ಆರಂಭದಲ್ಲೇ ಆಕ್ಷನ್ ಮೂಡಿಗೆ ಜಾರಿದ ಜೇಮ್ಸ್!

ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವಭಿನಯದ ಯುವರತ್ನ ಚಿತ್ರದತ್ತಲೇ ಈಗ ಅಭಿಮಾನಿಗಳೆಲ್ಲರ ದೃಷ್ಟಿ ನೆಟ್ಟುಕೊಂಡಿದೆ. ಇನ್ನೂ ಈ ಚಿತ್ರದ ಒಂದಷ್ಟು ಚಿತ್ರೀಕರಣ ಬಾಕಿ ಉಳಿದುಕೊಂಡಿದೆ. ಮೊನ್ನೆಯಷ್ಟೇ ಪುನೀತ್ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದ ಹಾಡೊಂದರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಅಪ್ಪು ಯುವರತ್ನ ಚಿತ್ರದಲ್ಲಿಯೇ ಬ್ಯುಸಿಯಾಗಿದ್ದಾರೆ ಅಂದುಕೊಳ್ಳುತ್ತಿರುವಾಗಲೇ ಅವರು ಸುಳಿವೇ ಕೊಡದೆ ಜೇಮ್ಸ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಆರಂಭದಲ್ಲಿಯೇ ಈ ಸಿನಿಮಾದ ಸಾಹಸ ಸನ್ನಿವೇಷಗಳ ಚಿತ್ರೀಕರಣ ನಡೆಯುತ್ತಿದೆ ಎಂಬುದು ಅಸಲೀ ವಿಶೇಷ.


ಅಷ್ಟಕ್ಕೂ ಭರ್ಜರಿ ಚೇತನ್ ನಿರ್ದೇಶನದ ಜೇಮ್ಸ್ ವರ್ಷಗಳ ಹಿಂದೆಯೇ ಅನೌನ್ಸ್ ಆಗಿತ್ತು. ಆ ನಂತರದಲ್ಲಿ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದ್ದ ಈ ಸಿನಿಮಾಗೀಗ ಹೊಸಾ ಆವೇಗದೊಂದಿಗೆ ಚಾಲನೆ ಸಿಕ್ಕಿದೆ. ಜೇಮ್ಸ್ ಎಂಬುದು ಅಭಿಮಾನಿಗಳ ಪಾಲಿಗೆ ಪ್ರತೀ ಹೆಜ್ಜೆಯಲ್ಲಿಯೂ ಸರ್‌ಪ್ರೈಸ್ ಪ್ಯಾಕೇಜ್ ಆಗಬೇಕೆಂಬ ಉದ್ದೇಶದಿಂದಲೇ ಪುನೀತ್ ಯುವರತ್ನದ ಬ್ಯುಸಿ ಶೆಡ್ಯೂಲ್ ನಡುವೆಯೂ ಬಿಡುವು ಮಾಡಿಕೊಂಡಿದ್ದಾರೆ. ವೇಗವಾಗಿ ಇದರ ಬಹುಮುಖ್ಯ ಭಾಗದ ಸಾಹಸ ಸನ್ನಿವೇಷಗಳನ್ನು ಮುಗಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಅದರ ಫಲವಾಗಿಯೇ ಇದೀಗ ಜೇಮ್ಸ್ ಚಿತ್ರೀಕರಣ ವೇಗವಾಗಿ ನಡೆಯುತ್ತಿದೆ.


ಅಂದಹಾಗೆ, ಜೇಮ್ಸ್ ಸಾಹಸ ಸನ್ನಿವೇಷಗಳು ವೈಟ್‌ಫೀಲ್ಡ್ ಬಳಿಯ ವಿಶಾಲವಾದ ಸೆಟ್‌ನಲ್ಲಿ ನೆರವೇರುತ್ತಿದೆ. ರಾತ್ರಿ ಹೊತ್ತಲ್ಲಿ ಮಾತ್ರವೇ ಇನ್ನು ನಾಲಕೈದು ದಿನಗಳ ಕಾಲ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ರವಿವರ್ಮ ಸಾಹಸ ನಿರ್ದೇಶನದಲ್ಲಿ ಈ ಶೂಟಿಂಗ್ ಮುಂದುವರೆಯುತ್ತಿದೆ. ಇದರ ಜೊತೆ ಜೊತೆಗೇ ಯುವರತ್ನ ಚಿತ್ರವನ್ನೂ ಕಂಪ್ಲೀಟ್ ಮಾಡಿಕೊಳ್ಳಲು ಮುಂದಾಗಿರೋ ಪುನೀತ್ ಇದೇ ತಿಂಗಳ ಇಪ್ಪತ್ನಾಲಕ್ಕರಂದು ಹಾಡೊಂದರ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹೊರಡಲಿದ್ದಾರೆ. ಅಷ್ಟರೊಳಗೆ ಜೇಮ್ಸ್ ಚಿತ್ರದ ಒಂದಷ್ಟು ಚಿತ್ರೀಕರಣ ಮುಗಿಯಲಿದೆ. ಯುವರತ್ನ ಬಿಡುಗಡೆಯಾಗಿ ಕೆಲವೇ ಸಮಯದಲ್ಲಿ ಜೇಮ್ಸ್ ತೆರೆಗಾಣುವಂತೆ ಮಾಡಲು ಇಡೀ ಚಿತ್ರತಂಡವೇ ಸನ್ನದ್ಧವಾಗಿದೆ.

LEAVE A REPLY

Please enter your comment!
Please enter your name here