ಅಮೇಜಾನ್ ಪ್ರೈಮ್‌ನಲ್ಲೀಗ ಭರತ ಬಾಹುಬಲಿಯ ಕಾಮಿಡಿ ಕಚಗುಳಿ!

[adning id="4492"]

ಡೀ ವಿಶ್ವವೇ ಕೊರೋನ ವೈರಸ್ಸಿನ ಬಾಧೆಯಿಂದ ಬಳಲಿ ಬೆಂಡೆದ್ದು ಹೋಗಿದೆ. ನಮ್ಮಲ್ಲಿಯೂ ಇಡೀ ದೇಶವೇ ತಿಂಗಳಿಂದೀಚೆಗೆ ಸ್ತಬ್ಧಗೊಂಡಿದೆ. ಇದು ಪ್ರತಿಯೊಬ್ಬರಿಗೂ ಅನಿವಾರ್ಯ ಗೃಹಬಂಧನದ ಕಾಲ. ಕೊರೋನಾ ವಿರುದ್ಧ ಸೆಣೆಸಲು ಲಾಕ್‌ಡೌನ್ ಒಂದೇ ದಾರಿಯಾದ್ದರಿಂದ ಎಲ್ಲರೂ ಬಲವಂತದಿಂದ ಮೈ ಮನಸುಗಳನ್ನು ಮನೆಯೊಳಗೇ ಬಂಧಿಸಿಟ್ಟುಕೊಂಡಿದ್ದಾರೆ. ಹಾಗೆ ಏಕತಾನತೆಯಿಂದ ಕಂಗಾಲಾಗಿ ಕೂತ ಬಹುತೇಕರ ಬದುಕಿನಲ್ಲೊಂದು ಲವಲವಿಕೆಯನ್ನು ಈ ಕ್ಷಣಕ್ಕೂ ಉಳಿಸಿರೋದರಲ್ಲಿ ಸಾಹಿತ್ಯ ಮತ್ತು ಸಿನಿಮಾಗಳದ್ದೇ ಸಿಂಹಪಾಲು. ಅದರಲ್ಲಿಯೂ ಕೆಲ ಸಿನಿಮಾಗಳು ಅಮೇಜಾನ್ ಪ್ರೈಮ್ ಮೂಲಕ ಜನರನ್ನು ತಲುಪಿಕೊಂಡು ಆ ಮೂಲಕವೇ ಹಿಟ್ ಆಗುತ್ತಿವೆ. ಆ ಸಾಲಿಗೆ ಸೇರ್ಪಡೆಗೊಳ್ಳಲಣಿಯಾಗಿರೋ ಮತ್ತೊಂದು ಚಿತ್ರ ಶ್ರೀ ಭರತ ಬಾಹುಬಲಿ.


ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದ್ದ ಮಾಸ್ಟರ್‌ಪೀಸ್‌ನಂಥ ಸೂಪರ್ ಹಿಟ್ ಚಿತ್ರವನ್ನು ನಿರ್ದೇಶನ ಮಾಡಿದ್ದ ಮಂಜು ಮಾಂಡವ್ಯ ನಿರ್ದೇಶನ ಮಾಡಿ ಮುಖ್ಯಭೂಮಿಕೆಯಲ್ಲಿಯೂ ನಟಿಸಿದ್ದ ಚಿತ್ರ ಶ್ರೀ ಭರತ ಬಾಹುಬಲಿ. ಈ ಸಿನಿಮಾದ ಮೂಲಕ ನಾಯಕನಾಗಿಯೂ ಮಾಂಡವ್ಯ ಭಡ್ತಿ ಪಡೆದಿದ್ದರು. ಈ ಕಾರಣವೂ ಸೇರಿದಂತೆ ನಾನಾ ದಿಕ್ಕಿನಲ್ಲಿ ಕ್ರೇಜ್ ಸೃಷ್ಟಿಸಿದ್ದ ಭರತ ಬಾಹುಬಲಿ ಬಿಡುಗಡೆಗೊಂಡು ಯಶಸ್ವೀ ಪ್ರದರ್ಶನ ಕಂಡಿತ್ತು. ಮಂಜು ಮಾಂಡವ್ಯ ಕಾಮಿಡಿ ಪಥದಲ್ಲಿಯೇ ಮಜವಾದ ಕಥೆಯ ರಥವೆಳೆದ ರೀತಿಯನ್ನು ಪ್ರೇಕ್ಷಕರೆಲ್ಲ ಮೆಚ್ಚಿಕೊಂಡಿದ್ದರು. ಮಾಂಡವ್ಯ ಮತ್ತು ಚಿಕ್ಕಣ್ಣನ ಕಾಮಿಡಿ ಶೈಲಿ ನೋಡುಗರಿಗೆಲ್ಲ ಮತ್ತೇರಿಸಿತ್ತು.


ಹೀಗೆ ಯಶಸ್ವಿಯಾಗಿದ್ದ ಈ ಚಿತ್ರವೀಗ ಅಮೇಜಾನ್ ಪ್ರೈಮ್‌ನಲ್ಲಿಯೂ ದಾಖಲೆ ಸೃಷ್ಟಿಸಲಾರಂಭಿಸಿದೆ. ಹೆಚ್ಚೆಚ್ಚು ಮಂದಿ ಅಮೇಜಾನ್ ಪ್ರೈಮ್‌ನಲ್ಲಿ ಈ ಚಿತ್ರವನ್ನು ವೀಕ್ಷಿಸಲಾರಂಭಿಸಿದ್ದಾರೆ. ಈ ಹಿಂದೆ ದಿಯಾ, ಲವ್ ಮಾಕ್‌ಟೈಲ್‌ನಂಥ ಚಿತ್ರಗಳು ಇಲ್ಲಿ ವ್ಯಾಪಕ ಮನ್ನಣೆ ಪಡೆದುಕೊಂಡಿದ್ದವು. ಇದೀಗ ಭರತ ಬಾಹುಬಲಿ ಕೂಡಾ ಅದೇ ಹಾದಿಯಲ್ಲಿದೆ. ಅಮೇಜಾನ್ ಪ್ರೈಮ್‌ನಲ್ಲಿ ಸಿಗುತ್ತಿರೋ ಪ್ರೇಕ್ಷಕರ ಬೆಂಬಲ, ಪ್ರೀತಿ ಮಂಜು ಮಾಂಡವ್ಯ ಅವರಲ್ಲಿ ಹೊಸಾ ಹುರುಪು ತುಂಬಿರೋದಂತೂ ನಿಜ. ನಿರ್ದೇಶನದ ಎಲ್ಲ ಪಟ್ಟುಗಳನ್ನು ಅರಗಿಸಿಕೊಂಡಿರುವ ಮಂಜು ಮಾಂಡವ್ಯ ಭರತ ಬಾಹುಬಲಿಯನ್ನು ಎಲ್ಲರಿಗೂ ಇಷ್ಟವಾಗುವಂತೆ ರಸವತ್ತಾಗಿ ರೂಪಿಸಿದ್ದಾರೆ. ಜನರೆಲ್ಲ ಭರತ ಬಾಹುಬಲಿಯನ್ನು ವೀಕ್ಷಿಸಿ ನಿರಾಳವಾಗುತ್ತಾ ಗೃಹಬಂಧನದ ಕ್ಷಣಗಳನ್ನು ಸಮೃದ್ಧಗೊಳಿಸಿಕೊಳ್ಳುತ್ತಿದ್ದಾರೆ.

[adning id="4492"]

LEAVE A REPLY

Please enter your comment!
Please enter your name here