ವಿಂಡೋ ಸೀಟ್: ಥ್ರಿಲ್ಲರ್ ಕಥೆಯ ಸುಳಿವು ನೀಡಿದ ಚೆಂದದ ಟೈಟಲ್ ಕಾರ್ಡ್!

[adning id="4492"]

ಕೊರೋನಾ ಬಾಧೆ ದಿನೇ ದಿನೆ ತೀವ್ರವಾಗುತ್ತಿದ್ದರೂ ಮತ್ತೆ ಎಲ್ಲವೂ ಸಹಜ ಸ್ಥಿತಿಯತ್ತ ಮರಳೀತೆಂಬ ಆಶಾಭಾವನೆ ಎಲ್ಲೆಡೆ ಮೂಡಿಕೊಳ್ಳುತ್ತಿದೆ. ಲಾಕ್‌ಡೌನ್‌ನಿಂದಾಗಿ ಸಂಪೂರ್ಣವಾಗಿ ಥಂಡಾ ಹೊಡೆದಿದ್ದ ಚಿತ್ರರಂಗದಲ್ಲಿಯೂ ಸಣ್ಣಗೆ ಹೊಸಾ ಚೈತನ್ಯ ಮಿಸುಕಾಡಲಾರಂಭಿಸಿದೆ. ಅರ್ಧಕ್ಕೆ ಬಾಕಿ ಉಳಿದಿದ್ದ ಸಿನಿಮಾಗಳು, ಹೊಸಾ ಹೆಜ್ಜೆಗಳಿಗೆಲ್ಲ ಮತ್ತೆ ಚಾಲನೆ ಸಿಕ್ಕಂತಾಗಿದೆ. ಇದೇ ಸಮಯದಲ್ಲಿ ಶೀತಲ್ ಶೆಟ್ಟಿ ಸರ್‌ಪ್ರೈಸೊಂದನ್ನು ಕೊಟ್ಟಿದ್ದಾರೆ. ತಮ್ಮ ಪಾಡಿಗೆ ತಾವು ವಿಂಡೋ ಸೀಟ್ ಎಂಬ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಇದೀಗ ಅದರ ಚೆಂದದ ಟೈಟಲ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದ್ದಾರೆ.


ಶೀತಲ್ ಶೆಟ್ಟಿ ನಿರ್ದೇಶಕಿಯಾಗಿ ಆಗಮಿಸುತ್ತಿದ್ದಾರೆ, ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆಂಬ ಬಗ್ಗೆ ಸುದ್ದಿ ಹರಡಿಕೊಂಡಿದ್ದದ್ದು ಬಿಟ್ಟರೆ ಆ ಬಗ್ಗೆ ಮಹತ್ವದ ವಿಚಾರಗಳೇನೂ ಜಾಹೀರಾಗಿರಲಿಲ್ಲ. ಈ ಹೊತ್ತಿಗೂ ಸದರಿ ಟೈಟಲ್ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಆದರೆ ಸಿನಿಮಾ ಬಗ್ಗೆ ಹೆಚ್ಚಿನ ವಿವರಗಳನ್ನು ಗೌಪ್ಯವಾಗಿಟ್ಟು ಮತ್ತಷ್ಟು ಕುತೂಹಲ ಹಬ್ಬಿಕೊಳ್ಳುವಂತೆ ಮಾಡಲಾಗಿದೆ. ಟ್ರೇನಿನ ವಿಂಡೋ ಸೀಟು, ಅದರ ಆಸುಪಾಸಲ್ಲಿಯೇ ಜಿನುಗೋ ನೆತ್ತರ ಚಹರೆಯೂ ಸೇರಿದಂತೆ ಏನನ್ನೋ ಹೇಳಿದಂತೆ ಭಾಸವಾಗುವಂಥಾ ಅಂಶಗಳೊಂದಿಗೆ ಈ ಟೈಟಲ್ ಪೋಸ್ಟರ್ ಅನ್ನು ಸಿದ್ಧಪಡಿಸಲಾಗಿದೆ.


ವಿಂಡೋ ಸೀಟ್ ಅನ್ನು ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಸಂಜನಾ ಆನಂದ್ ಮತ್ತು ಅಮೃತಾ ಅಯ್ಯಂಗಾರ್ ನಾಯಕಿಯರಾಗಿ ನಟಿಸಿದ್ದಾರೆ. ಇವರೆಲ್ಲರೂ ಕೂಡಾ ಶೀತಲ್ ಶೆಟ್ಟಿ ಹೇಳಿದ ,ಕಥೆ ಕೇಳಿ ಥ್ರಿಲ್ ಆಗಿಯೇ ಈ ಅವಕಾಶವನ್ನು ಒಪ್ಪಿಕೊಂಡಿದ್ದರಂತೆ. ಅವರೆಲ್ಲರಲ್ಲಿಯೂ ವಿಂಡೋ ಸೀಟ್ ಮೂಲಕ ಮತ್ತೆ ಗೆಲುವೆಂಬುದು ಬಂದು ಆಗಿ ಹೆಸರು ಮಾಡಿದ್ದವರು. ಆ ನಂತರದಲ್ಲಿ ನಟನೆಯತ್ತ ಹೊರಳಿಕೊಂಡಿದ್ದ ಅವರು ಇತ್ತೀಚಿನ ದಿನಗಳಲ್ಲಿ ತನ್ನ ಮುಂದಿನ ನಡೆ ನಿರ್ದೇಶನ ಎಂಬ ಸುಳಿವು ಕೊಟ್ಟಿದ್ದರು. ಆ ಹಾದಿಯಲ್ಲಿನ ತಾಲೀಮೆಂಬಂತೆ ಸಂಗಾತಿ ಹಾಗೂ ಕಾರು ಎಂಬೆರಡು ಕಿರುಚಿತ್ರಗಳು ರೂಪುಗೊಂಡಿದ್ದವು.


ಈ ಎರಡು ಕಿರು ಚಿತ್ರಗಳನ್ನು ನೋಡಿದ ಯಾರಿಗೇ ಆದರೂ ಅದರ ಸೂಕ್ಷ್ಮ ಕಥಾನಕ ಮನಸಿಗೆ ನಾಟಿಕೊಳ್ಳುತ್ತದೆ. ಅಂಥಾ ಮನಸ್ಥಿತಿಯಿಂದಲೇ ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ಶೀತಲ್ ವಿಂಡೋ ಸೀಟ್ ಅನ್ನು ನಿರ್ದೇಶನ ಮಾಡಿದ್ದಾರಂತೆ. ರೊಮ್ಯಾಂಟಿಕ್ ಥ್ರಿಲ್ಲರ್ ಜಾನರಿನ ಈ ಚಿತ್ರದ ಚಿತ್ರೀಕರಣ ಲಾಕ್‌ಡೌನ್‌ಗಿಂತಲೂ ಮುನ್ನವೇ ಸಮಾಪ್ತಿಗೊಂಡಿತ್ತು. ಇದೀಗ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಚಾಲ್ತಿಯಲ್ಲಿವೆ. ಶೀಘ್ರದಲ್ಲಿಯೇ ವಿಂಡೋ ಸೀಟ್‌ನ ಫಸ್ಟ್ ಲುಕ್ ಅನಾವರಣಗೊಳ್ಳಲಿದೆ.

[adning id="4492"]

LEAVE A REPLY

Please enter your comment!
Please enter your name here