ಅಸಮರ್ಥ ಸಚಿವರನ್ನು ಮನೆಗೆ ಕಳಿಸಿ ಅಂದರು ಯತ್ನಾಳ್!

ಶೋಧ ನ್ಯೂಸ್ ಡೆಸ್ಕ್: ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷದಲ್ಲಿನ ಆಂತರಿಕ ವಿದ್ಯಮಾನಗಳ ಬಗ್ಗೆ ಭಹಿಂರಂಗ ಹೇಳಿಕೆಗಳನ್ನು ಕೊಡುತ್ತಾ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರೋ ಕೆಲ ವಿದ್ಯಮಾನಗಳ ಬಗ್ಗೆ ಮಾತಾಡಿದ್ದಾರೆ. ತಮ್ಮದೇ ಸರ್ಕಾರದ ಬಗ್ಗೆ ಆತ್ಮಾವಲೋಕನದ ಮಾತುಗಳನ್ನಾಡುವ ಮೂಲಕ ನೇರಾ ನೇರ ಚಾಟಿ ಬೀಸಿದ್ದಾರೆ. ಇದರ ಜೊತೆ ಜೊತೆಗೇ ಇನ್ನು ನಾಲಕ್ಕೆ ನಾಲಕ್ಕು ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂಬ ಬಾಂಬನ್ನೂ ಸಿಡಿಸಿದ್ದಾರೆ!


ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿದರೂ ಕೂಡಾ ಹಿರಿಯರೇ ಅಸಮಾಧಾನ ಹೊಂದಿದ್ದಾರೆ. ಸಂಪುಟವನ್ನು ಪುನಾರಚನೆ ಮಾಡಬೇಕೆಂಬ ಒತ್ತಾಯವೂ ಕೇಳಿ ಬರುತ್ತಿದೆ. ಇದಲ್ಲದೇ ಸಚಿವರೊಬ್ಬರ ಕುಟುಂಬದವರು ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂಬ ದೂರೂ ಹೈಕಮಾಂಡಿಗೆ ತಲುಪಿದೆ. ಸದ್ಯದ ಪರಿಸ್ಥಿತಿಯಲ್ಲಿ ಸಂಪುಟ ಪುನಾರಚನೆ ಮಾಡಲೇ ಬೇಕಾದ ವಾತಾವರಣ ಇರೋದರಿಂದ ಹೈಕಮಾಂಡ್ ಈ ಬಗ್ಗೆ ಸೂಕ್ತ ನಿರ್ಧಾರ ಪ್ರಕಟಿಸಲಿದೆ ಎಂದು ಯತ್ನಾಳ್ ಹೇಳಿಕೊಂಡಿದ್ದಾರೆ. ಇದೆಲ್ಲರದ ಪರಿಣಾಮವಾಗಿಯೇ ಇನ್ನು ನಾಲಕ್ಕು ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದಿರೋ ಯತ್ನಾಳ್ ಅದು ಯಾವ ಥರದ ಬದಲಾವಣೆ ಅನ್ನೋದರ ಬಗ್ಗೆ ಬಾಯಿ ಬಿಟ್ಟಿಲ್ಲ.


ಇದೆಲ್ಲಕ್ಕಿಂತಲೂ ಮುಖ್ಯವಾಗಿ ತಮ್ಮ ಸರ್ಕಾರದ ಕೆಲ ಸಚಿವರುಗಳ ಕಾರ್ಯ ವೈಖರಿಯ ಬಗ್ಗೆಯೂ ಯತ್ನಾಳ್ ಬಿಡು ಬೀಸಾಗಿಯೇ ಮಾತಾಡಿದ್ದಾರೆ. ಸಚಿವರ ಕಾರ್ಯವೈಖರಿಯ ಮೌಲ್ಯಮಾಪನವಾಗಬೇಕೆಂದಿರುವ ಅವರು,  ಕೆಲ ಸಚಿವರು ವಿಧಾನಸೌಧ, ವಿಕಾಸ ಸೌಧದ ಬಳಿ ಸುಳಿದಾಡುವುದೂ ಇಲ್ಲ. ಅಂಥವರನ್ನು ಜನರು ಮಾತ್ರವಲ್ಲ ಶಾಸಕರೇ ಹುಡುಕುವಂಥಾ ವಾತಾವರಣವಿದೆ. ಹೀಗೆ ಜವಾಬ್ದಾರಿ ಇಲ್ಲದವರನ್ನು, ಅಸಮರ್ಥರನ್ನು ಮುಲಾಜಿಲ್ಲದೆ ಮನೆಗೆ ಕಳಿಸಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕೆಂದೂ ಯತ್ನಾಳ್ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here