ಮೀನಾ ಬಜಾರ್: ಟ್ರೇಲರ್‌ನಲ್ಲಿ ತೆರೆದುಕೊಂಡಿದ್ದು ಬೆರಗಾಗಿಸೋ ಮಾಯಾ ಬಜಾರ್!

[adning id="4492"]

ಸುನೀಲ್ ಕುಮಾರ್ ಸಿಂಗ್ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರುವ ಚಿತ್ರ ಮೀನಾ ಬಜಾರ್. ಕಿರುತೆರೆ ನಿರ್ದೇಶಕರಾಗಿ ದೊಡ್ಡ ಮಟ್ಟದಲ್ಲಿಯೇ ಹೆಸರಾಗಿರುವ ಸುನೀಲ್ ಕುಮಾರ್ ಸಿಂಗ್ ಅದ್ದೂರಿತನಕ್ಕೆ, ಭಿನ್ನವಾದ ಕಥನ ಕ್ರಮಕ್ಕೆ ಪ್ರಸಿದ್ಧಿ ಪಡೆದಿರುವವರು. ಅದು ಅವರ ಯಶಸ್ಸಿನ ಗುಟ್ಟೂ ಹೌದು. ಆರಂಭದಿಂದ ಇಲ್ಲೀವರೆಗೂ ಥರ ಥರದಲ್ಲಿ ಸುದ್ದಿ ಮಾಡುತ್ತಾ ಬಂದಿರುವ ಮೀನಾ ಬಜಾರ್ ಇದೀಗ ಬಿಡುಗಡೆಯತ್ತ ಮುಖ ಮಾಡಿ ನಿಂತಿದೆ. ಇದೇ ಹೊತ್ತಿನಲ್ಲಿ ಮೀನಾ ಬಜಾರ್‌ನ ಬೆರಗಾಗಿಸೋ ಟ್ರೇಲರ್ ಬಿಡುಗಡೆಯಾಗಿದೆ. ಇದುವೇ ಈ ಸಿನಿಮಾ ಬಗ್ಗೆ ಮತ್ತಷ್ಟು ಭರವಸೆ ಬೆರೆತ ನಿರೀಕ್ಷೆ ಮೂಡಿಕೊಳ್ಳುವಂತೆಯೂ ಮಾಡಿದೆ.


ಇಡೀ ಜಗತ್ತೇ ಒಂದು ಬಜಾರ್, ಇಲ್ಲಿ ಎ.ಲ್ಲವೂ ಮಾರಾಟದ ಸರಕುಗಳೇ ಎಂಬಂಥ ಅರ್ಥ ಧ್ವನಿಸುವ ಖಡಕ್ ಡೈಲಾಗುಗಳು, ಎದೆ ಅದುರಿಸುವ, ಮೋಹಗೊಳ್ಳುವಂತೆ ಮಾಡುವ ದೃಷ್ಯಾವಳಿಗಳು ಮತ್ತು ಪ್ರತೀ ದೃಷ್ಯಗಳಲ್ಲಿಯೂ ನಿಗೂಢ ಬಚ್ಚಿಟ್ಟುಕೊಂಡಿರುವ ಕಥೆಯ ಹೊಳಹಿನೊಂದಿಗೆ ಈ ಟ್ರೇಲರ್ ಸಮೃದ್ಧವಾಗಿ ರೂಪುಗೊಂಡಿದೆ. ವೈನ್, ವೆಲ್ತ್, ವಿಮೆನ್ ಎಂಬಂಥಾ ಆಧುನಿಕ ಜಗತ್ತಿನ ಮನಸ್ಥಿತಿಯ ಸುತ್ತಾ ಪಡಿಮೂಡಿಕೊಂಡಿರೋ ಗಟ್ಟಿ ಕಥಾನಕವನ್ನೇ ಸುನೀಲ್ ಕುಮಾರ್ ಸಿಂಗ್ ದೃಷ್ಯೀಕರಿಸಿದ್ದಾರೆಂಬ ಸೂಚನೆಗಳೂ ಕೂಡಾ ಈ ಟ್ರೇಲರ್ ಮೂಲಕ ಸ್ಪಷ್ಟವಾಗಿ ರವಾನೆಯಾಗಿದೆ. ನಿಖರವಾಗಿ ಹೇಳಬೇಕೆಂದರೆ, ಇದು ಈ ವರ್ಷದ ಭರವಸೆಯ ಟ್ರೇಲರ್.


ಈ ಸಿನಿಮಾದಲ್ಲಿ ಸುನೀಲ್ ಕುಮಾರ್ ಸಿಂಗ್ ಡೈರೆಕ್ಟರ್ ಆಗಿಯೇ ನಟಿಸಿದ್ದಾರೆಂಬುದು ವಿಶೇಷ. ಆದರೆ ಆ ಡೈರೆಕ್ಟರದ್ ಪಾತ್ರಕ್ಕೆ ಭೀಕರ ಮಾಫಿಯಾವನ್ನು ಬೆಂಬಿದ್ದು ಬಯಲಾಗಿಸೋ ಖದರ್ ಕೂಡಾ ಇದೆಯೆಂಬುದೂ ಕೂಡಾ ಈ ಟ್ರೇಲರ್ ಮೂಲಕವೇ ಜಾಹೀರಾಗಿದೆ. ಹೆಣ್ಣು, ಹೆಂಡಗಳ ಉನ್ಮಾದವನ್ನೇ ಸರಕಾಗಿಸಿಕೊಂಡಿರೋ ಮಾಫಿಯಾ, ಅದೆಲ್ಲದರಾಚೆಗೆ ಹಬ್ಬಿಕೊಂಡ ನವಿರಾದ ಪ್ರೇಮ ಕಥನ, ಯಾರನ್ನೇ ಆದರೂ ಸೆಳೆದುಕೊಂಡು ಬಿಡುವಂಥಾ ಮೇಕಿಂಗ್‌ಗಳ ಸುಳಿವಿನೊಂದಿಗೆ ಮೀನಾ ಬಜಾರ್ ಟ್ರೇಲರ್ ವ್ಯಾಪಕ ಮೆಚ್ಚುಗೆಗಳನ್ನೂ ಗಳಿಸಿಕೊಳ್ಳುತ್ತಿದೆ. ಸಿಂಗ್ ಸಿನಿಮಾಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ಬಿಡುಗಡೆ ದಿನಾಂಕ ಇಷ್ಟರಲ್ಲಿಯೇ ಹೊರಬೀಳಲಿದೆ.

[adning id="4492"]

LEAVE A REPLY

Please enter your comment!
Please enter your name here