ಗರುಡಗಮನ ವೃಷಭ ವಾಹನ: ರಾಜ್ ಶೆಟ್ಟಿ- ವೃಷಭ್ ಹೊಸಾ ಯಾನ!

ಕ್ರಿಯೇಟಿವ್ ಮನಸುಗಳು ಒಂದಾದರೆ ಎಂತೆಂಥಾ ಅದ್ಭುತಗಳು ಸೃಷ್ಟಿಯಾಗಬಹುದೆಂಬದಕ್ಕೆ ಸಿನಿಮಾ ರಂಗದಲ್ಲಿ ಸಾಕಷ್ಟು ನಿದರ್ಶನಗಳಿದ್ದಾವೆ. ಕನ್ನಡ ಚಿತ್ರರಂಗದಲ್ಲಿಯೂ ಅದಕ್ಕೆ ಕೊರತೆಯೇನಿಲ್ಲ. ಅದಕ್ಕೆ ಹೊಸಾ ಸೇರ್ಪಡೆಯಂತಿರೋದು ರಾಜ್ ಬಿ ಶೆಟ್ಟಿ ಮತ್ತು ರಿಷಬ್ ಶೆಟ್ಟರ ಸಹಯಾನ. ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಮೂಲಕ ಶುರುವಾದ ಇವರಿಬ್ಬರ ಜುಗಲ್ಬಂಧಿ ಆ ನಂತರದಲ್ಲಿ ಕಥಾ ಸಂಗಮದ ಮೂಲಕ ಮತ್ತೆ ಸಂಗಮಿಸಿತ್ತು. ಆ ಎರಡರಲ್ಲಿಯೂ ದಕ್ಕಿದ್ದದ್ದು ಮಹಾ ಗೆಲುವುಗಳೇ. ಆ ನಂತರದಲ್ಲಿ ರಾಜ್ ಶೆಟ್ಟಿ ಮತ್ತು ರಿಷಬ್ ಇಬ್ಬರೂ ಬೇರೆ ಬೇರೆ ಸಿನಿಮಾಗಳತ್ತ ಹೊಎರಳಿಕೊಂಡಿದ್ದಾರೆಂದೇ ಅಂದುಕೊಳ್ಳಲಾಗಿತ್ತು. ಆದರೀಗ ಸರ್‌ಪ್ರೈಸ್ ಎಂಬಂತೆ ಇವರಿಬ್ಬರ ಹ್ಯಾಟ್ರಿಕ್ ಸಮಾಗಮದ ಚಿತ್ರವೊಂದು ಘೋಷಣೆಯಾಗಿದೆ!


ಇದು ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿ ನಟಿಸುತ್ತಿರೋ ಚಿತ್ರ. ಪ್ರೇಮಿಗಳ ದಿನದ ಕೊಡುಗೆ ಎಂಬಂತೆ ಇದರ ಟೈಟಲ್ ಮತ್ತು ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲಾಗಿದೆ. ಮತ್ತೂ ವಿಶೇಷವೆಂದರೆ, ಈ ಚಿತ್ರದಲ್ಲಿ ವೃಷಭ್ ಶೆಟ್ಟಿಯೂ ನಾಯಕನಾಗಿ ನಟಿಸುತ್ತಿದ್ದಾರೆ. ಅದಕ್ಕೆ ಗರುಡ ಗಮನ ವೃಷಭ ವಾಹನ ಎಂಬ ನಾಮಕರಣ ಮಾಡಲಾಗಿದೆ. ಈಗ ಹೊರ ಬಂದಿರೋ ಪೋಸ್ಟರ್‌ನ ಚಹರೆಯೇ ಇದೂ ಕೂಡಾ ಕನ್ನಡ ಚಿತ್ರರಂಗದಲ್ಲಿ ಮ್ಯಾಜಿಕಲ್ ಗೆಲುವು ದಕ್ಕಿಸಿಕೊಳ್ಳಲಿರೋದರ ಸೂಚನೆ ನೀಡುತ್ತಿದೆ. ರಾಜ್ ಶೆಟ್ಟಿ ಮತ್ತು ವೃಷಭ್ ಅವರ ಅರ್ಧರ್ಧ ವರ್ಣಮಯ ಮುಖಗಳಿರೋ ಈ ಫಸ್ಟ್ ಲುಕ್ ಪೋಸ್ಟರ್‌ಗೆ ಜನರ ಕಡೆಯಿಂದ ತುಂಬು ಮೆಚ್ಚುಗೆಗಳೇ ಸಿಗುತ್ತಿವೆ.


ಲೈಟರ್ ಬುದ್ಧ ಫಿಲಂಸ್ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದೆ. ಈ ಹಿಂದೆ ರಿಷಬ್ ಶೆಟ್ಟಿ ಚಿತ್ರಗಳಿಗೆ ರಾಜ್ ಶೆಟ್ಟಿ ಸಾಥ್ ಕೊಡುತ್ತಾ ಬಂದಿದ್ದರು. ಸರ್ಕಾರಿ ಪ್ರಾಥಮಿಕ ಶಾಲೆ ಚಿತ್ರಕ್ಕೆ ಅವರು ಸಂಭಾಷಣೆ ಬರೆದು ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ನಂತರ ವೃಷಭ್ ಸೂತ್ರಧಾರಿಕೆಯಲ್ಲಿ ಬಂದಿದ್ದ ಕಥಾ ಸಂಗಮ ಚಿತ್ರದ.ಲ್ಲಿಯೂ ಒಂದು ಕಥೆಗೆ ರಾಜ್ ಶೆಟ್ಟರು ಹೀರೋ ಆಗಿದ್ದರು. ಇದೀಗ ಗರುಡಗಮನ ವೃಷಭ ವಾಹನದಲ್ಲಿ ವೃಷಬ್ ರಾಜ್ ಶೆಟ್ಟಿಗೆ ಸಾಥ್ ಕೊಟ್ಟಿದ್ದಾರೆ. ರಾಜ್ ಬಿ ಶೆಟ್ಟಿ ಒಂದು ಮೊಟ್ಟೆಯ ಕಥೆಯ ಮೂಲಕವೇ ಭಿನ್ನ ಆಲೋಚನೆಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಈ ಚಿತ್ರ ಕೂಡಾ ಅಂಥಾದ್ದೇ ವಿಶಿಷ್ಟ ಕಥೆ ಹೊಂದಿದೆ ಅನ್ನೋದಕ್ಕೆ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಸಾಕ್ಷಿಯಂತಿದೆ.

LEAVE A REPLY

Please enter your comment!
Please enter your name here