ಕತ್ತಿಗಾಗಿ ಜಾರಕಿಹೊಳಿ ಕಸರತ್ತು!

ಶೋಧ ನ್ಯೂಸ್ ಡೆಸ್ಕ್: ತಾನು ಸಿಎಂ ಆಗಲೆಂದೇ ಜನ್ಮವೆತ್ತಿದವನೆಂಬ ಭ್ರಮೆಯನ್ನು ಕವುಚಿಕೊಂಡು ಚಸಿವ ಸ್ಥಾನ ಗಿಟ್ಟಿಸಿಕೊಳ್ಳಲೂ ಸಾಧ್ಯವಾಗದೆ ಒದ್ದಾಡುತ್ತಿರುವಾತ ಉಮೇಶ್ ಕತ್ತಿ. ಕ್ರೇತ್ರದಲ್ಲಿ ಹೇಳಿಕೊಳ್ಳುವಂಥಾ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಹೋದರೂ ಸದಾ ಅಧಿಕಾರಕ್ಕಾಗಿ ತಹತಹಿಸುವ ಮನಸ್ಥಿತಿ ಕತ್ತಿಯದ್ದು. ಕಡೇ ಘಳಿಗೆಯವರೆಗೂ ಉಮೇಶ್ ಕತ್ತಿ ಆಯಕಟ್ಟಿನ ಸ್ಥಾನ ಗಿಟ್ಟಿಸಿಕೊಳ್ಳಲು ಮಾಡಿದ್ದ ಕಸರತ್ತುಗಳು ಒಂದೆರಡಲ್ಲ. ಅದೆಲ್ಲವೂ ವಿಫಲವಾಗಿ ಮುಖಭಂಗವಾಗುತ್ತಲೇ ಅವರು ನನಗೆ ಸಚಿವಸ್ಥಾನ ಸಿಗದಿದ್ದರೂ ಪರವಾಗಿಲ್ಲ, ನಂಗೆ ಯಡಿಯೂರಪ್ಪ ಇರೋ ಮುಖ್ಯಮಂತ್ರಿ ಸ್ಥಾನ ಬೇಕು ಎಂಬರ್ಥದಲ್ಲಿ ಕಾಮಿಡಿ ಮಾಡಿದ್ದವರು ಕತ್ತಿ. ಸಚಿವ ಸ್ಥಾನ ಸಿಗದ ನೋವಿನಲ್ಲೂ ಹಾಸ್ಯ ಪ್ರವೃತ್ತಿ ತೋರಿದ ಕತ್ತಿ ಬಗ್ಗೆ ಉತ್ತರ ಕರ್ನಾಟಕದ ಮಂದಿ ಕನಿಕರವಿಟ್ಟುಕೊಂಡಿರೋದಂತೂ ನಿಜ.


ಹೀಗೆ ಸಚಿವ ಸ್ಥಾನ ಸಿಗದೆ ಕಂಗಾಲಾಗಿರೋ ಕತ್ತಿ ಪರವಾಗಿ ಅನೇಕ ಬಿಜೆಪಿ ಶಾಸಕರು ಸಚಿವರುಗಳೇ ಬ್ಯಾಟಿಂಗ್ ಮಾಡಿಕೊಂಡು ಬರುತ್ತಿದ್ದಾರೆ. ಆದರೀಗ ಒಂದು ಕಾಲದ ತನ್ನ ರಾಜಕೀಯ ವಿರೋಧಿ ಉಮೇಶ್ ಕತ್ತಿ ವಿರುದ್ಧ ಸಚಿವ ರಮೇಶ್ ಜಾರಕಿಹೊಳಿಯೇ ವಕಾಲತ್ತು ವಹಿಸಿಕೊಂಡು ಮಾತಾಡಿದ್ದಾರೆ. ಹೇಗಾದರೂ ಮಾಡಿ ಕತ್ತಿಗೊಂದು ಸಚಿವಗಿರಿ ಕೊಡಿಸಬೇಕು ಎಂಬಂಥಾ ಧಾವಂತದೊಂದಿಗೆ ಸರ್ಕಸ್ಸು ನಡೆಸಿದ್ದಾರೆ. ಬಿಜೆಪಿಯಲ್ಲಿ ಉಮೇಶ್ ಕತ್ತಿ ಹಿರೀಕರಾದ್ದರಿಂದ ಅವರಿಗೆ ಸಚಿವ ಸ್ಥಾನ ಸಿಗಲೇಬೇಕೆ ಂಬ ಅಭಿಪ್ರಾಯವನ್ನು ಜಾರಕಿಹೊಳಿ ವ್ಯಕ್ತಪಡಿಸಿದ್ದಾರೆ. ಇದಲ್ಲದೇ ಅವರು ಸಚಿವರಾದರೆ ಬೆಳಗಾವಿಗೆ ಮತ್ತೊಂದು ಅಧಿಕಾರ ಸಿಗೋದರಿಂದ ಅಭುಇವೃದ್ಧಿಯೂ ಸುಗಮವಾಗುತ್ತದೆಯೆಂದಿದ್ದಾರೆ.


ಹೀಗೆ ಅವರಿವರೆಲ್ಲ ತನ್ನ ಪರವಾಗಿ ಬ್ಯಾಟಿಂಗು ನಡೆಸುವಂತೆ ನೋಡಿಕೊಂಡಿರುವ ಉಮೇಶ್ ಕತ್ತಿಗೆ ಸದ್ಯಕ್ಕಂತೂ ಸಚಿವಸ್ಥಾನ ಸಿಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಆದರೆ ಅದನ್ನು ಹೇಗಾದರೂ ಮಾಡಿ ದಕ್ಕಿಸಿಕೊಂಡೇ ತೀರಬೇಕೆಂ ಹಠದೊಂದಿಗೆ ಹೈಕಮಾಂಡ್ ಬೇಟಿಯಾಗಿ ಲಾಭಿ ನಡೆಸಲು ಮುಂದಗಿದ್ದಾರೆಂಬ ಮಾತುಗಳೂ ಕೇಳಿ ಬರುತ್ತಿವೆ. ಆದರೆ ಹೈಕಮಾಂಡ್ ಕೂಡಾ ಕತ್ತಿ ಬೇಡಿಕೆಗೆ ಸೊಪ್ಪು ಹಾಕುವ ಸಾಧ್ಯತೆಗಳಿಲ್ಲ. ಅಷ್ಟಕ್ಕೂ ಖುದ್ದು ಯಡ್ಡಿಯೇ ತನ್ನ ಸ್ಥಾನವನ್ನು ಕಬಳಿಸುವಂತೆ ಮಾತಾಡುತ್ತಿರುವ ಕತ್ತಿ ವಿರುದ್ಧ ಸಿಟ್ಟಾಗಿರುವಂತಿದೆ. ಒಟ್ಟಾರೆಯಾಗಿ ಆತನ ಭೋಳೇ ಮಾತುಗಳೇ ಕತ್ತಿ ಬೆನ್ನಿಗೆ ಖಡ್ಗವಾಗಿ ತಿವಿಯಲಾರಂಭಿಸಿದೆ.

LEAVE A REPLY

Please enter your comment!
Please enter your name here