ಶ್ರೀಮನ್ನಾರಾಯಣನಿಗೀಗ ಚಾರ್ಲಿಯ ಗುಂಗು!

[adning id="4492"]

ಕ್ಷಿತ್ ಶೆಟ್ಟಿ ಅಖಂಡ ಮೂರು ವರ್ಷಗಳ ಕಾಲ ಶ್ರಮವಹಿಸಿ ನಟಿಸಿದ್ದ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ನಿರೀಕ್ಷೆಯಂತೆಯೇ ಗೆಲುವು ಸಿಕ್ಕಿದೆ. ಭಿನ್ನವಾದ ಕಥೆ, ನವೀನ ಪ್ರಯೋಗಗಳೊಂದಿಗೆ ಶ್ರೀಮನ್ನಾರಾಯಣ ಜನಮನ ಗೆದ್ದಿದ್ದಾನೆ. ಈ ಮೂಲಕ ರಕ್ಷಿತ್ ವರ್ಷಗಳ ಹಿಂದಿನಿಂದ ಕವುಚಿಕೊಂಡಿದ್ದ ಮಾನಸಿಕ ಆಘಾತದಿಂದ ಹೊರ ಬಂದು ಫ್ರೆಶ್ ಆಗಿ ೭೭೭ ಚಾರ್ಲಿ ಸಿನಿಮಾದತ್ತ ಮುಖ ಮಾಡಿದ್ದಾರೆ. ಇದೀಗ ಚಾರ್ಲಿ ಚಿತ್ರೀಕರಣ ರಾಜಸ್ತಾನದಲ್ಲಿ ನಡೆಯುತ್ತಿದೆ. ಈಗಾಗಲೇ ಹಲವಾರು ಪೋಸ್ಟರ್‌ಗಳು ಮತ್ತು ಯಾರನ್ನೇ ಆದರೂ ಕುತೂಹಲದ ಕಮರಿಗೆ ಕೆಡಹಿ ಬಿಡುವಂಥಾ ಒಂದಷ್ಟು ವಿಚಾರಗಳ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಲೇ ಇದೆ.


ಹಾಗಾದರೆ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಯಾವ ಥರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಂಬ ಬಗ್ಗೆ ಒಂದಷ್ಟು ಸುಳಿವುಗಳಾಚೆಗೂ ಅಭಿಮಾನಿ ಬಳಗದಲ್ಲೊಂದು ಕುತೂಹಲ ಇದ್ದೇ ಇದೆ. ಅದಕ್ಕೆ ಮತ್ತಷ್ಟು ತೀವ್ರತೆ ಸಿಗುವಂಥಾ ಪೋಸ್ಟರ್ ಒಂದೀಗ ಹರಿದಾಡಲಾರಂಭಿಸಿದೆ. ರಕ್ಷಿತ್ ಶೆಟ್ಟಿ ವೆಲ್ಡಿಂಗ್ ಮಾಸ್ಕ್ ಹಿಡಿದು ತೀರಾ ಸಾಮಾನ್ಯ ಯುವಕನ ಲುಕ್ಕಿನಲ್ಲಿರೋ ಈ ಫೋಟೋ ಸುತ್ತಲೀಗ ನಾನಾ ದಿಕ್ಕಿನ ಚರ್ಚೆಗಳು ಶುರುವಾಗಿವೆ. ಅಂತೂ ೭೭೭ ಚಾರ್ಲಿ ಚಿತ್ರದ ಮೂಲಕ ರಕ್ಷಿತ್ ಮತ್ತೊಂದು ಭಿನ್ನ ಕಥಾನಕದೊಂದಿಗೆ ಪ್ರೇಕ್ಷಕರನ್ನು ತಾಕಲು ಮುಂದಾಗಿರೋದಂತೂ ಸತ್ಯ.


ಇದು ಇತ್ತೀಚೆಗೆ ಟ್ರೆಂಡ್ ಸೆಟ್ ಮಾಡಿರುವ ನಾಯಿ ಮತ್ತು ಮನುಷ್ಯ ಬಾಂಧವ್ಯದ ಸೂಕ್ಷ್ಮ ಕಥಾ ಎಳೆಯನ್ನು ಒಳಗೊಂಡಿರೋ ಚಿತ್ರ. ಇದರಲ್ಲಿ ೭೭೭ ಚಾರ್ಲಿ ಅನ್ನೋದು ನಾಯಿಯ ಹೆಸರಂತೆ. ರಕ್ಷಿತ್ ಇಲ್ಲಿ ಧರ್ಮ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಮುದ್ದಿನ ನಾಯಿಯೊಂದಿಗೆ ಭಾರತದ ಬಹು ಭಾಗದ ಜರ್ನಿಯ ಕಥೆ ಹೊಂದಿರುವ ಈ ಚಿತ್ರ ಈಗ ಹೊರ ಬಿದ್ದಿರೋ ಒಂದಷ್ಟು ವಿಚಾರಗಳಾಚೆಗೆ ಸಮೃದ್ಧವಾಗಿರುವ ಕಥಾನಕವನ್ನೊಳಗೊಂಡಿದೆ. ಬಹುಶಃ ಈ ಸಿನಿಮಾ ಕೂಡಾ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂಥಾ ದಾಖಲೆ ನಿರ್ಮಾಣ ಮಾಡಿದರೂ ಅಚ್ಚರಿಯೇನಿಲ್ಲ.

[adning id="4492"]

LEAVE A REPLY

Please enter your comment!
Please enter your name here