ಕೊರೋನಾ ಎಫೆಕ್ಟ್: ಅಧಿಕಾರಿಯನ್ನು ಗುಂಡಿಟ್ಟು ಕೊಂದ ಸರ್ವಾಧಿಕಾರಿ!

ಚೀನಾ ದೇಶದಲ್ಲಿ ಜನರನ್ನೆಲ್ಲ ಹುಳುಗಳಂತೆ ಹೊಸಕಿ ಹಾಕುತ್ತಿರೋ ಕೊರೋ ನಆ ಎಂಬ ಮಹಾ ಮಾಡಿಯೀಗ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಶರವೇಗದಲ್ಲಿ ಹಬ್ಬಿಕೊಂಡು ಜೀವ ಬಲಿ ಪಡೆಯುತ್ತಿರೋ ಈ ವೈರಸ್ ಶಶಕ್ತ ಚೀನಾವನ್ನೇ ಮಸಣದಂತಾಗಿಸಿದೆ. ಯಾವ ಮುನ್ನೆಚ್ಚರಿಕಾ ಕ್ರಮಗಳಿಗೂ ಜಗ್ಗದ ಈ ವೈರಸ್ ಇಡೀ ಚೀನಾವನ್ನೇ ಅದುರಿಸಿ ಹಾಕಿರುವ ಈ ಹೊತ್ತಿನಲ್ಲಿ, ವಿಶ್ವದ ತುಂಬೆಲ್ಲ ಜನ ಭೀತರಾಗಿದ್ದಾರೆ. ಬೇರೆ ದೇಶಗಳಲ್ಲಿ ಈ ಸೋಂಕಿನ ಶಂಕೆಯ ಮೇಲೆ ಅಗತ್ಯ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಆದರೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಮಾತ್ರ ತನ್ನದೇ ಜೊತೆಗಾರನನ್ನು ಕೊರೋನಾ ವೈರಸ್ ಶಂಕೆಯ ಮೇರೆಗೆ ಗುಂಡಿಕ್ಕಿ ಕೊಲ್ಲಿಸಿದ್ದಾನೆ!


ತನ್ನ ವಿಚಿತ್ರ ನಡವಳಿಕೆ ಮತ್ತು ಹುಚ್ಚುತನಗಳಿಂದ ಇತರೇ ದೇಶಗಳಿಗೂ ನಡುಕ ಮೂಡಿಸಿರುವಾತ ಜಾನ್ ಕಿಮ್. ಒಂದಿಡೀ ದೇಶವನ್ನೇ ತನ್ನ ಸರ್ವಾಧಿಕಾರದ ಇಷಾರೆಯಂತೆ ಕುಣಿಸುತ್ತಿರುವಗ್ಕಿಮ್ ಜಾಂಗ್‌ಗೇ ಇದೀಗ ಕೊರೋನಾ ವೈರಸ್ ನಡುಕ ಮೂಡಿಸಿದೆ. ಆದ್ದರಿಂದಲೇ ಚೀನಾಕ್ಕೆ ಹೋಗಿ ಬಂದವರು ಮತ್ತು ವೈರಸ್ ಪೀಡಿತರೆಂಬ ಶಂಕೆ ಹೊಂದಿರುವವರನ್ನು ಮೂವತ್ತು ದಿನಗಳ ಕಾಲ ದೂರದ ಪ್ರದೇಶದಲ್ಲಿ ಪ್ರತ್ಯೇಕವಾಗಿಡುವಂತೆ ಕಿಮ್ ಆದೇಶ ಹೊರಡಿಸಿದ್ದಾನೆ.


ಈ ಆದೇಶದನ್ವಂiಗೀ ಹಿಂದೆ ಕಿಮ್ ಜೊತೆ ಚೀನಾ ಪ್ರವಾಸ ಹೋಗಿದ್ದ ಕೊರಿಯಾದ ಉನ್ನತಾಧಿಕಾರಿಯೋರ್ವನನ್ನೂ ಪ್ರತ್ಯೇಕವಾಗಿಡುವಂತೆ ಆದೇಶ ಹೊರ ಬಿದ್ದಿತ್ತು. ಹೊರ ವಲಯದ ಜಮೀನೊಂದರಲ್ಲಿ ಆತನನ್ನು ಇರಿಸಲಾಗಿತ್ತು. ಆದರೆ ಇದ್ದಲ್ಲಿಯೇ ಇದ್ದು ಉಸಿರುಗಟ್ಟಿದಂತಾದ ಆ ಅಧಿಕಾರಿ ವಿಹಾರ ಹೋಗಿದ್ದಾನೆ. ಅಲ್ಲೇ ಹತ್ತಿರದ ಕೊಳದಲ್ಲಿ ಸ್ನಾನ ಮಾಡಿ ನಿರಾಳವಾಗಿದ್ದಾನೆ. ಈ ವಿಚಾರ ತಿಳಿದ ಸರ್ವಾಧಿಕಾರಿ ಕಿಮ್ ತನ್ನ ಆದೇಶ ಉಲ್ಲಂಘಿಸಿದ ಆ ಅಧಿಕಾರಿಯನ್ನು ಗುಂಡಿಕ್ಕಿ ಕೊಲ್ಲಿಸಿದ್ದಾನೆ. ಈ ವಿಚಾರ ತಿಳಿದ ಕೊರಿಯಾ ಜನತೆ ಮತ್ತೊಮ್ಮೆ ಭಯಭೀತರಾಗಿದ್ದಾರೆ.

LEAVE A REPLY

Please enter your comment!
Please enter your name here