ಆನೆಬಲ: ಸಹಜ ಸುಂದರ ಮುದ್ದೆ ಮಹಿಮೆ!

ನತಾ ಟಾಕೀಸ್ ಬ್ಯಾನರ್‌ನಡಿಯಲ್ಲಿ ನಿರ್ಮಾಣಗೊಂಡಿರುವ ಆನೆಬಲ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ. ಈವತ್ತಿಗೆ ಎಲ್ಲರೂ ಉದ್ಯೋಗ ಅರಸಿ ನಗರದತ್ತ ಮುಖ ಮಾಡಿ ನೆಲದ ನಂಟು ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿಯೇ ನಿಜವಾದ ಹಳ್ಳಿ ಬದುಕಿನ ಘಮ ಮೆಲ್ಲಗೆ ಮಾಯವಾಗುತ್ತಿರೋ ಈ ಘಳಿಗೆಯಲ್ಲಿ ಅಂಥಾ ವಾತಾವರಣದ ಸಿನಿಮಾಗಳಿಗಾಗಿ ಹಂಬಲಿಸುವವರು ಸಂಖ್ಯೆ ದೊಡ್ಡದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣವಾಗಿ ಹಳ್ಳಿಯಲ್ಲಿಯೇ ಘಟಿಸೀ ಕಥನಗಳು ದೃಷ್ಯ ರೂಪ ಪಡೆದಿರೋದು ತೀರಾ ವಿರಳ. ವಿಶೇಷವೆಂದರೆ ಆ ಬಗೆಯ ಚಿತ್ರಗಳು ಗೆದ್ದಿವೆ. ಅದನ್ನು ಮುಂದುವರೆಸುವ ಎಲ್ಲ ಗುಣ ಲಕ್ಷಣಗಳೊಂದಿಗೆ ಈ ವಾರ ಆನೆಬಲ ಚಿತ್ರ ಬಿಡುಗಡೆಗೊಳ್ಳುತ್ತಿದೆ.


ಇದು ಸೊನಗಹಳ್ಳಿ ರಾಜು ನಿರ್ದೇಶನ ಮಾಡಿರುವ ಚಿತ್ರ. ಈಗಾಗಲೇ ಟ್ರೇಲರ್ ಮೂಲಕ ಇದು ನಿಜವಾದ ಫ್ಲೇವರ್ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಈ ಚಿತ್ರದಲ್ಲಿ ಯಾವ ಸ್ಟಾರ್ ನಟರೂ ಇಲ್ಲ. ಹಾಗೆ ನೋಡಿದರೆ ಒಂದಿಡೀ ತಂಡವೇ ಹೊಸಬರಿಂದ ತುಂಬಿಕೊಂಡಿದೆ. ಇಂಥಾ ತಂಡವನ್ನಿಟ್ಟುಕೊಂಡು ಬೆಳ್ಳಂಬೆಳಗ್ಗೆ ಪಡಿಮೂಡುವ ವಶಾತಾವರಣದಷ್ಟೇ ಫ್ರೆಶ್ ಆದ ಚಿತ್ರವನ್ನು ನಿರ್ಮಾಣ ಮಾಡಿರುವವರು ವೇಣುಗೋಪಾಲ್ ಅಡಕಿಮಾರನಹಳ್ಳಿ. ಹಳ್ಳಿ ವಾತಾವರಣ ಬಿಟ್ಟ ಆಚೀಚೆ ಹೊರಳದ ಈ ಕಥೆಯ ಬಗ್ಗೆ ಮೋಹ ಬೆಳೆಸಿಕೊಂಡೇ ಅವರು ಈ ಸಿನಿಮಾ ಮೇಲೆ ಕಾಸು ಹೂಡಿದ್ದಾರೆ. ಈ ಮೂಲಕ ಸದಭಿರುಚಿಯ, ಹೊಸತನಗಳನ್ನೊಳಗೊಂಡಿರುವ ಒಂದೊಳ್ಳೆ ಚಿತ್ರ ನಿರ್ಮಾಣ ಮಾಡಿರುವ ಖುಷಿ ಅವರಲ್ಲಿದೆ.


ಹಳೇ ಜಮಾನದಲ್ಲಿ ಮಂಡ್ಯ ಸೀಮೆಯ ಹಳ್ಳಿಗಾಡಿನ ದೃಷ್ಯಾವಳಿಗಳು ಅನೇಕ ಸಿನಿಮಾಗಳಲ್ಲಿ ಸೆರೆಹಿಡಿಯಲ್ಪಟ್ಟಿವೆ. ಈ ಚಿತ್ರೆದಲ್ಲಿಯೂ ಮಂಡ್ಯ ಸೀಮೆಯ ಹಳ್ಳಿ ಕಂಪನ್ನು ಪ್ರತೀ ದೃಷ್ಯಗಳಲ್ಲಿಯೂ ಮೇಳೈಸುವಂತೆ ಸೆರೆಹಿಡಿಯಲಾಗಿದೆ. ಇಲ್ಲಿ ಸರ್ವರ ಆಹಾರವಾಗಿರೋದು ರಾಗಿ ಮುದ್ದೆ. ಆರೋಗ್ಯದ ಖಣಿಯಂತಿರೋ ರಾಗಿ ಮುದ್ದೆ ಕೂಡಾ ಈ ಸಿನಿಮಾದಲ್ಲೊಂದು ಪ್ರಧಾನ ಪಾತ್ರದಷ್ಟೇ ಪ್ರಾಶಸ್ತ್ಯ ಪಡೆದುಕೊಂಡಿದೆಯಂತೆ. ಅದರ ಮಹತ್ವವೇನು? ಒಟ್ಟಾರೆ ಕಥೆಯಲ್ಲಿ ಅದು ಹೇಗೆ ಸ್ಥಾನ ಪಡೆದುಕೊಂಡಿದೆ ಎಂಬೆಲ್ಲ ಅಂಶಗಳು ಈ ವಾರ ಎಲ್ಲರ ಮುಂದೆ ಅನಾವರಣಗೊಳ್ಳಲಿದೆ.


ಆನೆಬಲ ಚಿತ್ರದಲ್ಲಿ ಯುವಕರ ಗುಂಪೊಂದರ ಚೇಷ್ಟೆ, ಕುಚೇಷ್ಟೆ ಸೇರಿದಂತೆ ಲವಲವಿಕೆಯ ಎಲ್ಲ ಅಂಶಗಳೂ ಸೇರಿಕೊಂಡಿವೆ. ಈ ದಿನಮಾನದಲ್ಲಿ ಹಳ್ಳಿಗಾಡುಗಳಲ್ಲಿಯೂ ಮರೆಯಾಗುತ್ತಿರುವಂತಿರೋ ಸೋಬಾನೆ ಪದ ಸೇರಿದಂತೆ ಒಂದಷ್ಟು ಅಂಶಗಳನ್ನು ಕೂಡಾ ಇಲ್ಲಿ ಅಡಕವಾಗಿಸಲಾಗಿದೆಯಂತೆ. ಇಂಥಾ ವಿಚಾರಗಳೊಂದಿಗೆ ಗಟ್ಟಿ ಕಥೆಯ ಸಾಥ್‌ನೊಂದಿಗೆ ಕಳೆಗಟ್ಟಿಕೊಂಡಿರೋ ಆನೆಬಲ ಕ ಮರ್ಶಿಯಲ್ ಜಾಡಿನಲ್ಲಿಯೇ ಮೂಡಿ ಬಂದಿದೆ ಅನ್ನೋದು ನಿಜವಾದ ವಿಶೇಷತೆ. ಹಳ್ಳಿ ಸೀಮೆಯಲ್ಲಿ ಹಾಸುಹೊಕ್ಕಾಗಿರೋ ಕಾಮಿಡಿಯನ್ನು ಸಹಜವಾಗಿಯೇ ಇಲ್ಲಿ ದೃಷ್ಯೀಕರಿಸಲಾಗಿದೆಯಂತೆ. ಥೇಟರು ಹೊಕ್ಕ ಎಲ್ಲರೂ ಹಳ್ಳಿಯೊಳಗೆ ಮನಸಾರೆ ಯಾನ ಕೈಗೊಂಡು ಬಂದಂಥಾ ಫೀಲ್ ಕೊಡಲಿರುವ ಈ ಚಿತ್ರ ತೆರೆಗಾಣಲು ಮೂರು ದಿನ ಮಾತ್ರ ಉಳಿದುಕೊಂಡಿದೆ.

LEAVE A REPLY

Please enter your comment!
Please enter your name here