ಹನ್ನೊಂದು ತಿಂಗಳ ಹಸುಗೂಸನ್ನು ಗುಂಡಿಟ್ಟು ಕೊಂಡ ಕಿರಾತಕ ಉಗ್ರ!

[adning id="4492"]

ಪಾಕಿಸ್ತಾನ, ಅಪಘನಿಸ್ತಾನ ಮುಂತಾದ ರಾಷ್ಟ್ರಗಳು ಉಗ್ರರ ನೆಲೆಗಳಾಗಿ ಬಹಳಷ್ಟು ವರ್ಷಗಳೇ ಕಳೆದಿವೆ. ಸೆರಗಲ್ಲಿಟ್ಟುಕೊಂಡ ಕೆಂಡದಂಥಾ ಈ ಉಗ್ರಗಾಮಿಗಳೀಗ ಆ ದೇಶಗಳಲ್ಲಿಯೇ ರಕ್ತ ಹರಿಸಲಾರಂಭಿಸಿದ್ದಾರೆ. ಧರ್ಮದ ಅಫೀಮನ್ನು ಅಪಾದಮಸ್ತಕ ತುಂಬಿಕೊಂಡಿರೋ ಈ ರಕ್ಕಸರ ಕ್ರೌರ್ಯ ಎಂಥಾದ್ದೆಂಬುದಕ್ಕೆ ಭಾರತವೂ ಸೇರಿದಂತೆ ಇಡೀ ವಿಶ್ವಾದ್ಯಂತ ಒಂದಷ್ಟು ಅನಾಹುತಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಪಾಕಿಸ್ತಾನ ಉಗ್ರರ ಉಗ್ರಾಣದಂತಾಗಿ ಈವತ್ತಿಗೆ ಬರ್ಬಾದು ಸ್ಥಿತಿ ತಲುಪಿಕೊಂಡಿದ್ದರೆ, ಅಫಘನಿಸ್ತಾನವೂ ಅದೇ ಹಾದಿಯಲ್ಲಿದೆ. ಅದರ ಸ್ಪಷ್ಟ ಸೂಚನೆಯೆಂಬಂತೆ ತಾಲಿಬಾನಿ ಉಗ್ರನೋರ್ವ ಏಕಾಏಕಿ ಆಸ್ಪತ್ರೆಗೆ ನುಗ್ಗಿ ಹಸುಳೆಗಳನ್ನೂ ಕೊಂದು ಕೆಡವಿದ್ದಾನೆ.


ಕಾಬೂಲ್‌ನ ಸದರಿ ಆಸ್ಪತ್ರೆಯಲ್ಲಿ ನೂರು ಬೆಡ್‌ಗಳ ಸೌಕರ್ಯವಿದೆ. ಆ ಭಾಗದಲ್ಲಿ ಈ ಆಸ್ಪತ್ರೆ ಬಲು ವಿಶ್ವಾಸಾರ್ಹತೆಯನ್ನೂ ಗಳಿಸಕೊಂಡಿದೆ. ಒಂದಷ್ಟು ವಿದೇಶಿಯರೂ ಕೂಡಾ ಚಿಕಿತ್ಸೆ ಪಡೆಯುವಷ್ಟರ ಮಟ್ಟಿಗದು ವಿಶ್ವಾಸಾರ್ಹತೆ ಉಳಿಸಿಕೊಂಡಿದೆ. ಅಂಥಾ ಜಾಗದಲ್ಲಿ ಇಂಥಾದ್ದೊಂದು ಬರ್ಭರ ಹತ್ಯಾಕಾಂಡ ನಡೆಯುತ್ತದೆಂದು ಯಾರಾದರೂ ಊಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ ಹತ್ತು ಗಂಟೆಯ ಸುಮಾರಿಗೆ ಬಂದೂಕುಧಾರಿಯೊಬ್ಬ ಹಠಾತ್ತನೆ ಆಸ್ಪತ್ರೆಗೆ ನುಗ್ಗಿ ಮನಬಮದಂತೆ ಗುಂಡು ಹಾರಿಸಿದ್ದಾನೆ. ಅದಕ್ಕೆ ಸಿಕ್ಕು ಸರಿಸುಮಾರು ಇಪ್ಪತ್ತನಾಲಕ್ಕು ಜೀವಗಳು ಉಸಿರು ಚೆಲ್ಲಿವೆ.


ಡಾಕ್ಟರ್, ನರ್ಸ್, ರೋಗಿಗಳೆನ್ನದೆ ಎಲ್ಲರ ಮೇಲೂ ಗುಂಡಿನ ಮಳೆಗರೆದ ಉಗ್ರ ಹನ್ನೊಂದು ತಿಂಗಳ ಎರಡು ಹಸುಗೂಸುಗಳನ್ನೂ ಬಲಿ ಪಡೆದಿದ್ದಾನೆ. ಆತ ಅದ್ಯಾವ ಪರಿ ಫೈರ್ ಮಾಡಿದ್ದನೆಂದರೆ, ಆ ಆಸ್ಪತ್ರೆಯ ಕೆಲ ವಾರ್ಡುಗಳ ಗೋಡೆಗಳು ಅಕ್ಷರಶಃ ಜರಡಿಯಂತಾಗಿವೆ.

ತಕ್ಷಣವೇ ಭದ್ರತಾ ಪಡೆಗಳು ಆಗಮಿಸದೇ ಹೋಗಿದ್ದರೆ ಇಡೀ ಆಸ್ಪತ್ರೆಯೇ ಸ್ಮಶಾನವಾಗಿ ಬಿಡುತ್ತಿತ್ತು. ಅಂತೂ ಈ ಘಟನೆಯ ಮೂಲಕ ಕೊರೋನಾದಂಥ ಮಹಾ ಮಾರಿ ಕೂಡಾ ಧರ್ಮದ ಅಮಲನ್ನು ಇಳಿಸಿಲ್ಲ ಅನ್ನೋದನ್ನು ಸಾಬೀತುಗೊಳಿಸಿದೆ. ಈ ಭರ್ಭರ ಹತ್ಯಾಕಾಂಡದ ವಿರುದ್ಧ ವಿಶ್ವಾದ್ಯಂತ ಆಕ್ರೋಶಗ ವ್ಯಕ್ತವಾಗುತ್ತಿದೆ. ಜೊತೆಗೆ ಉಗ್ರಗಾಮಿಗಳನ್ನು ಸಂಪೂರ್ಣವಾಗಿ ಮಟ್ಟಹಾಕಬೇಕೆಂಬ ಕೂಗು ಕೂಡಾ ಮೊರೆಯಲಾರಂಭಿಸಿದೆ

[adning id="4492"]

LEAVE A REPLY

Please enter your comment!
Please enter your name here