ಕುಂಭ ಮೇಳಕ್ಕೆ ಹೊರಟು ನಿಂತ ಸಿಎಂ ತಲೆತುಂಬ ಭಯದ ಛಾಯೆ!

[adning id="4492"]

ರ್ಷಾಂತರಗಳಿಂದ ಬಯಸೀ ಬಯಸಿ ದಕ್ಕಿಸಿಕೊಂಡ ಸಿಎಂ ಕುರ್ಚಿಯೂ ರೇಜಿಗೆ ಹುಟ್ಟಿಸುವಷ್ಟರ ಮಟ್ಟಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ಸುತ್ತ ಬರೀ ಸಮಸ್ಯೆಗಳೇ ಹುತ್ತಗಟ್ಟಿಕೊಂಡಿವೆ. ಬಹುಶಃ ಅಷ್ಟೆಲ್ಲ ಸರ್ಕಸ್ಸು ಮಾಡಿ ಪಡೆದುಕೊಂಡ ಕುರ್ಚಿಯಲ್ಲಿ ಯಡ್ಡಿ ಒಂದರೆ ಕ್ಷಣವೂ ಆರಾಮವಾಗಿ ಕುಕ್ಕರಿಸುವ ಅವಕಾಶವೂ ಇದುವರೆಗೆ ಒದಗಿ ಬಂದಿಲ್ಲವೇನೋ… ಈಗಿರೋ ವಾತಾವರಣ ಗಮನಿಸಿದರೆ ಅದು ಮುಂದೆಯೂ ಸದ್ಯಕ್ಕೆ ಒದಗುವ ವಾತಾವರಣವಿಲ್ಲ. ಇದೀಗ ಸಂಪುಟ ವಿಸ್ತರಣೆ ಮಾಡಿ ತಮಗೆ ಸಪೋರ್ಟು ಮಾಡಿ ಬೇರೆ ಪಕ್ಷದಿಂದ ಬಂದ ಒಂದಷ್ಟು ಮಂದಿಗೆ ಸಚಿವ ಸ್ಥಾನ ನೀಡಿದರೂ ಸಮಾಧಾನವೆಂಬುದು ಯಡ್ಡಿ ಪಾಲಿಗೆ ಮರೀಚಿಕೆ. ಇದೆಲ್ಲದರಾಚೆಗೆ ವಾರಣಸಿಯ ಕುಂಭ ಮೇಳಕ್ಕೆ ಹೊರಟಿರೋ ಸಿಎಂ ತಲೆ ತುಂಬ ಮುಂದೇನಾಗುತ್ತದೋ ಎಂಬ ಭಯದ ಛಾಯೆಯೇ ಆವರಿಸಿಕೊಂಡಿದೆ!
ಇನ್ನೆರಡು ದಿನಗಳಲ್ಲಿ ಅಧಿವೇಷನ ಆರಂಭವಾಗಲಿದೆ. ಈ ಬಾರಿ ಸರ್ಕಾರವನ್ನು ಮುಜುಗರಕ್ಕೆ ತಳ್ಳುವಂಥಾ ಯಥೇಚ್ಛ ಅಸ್ತ್ರಗಳು ವಿರೋಧ ಪಕ್ಷಗಳ ಕೈಲಿವೆ. ಈ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಆನಂದ್ ಸಿಂಗ್‌ಗೆ ಅರಣ್ಯ ಖಾತೆ ಕೊಟ್ಟಿರೋದಂತೂ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಸೇರಿದಂತೆ ಅನೇಕರು ಈಗಾಗಲೇ ಮಾಧ್ಯಮಗಳ ಮೂಲಕ ಅರಣ್ಯ ಖಾತೆಯ ಸಂಬಂಧವಾಗಿ ಪ್ರಶ್ನೆಗಳನ್ನೆತ್ತಿದ್ದಾರೆ. ಇದೆಲ್ಲದರ ಬೆನ್ನಿಗೇ ಹೈಕಮಾಂಡ್ ಕೂಡಾ ಆನಂದ್ ಸಿಂಗ್ ಮೇಲಿರೋ ಪ್ರಕರಣಗಳ ಬಗ್ಗೆ ವಿವರಣೆಯನ್ನೂ ಕೇಳಿತ್ತು. ಇದನ್ನೇ ಈ ಬಾರಿ ವಿಪಕ್ಷಗಳು ಪ್ರಧಾನ ಅಸ್ತ್ರವಾಗಿಸಿಕೊಳ್ಳೋದರಲ್ಲಿ ಯಾವ ಸಂದೇಹವೂ ಇಲ್ಲ.
ಇನ್ನುಳಿದಂತೆ, ಇತ್ತೀಚೆಗೆ ಹೊಸಪೇಟೆಯಲ್ಲಿ ಆರ್ ಅಶೋಕ್ ಪುತ್ರ ಕಾರ್ ಆಕ್ಸಿಡೆಂಟ್ ಮಾಡಿ ಅಮಾಯಕರಿಬ್ಬರು ಮರಣ ಹೊಂದಿದ ಪ್ರಕರಣ ಮುಚ್ಚಿಹಾಕಲು ನಡೆದಿದ್ದ ಸರ್ಕಸ್ಸುಗಳೆಲ್ಲವೂ ಯಡ್ಡಿ ಸರ್ಕಾರಕ್ಕೆ ಉರುಳಾಗಿ ಪರಿಣಮಿಸುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಹ್ಯಾರಿಸ್ ಪುತ್ರ ನಲಪಾಡ್ ಆಕ್ಸಿಡೆಂಟ್ ಕೇಸಲ್ಲಿ ತಗುಲಿಕೊಂಡಾಗ ಅವನೇ ಚಾಲನೆ ಮಾಡುತ್ತಿದ್ದನೆಂದು ಹುಯಿಲೆಬ್ಬಿಸಿದ್ದ ಬಿಜೆಪಿಗರು ಅಶೋಕ್ ಪುತ್ರದನ್ನು ಬಚಾವು ಮಾಡಲು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಅನುಮಾನ ಸಾರ್ವಜನಿಕ ವಲಯದಲ್ಲಿಯೂ ಹುಟ್ಟಿಕೊಂಡಿದೆ. ಇದೂ ಕೂಡಾ ಈ ಬಾರಿ ವಿಪಕ್ಷಗಳ ಪಾಲಿಗೆ ಅಸ್ತ್ರದಂತಾಗಿದೆ.
ಇನ್ನುಳಿದಂತೆ ಯಡಿಯೂರಪ್ಪ ತನ್ನನ್ನು ತಾನು ರೈತ ಪರ ಹೋರಾಟಗಾರ, ತನ್ನದು ರೈತ ಸ್ನೇಹಿ ಸರ್ಕಾರ ಎಂದೇ ಬಿಂಬಿಸಿಕೊಂಡು ಬಂದವರು. ಅವರ ಅವಧಿಯಲ್ಲಿಯೇ ರೈತ ಸಂಕುಲ ಯಾವ್ಯಾವ ರೀತಿಯಲ್ಲಿ ಸಂಕಷ್ಟ ಎದುರಿಸುತ್ತಿದೆ, ಅದನ್ನು ಪರಿಹರಿಸಲು ಸರ್ಕಾರ ಯಾವ್ಯಾವ ಕ್ರಮಗಳನ್ನು ಕೈಗೊಂಡಿದೆ ಎಂಬುದು ಕೂಡಾ ಈ ಬಾರಿ ಅಧಿವೇಷನದಲ್ಲಿ ಚರ್ಚೆಗೆ ಬರಲಿದೆ. ಅಧಿಕಾರಕ್ಕೆ ಬಂದಲ್ಲಿಂದಲೂ ಒಂದಲ್ಲ ಒಂದು ಆಂತರಿಕ ಬೇಗುದಿಯಿಂದ ತಲ್ಲಣಿಸುತ್ತಿರುವ ಯಡ್ಡಿಗೆ ನಿಜವಾಗಿ ಜನಪರವಾದ ಕಾರ್ಯಕ್ರಮಗಳನ್ನು ರೂಪಿಸಲು ಸಮಯವೇ ಸಿಕ್ಕಿಲ್ಲ. ಅದನ್ನು ಹೇಗೋ ಮರೆಮಾಚಿಕೊಂಡು ಸಾಗುತ್ತಿರೋ ಯಡ್ಡಿ ಈ ಅಧಿವೇಷನದಲ್ಲಿ ಎಲ್ಲ ಬಯಲಾಗುವ ಭೀತಿ ಎದುರಿಸುತ್ತಿದ್ದಾರೆ.

[adning id="4492"]

LEAVE A REPLY

Please enter your comment!
Please enter your name here