಬಹುದಾ ಅಂತ ಭಯವಾಗೋದಿದೆ. ಆದರೆ, ನಿನ್ನ ಧ್ಯಾನದ ಕಾಯಿಲೆಯನ್ನ ವ್ಯಾಮೋಹದಿಂದಲೇ...

ನಿನ್ನ ಕಣ್ಣೋಟದಿಂದಲೇ ಮೈತುಂಬಾ ಹೂವು ಮೂಡಿದೆ!

ಅದ್ಯಾವ ಕ್ಷಣದಲ್ಲಿ ಕುಡಿ ನೋಟದಲ್ಲೇ ಒಂದು ಬೊಗಸೆ ಬೆರಗನ್ನು ಎದೆಗೆ ಸುರುವಿದೆಯೋ ಗೊತ್ತಿಲ್ಲ, ಇಲ್ಲೀಗ ನಿನ್ನ ಇಷಾರೆಯಿಲ್ಲದೆ ಏನಂದರೇನೂ ಘಟಿಸುತ್ತಿಲ್ಲ. ದಿನಾ ಬೆಳಗೆದ್ದು ನನ್ನ ಹೆಣಕ್ಕೆ ನಾನೇ ಶೃಂಗಾರ ಮಾಡಿಕೊಂಡಂತೆ, ಅನಿವಾರ್ಯ ಕರ್ಮವೇನೋ...

Stay connected

16,847FansLike
1,693FollowersFollow
13,700SubscribersSubscribe

Latest article

ಎಂಭತ್ತದ ದಶಕದ ಛಾಯೆಯ ಗೋಲ್ಡನ್ ‘ಗೀತಾ’!

ಗೋಲ್ಡನ್ ಸ್ಟಾರ್ ಗಣೇಶ್ ಅವರ ಹೋಂ ಬ್ಯಾನರಿನಲ್ಲಿ ಸೈಯದ್ ಸಲಾಮ್ ಅವರ ಸಹಕಾರದೊಂದಿಗೆ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿರುವ  ಮೊದಲ ಚಿತ್ರ ‘ಗೀತಾ’. ಗಣೇಶ್ ಪಾಲಿಗೆ ಇದೊಂದು ಹೊಸಾ ಸಾಹಸ. ತಮ್ಮ ಬ್ಯಾನರಿನಿಂದ...

ಅಲ್ಲಿ ಅಲೆಯೆದ್ದರೆ ಇಲ್ಲಿ ಮಳೆ ಬಿದ್ದಂತೆ.

ಆಹಾ... ಕಡೆಗೂ ಈ ಮಳೆಗೆ ಮನಸಿನ ಕರೆ ಕೇಳಿದಂತಿದೆ. ಅಲ್ಲೆಲ್ಲೋ ಹಿಂದೂ ಮಹಾ ಸಾಗರದಲ್ಲಿ ಚಂಡಮಾರುತವೆದ್ದು ಇಲ್ಲಿ ದಿನಾ ಮಳೆಗೆ ಮೈಯೊಡ್ಡುವ ಸುಖ. ಊರೆಲ್ಲಾ ಮಳೆಯಾಗುತ್ತಿರುವಾಗ ಖಚಿತವಾಗಿ ನಿನ್ನ ಏರಿಯಾದಲ್ಲಿ ಮಳೆ ಬೀಳದಿರುತ್ತಾ?...

ಸವಾಲುಗಳನ್ನೇ ಸಪ್ಪಗಾಗಿಸಿ ಇಪ್ಪತೈದರ ಗಡಿದಾಟಿದ ‘ನನ್ನಪ್ರಕಾರ’!

ಗಟ್ಟಿಯಾದ ಕಂಟೆಂಟಿಲ್ಲದೇ ಹೋಗಿದ್ದರೆ ಸಾಹೋ ಎಂಬ ದೈತ್ಯ ಬಿರುಗಾಳಿಯಂಥಾ ಚಿತ್ರದ ಮುಂದೆ ‘ನನ್ನಪ್ರಕಾರ’ ಚಿತ್ರ ತರಗೆಲೆಯಂತಾಗಿ ಬಿಡುತ್ತಿತ್ತು. ಆದರೆ ಅಷ್ಟು ದೊಡ್ಡ ಸಿನಿಮಾದ ಮುಂದೆ ಸೆಡ್ಡು ಹೊಡೆದು ಸ್ಪರ್ಧೆ ನೀಡಿದ್ದ ಈ ಚಿತ್ರವನ್ನು...