ಮಹಿಳಾ ಪ್ರಧಾನ ಪಾತ್ರದ ಮೂಲಕ ಅನು ಆಗಮನ!

[adning id="4492"]

ನ್ನಡ ಚಿತ್ರರಂಗದಲ್ಲಿ ಪ್ರತಿಭಾವಂತ ನಟಿಯಾಗಿ ಗುರುತಿಸಿಕೊಂಡಿರುವ ಅನುಪ್ರಭಾಕರ್ ಈಗೊಂದು ವರ್ಷದಿಂದೀಚೆಗೆ ಸಂಪೂರ್ಣವಾಗಿ ಮರೆಯಾದಂತಿದ್ದರು. ಈ ಹಿಂದೆ ಅನುಕ್ತ ಅಂತೊಂದು ಸಿನಿಮಾವಾ ಕೊನೆ, ಮತ್ತೆ ಅವರು ಬೇರ‍್ಯಾವ ಚಿತ್ರಗಳಲ್ಲಿಯೂ ನಟಿಸಿರಲಿಲ್ಲ. ರಘು ಮುಖರ್ಜಿಯನ್ನು ಮದುವೆಯಾಗಿ ಆ ನಂತರದಲ್ಲಿ ಮಗುವೂ ಆಗಿ ಅನು ಪ್ರಭಾಕರ್ ಎಂಬ ನಟಿ ಚಿತ್ರರಂಗದಿಂದ ದೂರವೇ ಉಳಿದು ಬಿಡುತ್ತಾರೇನೋ ಎಂಬಂಥ ವಾತಾವರಣವಿತ್ತು. ಆದರೀಗ ಅನು ಮಹಿಳಾ ಪ್ರಧಾನ ಚಿತ್ರವೊಂದರ ಮೂಲಕ ಮತ್ತೆ ಪ್ರೇಕ್ಷಕರೆದುರು ಬರಲು ರೆಡಿಯಾಗಿದ್ದಾರೆ.


ಅನು ಪ್ರಭಾಕರ್ ತಮ್ಮ ರೀ ಎಂಟ್ರಿಗಾಗಿ ಈಗೊಂದಷ್ಟು ಕಾಲದಿಂದಲೂ ಎದುರು ನೋಡುತ್ತಿದ್ದರಂತೆ. ಒಂದಷ್ಟು ಕಥೆಗಳು ಅವರ ಮುಂದೆ ಬಂದಿದ್ದರಾದರೂ ಅವೆಲ್ಲವೂ ರೆಗ್ಯುಲರ್ ಸ್ವರೂಪದವುಗಳೇ ಆಗಿದ್ದರಿಂದ ಅನು ಅದರತ್ತ ಮನಸು ಮಾಡಿರಲಿಲ್ಲ. ಕಡೆಗೂ ಅವರು ಕನ್ನಡದ ಖ್ಯಾತ ಲೇಖಕಿ ಸಾರಾ ಅಬೂಬಕರ್ ಅವರ ಕಾದಬರಿ ಆಧಾರಿತ ಚಿತ್ರವನ್ನು ಮೆಚ್ಚಿ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಸಾರಾ ವಜ್ರ ಎಂಬ ಶೀರ್ಷಿಕೆಯನ್ನೂ ನಿಗಧಿ ಮಾಡಲಾಗಿದೆ. ಇದನ್ನು ಆರ್ನಾ ಸಾಧ್ಯ ನಿರ್ದೇಶನ ಮಾಡಲಿದ್ದಾರೆ. ತನ್ನನ್ನು ಇಂಥಾದ್ದೊಂದು ಚೆಂದದ ಅವಕಾಶ ಅರಸಿ ಬಂದಿದ್ದರ ಬಗ್ಗೆ ಅನು ಪ್ರಭಾಕರ್ ಖುಷಿಗೊಂಡಿದ್ದಾರೆ.


ಈ ಕಾದಂಬರಿ ನಫೀಜಾ ಎಂಬ ಪಾತ್ರದ ಸುತ್ತ ಸುತ್ತುವಂಥಾ ಕಥಾ ಹಂದರವನ್ನೊಳಗೊಂಡಿದೆ. ಅದು ಹಲವಾರು ಚಹರೆಗಳಿರುವ ಪಾತ್ರ. ಆರಂಭದಲ್ಲಿ ತಾನು ಇಷ್ಟು ಕಾಲ ಬಯಸಿದ್ದಂಥಾದ್ದೇ ಪಾತ್ರ ಸಿಕ್ಕ ಬಗ್ಗೆ ಖುಷಿಯಾದರೂ ಕೂಡಾ ಆಳದಲ್ಲೆಲ್ಲೋ ಈ ಪಾತ್ರಕ್ಕೆ ಜೀವ ತುಂಬಲು ಸಾಧ್ಯವಾದೀತಾ ಎಂಬ ಅಳಕು ಅನು ಅವರಲ್ಲಿ ಇದ್ದೇ ಇತ್ತಂತೆ. ಅಷ್ಟಕ್ಕೂ ಅನು ಅದೆಂಥಾದ್ದೇ ಪಾತ್ರವಾದರೂ ನಿಭಾಯಿಸುವ ಛಾತಿ ಇರುವ ನಟಿಯೆಂಬುದು ಈಗಾಗಲೇ ಸಾಬೀತಾಗಿದೆ. ಬಾಲ ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಅನು ಇದುವರೆಗೂ ಎಂಬತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅದೆಲ್ಲವುಗಳಿಗಿಂತ ಭಿನ್ನವಾಗಿರೋ ಈ ಚಿತ್ರಕ್ಕಾಗಿ ಅನು ತಯಾರಿ ನಡೆಸಲಾರಂಭಿಸಿದ್ದಾರೆ.

[adning id="4492"]

LEAVE A REPLY

Please enter your comment!
Please enter your name here