ನಾಯಿ ಮಾಂಸ ತಿನ್ನೋದು ಬಿಟ್ರೆ ದನದ ಮಾಂಸ ಕಳಿಸ್ತಾರಂತೆ!

[adning id="4492"]

ಚೀನಿಯರಿಗೆ ಜಿಂಬಾಂಬ್ವೆ ಸಚಿವನ ಆಫರ್!
ಚೀನೀಯರ ಆಹಾರ ಪದ್ಧತಿಯೇ ಒಂದು ವಿಚಿತ್ರ. ನರಮಾನವರಿಗೆ ಯಾವ್ಯಾವುದೆಲ್ಲ ಅಸಹ್ಯ ಹುಟ್ಟಿಸುತ್ತದೋ ಅಂಥಾ ಹುಳು ಹುಪ್ಪಟೆ, ಕ್ರಿಮಿ ಕೀಟಗಳನ್ನೆಲ್ಲ ಚಪ್ಪರಿಸಿ ತಿನ್ನೋ ಚೀನಾ ಮಂದಿಯನ್ನು ಊಟಕ್ಕೆ ಮುನ್ನ ನೆನೆಸಿಕೊಂಡರೂ ತಿಂದ ಕೂಳು ಗಂಟಲಿಂದ ವಾಪಾಸಾಗುತ್ತೆ. ಜೀವರಾಶಿ ಸೃಷ್ಟಿಯಾಗಿರೋದೇ ಬಡಿದು ಬಾಯಿಗೆ ಹಾಕಿಕೊಳ್ಳಲೆಂಬಂಥ ಸಿದ್ಧಾಂತ ಚೀನೀಯರದ್ದು. ಹಾಗಿದ್ದ ಮೇಲೆ ನಾವೆಲ್ಲ ಪ್ರೀತಿಯಿಂದ ಸಾಕಿ, ಮನೆ ಸದಸ್ಯರಂತೆಯೇ ಮುದ್ದು ಮಾಡೋ ನಾಯಿಯನ್ನವರು ಬಿಡಲು ಸಾಧ್ಯವೇ? ಇಂಥಾ ಹೊಟ್ಟೆಬಾಕ ಪ್ರವೃತ್ತಿಯೇ ಕೊರೋನಾದಂಥಾ ಮಾರಿ ಹಬ್ಬಿಕೊಳ್ಳಲು ಕಾರಣ ಎಂಬ ದಿಸೆಯ ಚರ್ಚೆಗಳೂ ನಡೆಯುತ್ತಿವೆ. ಅದರಲ್ಲಿನ ಸತ್ಯ ಮಿಥ್ಯಗಳಿನ್ನೂ ನಿರ್ಣಯವಾಗಿಲ್ಲ.


ಇದೀಗ ಪಕ್ಕದಲ್ಲೊಂದು ಹುಳು ಹರಿದಾಡಿದರೂ ಬಾಯಲ್ಲಿ ನೀರೂರಿಸೋ ಸ್ವಭಾವದ ಚೀನೀಯರು ಮಾಂಸ ಅಂದರೆ ಬೆವರಾಡಲಾರಂಭಿಸಿದ್ದಾರೆ. ಇದೇ ಹೊತ್ತಿನಲ್ಲಿ ಚೀನಾ ಮಂದಿಯ ತಿನ್ನುಬಾಕ ಪ್ರವೃತ್ತಿಯ ಬಗ್ಗೆ ಜಗತ್ತಿನಾದ್ಯಂತ ಆಕ್ರೋಶಗಳೆದ್ದಿವೆ. ಅದು ತಮಾಶೆ, ಮೂದಲಿಕೆಗಳಿಗೂ ಕಾರಣವಾಗಿದೆ. ಇದೀಗ ಇದೇ ನಿಟ್ಟಿನಲ್ಲಿ ಜಿಂಬಾಂಬ್ವೆ ದೇಶದ ಸಚಿವನೊಬ್ಬ ಚೀನಾ ಜನರಿಗೆ ಬಿಗ್ ಆಫರ್ ಒಂದನ್ನು ನೀಡಿದ್ದಾನೆ. ಅದರನ್ವಯ ನಾಯಿ ಮಾಂಸ ತಿನ್ನೋ ಬುದ್ಧಿ ಬಿಟ್ಟರೆ ಚೀನೀಯರಿಗೆ ಗೋಮಾಂಸ ಯಥೇಚ್ಛವಾಗಿ ಪೂರೈಸುವ ಆಫರ್ ರವಾನೆಯಾಗಿದೆ!


ಜಿಂಬಾಂಬ್ವೆಯಲ್ಲೀಗ ಆಡಳಿತ ನಡೆಸುತ್ತಿರೋದು ಪಿಎಫ್ ಜನು ಪಾರ್ಟಿ. ಆ ಸರ್ಕಾರದಲ್ಲಿ ಸಹಾಯಕ ಸಚಿವನಾಗಿರೋ ಮುಟೋಡಿ ಎಂಬಾತ ಟ್ವಿಟರ್ ಮೂಲಕ ಇಂಥಾದ್ದೊಂದು ಆಫರ್ ಅನ್ನು ಚೀನೀಯರಿಗೆ ನೀಡಿದ್ದಾನೆ. ಈ ಬಗ್ಗೆ ಟ್ವಟರ್‌ನಲ್ಲಿಯೇ ಪರ ವಿರೋಧಗಳ ಚರ್ಚೆಗಳಾಗುತ್ತಿವೆ.  ಅಂತೂ ಈ ಮೂಲಕ ಚೀನಾ ಮಂದಿಯ ಆಹಾರ ಕ್ರಮದ ಬಗ್ಗೆ ಜಗತ್ತಿನಾದ್ಯಂತ ಗಂಭೀರ ಚರ್ಚೆಗಳಾಗುತ್ತಿವೆ. ತನ್ನ ಬೇಜವಬ್ದಾರಿತನ ಮತ್ತು ಧನ ದಾಹದಿಂದ ಕೊರೋನಾ ವೈರಸ್ ಹುಟ್ಟಿಸಿರೋದು ಚೀನಾದ ದುಷ್ಟತನಕ್ಕೆ ಸಾಕ್ಷಿ. ಈ ಮೂಲಕವೇ ಅದು ಮೂರನೇ ಮಹಾ ಯುದ್ಧವನ್ನು ಈ ವೈರಸ್‌ನಂಥಾ ಜೈವಿಕ ಬಾಂಬುಗಳ ಮೂಲಕ ನಡೆಸಲು ಮುಂದಾಗಿದೆ ಎಂಬ ಗುಮಾನಿಯೂ ಇದೆ. ಆದರೆ, ಸದ್ಯಕ್ಕೆ ಚೀನಾದ ದುಷ್ಟತನ ಅದೇ ದೇಶಕ್ಕೆ ವಾಪಾಸು ಗುಮ್ಮುತ್ತಿದೆ!

[adning id="4492"]

LEAVE A REPLY

Please enter your comment!
Please enter your name here