ನಮ್ಮ ಮೆಟ್ರೋದಲ್ಲಿ ಮಾಂಸ ಬ್ಯಾನ್!

ಶೋಧ ನ್ಯೂಸ್ ಡೆಸ್ಕ್: ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಲ್ಲಿ ಸಂಚಾರವೇ ದೊಡ್ಡ ತಲೆನೋವಾಗಿ ಬಿಟ್ಟಿದೆ. ಬೆಂಗಳೂರು ವಾಸಿಗಳನ್ನು ಕಾಡುತ್ತಾ ಬಂದಿದ್ದ ಈ ಸಮಸ್ಯೆಯನ್ನು ಕಳೆದೊಂದಷ್ಟು ವರ್ಷಗಳಿಂದ ಚಾಲ್ತಿಯಲ್ಲಿರೋ ನಮ್ಮ ಮೆಟ್ರೋ ಯೋಜನೆ ತಕ್ಕ ಮಟ್ಟಿಗೆ ಪರಿಹರಿಸಿದೆ. ಆಗಾಗ ಕೊಂಚ ವ್ಯತ್ಯಯಗಳಾಗುತ್ತಿದ್ದರೂ ಕೂಡಾ ಬೆಂಗಳೂರಿಗರ ಪಾಲಿಗೆ ನಮ್ಮ ಮೆಟ್ರೋ ಯೋಜನೆ ದೊಡ್ಡ ರಿಲೀಫ್ ಎಂಬಂತಾಗಿದೆ. ಆದರೀಗ ಮಾಂಸಾಹಾರಿಗಳಿಗೆ ಮಾತ್ರ ಬಿಎಂಆರ್‌ಸಿ ಜಾರಿಗೆ ತಂದಿರೋ ಕ್ರಮ ಮತ್ತೊಂದು ಸಂಕಟ ತಂದಿಟ್ಟಿದೆ. ಇದೀಗ ಯಾವುದೇ ಥರದ ಮಾಂಸವನ್ನು ಹಿಡಿದು ಬಂದ ಯಾವ ಪ್ಯಾಸೆಂಜರುಗಳನ್ನೂ ಮೆಟ್ರೋ ಟ್ರೈನ್‌ನೊಳಗೆ ಬಿಡುತ್ತಿಲ್ಲ.


ಇತ್ತೀಚೆಗೆ ಪ್ರಯಾಣಿಕರೊಬ್ಬರು ಮೀನು ಮಾಂಸವನ್ನು ಚೀಲದಲ್ಲಿಟ್ಟುಕೊಂಡು ಮೆಟ್ರೋ ಪ್ರಯಾಣಕ್ಕೆ ಮುಂದಾಗಿದ್ದರು. ಆದರೆ ಅವರಿಗೆ ಮೆಟ್ರೋ ಮುಂಬಾಗಿಲಲ್ಲಿಯೇ ಆಘಾತ ಕಾದಿತ್ತು. ಯಾಕೆಂದರೆ ತಪಾಸಣೆ ನಡೆಸಿದ್ದ ಮೆಟ್ರೋ ಸಿಬ್ಬಂದಿ ಮಾಂಸವಿರೋದರಿಂದ ಮೆಟ್ರೋ ಪ್ರಯಾಣಕ್ಕೆ ಅವಕಾಶ ಕೊಡುವುದಿಲ್ಲ ಅಂತ ಕಟ್ಟುನಿಟ್ಟಾಗಿ ಹೇಳಿದ್ದರಂತೆ. ಈ ಬಗ್ಗೆ ಸಿಟ್ಟಾದ ಪ್ರಯಾಣಿಕ ನಂತರ ಟ್ವಿಟರ್ ಮೂಲಕ ಬಿಎಂಆರ್‌ಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಬನೀಡಿರೋ ಅಧಿಕಾರಿಗಳು ಯಾವುದೇ ಮಾಂಸವನ್ನು ಚೆನ್ನಾಗಿ ಪ್ಯಾಕ್ ಮಾಡಿಕೊಂಡರೆ ಅದಕ್ಕೆ ಮೆಟ್ರೋ ತಡೆಯೊಡ್ಡೋದಿಲ್ಲ ಎಂಬ ಸಮಜಾಯಿಷಿ ನೀಡಿದ್ದಾರೆ.


ಆದರೆ ಈ ಪ್ರಯಾಣಿಕ ಮೀನು ಮಾಂಸವನ್ನು ನೀಟಾಗಿ ಪ್ಯಾಕ್ ಮಾಡಿದ್ದರೂ ಮೆಟ್ರೋ ಸಿಬ್ಬಂದಿ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿಲ್ಲವೆಂದು ದೂರಿದ್ದಾರೆ. ಇದು ಮೆಟ್ರೋ ಪ್ರಯಾಣಿಕರಲ್ಲಿ ಆಡಳಿತ ಮಂಡಳಿ ವಿರುದ್ಧ ಅಸಹನೆ ಮೂಡಿಕೊಳ್ಳುವಂತೆ ಮಾಡಿದೆ. ಮಾಂಸವನ್ನು ನೀಟಾಗಿ ಪ್ಯಾಕ್ ಮಾಡದೇ ಇದ್ದರೆ ಅದು ಘಾಟು ಹೊಡೆದು ಬೇರೆ ಪ್ರಯಾಣಿಕರಿಗೆ ಇರುಸುಮುರುಸು ತರಬಹುದೆಂಬ ಕಾರಣದಿಂದ ಬಿಎಂಆರ್‌ಸಿ ಇಂಥಾ ಕ್ರಮ ಕೈಗೊಂಡಿದೆಯಂತೆ. ಆದರೆ ಮೆಟ್ರೋ ಸಿಬ್ಬಂದಿಯ ಒತ್ತಡ ಮತ್ತು ಅಜಾಗರೂಕ ಕ್ರಮಗಳು ಕೆಲವೊಮ್ಮೆ ಇಂಥಾ ಅಸಹನೆಗಳಿಗೂ ಎಡೆಮ,ಆಡಿಕೊಡುತ್ತದೆಂಬುದು ಇದೀಗ ಅಧಿಕಾರಿಗಳ ಗಮನಕ್ಕೆ ಬಂದಂತಿದೆ.

LEAVE A REPLY

Please enter your comment!
Please enter your name here