ಕೊರೋನಾ ಕಾಟದ ನಡುವೆಯೂ ಸಿಹಿ ಸುದ್ದಿಯ ಪೊಗರು!

[adning id="4492"]

ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಪೊಗರು ಚಿತ್ರ ಕಳೆದ ವರ್ಷವೇ ತೆರೆಗಾಣಬಹುದೆಂಬ ಆಶಾವಾದ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಆದರೆ ಧ್ರುವ ದಾಂಪತ್ಯ ಜೀವನಕ್ಕೆ ಅಡಿಯಿರಿಸಿದ್ದೂ ಸೇರಿದಂತೆ ಒಂದಷ್ಟು ಕಾರಣದಿಂದ ಪೊಗರು ಹೊಸಾ ವರ್ಷಕ್ಕೆ ಶಿಫ್ಟಾಗಿದೆ.  ಧ್ರುವಾ ಸಿನಿಮಾಗಳೆಂದ ಮೇಲೆ ಸುದೀರ್ಘ ಕಾಲಾವಧಿ ತೆಗೆದುಕೊಳ್ಳೋದು ಗ್ಯಾರೆಂಟಿ ಎಂಬಂಥಾ ವಾತಾವರಣವಿದೆ. ಈ ವರ್ಷವೂ ಬಿಡುಗಡೆ ದಿನಾಂಕ ಇನ್ನೊಂದಷ್ಟು ಕಾಲ ಎಳೆದಾಡಬಹುದೇನೋ ಎಂಬ ಆತಂಕದಲ್ಲಿದ್ದ ಅಭಿಮಾನಿಗಳಿಗೆ ಚಿತ್ರತಂಡವೇ ಸಿಹಿ ಸುದ್ದಿ ನೀಡಿತ್ತು. ಇದೀಗ ಕೊರೋನಾ ವೈರಸ್ ಬಾಧೆಯಿಂದಾಗಿ ಚಿತ್ರರಂಗ ಸ್ತಬ್ಧಗೊಂಡಿದೆ. ಅದರ ನಡುವೆಯೂ ಪೊಗರು ಚಿತ್ರತಂಡ ಮತ್ತೊಂದು ಸಂತಸದ ಸುದ್ದಿಯನ್ನು ಹಂಚಿಕೊಂಡಿದೆ.


ಶೀಘ್ರದಲ್ಲಿಯೇ ಪೊಗರು ಚಿತ್ರದ ಆಡಿಯೋ ಲಾಂಚ್ ಆಗಲಿದೆ. ಈ ವಿಚಾರವನ್ನು ಚಿತ್ರತಂಡವೇ ಖಚಿತಪಡಿಸಿದೆ. ಇದೀ ಸಿನಿಮಾವನ್ನು ಎಷ್ಟು ಶ್ರದ್ಧೆಯಿಂದ ಸಿದ್ಧಗೊಳಿಸಿಸಲಾಗಿದೆಯೋ ಅಷ್ಟೇ ಆಸ್ಥೆಯಿಂದ ರೂಪಿಸಿರುವ ಹಾಡುಗಳು ಶೀಘ್ರದಲ್ಲಿಯೇ ಲಾಂಚ್ ಆಗಲಿವೆ. ಪೊಗರು ಸಿನಿಮಾದ ಖದರ್ ಎಂಥಾದ್ದೆಂಬುದು ಟ್ರೇಲರ್ ಸೇರಿದಂತೆ ನಾನಾ ಸ್ವರೂಪಗಳಲ್ಲಿ ಈಗಾಗಲೇ ಸ್ಪಷ್ಟವಾಗಿದೆ. ಧ್ರುವಾ ಸರ್ಜಾ ಸಿನಿಮಾಗಳೆಂದ ಮೇಲೆ ಎರಡ್ಮೂರು ವರ್ಷಗಳಷ್ಟು ಸುದೀರ್ಘಾವಧಿ ತೆಗೆದುಕೊಳ್ಳುತ್ತವೆ ಎಂಬಂಥ ವಾತಾವರಣವಿದೆ. ಪೊಗರು ವಿಚಾರದಲ್ಲಿ ಅದನ್ನು ಸುಳ್ಳು ಮಾಡಬೇಕು, ಬೇಗನೆ ಅಭಿಮಾನಿಗಳ ಮುಂದೆ ಹೋಗ ಬೇಕೆಂಬ ಹಂಬಲ ಧ್ರುವ ಸರ್ಜಾರಿಗೂ ಇತ್ತು. ಆದರೆ ಕೆಲ ವೈಯಕ್ತಿಕ ಸಮಸ್ಯೆಗಳು ಬಂದೊದಗಿದ್ದೂ ಕೂಡಾ ಚಿತ್ರೀಕರಣ ತುಸು ನಿಧಾನಗತಿಯಲ್ಲಿ ಸಾಗುವಂತೆ ಮಾಡಿತ್ತು. ಆದರೆ ಅದೆಲ್ಲದರಾಚೆಗೂ ಚಿತ್ರತಂಡ ಅಂದುಕೊಂಡಂತೆಯೇ ಚಿತ್ರೀಕರಣ ಮಾಡಿ ಮುಗಿಸಿಕೊಂಡಿದೆ. ಇದೀಗ ಬಹುತೇಕ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬಿಡುಗಡೆಗೂ ಮುಹೂರ್ತ ನಿಗಧಿಯಾಗಿದೆ.


ಸಾಂಗು, ಟೀಸರ್, ಪೋಸ್ಟರ್‌ಗಳ ಮೂಲಕವಂತೂ ಪೊಗರು ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಕೊಂಡಿತ್ತು. ಹೀಗೆ ತಾರಕಕ್ಕೇರಿರೋ ನಿರೀಕ್ಷೆಗಳ ನಡುವೆಯೇ ಪೊಗರು ಚಿತ್ರೀಕರಣ ಅಂತಿಮ ಹಂತ ತಲುಪಿಕೊಂಡಿದೆ. ಈಗಂತೂ ಕೆಜಿಎಫ್ ನಂತರದಲ್ಲಿ ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಕನ್ನಡ ಚಿತ್ರಗಳನ್ನು ಬಿಡುಗಡೆಗೊಳಿಸೋ ಟ್ರೆಂಡ್ ಹುಟ್ಟಿಕೊಂಡಿದೆಯಲ್ಲಾ? ಆ ರೇಸಿನಲ್ಲಿ ಪೊಗರು ಕೂಡಾ ಪೊಗದಸ್ತಾಗಿಯೇ ಎಂಟ್ರಿ ಕೊಡುವ ಸನ್ನಾಹದಲ್ಲಿದೆ. ನಲವತ್ತು ಕೋಟಿ ಬಜೆಟ್ಟಿನಲ್ಲಿ ತಯಾರಾಗಿರೋ ಈ ಚಿತ್ರ ಈಗಾಗಲೇ ದೇಶಾದ್ಯಂತ ಸುದ್ದಿಯಲ್ಲಿದೆ. ಕನ್ನಡವೂ ಸೇರಿದಂತೆ ಹೆಚ್ಚಿನ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಳಿಸಲು ಎಲ್ಲ ಪ್ಲಾನುಗಳೂ ರೆಡಿಯಾಗಿವೆ. ಹೆಚ್ಚೂಕಡಿಮೆ ಇದೇ ಮಾರ್ಚ್ ತಿಂಗಳಲ್ಲಿ ಧ್ರುವ ಸರ್ಜಾ ದೇಶಾದ್ಯಂತ ಪೊಗರು ಪ್ರದರ್ಶಿಸೋದು ಪಕ್ಕಾ. ಅದಕ್ಕೂ ಮುಂಚಿತವಾಗಿ ಹಾಡಿನ ಪೊಗರು ಗರಿಬಿಚ್ಚಿಕೊಳ್ಳುವಂತೆ ಮಾಡಲು ಚಿತ್ರತಂಡ ಸನ್ನದ್ಧವಾಗಿದೆ.

[adning id="4492"]

LEAVE A REPLY

Please enter your comment!
Please enter your name here