ಕಿರಿಕ್ ಹುಡುಗಿ ಒಪ್ಪಿಕೊಂಡ ಕನ್ನಡ ಸಿನಿಮಾ ಯಾವುದು?

[adning id="4492"]

ಶ್ಮಿಕ,ಆ ಮಂದಣ್ಣ ಎಂಬ ಕೊಡಗಿನ ಹುಡುಗಿ ಇದೀಗ ಬೇರೆ ಭಾಷೆಗಳಲ್ಲಿ ಬಹು ಬೇಡಿಕೆಯ ತಾರೆಯಾಗಿ ಹೊರ ಹೊಮ್ಮಿದ್ದಾಳೆ. ತೆಲುಗು ತಮಿಳು ಸೇರಿದಂತೆ ನಾನಾ ಭಾಷೆಗಳಲ್ಲಿ ಬ್ಯುಸಿಯಾಗಿರೋ ರಶ್ಮಿಕಾ ಬಾಲಿವುಡ್‌ಗೆ ಜಿಗಿದ ಸುದ್ದಿ ಇಷ್ಟರಲ್ಲೇ ತೇಲಿ ಬಂದರೂ ಅಚ್ಚರಿಯೇನಿಲ್ಲ. ಇದೆಲ್ಲ ಏನೇ ಆದರೂ ಕನ್ನಡದಲ್ಲಿರೋ ರಶ್ಮಿಕಾ ಅಭಿಮಾನಿಗಳು ಮಾತ್ರ ಆಕೆ ಒಂದರ ಹಿಂದೊಂದರಂತೆ ಕನ್ನಡ ಸಿನಿಮಾಗಳಲ್ಲಿ ನಟಿಸಬೇಕೆಂದೇ ಬಯಸುತ್ತಾ ಬಂದಿದ್ದಾರೆ. ಆದರೆ ರಶ್ಮಿಕಾ ಕನ್ನಡ ಪ್ರೇಕ್ಷಕರಿಗೆ ದರ್ಶನ ಕೊಡೋದೇ ಅಪರೂಪವೆಂಬಂತಾಗಿದೆ. ಆದರೆ ಪೊಗರು ಚಿತ್ರದ ಚಿತ್ರೀಕರಣದ ಹಂತದಲ್ಲಿಯೇ ರಶ್ಮಿಕಾ ಹೊಸಾ ಕನ್ನಡ ಚಿತ್ರವೊಂದನ್ನು ಒಪ್ಪಿಕೊಂಡಿರೋ ಸೂಚನೆ ರವಾನಿಸಿದ್ದಾಳೆ.


ಸದ್ಯಕ್ಕೆ ರಶ್ಮಿಕಾ ನಟಿಸಿರೋ ಏಕೈಕ ಕನ್ನಡ ಚಿತ್ರ ಧ್ರುವ ಸರ್ಜಾ ಅಭಿನಯದ ಪೊಗರು ಮಾತ್ರ. ಎರಡ್ಮೂರು ವರ್ಷಗಳಿಂದ ಎಳೆದಾಡುತ್ತಿರೋ ಈ ಸಿನಿಮಾ ಇನ್ನೇನು ತಿಂಗಳೊಪ್ಪತ್ತಿನಲ್ಲಿಯೇ ಬಿಡುಗಡೆಯಾಗುವ ಸಾಧ್ಯತೆಗಳಿದ್ದಾವೆ. ಈ ಮೂಲಕವೇ ರಶ್ಮಿಕಾ ಕನ್ನಡದ ಅಭಿಮಾನಿಗಳ ಮುಂದೆ ಬರುವ ಖುಷಿಯಲ್ಲಿದ್ದಾಳೆ. ಅದಾದ ನಂತರ ರಶ್ಮಿಕಾ ನಟಿಸಲಿರೋ ಕನ್ನಡ ಸಿನಿಮಾ ಯಾವುದೆಂಬ ಪ್ರಶ್ನೆಗೆ ನಿಗೂಢವಾದ ಉತ್ತರವೇ ಸಿಕ್ಕಿದೆ. ಅದರನ್ವಯ ಹೇಳೋದಾದರೆ ಆಕೆ ಒಂದು ಕನ್ನಡ ಸಿನಿಮಾವನ್ನು ಒಪ್ಪಿಕೊಂಡಿದ್ದಾಳೆ. ಆದರೆ ಅದ್ಯಾವ ಸಿನಿಮಾ ಅನ್ನೋದನ್ನು ಈಗಲೇ ಹೇಳುವಂತಿಲ್ಲ ಅಂದಿದ್ದಾಳೆ.


ರಶ್ಮಿಕಾ ಕಡೆಯಿಂದ ಇಂಥಾದ್ದೊಂದು ಮಾತು ಕೇಳುತ್ತಲೇ ಆಕೆ ಮದಗಜ ಚಿತ್ರಕ್ಕೆ ನಾಯಕಿಯಾಗಿರಬಹುದಾ ಎಂಬಂಥಾ ಸಂಶಯವೂ ಕಾಡುತ್ತಿದೆ. ಅಂತೂ ಇನ್ನು ಕೆಲವೇ ದಿನಗಳಲ್ಲಿ ರಶ್ಮಿಕಾ ನಟಿಸಲಿರುವ ಕನ್ನಡ ಚಿತ್ರ ಯಾವುದೆಂಬುದು ಜಾಹೀರಾಗಲಿದೆ. ಇದೀಗ ರಶ್ಮಿಕಾ ತೆಲುಗು ಚಿತ್ರರಂಗದಲ್ಲಿ ಒಂದರ ಹಿಂದೊಂದರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ ಬ್ಯುಸಿಯಾಗಿದ್ದಾಳೆ. ಅದರ ಜೊತೆ ಜೊತೆಗೇ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾಳೆ. ಆಕೆ ಸದ್ಯದಲ್ಲಿಯೇ ಬಾಲಿವುಡ್‌ಗೆ ಹಾರಲಿದ್ದಾಳೆಂಬ ರೂಮರ್‌ಗಳೂ ಕೂಡಾ ತೆಲುಗು ನಾಡಿನಲ್ಲಿ ಹುಟ್ಟಿಕೊಂಡಿದೆ.

[adning id="4492"]

LEAVE A REPLY

Please enter your comment!
Please enter your name here