ಜೈಶ್ ಉಗ್ರರ ಆನ್‌ಲೈನ್ ಬೇಟೆ!

[adning id="4492"]

ಹಿಂದೆ ಉಗ್ರ ಸಂಘಟನೆಗಳು ನಾನಾ ಸರ್ಕಸ್ಸು ನಡೆಸುತ್ತಾ ಯುವಕರನ್ನು ಸೆಳೆದುಕೊಂಡು ಬಲಗೊಳ್ಳುತ್ತಿದ್ದವು. ಊರೂರುಗಳಿಗೆ ವೇಷ ಮರೆಸಿಕೊಂಡು ನುಸುಳಿ ತ್ರಾಸದಾಯಕವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದ ಉಗ್ರರ ಪಾಲಿಗೆ ಸಾಮಾಜಿಕ ಜಾಲತಾಣಗಳು ಪ್ರವರ್ಧಮಾನಕ್ಕೆ ಬಂದ ನಂತರದಲ್ಲಿ ಎಲ್ಲವೂ ಸಲೀಸಾಗಿದೆ. ಅಂಥಾ ಸಂಘಟನೆಗಳಲ್ಲಿ ಸಾಮಾಜಿಕ ಜಾಲತಾಣಗಳತ್ತ ಕಣ್ಣಿಟ್ಟು ಕಾಯಲೆಂದೇ ಉಗ್ರದ ತಂಡವೊಂದು ಕಾರ್ಯ ನಿರ್ವಹಿಸುತ್ತಿದೆಯಂತೆ. ಈ ಚಾಲಾಕಿ ಟೀಮು ಸಾಮಾಜಿಕ ಜಾಲತಾಣಗಳಲ್ಲಿ ದೇಶವಿರೋಧಿ ಪೋಸ್ಟ್‌ಗಳನ್ನು ಹಾಕುವವರನ್ನು ಸಂಪರ್ಕಿಸಿ ಸಲೀಸಾಗಿ ಸಂಘಟನೆಗೆ ಸೆಳೆದುಕೊಳ್ಳುತ್ತಿದ್ದಾರೆಂಬ ಅಘಾತಕಾರಿ ಸಂಗತಿಯೊಂದೀಗ ಬಯಲಾಗಿದೆ.


ಇಂಥಾದ್ದೊಂದು ಆಘಾತಕಾರಿ ವಿಚಾರ ಬಯಲಾಗಿರೋದು ನಗ್ರೊಟಾ ಎನ್‌ಕೌಂಟರ್ ಸುತ್ತಲಿನ ವಿಚಾರಣೆಯ ಸಂದರ್ಭದಲ್ಲಿ. ಈ ಎನ್‌ಕೌಂಟರ್ ಸಂಬಂಧವಾಗಿ ಜೈಶ್ ಸಂಘಟನೆಯ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಯುವಕರನ್ನು ಬಂಧಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸಮೀರ್ ಧರ್ ಎಂಬಾತನೂ ಬಂಧನಕ್ಕೀಡಾಗಿದ್ದ. ಆ ಯುವಕ ಬಾಯ್ಬಿಟ್ಟಿದ್ದ ಆಘಾತಕಾರಿ ವಿಚಾರವನ್ನು ಕೇಳಿ ಖುದ್ದು ಅಧಿಕಾರಿಗಳೇ ಕಂಗಾಲಾಗಿದ್ದರು.


ಈತನ ಸಂಬಂಧಿಕ ಈಗಿನ್ನೂ ಇಪ್ಪತ್ತರ ಪ್ರಾಯದ ಸುಹೈಲ್ ಎಂಬಾತನನ್ನೂ ಕೂಡಾ ಪೊಲೀಸರು ಬಂಧಿಸಿದ್ದರು. ಈತ ಭಾರತ ವಿರೋಧಿ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಡಿಗಡಿಗೆ ಪೋಸ್ಟ್ ಮಾಡುತ್ತಿದ್ದ. ಕೆಲವೇ ದಿನಗಳಲ್ಲಿ ಜೈಶ್ ಸಂಘಟನೆಯ ಆನ್‌ಲೈನ್ ಟೀಮಿನ ಕಣ್ಣಿಗೆ ಈತ ಬಿದ್ದಿದ್ದ. ಕೆಲವೇ ದಿನಗಳಲ್ಲಿ ಜೈಶ್ ಉಗ್ರರು ಈತನನ್ನು ಸಂಪರ್ಕಿಸಿ ತಮ್ಮತ್ತ ಸೆಳೆದುಕೊಂಡಿದ್ದರು. ಆ ನಂತರ ತರಬೇತಿ ಕೊಡಿಸಿ ಉಗ್ರನನ್ನಾಗಿಸಿದ್ದರು. ಹೀಗೆಯೇ ಭಾರತದ ತುಂಬಾ ಅದೆಷ್ಟೋ ಯುವಕರನ್ನು ಈ ಸಂಘಟನೆಗಳೊಳಗೆ ಸೇರಿಸಿಕೊಳ್ಳಾಗಿದೆಯೆಂಬ ಮಾಹಿತಿ ಅಧಿಕಾರಿಗಳಿಗೆ ಸಿಕ್ಕಿದೆ.

[adning id="4492"]

LEAVE A REPLY

Please enter your comment!
Please enter your name here