ಗೋವಾ ಈಗ ಕೊರೋನಾ ಪಾಲಿನ ಸ್ವರ್ಗ!

[adning id="4492"]

ರಂಭದಲ್ಲಿ ಜಗತ್ತನ್ನೆಲ್ಲ ಕೊರೋನಾ ಬಾಧಿಸುತ್ತಿದ್ದಾಗ ಭಾರತದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಿತ್ತು. ಅದನ್ನೇ ತಟ್ಟೆ, ತಾಟು ಬಡಿದು ಸಂಭ್ರಮಿಸಿದ್ದೂ ಆಯ್ತು. ಒಂದು ಮಟ್ಟಿಗೆ ಲಾಕ್‌ಡೌನ್ ಅನ್ನೂ ಕೂಡಾ ಮಾಡಲಾಯ್ತು. ಭಾರತದಂಥಾ ದೇಶದಲ್ಲಿ ಹೀಗೆ ಎಲ್ಲವನ್ನೂ ಬಂದ್ ಮಾಡಿ ಜನರನ್ನು ಮನೆಯೊಳಗೆ ಕೂರಿಸೋದೆಂದರೆ ಅದೊಂದು ಕಠೋರ ಕಾರ್ಯ. ಸಾವು, ನೋವು, ಸಂಕಟಗಳಾಚೆಗೂ ಅದರಲ್ಲಿಯೂ ಒಂದು ಮಟ್ಟಕ್ಕೆ ಯಶ ಸಿಕ್ಕಿತ್ತು. ಆದರೆ ಇದೀಗ ಖುದ್ದು ಸರ್ಕಾರಗಳೇ ಕೊರೋನಾ ವೈರಸ್ಸಿಗೆ ರತ್ನಗಂಬಳಿ ಹಾಸಿ ಆಹ್ವಾನಿಸುವಂಥ ಮುಠ್ಠಾಳ ಕ್ರಮಗಳನ್ನು ಅನುಸರಿಸುತ್ತಿದೆ. ಇಂಥಾ ದರಿದ್ರದ ನೀತಿ ನಿಯಮಾವಳಿಗಳಿಂದ ದೇಶ ಯಾವ ಅಪಾಯದ ಅಂಚಿನತ್ತ ಹೊರಳುತ್ತಿದೆ ಅನ್ನೋದಕ್ಕೆ ಭಾರತದ ಪುಟ್ಟ ರಾಜ್ಯ ಗೋವಾಕ್ಕಿಂತಲೂ ಸೂಕ್ತ ಉದಾಹರಣ ಬೇರೊಂದಿಲ್ಲ.


ವಿಸ್ತೀರ್ಣ ಮತ್ತು ಜನಸಂಖ್ಯೆಯಲ್ಲಿ ಭಾರತದ ಚಿಕ್ಕ ರಾಜ್ಯವಾಗಿ ಗುರುತಿಸಿಕೊಂಡಿರೋ ಗೋವಾ ಪ್ರವಾಸೋದ್ಯಮಕ್ಕೆ ಖ್ಯಾತಿ ಗಳಿಸಿಕೊಂಡಿದೆ. ವಿದೇಶಿಯರು ಬಂದು ಗುಡ್ಡೆ ಬೀಳುವ ಈ ಪ್ರದೇಶ ಪ್ರವಾಸಪ್ರಿಯರ ಪಾಲಿನ ಹಾಟ್‌ಸ್ಪಾಟ್ ಕೂಡಾ ಹೌದು. ಈ ರಾಜ್ಯದ ಅಸಲೀ ಬಂಡವಾಳವೇ ಪ್ರವಾಸೋದ್ಯಮ. ಹಾಗಿದ್ದ ಮೇಲೆ ಲಾಕ್‌ಡೌನ್ ಸಮಯದಲ್ಲಿ ಎಲ್ಲವೂ ಥಂಡಾ ಹೊಡೆದಾಗ ಹೆಚ್ಚು ಕಾಲ ಈ ರಾಜ್ಯ ಅದನ್ನು ತಡೆದುಕೊಳ್ಳಲು ಸಾಧ್ಯವಿರಲಿಲ್ಲ. ವಿಶೇಷವೆಂದರೆ, ಪ್ರವಾಸಿಗರಿಂದ ಪಿತಗುಡುತಿದ್ದರೂ ಈ ರಾಜ್ಯ ಗ್ರೀನ್ ಝೋನಿನಲ್ಲಿತ್ತು.


ಇದನ್ನೇ ಮುಂದಿಟ್ಟುಕೊಂಡು ತರಾತುರಿಯಲ್ಲಿ ಗೋವಾದಲ್ಲಿ ಪ್ರವಾಸೋಧ್ಯಮಕ್ಕೆ ಚಾಲನೆ ಕೊಡಲಾಗಿತ್ತು. ಇದರ ಬಗ್ಗೆ ದೇಶಾದ್ಯಂತ ಟೀಕೆಗಳು ಕೇಳಿ ಬಂದಿದ್ದವು. ಇದು ಈಗ ಅಗತ್ಯವಿರಲಿಲ್ಲ ಎಂಬ ವಿಶ್ಲೇಷಣೆಗಳೂ ಹಬ್ಬಿಕೊಂಡಿದ್ದವು. ಈ ಹಂತದಲ್ಲಿ ಗೋವಾ ಪ್ರವಾಸೋದ್ಯಮ ಸಚಿವರು ಶ್ರೀಮಂತ ಪ್ರವಾಸಿಗರಿಗೆ ಮಾತ್ರ ಅವಕಾಶ ಕೊಡುವ ಪಡಪೋಶಿ ಹೇಳಿಕೆಯನ್ನೂ ರವಾನಿಸಿದ್ದರು. ತಮಾಶೆಯೆಂದರೆ, ಕೊರೋನಾ ವೈರಸ್ಸು ಭಾರತಕ್ಕೆ ಬಂದಿದ್ದೇ ಶ್ರೀಮಂತ ಕುಳಗಳಿಂದ. ಈ ನೆಲದ ಯಾವ ಬಡವರಿಗೂ ಗೋವಾ ಬೀಚಿಗೆ ಹೋಗಿ ಬರೀ ಕಾಚದಲ್ಲಿ ಬೋರಲು ಬಿದ್ದುಕೊಳ್ಳುವಂಥ ಶೋಕಿ ಅಮರಿಕೊಂಡಿಲ್ಲ.


ಹೀಗೆ ಯಡವಟ್ಟು ಆಸಾಮಿ ಪ್ರವಾಸೋದ್ಯಮ ಸಚಿವ ಶ್ರೀಮಂತ ಪ್ರವಾಸಿಗರನ್ನು ಬೀಚಿಗೆ ಆಹ್ವಾನಿಸಿದನಲ್ಲಾ? ಅದರ ದೆಸೆಯಿಂದ ಗ್ರೀನ್ ಝೋನಿನಲ್ಲಿದ್ದ ಗೋವಾ ರೆಡ್ ಝೋನ್ ತಲುಪಿಕೊಂಡಿದೆ. ಅಲ್ಲಿನ ಕಡಲ ತಡಿಯ ತಾಪಮಾನಕ್ಕೆ ಪೈಪೋಟಿ ನೀಡುವಂತೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿಕೊಳ್ಳುತ್ತಿದೆ. ಇದೀಗ ಸೇಫಾಗಿದ್ದ ಈ ರಾಜ್ಯ ತಾನೇ ತಾನಾಗಿ ಕೊರೋನಾವನ್ನು ತಬ್ಬಿಕೊಂಡಿದೆ. ಸದ್ಯಕ್ಕೆ ಅಲ್ಲಿ ಐವತ್ತೆರಡು ಕೇಸುಗಳಿದ್ದಾವೆ. ಪ್ರವಾಸೋದ್ಯಮಕ್ಕಾಗಿ ಎಲ್ಲವನ್ನೂ ಖುಲ್ಲಂಖುಲ್ಲಾ ಮಾಡಿರೋದರಿಂದ ಕೊರೋನ ಆ ರಾಜ್ಯವನ್ನು ಬೇಗನೆ ಆವರಿಸಿಕೊಳ್ಳುವ ಎಲ್ಲ ಅಪಾಯಗಳೂ ಇವೆ. ಕೇಂದ್ರ ಸರ್ಕಾರ ಕಣ್ಣೆದುರಿಗೇ ನಡೆಯುತ್ತಿರೋ ಈ ವಿದ್ಯಮಾನಗಳಿಂದಲಾದರೂ ಎಚ್ಚೆತ್ತುಕೊಳ್ಳಬಹುದೇ?

[adning id="4492"]

LEAVE A REPLY

Please enter your comment!
Please enter your name here