ಪ್ರತ್ಯೇಕ ದೇಶ ಕಟ್ಟಿದ ನಿತ್ಯಾನಂದನಿಗೆ ಬಂಧನದ ಕಂಟಕ!

[adning id="4492"]

ನರಲ್ಲಿನ ಅಧ್ಯಾತ್ಮಿಕ ನಂಬಿಕೆಯನ್ನೆ ತನ್ನ ಸಾಮ್ರಾಜ್ಯ ಕಟ್ಟಲು ಬಳಸಿಕೊಂಡು ಮೆರೆದ ಕಳ್ಳ ಸನ್ಯಾಸಿಗಳ ಪಟ್ಟಿ ದೊಡ್ಡದಿದೆ. ಆ ಸಾಲಿಗೆ ಸೇರಿಕೊಳ್ಳುವ ತಮಿಳುನಾಡು ಮೂಲದ ಕುಳ ನಿತ್ಯಾನಂದ. ತನ್ನ ಪೆಕರು ಪೆಕರು ಪ್ರವಚನಗಳನ್ನೇ ಅಧ್ಯಾತ್ಮವೆಂದು ಮುಠ್ಠಾಳ ಭಕ್ತರನ್ನು ನಂಬಿಸುತ್ತಾ ಬಂದಿರೋ ನಿತ್ಯಾನಂದನ ಮೇಲೆ ಅತ್ಯಾಚಾರ, ಅಪ್ರಾಪ್ತ ಬಾಲಕಿಯರ ಅಪUಹರಣ ಸೇರಿದಂತೆ ಹಲವಾರು ಘನ ಗಂಭೀರ ಆರೋಪಗಳಿದ್ದಾವೆ. ಅದರಿಂದ ತಪ್ಪಿಸಿಕೊಳ್ಳಲೋಸ್ಕರವೇ ಬೇರೆ ಬಿಲ ಸೇರಿಕೊಂಡಿರೋ ನಿತ್ಯಾನಂದನಿಗೀಗ ಬಂಧನದ ಭಯ ಶುರುವಾಗಿದೆ. ಅಲ್ಲೆಲ್ಲೋ ಪ್ರತ್ಯೇಕ ದೇಶ ಕಟ್ಟಿ ಅದರ ಅಧಿಪತಿ ಎಂಬಂತೆ ಬಿಂಬಿಸಿಕೊಂಡಿದ್ದ ಆತನಿಗೀಗ ಪರಪ್ಪನ ಅಗ್ರಹಾರವೆಂಬೋ ದೇಶವೇ ಖಾಯಮ್ಮಾಗುವಂಥಾ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.


ಈ ಎಲ್ಲ ಆರೋಪಗಳ ಬಗ್ಗೆ ರಾಮನಗರ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಎಲ್ಲವನ್ನೂ ಅಮೂಲಾಗ್ರವಾಗಿ ಪರಿಶೀಲನೆ ನಡೆಸಿರುವ ನ್ಯಾಯಾಲಯವೀಗ ನಿತ್ಯಾನಂದನ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದೆ. ಈ ಪ್ರಕರಣದಲ್ಲಿ ಜಾಮೀನು ಅರ್ಜಿಯನ್ನು ಹೈಕೋರ್ಟ್ ಇತ್ತೀಚೆಗಷ್ಟೇ ತಿರಸ್ಕರಿಸಿತ್ತು. ಇದನ್ನು ಆಧಾರವಾಗಿಟ್ಟುಕೊಂಡು ರಾಮನಗರ ಸತ್ರ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ. ಈ ಮೂಲಕ ಈ ಕಂಟಕದಿಂದ ಪಾರಾಗಲು ನಾನಾ ಆಟ ಕಟ್ಟುತ್ತಾ ಬಂದಿದ್ದ ನಿತ್ಯಾನಂದನಿಗೆ ಕಟಕಟೆಯಲ್ಲಿ ಬಂದು ನಿಲ್ಲದೆ ಬೇರೆ ದಾರಿಯೇ ಇಲ್ಲವೆಂಬಂಥಾ ಪರಿಸ್ಥಿತಿ ಬಂದೊದಗಿದೆ.


ಗುಜರಾತ್‌ನ ಅಹಮದಾಬಾದ್‌ನಲ್ಲಿಯೂ ನಿತ್ಯಾನಂಧನ ಆಶ್ರಮವಿದೆ. ಅಲ್ಲಿಯೂ ಕೂಡಾ ಆತನ ವಿರುದ್ಧ ಇಂಥಾದ್ದೇ ಗಂಭೀರ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ವಿಚಾರಣೆ ನಡೆಸಿರುವ ಅಹಮದಾಬಾದ್ ನ್ಯಾಯಾಲಯವೂ ಕೂಡಾ ವಾರೆಂಟ್ ಹೊರಡಿಸಿದೆ. ಈ ಮೂಲಕ ಸೂರ್ಯನನ್ನೇ ಕಂಟ್ರೋಲಲ್ಲಿಟ್ಟುಕೊಂಡಿರೋದಾಗಿ ಭಳಾಂಗು ಬಿಟ್ಟಿದ್ದ ನಿತ್ಯಾನಂದ ತನ್ನ ವಿರುದ್ಧ ಜರುಗಲಿರೋ ಸರಣಿ ಕಾನೂನು ಕ್ರಮಗಳನ್ನು ಕಂಟ್ರೋಲು ಮಾಡಲಾಗದ ಸ್ಥಿತಿ ತಲುಪಿಕೊಂಡಿದ್ದಾನೆ. ಈ ಬಾರಿ ಎಲ್ಲ ಸಿಕ್ಕುಗಳಲ್ಲಿಯೂ ಜಾರಿಯಲ್ಲಿರುವ ಪರಿಸ್ಥಿತಿಗಳನ್ನು ಗಮನಿಸಿದರೆ ಈ ಬಾರಿ ನಿತ್ಯಾನಂದ ಪಾರಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ.

[adning id="4492"]

LEAVE A REPLY

Please enter your comment!
Please enter your name here