ಅಮೇಜಾನ್ ಪ್ರೈಮ್ ಅಂಗಣಕ್ಕಿಳಿದ ಸೈಕಾಲಾಜಿಕಲ್ ಥ್ರಿಲ್ಲರ್ ಸ್ಟ್ರೈಕರ್!

[adning id="4492"]

ನಿಮ್ಮ ಬೆರಳ ಮೊನೆಯಲ್ಲೇ ಇದೆ ಥ್ರಿಲ್ಲಿಂಗ್ ಅನುಭೂತಿ!
ಸುಳಿವಿಲ್ಲದೆ ಅಮರಿಕೊಂಡ ಕೊರೋನಾ ಸದ್ಯಕ್ಕೆ ತೊಲಗುವ ಯಾವ ಲಕ್ಷಣಗಳೂ ಕಾರಣಿಸುತ್ತಿಲ್ಲ. ಲಾಕ್‌ಡೌನ್ ಸಡಿಲಿಕೆಯಾಗಿದ್ದರೂ ಮನೆಯಿಂದ ಆಚೆ ಬರಲು ಯಾರಿಗೂ ಧೈರ್ಯ ಸಾಲುತ್ತಿಲ್ಲ. ಹೀಗಿರುವಾಗ ಮನೆಯೆಂಬೋ ಮನೆಯೊಳಗೆ ಕಾಲವೆಂಬುದು ಹುಗಿದು ಹೋದಂತೆ ಬಹುತೇಕರಿಗೆ ಭಾಸವಾಗುತ್ತಿದೆ. ಗಡಿಯಾರದ ಮುಳ್ಳುಗಳು ಏದುಸಿರು ಬಿಡುತ್ತಾ ಚಲಿಸಿದಂತಿರೋ ಈ ಸಮಯದಲ್ಲಿ ಪ್ರತೀ ಮನೆಯೊಳಗೆ ತುಸು ನೆಮ್ಮದಿ ನೆಲೆಸುವಂತೆ ಮಾಡಿರೋದು ಮನೋರಂಜನೆ. ಅದರಲ್ಲಿಯೂ ವಿಶೇಷವಾಗಿ ಥರ ಥರದ ಸಿನಿಮಾಗಳ ಹೊಸಾ ಜಗತ್ತನ್ನೇ ತೆರೆದಿಟ್ಟಿರೋ ಅಮೇಜಾನ್ ಪ್ರೈಮ್. ಇದೀಗ ಅಮೇಜಾನ್ ಪ್ರೈಮ್ ಅಂಗಣಕ್ಕೆ ಸ್ಟ್ರೈಕರ್ ಚಿತ್ರ ಎಂಟ್ರಿ ಕೊಟ್ಟಿದೆ.


ಸಿನಿಮಾ ಮಂದಿರಗಳಲ್ಲಿ ಚಿತ್ರಗಳನ್ನ ನೋಡಿ ನಿರಾಳವಾಗೋ ಘಳಿಗೆಗಳೀಗ ಗತವೈಭವದಂತಾಗಿದೆ. ಆದರೆ ಅಮೇಜಾನ್ ಪ್ರೈಮ್‌ನಂಥಾ ಪ್ಲಾಟ್‌ಫಾರ್ಮುಗಳಲ್ಲಿ ಇಷ್ಟದ ಸಿನಿಮಾ ನೋಡಿ ಖುಷಿ ಪಡುವ ಅವಕಾಶವೂ ಬಂದೊದಗಿದೆ. ಈಗಾಗಲೇ ಕನ್ನಡದ ಒಂದಷ್ಟು ಚಿತ್ರಗಳು ಈ ಮೂಲಕವೇ ಹಿಟ್ ಆಗಿವೆ. ಇದೀಗ ಆ ಸರದಿ ಸ್ಟ್ರೈಕರ್ ಸಿನಿಮಾದ್ದು. ಪ್ರವೀಣ್ ತೇಜ್ ಮತ್ತು ಶಿಲ್ಪಾ ಮಂಜುನಾಥ್ ನಾಯಕ ನಾಯಕಿಯರಾಗಿ ನಟಿಸಿರೋ ಸ್ಟ್ರೈಕರ್ ಅಮೇಜಾನ್‌ಗೆ ಆಗಮಿಸಿದ ಘಳಿಗೆಯಿಂದಲೇ ವ್ಯಾಪಕ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.


ಇದು ವರ್ಷದ ಹಿಂದೆ ಬಿಡುಗಡೆಗೊಂಡು ಗೆಲುವು ಕಂಡಿದ್ದ ಸಿನಿಮಾ. ಗರುಡಾದ್ರಿ ಫಿಲಂಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿದ್ದ ಸ್ಟ್ರೈಕರ್ ಅನ್ನು ಪವನ್ ತ್ರಿವಿಕ್ರಮ್ ನಿರ್ದೇಶನ ಮಾಡಿದ್ದರು. ಈ ಕಥೆ ಮೂವರು ಸ್ನೇಹಿತರ ಸುತ್ತ ಘಟಿಸುತ್ತೆ. ಪ್ರೀತಿ ಪ್ರೇಮದ ನವಿರು ಭಾವಗಳೊಂದಿಗೆ ತೆರೆದುಕೊಂಡು ಆ ನಂತರ ಉಸಿರು ಬಿಗಿ ಹಿಡಿದು ನೋಡುವಂತೆ ರೂಪಾಂತರಗೊಳ್ಳೋದು ಸ್ಟ್ರೈಕರ್‌ನ ಅಸಲೀ ಮಜಾ. ನಿರ್ದೇಶಕರು ಒಂದು ಮರ್ಡರಿನ ಬಿಂದುವಿನಿಂದ ಕಥೆಯನ್ನು ಕಟ್ಟಿ ನಿಲ್ಲಿಸಿರೋ ರೀತಿ ಈ ಸಿನಿಮಾದ ನಿಜವಾದ ಪ್ಲಸ್ ಪಾಯಿಂಟು.


ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆಯ ನಟನಾಗಿ ನೆಲೆ ಕಂಡುಕೊಂಡಿರುವವರು ಪ್ರವೀಣ್ ತೇಜ್. ಭಿನ್ನ ಪಾತ್ರಗಳ ಮೂಲಕವೇ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುತ್ತಾ ಬಂದಿರೋ ಪ್ರವೀಣ್ ಈ ಸಿನಿಮಾದಲ್ಲಿ ಸಹಜ ಅಭಿನಯದ ಮೂಲಕವೇ ಪ್ರೇಕ್ಷಕರಿಗೆ ಇಷ್ಟವಾಗಿದ್ದರು. ಸ್ಟ್ರೈಕರ್ ಕೂಡಾ ಅವರ ಹಿಟ್ ಲಿಸ್ಟಿಗೆ ಸೇರಿಕೊಂಡಿತ್ತು. ಇದೀಗ ಈ ಸಿನಿಮಾ ಅಮೇಜಾನ್ ಪ್ರೈಮ್‌ಗೆ ಆಗಮಿಸಿದೆ. ಮನೆ ಮಂದಿಯೆಲ್ಲ ಒಟ್ಟುಗೂಡಿ ಈ ಸೈಕಾಲಾಜಿಕಲ್ ಕ್ರೈಂ ಥ್ರಿಲ್ಲರ್ ಚಿತ್ರ ನೋಡೋ ಸದವಕಾಶವೂ ಬಂದೊದಗಿದೆ. ಈಗಾಗಲೇ ಸ್ಟ್ರೈಕರ್‌ಗೆ ಅಮೇಜಾನ್ ಪ್ರೈಮ್‌ನಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದೆ. ಇದು ಪ್ರತಿಯೊಬ್ಬರಿಗೂ ವಿಶಿಷ್ಟ ಅನುಭವ ನೀಡೋ ಛಾತಿ ಹೊಂದಿರುವ ಸಿನಿಮಾ.

[adning id="4492"]

LEAVE A REPLY

Please enter your comment!
Please enter your name here